NRI News: ಭಾರತೀಯರಿಗೆ ಅಗ್ಗವಾದ ಜರ್ಮನ್ ರಾಷ್ಟ್ರೀಯ ಹಾಗೂ ಪ್ರವಾಸಿ ವಿಸಾಗಳು

Schengen Visa: ರಾಷ್ಟ್ರೀಯ ವೀಸಾವು ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ಜರ್ಮನಿಗೆ ಪ್ರವೇಶಿಸಲು ಅನುಮತಿಯನ್ನು ನೀಡುತ್ತದೆ, ಹೆಚ್ಚಿನ ಸಂದರ್ಭಗಳಲ್ಲಿ ಜರ್ಮನಿಯಲ್ಲಿ ಕೆಲಸ ಮಾಡಲು ಅಥವಾ ಅಧ್ಯಯನ ಮಾಡಲು, ಮತ್ತು 90 ದಿನಗಳಿಗಿಂತ ಹೆಚ್ಚು ಕಾಲದ ಅವಧಿಗಾಗಿ ಇದನ್ನು ನೀಡಲಾಗುತ್ತದೆ.  

Written by - Nitin Tabib | Last Updated : Oct 1, 2022, 04:45 PM IST
  • ