ಸಿಂಗಾಪುರದ ಫೋರ್ಟ್ ಕ್ಯಾನಿಂಗ್ ಪಾರ್ಕ್‌ನಲ್ಲಿ ಕನ್ನಡಿಗರ ಚಾರಣ

ಏಪ್ರಿಲ್‌ 15ರಂದು ಸಂಜೆ 4.30ಕ್ಕೆ ಪ್ರಾರಂಭಗೊಂಡ ಚಾರಣ ಯಾತ್ರೆ ಈ ಬಾರಿ ಸಿಂಗಪುರದಲ್ಲಿನ ಫೋರ್ಟ್ ಕ್ಯಾನಿಂಗ್ ಪಾರ್ಕ್‌ನಲ್ಲಿ ನಡೆದಿದೆ.   

Written by - Bhavishya Shetty | Last Updated : Apr 20, 2022, 02:06 PM IST
  • ಸಿಂಗಾಪುರ ಕನ್ನಡ ಸಂಘಕ್ಕೆ ರಜತ ಮಹೋತ್ಸವದ ಸಂಭ್ರಮ
  • ಅನಿವಾಸಿ ಕನ್ನಡಿಗರಿಂದ ಚಾರಣ ಆಯೋಜನೆ
  • ಸಿಂಗಾಪುರದ ಫೋರ್ಟ್ ಕ್ಯಾನಿಂಗ್ ಪಾರ್ಕ್‌ನಲ್ಲಿ ಚಾರಣ
ಸಿಂಗಾಪುರದ ಫೋರ್ಟ್ ಕ್ಯಾನಿಂಗ್ ಪಾರ್ಕ್‌ನಲ್ಲಿ ಕನ್ನಡಿಗರ ಚಾರಣ title=
Singapore

ಸಿಂಗಾಪುರದ ಕನ್ನಡ ಸಂಘಕ್ಕೆ ಇದೀಗ ರಜತ ಮಹೋತ್ಸವದ ಸಂಭ್ರಮ. ಈ ಹಿನ್ನೆಲೆಯಲ್ಲಿ ಅಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು ಮತ್ತು ಕನ್ನಡಿಗರು ಸೇರಿ 'ಯಾತ್ರಾ - ಗೆಳೆಯರ ಪಯಣ ನಿಸರ್ಗದ ಚಾರಣ' ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಈ ಮೂಲಕ ಕೋವಿಡ್‌ ಪ್ರಚೋದಿತ ಲಾಕ್‌ಡೌನ್‌ನಿಂದ ಮನೆಯಲ್ಲಿಯೇ ಲಾಕ್ ಆಗಿದ್ದ ಜನರಿಗೆ ಸ್ವಚ್ಛಂದವಾಗಿ ತಿರುಗಾಡಲು ಅನುವು ಮಾಡಿಕೊಟ್ಟಂತಾಗಿದೆ. 

ಇದನ್ನು ಓದಿ: ಭಾರತದಲ್ಲಿ ಎನ್‌ಆರ್‌ಐಗಳು ಪ್ರಾಪರ್ಟಿ ಖರೀದಿಸಬಹುದೇ...? ಇಲ್ಲಿದೆ ಉತ್ತರ

ಏಪ್ರಿಲ್‌ 15ರಂದು ಸಂಜೆ 4.30ಕ್ಕೆ ಪ್ರಾರಂಭಗೊಂಡ ಚಾರಣ ಯಾತ್ರೆ ಈ ಬಾರಿ ಸಿಂಗಪುರದಲ್ಲಿನ ಫೋರ್ಟ್ ಕ್ಯಾನಿಂಗ್ ಪಾರ್ಕ್‌ನಲ್ಲಿ ನಡೆದಿದೆ. 18 ಎಕರೆ ವಿಸ್ತಾರದಲ್ಲಿ ಹರಡಿರುವ ಪಾರ್ಕ್‌ನಲ್ಲಿ ಚಾರಣ ನಡೆಸಲಾಗಿದೆ. ಸಿಂಗಾಪುರದ ರಾಜಕೀಯ ಇತಿಹಾಸದ ಅನೇಕ ಮಜಲುಗಳು ಈ ಸ್ಥಳದಲ್ಲಿ ಇವೆ. ಅಷ್ಟೇ ಅಲ್ಲದೆ, ಹಸುರಿನಿಂದ ಕೂಡಿರುವ ಈ ಸ್ಥಳವು ಸಾವಿರಾರು ವನ್ಯರಾಶಿಯ ಸಂಗ್ರಹವಾಗಿದ್ದು, ಮಕ್ಕಳಿಗೆ, ಹಿರಿಯರಿಗೆ ಎಂಜಾಯ್‌ ಮಾಡಲು ಉತ್ತಮ ಸ್ಥಳ ಎನ್ನಬಹುದು. 

ಕೋವಿಡ್ ನಿಯಮಾವಳಿಗಳ ಸಡಲಿಕೆಯ ಬಳಿಕ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಸುಮಾರು 140 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. 45ಕ್ಕೂ ಹೆಚ್ಚು ಮಕ್ಕಳು ಬಹಳ ಮೋಜಿನಿಂದ ಅವರಿಗಾಗಿ ಏರ್ಪಡಿಸಿದ ಆಟಗಳಲ್ಲಿ ಪಾಲ್ಗೊಂಡಿದ್ದಾರೆ. ಹಚ್ಚ ಹಸಿರ ತೋಟ, ಬೆಳೆದು ನಿಂತಿದ್ದ ಮರಗಳು, ಪುಟ್ಟ ಪುಟ್ಟ ಝರಿಗಳು, ಆ ನೀರಿನಲ್ಲಿದ್ದ ಮೀನುಗಳು ಹಾಗೂ ತಂಪನೆಯ ವಾತಾವರಣದಲ್ಲಿ ನಡೆದ ಈ ಕಿರು ಚಾರಣ ಎಲ್ಲರಲ್ಲಿ ಹೊಸ ಹುರುಪು ಮೂಡಿಸಿದ್ದಂತು ನಿಜ. 

ಇದನ್ನು ಓದಿ: ʼಸರ್ ಅಹ್ಮದ್ ಸಲ್ಮಾನ್ ರಶ್ದಿʼ: ಭಾರತ ಮೂಲದ ಕಾದಂಬರಿಕಾರನ ಬಗ್ಗೆ ನಿಮಗೆಷ್ಟು ಗೊತ್ತು?

ಇನ್ನೊಂದೆಡೆ ಮಕ್ಕಳಿಗಾಗಿ ಅನೇಕ ಮೋಜು ಭರಿತ ಆಟೋಟಗಳನ್ನು ಹಮ್ಮಿಕೊಳ್ಳಲಾಗಿತ್ತು. ಸುಮಾರು ಎರಡು ಗಂಟೆಗಳ ಕಾಲ ಪ್ರಕೃತಿಯಲ್ಲಿ ಸುತ್ತಾಡಿದ ಅನಿವಾಸಿ ಕನ್ನಡಿಗರು ಸಂತಸಪಟ್ಟಿದ್ದಾರೆ. ಇನ್ನು ಸಿಂಗಾಪುರ ಕನ್ನಡ ಸಂಘದ ಆಶ್ರಯದಲ್ಲಿ ನಡೆದ ಈ ಚಾರಣ ಕಾರ್ಯಕ್ರಮವು ಅಲ್ಲಿನ ಕನ್ನಡಿಗರ ಮನಗೆದ್ದಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News