Rishi Sunak Daughter Dance: UKಯಲ್ಲಿ ರಿಷಿ ಸುನಕ್ ಮಗಳ ಕೂಚಿಪುಡಿ ನೃತ್ಯ: ವಿದೇಶದಲ್ಲೂ ಭಾರತೀಯ ಕಲೆ ಪ್ರದರ್ಶಿಸಿದ ‘ಮೂರ್ತಿ’ ಕುಡಿ

Rishi Sunak Daughter Dance: ಈ ಕಾರ್ಯಕ್ರಮದಲ್ಲಿ ಸಂಗೀತಗಾರರು, ಹಿರಿಯ ಸಮಕಾಲೀನ ನೃತ್ಯ ಕಲಾವಿದರು (65 ವರ್ಷ ಮೇಲ್ಪಟ್ಟ), ಗಾಲಿಕುರ್ಚಿ ನೃತ್ಯಗಾರರು, ಪೋಲೆಂಡ್‌ನ ನಟರಾಂಗ್ ಗ್ರೂಪ್‌ನ ಅಂತರರಾಷ್ಟ್ರೀಯ ವಿದ್ಯಾರ್ಥಿಗಳು ಸೇರಿದಂತೆ 4 ರಿಂದ 85 ವರ್ಷ ವಯಸ್ಸಿನ ಸುಮಾರು 100 ಕಲಾವಿದರು ಭಾಗವಹಿಸಿದ್ದರು.

Written by - Bhavishya Shetty | Last Updated : Nov 26, 2022, 09:00 AM IST
    • ರಿಷಿ ಸುನಕ್ ಪುತ್ರಿ ಅನೌಷ್ಕಾ ಸುನಕ್ ಕೂಚಿಪುಡಿ ನೃತ್ಯ ಮಾಡಿದ್ದಾರೆ
    • ಇಂಟರ್ನ್ಯಾಷನಲ್ ಕೂಚಿಪುಡಿ ಡ್ಯಾನ್ಸ್ ಫೆಸ್ಟಿವಲ್ 2022 ರಲ್ಲಿ ಹೆಜ್ಜೆ ಹಾಕಿದ ಅನೌಷ್ಕಾ
    • ಅನೌಷ್ಕಾ ನೃತ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ
Rishi Sunak Daughter Dance: UKಯಲ್ಲಿ ರಿಷಿ ಸುನಕ್ ಮಗಳ ಕೂಚಿಪುಡಿ ನೃತ್ಯ: ವಿದೇಶದಲ್ಲೂ ಭಾರತೀಯ ಕಲೆ ಪ್ರದರ್ಶಿಸಿದ ‘ಮೂರ್ತಿ’ ಕುಡಿ title=
Rishi Sunak Daughter Dance

Rishi Sunak Daughter Dance: ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರ ಪುತ್ರಿ ಅನೌಷ್ಕಾ ಸುನಕ್ ಶುಕ್ರವಾರ ಲಂಡನ್‌ನಲ್ಲಿ ಆಯೋಜನೆ ಮಾಡಿದ್ದ ಕಾರ್ಯಕ್ರಮವೊಂದರಲ್ಲಿ ಕೂಚಿಪುಡಿ ನೃತ್ಯ ಮಾಡಿದ್ದಾರೆ. ರಂಗ್ - ಇಂಟರ್ನ್ಯಾಷನಲ್ ಕೂಚಿಪುಡಿ ಡ್ಯಾನ್ಸ್ ಫೆಸ್ಟಿವಲ್ 2022 ರ ಕಾರ್ಯಕ್ರಮ ಇದಾಗಿದ್ದು, 9 ವರ್ಷದ ಅನೌಷ್ಕ ಮುದ್ದಾಗಿ ಹೆಜ್ಜೆ ಹಾಕಿದ್ದಾರೆ.

ಇದನ್ನೂ ಓದಿ: Big Tech Layoffs 2022: ಕೆಲಸದಿಂದ ವಜಾಗೊಂಡ ಸಾವಿರಾರು ಜನ: NRIಗಳ ಪಾಡು ಮುಂದೇನು?

