NRI News: ಯುಎಸ್ ಗೋಲ್ಡನ್ ವಿಸಾ ಪಡೆಯುವ ಪ್ರಕ್ರಿಯೆ ಇದೀಗ ಮತ್ತಷ್ಟು ಸುಲಭವಾಗಲಿದೆ

EB-5 ಕಾರ್ಯಕ್ರಮವು ಹೂಡಿಕೆದಾರರಿಗೆ ಮತ್ತು ಅವರ ಕುಟುಂಬ ಸದಸ್ಯರಿಗೆ ಗ್ರೀನ್ ಕಾರ್ಡ್ ಪಡೆದುಕೊಳ್ಳಲು ಮತಷ್ಟು ಅನುವುಮಾಡಿಕೊಡುತ್ತದೆ. ಇದು ಸಂಗಾತಿ ಮತ್ತು 21 ವರ್ಷದೊಳಗಿನ ಮಕ್ಕಳನ್ನು ಒಳಗೊಂಡಿರುತ್ತದೆ. ಈ ವಿಸಾ ಅಮೆರಿಕಾದಲ್ಲಿ ಹೊಸ ವಾಣಿಜ್ಯ ಉದ್ಯಮ ಸ್ಥಾಪಿಸಲು 800,000 ಡಾಲರ್ ಬಂಡವಾಳ ಹೂಡಿಕೆಯ ಮಿತಿಯನ್ನು ಒಳಗೊಂಡಿರುತ್ತದೆ. ಈ ಬಂಡವಾಳ  ವಿವಿಧ ಹೂಡಿಕೆಗಳು ಮತ್ತು ಉದ್ಯೋಗ ಸೃಷ್ಟಿಯ ಅವಶ್ಯಕತೆಗಳನ್ನು ಪೂರೈಸಲು ಬಳಸಬೇಕು.  

Written by - Nitin Tabib | Last Updated : Sep 17, 2022, 10:45 AM IST
  • ಈ ಹೊಸ ಬದಲಾವಣೆಗಳನ್ನು 2022 ರ EB-5 ರಿಫಾರ್ಮ್ ಮತ್ತು ಇಂಟೆಗ್ರಿಟಿ ಆಕ್ಟ್ (RIA) ಜಾರಿಗೊಳಿಸುವ ಮೂಲಕ ಈ ವರ್ಷದ ಆರಂಭದಲ್ಲಿ ಪರಿಚಯಿಸಲಾಗಿದೆ
  • ಮತ್ತು ಕಾರ್ಯಕ್ರಮದಲ್ಲಿ ಭಾಗವಹಿಸುವ ವಿದೇಶಿ ಪ್ರಜೆಗಳಿಗೆ ಪಾರದರ್ಶಕತೆ ಮತ್ತು ಭದ್ರತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿವೆ.
NRI News: ಯುಎಸ್ ಗೋಲ್ಡನ್ ವಿಸಾ ಪಡೆಯುವ ಪ್ರಕ್ರಿಯೆ ಇದೀಗ ಮತ್ತಷ್ಟು ಸುಲಭವಾಗಲಿದೆ  title=
US Golden Visa

US EB-5 Immigrant Investor Program ನಲ್ಲಿ ಕೆಲ ಸಕಾರಾತ್ಮಕ ಬದಲಾವಣೆಗಳನ್ನು ಮಾಡಲಾಗಿದ್ದು, ಇದರಿಂದ ಅಮೆರಿಕಾಕ್ಕೆ ವಲಸೆ ಹೋಗಲು ಬಯಸುವ ವಿದೇಶಿಗರಿಗೆ ಮತ್ತಷ್ಟು ಅನುಕೂಲವಾಗಲಿದೆ.

