“ಅಮೆರಿಕಾದಲ್ಲಿ ‘RRR’ ವೀಕ್ಷಿಸಿದವರು ಭಾರತೀಯರ ಸ್ನೇಹಿತರು ಎಂದೆನಿಸಿತ್ತು”: ರಾಜಮೌಳಿ ಹೀಗಂದಿದ್ದೇಕೆ?

SS Rajamouli: ಸೇಥ್ ಮೇಯರ್ಸ್ ಅವರೊಂದಿಗಿನ ಸಂವಾದದಲ್ಲಿ ಮಾತನಾಡಿದ ಎಸ್‌ಎಸ್ ರಾಜಮೌಳಿ, “ನಾವು ವಿಶ್ವದ ಅಗ್ರಸ್ಥಾನದಲ್ಲಿದ್ದೇವೆ. ನಾನು ಭಾರತದಲ್ಲಿನ ಮತ್ತು ಜಗತ್ತಿನಾದ್ಯಂತ ಇರುವ ಭಾರತೀಯರಿಗಾಗಿ ಚಲನಚಿತ್ರಗಳನ್ನು ಮಾಡುತ್ತೇನೆ. ನಾವು ಪಾಶ್ಚಿಮಾತ್ಯ ರಾಷ್ಟ್ರಗಳಿಂದ ಮೆಚ್ಚುಗೆಯನ್ನು ಪಡೆಯಲು ಪ್ರಾರಂಭಿಸಿದಾಗ ನನ್ನ ಮೊದಲ ಆಲೋಚನೆ ಏನಾಗಿತ್ತೆಂದರೆ, ಚಿತ್ರ ವೀಕ್ಷಿಸಲು ಹೋದವರು ಬಹುಶಃ ನಮ್ಮ ಭಾರತೀಯರ ಸ್ನೇಹಿತರಾಗಿರಬೇಕು” ಎಂದು ಭಾವಿಸಿದ್ದೆ ಎಂದಿದ್ದಾರೆ.

Written by - Bhavishya Shetty | Last Updated : Jan 14, 2023, 12:27 PM IST
    • ಗೋಲ್ಡನ್ ಗ್ಲೋಬ್ ಅವಾರ್ಡ್ಸ್‌ನಲ್ಲಿ ಅತ್ಯುತ್ತಮ ಒರಿಜಿನಲ್ ಹಾಡಿನ ವಿಭಾಗ
    • ‘ನಾಟು ನಾಟು’ ನಾಮನಿರ್ದೇಶನಗೊಂಡ ಮತ್ತು ಗೆದ್ದ ಮೊದಲ ಹಾಡು ಎಂಬ ಹೆಗ್ಗಳಿಕೆಗೆ ಪಾತ್ರ
    • ಎಸ್‌ಎಸ್ ರಾಜಮೌಳಿ ಅವರ ಅದ್ಭುತ ಸಿನಿಮಾ RRR ಇತಿಹಾಸವನ್ನು ಸೃಷ್ಟಿಸಿದೆ
“ಅಮೆರಿಕಾದಲ್ಲಿ ‘RRR’ ವೀಕ್ಷಿಸಿದವರು ಭಾರತೀಯರ ಸ್ನೇಹಿತರು ಎಂದೆನಿಸಿತ್ತು”: ರಾಜಮೌಳಿ ಹೀಗಂದಿದ್ದೇಕೆ? title=
NRI

SS Rajamouli: ಗೋಲ್ಡನ್ ಗ್ಲೋಬ್ ಅವಾರ್ಡ್ಸ್‌ನಲ್ಲಿ ಅತ್ಯುತ್ತಮ ಒರಿಜಿನಲ್ ಹಾಡಿನ ವಿಭಾಗದಲ್ಲಿ ‘ನಾಟು ನಾಟು ನಾಮನಿರ್ದೇಶನಗೊಂಡ ಮತ್ತು ಗೆದ್ದ ಮೊದಲ ಹಾಡು ಎಂಬ ಹೆಗ್ಗಳಿಕೆಗೆ ಪಾತ್ರವಾಗುವ ಮೂಲಕ ಎಸ್‌ಎಸ್ ರಾಜಮೌಳಿ ಅವರ ಅದ್ಭುತ ಸಿನಿಮಾ RRR ಇತಿಹಾಸವನ್ನು ಸೃಷ್ಟಿಸಿದೆ. ಈ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಾಜಮೌಳಿ ಅವರು, “ಯುಎಸ್‌ನಲ್ಲಿರುವ ಎನ್‌ಆರ್‌ಐಗಳ ಸ್ನೇಹಿತರು ಮಾತ್ರ ಆರ್‌ಆರ್‌ಆರ್ ವೀಕ್ಷಿಸುತ್ತಾರೆ ಎಂದು ಅವರು ಭಾವಿಸಿದ್ದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: Hindu god photo on beer bottle: ಬಿಯರ್ ಬಾಟಲಿಯಲ್ಲಿ ಹಿಂದೂ ದೇವರ ಫೋಟೋ: ಉತ್ಪನ್ನ ಹಿಂತೆಗೆದುಕೊಳ್ಳದಿದ್ದರೆ… ಕಂಪನಿಗೆ ವಾರ್ನಿಂಗ್

ಸೇಥ್ ಮೇಯರ್ಸ್ ಅವರೊಂದಿಗಿನ ಸಂವಾದದಲ್ಲಿ ಮಾತನಾಡಿದ ಎಸ್‌ಎಸ್ ರಾಜಮೌಳಿ, “ನಾವು ವಿಶ್ವದ ಅಗ್ರಸ್ಥಾನದಲ್ಲಿದ್ದೇವೆ. ನಾನು ಭಾರತದಲ್ಲಿನ ಮತ್ತು ಜಗತ್ತಿನಾದ್ಯಂತ ಇರುವ ಭಾರತೀಯರಿಗಾಗಿ ಚಲನಚಿತ್ರಗಳನ್ನು ಮಾಡುತ್ತೇನೆ. ನಾವು ಪಾಶ್ಚಿಮಾತ್ಯ ರಾಷ್ಟ್ರಗಳಿಂದ ಮೆಚ್ಚುಗೆಯನ್ನು ಪಡೆಯಲು ಪ್ರಾರಂಭಿಸಿದಾಗ ನನ್ನ ಮೊದಲ ಆಲೋಚನೆ ಏನಾಗಿತ್ತೆಂದರೆ, ಚಿತ್ರ ವೀಕ್ಷಿಸಲು ಹೋದವರು ಬಹುಶಃ ನಮ್ಮ ಭಾರತೀಯರ ಸ್ನೇಹಿತರಾಗಿರಬೇಕು” ಎಂದು ಭಾವಿಸಿದ್ದೆ ಎಂದಿದ್ದಾರೆ.

ಸೆಲೆಬ್ರಿಟಿಗಳು, ಕಥೆಗಾರರು, ಚಲನಚಿತ್ರ ನಿರ್ದೇಶಕರು ಚಿತ್ರದ ಬಗ್ಗೆ ಟ್ವೀಟ್ ಮಾಡಿ, ಸಾಮಾಜಿಕ ಮಾಧ್ಯಮದಲ್ಲಿ ಅದರ ಬಗ್ಗೆ ಮಾತನಾಡಲು ಪ್ರಾರಂಭಿಸಿದಾಗ ವೀಕ್ಷಕರ ಪಟ್ಟಿ ಹೆಚ್ಚಾಗಿದೆ ಎಂದು ಅಂದುಕೊಂಡೆ. ಸೆಲೆಬ್ರಿಟಿಗಳು, ಜನರು ಬಾಯಿಮಾತಿನ ಮೂಲಕ ಚಲನಚಿತ್ರವನ್ನು ಚಾಂಪಿಯನ್ ಮಾಡಲು ಪ್ರಾರಂಭಿಸಿದರು. ಆ ಬಳಿಕ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಮಾಡಲಾಯಿತು, ಬಿಡುಗಡೆಯಾದ 15 ವಾರಗಳವರೆಗೆ ಸತತವಾಗಿ ಟಾಪ್ 10 ಪಟ್ಟಿಯಲ್ಲಿ ಬಂದಿತ್ತು. ಈ ಚಲನಚಿತ್ರವು ಜಪಾನ್‌ನಲ್ಲಿ ಬಿಡುಗಡೆಯಾಯಿತು. ಅಲ್ಲಿ ಕೂಡ ಭರ್ಜರಿ ಪ್ರದರ್ಶನ ಕಂಡಿತು.ಇದು ಜಪಾನ್‌ನಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಲನಚಿತ್ರವಾಗಿದೆ” ಎಂದು ಅವರು ಹೇಳಿದರು.

ಇದನ್ನೂ ಓದಿ: NRIಗಳಿಗೆ ಗುಡ್ ನ್ಯೂಸ್: ಯುಪಿಐ ಸೇವೆಯು ಈ 10 ದೇಶಗಳಲ್ಲಿ ಶೀಘ್ರದಲ್ಲೇ ಲಭ್ಯ

‘RRR’ ಸಿನಿಮಾದ ಹಾಡು ‘ನಾಟು ನಾಟು’ ಗೋಲ್ಡನ್ ಗ್ಲೋಬ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಈ ಹಾಡನ್ನು ಸಂಗೀತ ನಿರ್ದೇಶಕ ಎಂಎಂ ಕೀರವಾಣಿ ಸಂಯೋಜಿಸಿದ್ದಾರೆ. ಚಂದ್ರಬೋಸ್ ಅವರ ಸಾಹಿತ್ಯದೊಂದಿಗೆ ಕಾಲ ಭೈರವ ಮತ್ತು ರಾಹುಲ್ ಸಿಪ್ಲಿಗುಂಜ್ ಹಾಡಿದ್ದಾರೆ. ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಈ ಹಾಡಿಗೆ ಸಖತ್ ಸ್ಟೆಪ್ ಹಾಕಿದ್ದು, ಟ್ರೆಂಡಿಂಗ್ ಸೃಷ್ಟಿ ಮಾಡಿತ್ತು. ಇದೀಗ 80 ನೇ ಗೋಲ್ಡನ್ ಗ್ಲೋಬ್ ಅವಾರ್ಡ್ಸ್‌ನಲ್ಲಿ ಅತ್ಯುತ್ತಮ ಒರಿಜಿನಲ್ ಗೀತೆ ಎಂದು ಘೋಷಿಸಲಾಯಿತು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News