NRI News: ಈ ಬಾರಿಯ ಹವಾನಾ ಮೇಳದಲ್ಲಿ ಭಾರತೀಯ ಕಂಪನಿಗಳೂ ಭಾಗಿಯಾಗಲಿವೆ: FIHAV2022

NRI News: ನವೆಂಬರ್ 14 ರಿಂದ 18ರವರೆಗೆ ನಡೆಯಲಿರುವ ಈ ಮೇಳದಲ್ಲಿ ಭಾರತೀಯ ಆರ್ಥಿಕ ವ್ಯಾಪಾರ ಸಂಸ್ಥೆ ಭಾರತೀಯ ಕಂಪನಿಗಳ ನಿಯೋಗವನ್ನು ಪ್ರತಿನಿಧಿಸಲಿದೆ.  

Written by - Nitin Tabib | Last Updated : Oct 2, 2022, 01:54 PM IST
  • "ಯುಎಇಯಿಂದ ಎನ್‌ಆರ್‌ಐಗಳು ಹವಾನಾ ಮೇಳದಲ್ಲಿ ಭಾಗವಹಿಸಲಿರುವ ಕಾರಣ ನಾವು ಅವರೊಂದಿಗೆ ಚರ್ಚೆ ನಡೆಸುತ್ತಿದ್ದೇವೆ ಮತ್ತು ಯುಎಇಯ ಉಪ ಸಚಿವರು ಅವರ ನೇತೃತ್ವ ವಹಿಸಲಿದ್ದಾರೆ".
  • "ಈ ಮೇಳದಲ್ಲಿ ಯುಎಸ್‌ಎ ಮತ್ತು ಕೆನಡಾದಲ್ಲಿರುವ ಎನ್‌ಆರ್‌ಐಗಳಿಂದ ನಾವು ಹೆಚ್ಚಿನ ಸಮನ್ವಯವನ್ನು ನೋಡಲು ಬಯಸುತ್ತಿದ್ದೇವೆ, ”ಎಂದು ಡಾ ಇಕ್ಬಾಲ್ ಹೇಳಿದ್ದಾರೆ
NRI News: ಈ ಬಾರಿಯ ಹವಾನಾ ಮೇಳದಲ್ಲಿ ಭಾರತೀಯ ಕಂಪನಿಗಳೂ ಭಾಗಿಯಾಗಲಿವೆ: FIHAV2022 title=
Havana Fair 2022

NRI News: ಈ ಬಾರಿಯ ಹವಾನಾ ಮೇಳದಲ್ಲಿ ಭಾರತೀಯ ಕಂಪನಿಗಳು ಕೂಡ ಭಾಗವಹಿಸಲಿವೆ. ಗ್ರಾಹಕ ಸರಕುಗಳು, ಔಷಧಗಳು, ವೈದ್ಯಕೀಯ ಸಾಧನಗಳು ಮತ್ತು ಎಲೆಕ್ಟ್ರಿಕ್ ವಾಹನಗಳು ಸೇರಿದಂತೆ ವಿವಿಧ ವಲಯಗಳ ಭಾರತೀಯ ಕಂಪನಿಗಳು ಹವಾನಾ ಮೇಳ FIHAV2022 ನಲ್ಲಿ ಭಾಗವಹಿಸಲಿವೆ.

ನವೆಂಬರ್ 14-18 ರವರೆಗೆ ನಡೆಯಲಿರುವ ಈ ಮೇಳದಲ್ಲಿ ಭಾರತೀಯ ಆರ್ಥಿಕ ವ್ಯಾಪಾರ ಸಂಸ್ಥೆ (ಐಇಟಿಓ) ಭಾರತೀಯ ಕಂಪನಿಗಳ ನಿಯೋಗವನ್ನು ಪ್ರತಿನಿಧಿಸಲಿದೆ. ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಜಾಗತಿಕ ಲಾಕ್‌ಡೌನ್‌ ಕಾರಣ ಎರಡು ವರ್ಷಗಳ ಅಂತರದ ನಂತರ ಈ ಮೇಳ ನಡೆಯುತ್ತಿದೆ. 

ಈ ಕುರಿತು ಆಂಗ್ಲ ಮಾಧ್ಯಮ ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿರುವ ಭಾರತೀಯ ಆರ್ಥಿಕ ವ್ಯಾಪಾರ ಸಂಸ್ಥೆ ಅಧ್ಯಕ್ಷ ಡಾ.ಆಸಿಫ್ ಇಕ್ಬಾಲ್, "ನವೆಂಬರ್ ನಲ್ಲಿ ಇಂಡೋನೇಷ್ಯಾದಲ್ಲಿ ಆಯೋಜಿಸಲು ಉದ್ದೇಶಿಸಲಾಗಿರುವ ಜಿ20 ಶೃಂಗಸಭೆಯ ನೆರಳಿನಲ್ಲಿಯೇ ಹವಾನಾ ಮೇಳ ನಡೆಯುತಿದ್ದು, ಅದರಲ್ಲಿ ಭಾರತೀಯ ನಿಯೋಗವೂ ಕೂಡ ಇರಲಿದೆ ಮತ್ತು ಇದು ಮುಂದಿನ ತಿಂಗಳು ಜಿ20 ಶೃಂಗಸಭೆಯ ಅಧ್ಯಕ್ಷತೆಯನ್ನು ವಹಿಸಲು ಭಾರತದ ನಾಯಕತ್ವವನ್ನು ಪ್ರದರ್ಶಿಸಲು ಒಂದು ಉತ್ತಮ ಅವಕಾಶವಾಗಿರಲಿದೆ" ಎಂದಿದ್ದಾರೆ.
ಈ ಬಾರಿಯ G20 ಶೃಂಗಸಭೆ ಸಾಂಕ್ರಾಮಿಕದ ಅವಧಿಯ ನಂತರದ ಆರ್ಥಿಕ ಚೇತರಿಕೆ, ನವೀಕರಿಸಬಹುದಾದ ಇಂಧನ, ಹವಾಮಾನ ಬದಲಾವಣೆ, ನಾವೀನ್ಯತೆ ಮತ್ತು ತಂತ್ರಜ್ಞಾನ, ವಿಕಾಸಗೊಳ್ಳುತ್ತಿರುವ ಜಾಗತಿಕ ಭದ್ರತಾ ಸನ್ನಿವೇಶ ಮತ್ತು ಭಾರತ-ಲ್ಯಾಟಿನ್ ಅಮೆರಿಕದ ಸಂಬಂಧಗಳು ಸೇರಿದಂತೆ ವಿವಿಧ ವಿಷಯಗಳ ಮೇಲೆ ಕೇಂದ್ರೀಕೃತವಾಗಿರಲಿದೆ.

ಭಾರತ ಮತ್ತು ಕ್ಯೂಬಾ
ಮೇಳದಲ್ಲಿ ಭಾರತೀಯ ಕಂಪನಿಗಳ ಭಾಗವಹಿಸುವಿಕೆ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡ ಭಾರತದಲ್ಲಿನ ಕ್ಯೂಬಾದ ರಾಯಭಾರಿ ಅಲೆಜಾಂಡ್ರೊ ಸಿಮಾನ್ಕಾಸ್ ಮರಿನ್, “ಇಂತಹ ದ್ವಿಪಕ್ಷೀಯ ಸಂಬಂಧಗಳ ಪ್ರಗತಿಯನ್ನು ಪರಿಶೀಲಿಸಲು ಮತ್ತು ತಮ್ಮ ಬಹುಮುಖಿಗಳನ್ನು ಮತ್ತಷ್ಟು ವಿಸ್ತರಿಸುವ ಮಾರ್ಗಗಳನ್ನು ಗುರುತಿಸಲು ಇದು ಎರಡೂ ಕಡೆಯವರಿಗೆ ಇದು ಉತ್ತಮ ಸಹಕಾರ ಮತ್ತು ಅವಕಾಶ ಒದಗಿಸಲಿದೆ" ಎಂದು ಹೇಳಿದ್ದಾರೆ.

ಈ ಮೇಳದಲ್ಲಿ ಭಾಗವಹಿಸಲು ದೆಹಲಿ, ಬೆಂಗಳೂರು ಮತ್ತು ಹೈದರಾಬಾದ್‌ನ ಭಾರತೀಯ ಕಂಪನಿಗಳು ಸಾಕಷ್ಟು ಆಸಕ್ತಿ ವಹಿಸಿವೆ. "ಈ ವರ್ಷದ ಮೇಳದಲ್ಲಿ ವಿಶೇಷ ಪಾಲುದಾರರಾಗಲು ನಾವು ಅವರನ್ನು ಆಹ್ವಾನಿಸಿದ್ದೇವೆ, ಈ ನಿಟ್ಟಿನಲ್ಲಿ ಐಇಟಿಒಗೆ ಯಾವುದೇ ಬೆಂಬಲವನ್ನು ನೀಡಲು ರಾಯಭಾರ ಕಚೇರಿ ಸಿದ್ಧವಾಗಿದೆ" ಎಂದು ರಾಯಭಾರಿ ಮರಿನ್ ಹೇಳಿದ್ದಾರೆ.

ಡಾ ಆಸಿಫ್ ಇಕ್ಬಾಲ್ ಅವರ ಪ್ರಕಾರ, "ಈ ಮೇಳವು ಭಾರತೀಯ ನಿಯೋಗಕ್ಕೆ ತಮ್ಮ ಉತ್ಪನ್ನಗಳನ್ನು ಮತ್ತು ಪರಿಣತಿಯನ್ನು ಕ್ಯೂಬಾದ ಕೌಂಟರ್ಪಾರ್ಟ್ ಗಳಿಗೆ ಮಾತ್ರವಲ್ಲದೆ ಅಲ್ಲಿಗೆ ಬರುವ ಪ್ರದೇಶದ ಇತರ ನಿಯೋಗಗಳ ಮುಂದೆ ಪ್ರದರ್ಶಿಸಲು ಅವಕಾಶವನ್ನು ಒದಗಿಸಲಿವೆ."