ಈ ಕಾರ್ಯಕ್ರಮದಲ್ಲಿ ಸಂಗೀತಗಾರರು, ಹಿರಿಯ ಸಮಕಾಲೀನ ನೃತ್ಯ ಕಲಾವಿದರು (65 ವರ್ಷ ಮೇಲ್ಪಟ್ಟ), ಗಾಲಿಕುರ್ಚಿ ನೃತ್ಯಗಾರರು, ಪೋಲೆಂಡ್‌ನ ನಟರಾಂಗ್ ಗ್ರೂಪ್‌ನ ಅಂತರರಾಷ್ಟ್ರೀಯ ವಿದ್ಯಾರ್ಥಿಗಳು ಸೇರಿದಂತೆ 4 ರಿಂದ 85 ವರ್ಷ ವಯಸ್ಸಿನ ಸುಮಾರು 100 ಕಲಾವಿದರು ಭಾಗವಹಿಸಿದ್ದರು.

ರಿಷಿ ಸುನಕ್ ಯುನೈಟೆಡ್ ಕಿಂಗ್‌ಡಮ್‌ನ 57 ನೇ ಪ್ರಧಾನ ಮಂತ್ರಿ ಮತ್ತು ಈ ಹುದ್ದೆಯನ್ನು ಅಲಂಕರಿಸಿದ ಮೊದಲ ಭಾರತೀಯ ಮೂಲದ ವ್ಯಕ್ತಿ ಎಂಬುದು ಎಲ್ಲರಿಗೂ ತಿಳಿದಿದೆ. ಅಷ್ಟೇ ಅಲ್ಲದೆ, ಇವರ ಪತ್ನಿ ಅಕ್ಷತಾ ಮೂರ್ತಿ ಕರ್ನಾಟಕ ಮೂಲದವರು.  ಅವರು ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ-ಸುಧಾ ಮೂರ್ತಿಯವರ ಪುತ್ರಿಯಾಗಿದ್ದಾರೆ. ರಿಷಿ ಸುನಕ್ ಹಾಗೂ ಅಕ್ಷತಾ ದಂಪತಿಗೆ ಕೃಷ್ಣ ಮತ್ತು ಅನೌಷ್ಕಾ ಸುನಕ್ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

ಅನೌಷ್ಕಾ ನೃತ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಈಕೆಯ ನೃತ್ಯ ಕಂಡ ಭಾರತೀಯರು ಸಂತಸ ವ್ಯಕ್ತಪಡಿಸಿದ್ದಾರೆ. ವಿದೇಶದಲ್ಲೂ ಭಾರತೀಯ ಕಲೆಯನ್ನು ಕರಗತ ಮಾಡಿಕೊಂಡು ನೃತ್ಯ ಪ್ರದರ್ಶನ ಮಾಡಿದ್ದಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. “ಐಗಿರಿ ನಂದಿನಿ” ಹಾಡಿಗೆ ಹೆಜ್ಜೆ ಹಾಕಿರುವ ಅನೌಷ್ಕ ವಿಡಿಯೋ ಇಲ್ಲಿದೆ ನೋಡಿ.

 

 

ಇದನ್ನೂ ಓದಿ:  German Officials learn Cricket: ಜರ್ಮನ್ ಅಧಿಕಾರಿಗಳಿಗೆ ಕ್ರಿಕೆಟ್ ಹೇಳಿಕೊಟ್ಟ ಭಾರತೀಯ: ವಿಡಿಯೋ ನೋಡಿ

42 ನೇ ವಯಸ್ಸಿನಲ್ಲಿ ಪ್ರಧಾನಿಯಾಗಿರುವ ಸುನಕ್ 200 ವರ್ಷಗಳಲ್ಲಿ ಅತ್ಯಂತ ಕಿರಿಯ ಬ್ರಿಟಿಷ್ ಪ್ರಧಾನಿ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಅಷ್ಟೇ ಅಲ್ಲದೆ, ಯುಕೆಯ ಅತ್ಯುನ್ನತ ಕಚೇರಿಯಲ್ಲಿ  ಅಧಿಕಾರ ಸ್ವೀಕರಿಸಿ ಮೊದಲ ಹಿಂದೂ ವ್ಯಕ್ತಿಯಾಗಿದ್ದಾರೆ. ಇವರ ಮೇಜಿನ ಮೇಲೆ ಗಣೇಶನ ಪ್ರತಿಮೆಯನ್ನು ಕೂಡ ಇಟ್ಟುಕೊಂಡಿದ್ದಾರೆ.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News