EB-5 ಕಾರ್ಯಕ್ರಮವು ಹೂಡಿಕೆದಾರರಿಗೆ ಮತ್ತು ಅವರ ಕುಟುಂಬ ಸದಸ್ಯರಿಗೆ ಗ್ರೀನ್ ಕಾರ್ಡ್ ಪಡೆದುಕೊಳ್ಳಲು ಮತಷ್ಟು ಅನುವುಮಾಡಿಕೊಡುತ್ತದೆ. ಇದು ಸಂಗಾತಿ ಮತ್ತು 21 ವರ್ಷದೊಳಗಿನ ಮಕ್ಕಳನ್ನು ಒಳಗೊಂಡಿರುತ್ತದೆ. ಈ ವಿಸಾ ಅಮೆರಿಕಾದಲ್ಲಿ ಹೊಸ ವಾಣಿಜ್ಯ ಉದ್ಯಮ ಸ್ಥಾಪಿಸಲು 800,000 ಡಾಲರ್ ಬಂಡವಾಳ ಹೂಡಿಕೆಯ ಮಿತಿಯನ್ನು ಒಳಗೊಂಡಿರುತ್ತದೆ. ಈ ಬಂಡವಾಳ  ವಿವಿಧ ಹೂಡಿಕೆಗಳು ಮತ್ತು ಉದ್ಯೋಗ ಸೃಷ್ಟಿಯ ಅವಶ್ಯಕತೆಗಳನ್ನು ಪೂರೈಸಲು ಬಳಸಬೇಕು.

ಈ ಹೊಸ ಬದಲಾವಣೆಗಳನ್ನು 2022 ರ EB-5 ರಿಫಾರ್ಮ್ ಮತ್ತು ಇಂಟೆಗ್ರಿಟಿ ಆಕ್ಟ್ (RIA) ಜಾರಿಗೊಳಿಸುವ ಮೂಲಕ ಈ ವರ್ಷದ ಆರಂಭದಲ್ಲಿ ಪರಿಚಯಿಸಲಾಗಿದೆ ಮತ್ತು ಕಾರ್ಯಕ್ರಮದಲ್ಲಿ ಭಾಗವಹಿಸುವ ವಿದೇಶಿ ಪ್ರಜೆಗಳಿಗೆ ಪಾರದರ್ಶಕತೆ ಮತ್ತು ಭದ್ರತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.

>> ಈ ಸುಧಾರಣಾ ಕಾಯಿದೆಯು ಮುಂದಿನ ಐದು ವರ್ಷಗಳ ಕಾಲ EB-5 ಕಾರ್ಯಕ್ರಮವನ್ನು ಮರುಪ್ರಾಮಾಣೀಕರಿಸಿದೆ. 2015 ಬಳಿಕ ಈ ಕಾರ್ಯಕ್ರಮಕ್ಕೆ ಇಷ್ಟು ದೀರ್ಘವಾದ ಮರುಅಧಿಕಾರವನ್ನು ನೀಡುವುದು ಇದೇ ಮೊದಲು.

>> ಸೆಪ್ಟೆಂಬರ್ 30, 2026 ಅಥವಾ ಅದಕ್ಕೂ ಮೊದಲು ಸಲ್ಲಿಸಲಾದ ಯಾವುದೇ ಅರ್ಜಿಯನ್ನು EB-5 ಕಾರ್ಯಕ್ರಮದ ಅವಧಿ ಮುಗಿದ ನಂತರವೂ ತೀರ್ಪು ಪ್ರಕಟಿಸುವುದು ಮುಂದುವರೆಯಲಿದೆ ಎಂದು ಈ ರೀಫಾರ್ಮ್ ಆಕ್ಟ್ ಹೇಳುತ್ತದೆ.  ಅಸ್ತಿತ್ವದಲ್ಲಿರುವ EB-5 ತನ್ನ ಫೈಲ್‌ಗಳನ್ನು USCIS ನಿಂದ ಪ್ರಕ್ರಿಯೆಗೊಳಿಸುತ್ತಿರುವಾಗ ನಿರ್ದಿಷ್ಟ ಪ್ರಮಾಣದ ಭದ್ರತೆ ಹೊಂದಿರುವುದನ್ನು ಇದು ಖಚಿತಪಡಿಸಲಿದೆ, ವಿಶೇಷವಾಗಿ ಪ್ರೋಗ್ರಾಂ ಮೊಟಕುಗೊಂಡ ಸಂದರ್ಭಗಳಲ್ಲಿಯೂ ಕೂಡ ವಲಸಿಗರು ತಮ್ಮ US ಗ್ರೀನ್ ಕಾರ್ಡ್ ಅನ್ನು ಸಮಯೋಚಿತವಾಗಿ ಸ್ವೀಕರಿಸಲು ಸಾಧ್ಯವಾಗಲಿದೆ.