"ಭಾರತದ ನಾಯಕತ್ವದ ಸಂವಾದದಲ್ಲಿ ಜಾಗತಿಕ ಕೌಂಟರ್ಪಾರ್ಟ್ ಗಳೊಂದಿಗೆ  ತೊಡಗಿಸಿಕೊಳ್ಳಲು ಇದು ಭಾರತೀಯ ಕಂಪನಿಗಳಿಗೆ ಉತ್ತಮ ಅವಕಾಶವಾಗಿದೆ. ಈ ಸಂವಾದವು ಮೇಳದ ಪಕ್ಕದಲ್ಲಿ ನಡೆಯುತ್ತದೆ ಮತ್ತು ಅಲ್ಲಿ ವಿಶ್ವಾದ್ಯಂತದ ವಿವಿಧ ಭಾಷಣಕಾರರು ಬರುತ್ತಾರೆ ”ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ-NRI News: ಭಾರತೀಯರಿಗೆ ಅಗ್ಗವಾದ ಜರ್ಮನ್ ರಾಷ್ಟ್ರೀಯ ಹಾಗೂ ಪ್ರವಾಸಿ ವಿಸಾಗಳು

ಕ್ಯೂಬಾ ಚೇಂಬರ್ ಆಫ್ ಕಾಮರ್ಸ್ ಜೊತೆಗಿನ ಒಡಂಬಡಿಕೆ
ಕಳೆದ ಆಗಸ್ಟ್‌ನಲ್ಲಿ IETO ನಿಯೋಗವು ಕ್ಯೂಬಾಕ್ಕೆ ಭೇಟಿ ನೀಡಿತ್ತು ಮತ್ತು ಕ್ಯೂಬಾ ಚೇಂಬರ್ ಆಫ್ ಕಾಮರ್ಸ್‌ನೊಂದಿಗೆ ಹಲವಾರು ಒಡಂಬಡಿಕೆಗಳಿಗೆ ಸಹಿ ಹಾಕಿತ್ತು. ಇದು B2B ಸಭೆಗಳನ್ನು ಹೊಂದಿರುವ ಕಂಪನಿಗಳೊಂದಿಗೆ ಭಾರತ-ಕ್ಯೂಬಾ ಸಂಬಂಧಗಳನ್ನು ಸುಲಭಗೊಳಿಸಲು ಇಂಡಿಯಾ ಬ್ಯೂರೋವನ್ನು ಪ್ರಾರಂಭಿಸುವುದು ಕೂಡ ಒಳಗೊಂಡಿದೆ. ಭಾರತ ಮತ್ತು ಕ್ಯೂಬಾ ನಾಯಕರ ನಡುವಿನ ಯಶಸ್ವಿ ಒಪ್ಪಂದದ ನಂತರ, ಇದು IETO ಸದಸ್ಯರ ಮೂರನೇ ಭೇಟಿಯಾಗಿದೆ.

ಇದನ್ನೂ ಓದಿ-NRI News: 100,000 ವಿಸಾ ನೇಮಕಾತಿಗಳಿಗಾಗಿ ಸ್ಲಾಟ್ ಗಳನ್ನು ತೆರೆಯಲು ಮುಂದಾದ ಯುನೈಟೆಡ್ ಸ್ಟೇಟ್ಸ್, ನವೆಂಬರ್ ನಲ್ಲಿ ಸಂದರ್ಶನಗಳ ಪುನಾರಂಭ

ಹವಾನಾ ಮೇಳದಲ್ಲಿ ಭಾಗವಹಿಸುವ ಇತರ ದೇಶಗಳ ಜೊತೆಗೆ ಸಂವಾದ

"ಯುಎಇಯಿಂದ ಎನ್‌ಆರ್‌ಐಗಳು ಹವಾನಾ ಮೇಳದಲ್ಲಿ ಭಾಗವಹಿಸಲಿರುವ ಕಾರಣ ನಾವು ಅವರೊಂದಿಗೆ ಚರ್ಚೆ ನಡೆಸುತ್ತಿದ್ದೇವೆ ಮತ್ತು ಯುಎಇಯ ಉಪ ಸಚಿವರು ಅವರ ನೇತೃತ್ವ ವಹಿಸಲಿದ್ದಾರೆ. ಈ ಮೇಳದಲ್ಲಿ ಯುಎಸ್‌ಎ ಮತ್ತು ಕೆನಡಾದಲ್ಲಿರುವ ಎನ್‌ಆರ್‌ಐಗಳಿಂದ ನಾವು ಹೆಚ್ಚಿನ ಸಮನ್ವಯವನ್ನು ನೋಡಲು ಬಯಸುತ್ತಿದ್ದೇವೆ, ”ಎಂದು ಡಾ ಇಕ್ಬಾಲ್ ಹೇಳಿದ್ದಾರೆ

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News