NRI Death: ತಾಯಿಯ ಹುಟ್ಟುಹಬ್ಬ ಆಚರಿಸಲು ಬಂದಿದ್ದ ಮಗ 10 ನೇ ಮಹಡಿಯಿಂದ ಬಿದ್ದು ದಾರುಣ ಸಾವು!

NRI Death: ಮೃತ ಶಾರುಖ್ ಇಂಜಿನಿಯರ್ (58) ದುಬೈ ಮೂಲದ ಉದ್ಯಮಿಯಾಗಿದ್ದು, ತನ್ನ ತಾಯಿಯ ಹುಟ್ಟುಹಬ್ಬವನ್ನು ಆಚರಿಸಲು ಮುಂಬೈಗೆ ಬಂದಿದ್ದರು. ಸರ್ವೀಸ್ ಅಪಾರ್ಟ್‌ಮೆಂಟ್‌ನಲ್ಲಿ ಶುಕ್ರವಾರ ಮಧ್ಯಾಹ್ನ 2.30ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Written by - Bhavishya Shetty | Last Updated : Dec 4, 2022, 04:40 PM IST
    • 10 ನೇ ಮಹಡಿಯಿಂದ ಎನ್ ಆರ್ ಐ ವ್ಯಕ್ತಿಯೊಬ್ಬರು ಬಿದ್ದು ದಾರುಣ ಸಾವು
    • ಕೊಲಾಬಾ ಪೊಲೀಸರು ಆಕಸ್ಮಿಕ ಮರಣ ವರದಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ
    • ಇದುವರೆಗೆ ಯಾವುದೇ ಆತ್ಮಹತ್ಯೆ ಪತ್ರ ಪತ್ತೆಯಾಗಿಲ್ಲ.
NRI Death: ತಾಯಿಯ ಹುಟ್ಟುಹಬ್ಬ ಆಚರಿಸಲು ಬಂದಿದ್ದ ಮಗ 10 ನೇ ಮಹಡಿಯಿಂದ ಬಿದ್ದು ದಾರುಣ ಸಾವು! title=
NRI Death

NRI Death: ಮುಂಬೈ: ಕೊಲಾಬಾದಲ್ಲಿನ ಪ್ರಸಿದ್ಧ ಪಂಚತಾರಾ ಹೋಟೆಲ್‌ನಿಂದ ನಿರ್ವಹಿಸಲ್ಪಡುವ ಐಷಾರಾಮಿ ಸೇವಾ ಅಪಾರ್ಟ್ಮೆಂಟ್‌ನ 10 ನೇ ಮಹಡಿಯಿಂದ ಎನ್ ಆರ್ ಐ ವ್ಯಕ್ತಿಯೊಬ್ಬರು ಬಿದ್ದು ದಾರುಣವಾಗಿ ಸಾವನ್ನಪ್ಪಿದ್ದಾರೆ. ಕೊಲಾಬಾ ಪೊಲೀಸರು ಆಕಸ್ಮಿಕ ಮರಣ ವರದಿ (ಎಡಿಆರ್) ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಇದು ಆತ್ಮಹತ್ಯೆ ಪ್ರಕರಣ ಎಂದು ಶಂಕಿಸಿದ್ದಾರೆ. ಆದರೆ ಇದುವರೆಗೆ ಯಾವುದೇ ಆತ್ಮಹತ್ಯೆ ಪತ್ರ ಪತ್ತೆಯಾಗಿಲ್ಲ.

ಇದನ್ನೂ ಓದಿ: Rishi Sunak Daughter Dance: UKಯಲ್ಲಿ ರಿಷಿ ಸುನಕ್ ಮಗಳ ಕೂಚಿಪುಡಿ ನೃತ್ಯ: ವಿದೇಶದಲ್ಲೂ ಭಾರತೀಯ ಕಲೆ ಪ್ರದರ್ಶಿಸಿದ ‘ಮೂರ್ತಿ’ ಕುಡಿ

ಮೃತ ಶಾರುಖ್ ಇಂಜಿನಿಯರ್ (58) ದುಬೈ ಮೂಲದ ಉದ್ಯಮಿಯಾಗಿದ್ದು, ತನ್ನ ತಾಯಿಯ ಹುಟ್ಟುಹಬ್ಬವನ್ನು ಆಚರಿಸಲು ಮುಂಬೈಗೆ ಬಂದಿದ್ದರು. ಸರ್ವೀಸ್ ಅಪಾರ್ಟ್‌ಮೆಂಟ್‌ನಲ್ಲಿ ಶುಕ್ರವಾರ ಮಧ್ಯಾಹ್ನ 2.30ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

"ಹೋಟೆಲ್‌ನ ನಾಲ್ಕನೇ ಮಹಡಿಯ ಬಾಲ್ಕನಿಯಲ್ಲಿ ಶಾರುಖ್ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಅವರು 10 ನೇ ಮಹಡಿಯಿಂದ ಜಿಗಿದಿದ್ದಾರೆ ಎಂಬ ಅನುಮಾನ ಭುಗಿಲೆದ್ದಿದೆ. 10 ನೇ ಮಹಡಿಯಿಂದ ಹಾರುವಾಗ, ಗೋಡೆಗಳಿಗೆ ಬಡಿದು, ನಾಲ್ಕನೇ ಮಹಡಿಯ ಬಾಲ್ಕನಿಗೆ ಬಿದ್ದರಬಹುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ಅಪಾರ್ಟ್‌ಮೆಂಟ್‌ನ ಸಿಬ್ಬಂದಿ ಆತನನ್ನು ಬಾಂಬೆ ಆಸ್ಪತ್ರೆಗೆ ಕರೆದೊಯ್ದರು. ಆದರೆ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

“ಶಾರುಖ್, ತನ್ನ ಹೆಂಡತಿ ಮತ್ತು ಮಕ್ಕಳೊಂದಿಗೆ ದುಬೈನಲ್ಲಿ ವಾಸಿಸುತ್ತಿದ್ದರು. ಅವರು ನವೆಂಬರ್ 27 ರಂದು ತಮ್ಮ ತಾಯಿಯ ಹುಟ್ಟುಹಬ್ಬಕ್ಕಾಗಿ ಮುಂಬೈಗೆ ಬಂದಿದ್ದರು” ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: NRI CEO: ಅಮೆರಿಕಾದಲ್ಲಿ ಭಾರತೀಯರ ಕಮಾಲ್: ಈ ಯಶಸ್ಸಿನ ಹಿಂದಿದೆ ಮಹತ್ವದ ಕಾರಣಗಳು

"ನಾವು ಅವರ ತಂದೆ ಮತ್ತು ಸಹೋದರಿಯ ಹೇಳಿಕೆಗಳನ್ನು ದಾಖಲಿಸಿದ್ದೇವೆ. ಅವರು ತಮ್ಮ ವ್ಯವಹಾರದಲ್ಲಿ ಅನುಭವಿಸಿದ ನಷ್ಟದಿಂದಾಗಿ ಅವರು ಒತ್ತಡದಲ್ಲಿದ್ದರು. ಯಾರ ವಿರುದ್ಧವೂ ಅನುಮಾನ ಅಥವಾ ದೂರು ಇಲ್ಲ” ಎಂದು ಕುಟುಂಬಸ್ಥರು ಹೇಳಿರುವುದಾಗಿ ಅಧಿಕಾರಿ ತಿಳಿಸಿದ್ದಾರೆ.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News