>> ಈ ಹೊಸ ಬದಲಾವಣೆಗಳು EB-5 ಹೂಡಿಕೆದಾರರಿಗೆ ಅವರ  ಗ್ರೀನ್ ಕಾರ್ಡ್ ಅರ್ಜಿ ಪ್ರಕ್ರಿಯೆ ಪ್ರಕ್ರಿಯೆಗೊಳ್ಳುವವರೆಗೆ ಅಮೇರಿಕಾದಲ್ಲಿ ವಾಸಿಸಲು, ಕೆಲಸ ಮಾಡಲು ಮತ್ತು ಅಧ್ಯಯನ ನಡೆಸಲು ಅವಕಾಶ ಕಲ್ಪಿಸಲಿವೆ.

ಇದನ್ನೂ ಓದಿ-“ಉಕ್ರೇನ್‌ನಿಂದ ಮರಳಿದ ವಿದ್ಯಾರ್ಥಿಗಳಿಗೆ ಭಾರತೀಯ ಕಾಲೇಜುಗಳಲ್ಲಿ ವಸತಿ ಸಾಧ್ಯವಿಲ್ಲ”

>> ಇದರಿಂದ EB-5 ಅರ್ಜಿದಾರರು ಪ್ರಾದೇಶಿಕ ಕೇಂದ್ರ, ಹೊಸ ವಾಣಿಜ್ಯ ಉದ್ಯಮ ಅಥವಾ ಉದ್ಯೋಗ ಸೃಷ್ಟಿ ಮಾಡುವ ಘಟಕದಲ್ಲಿ ಹೂಡಿಕೆ ಮಾಡಿರುವ ಕಾರಣ ಅವರಿಗೆ ಉತ್ತಮ ನಂಬಿಕೆಯ ರಷಣೆ ಸಿಗಲಿದೆ. ಇದರರ್ಥ ಒಳ್ಳೆಯ ಉದ್ದೇಶದ ಹೂಡಿಕೆಗಾರರು ಸಾಲಿನಲ್ಲಿ ತಮ್ಮ ಸ್ಥಾನವನ್ನು ಕಳೆದುಕೊಳ್ಳುವುದಿಲ್ಲ ಮತ್ತು EB-5 ಕಾರ್ಯಕ್ರಮದ ಅಡಿಯಲ್ಲಿ ತಮ್ಮ ಹಸಿರು ಕಾರ್ಡ್ ಪಡೆದುಕೊಳ್ಳುವ ಮೂಲಕ ಇನ್ನೂ ಹಲವು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.

ಇದನ್ನೂ ಓದಿ-NRI News: ಭಾರತ ಬಿಲ್ ಪೇಮೆಂಟ್ ವ್ಯವಸ್ಥೆಯನ್ನು ಬಳಸಿ ಇನ್ಮುಂದೆ NRI ಗಳು ಕೂಡ ಯುಟಿಲಿಟಿ ಬಿಲ್ಸ್ ಪಾವತಿಸಬಹುದು

>>  EB-5 ಕಾರ್ಯಕ್ರಮ ಇನ್ಮುಂದೆ ಭಾರಿ ವೇಗ ಪಡೆದುಕೊಳ್ಳಲಿದ್ದು, EB-5 ಹೂಡಿಕೆದಾರರು ತಮ್ಮ ಗ್ರೀನ್ ಕಾರ್ಡ್ ಗಾಗಿ ಅರ್ಜಿಯನ್ನು ಸಲ್ಲಿಸಿ ಹಲವು ಲಾಭಗಳ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News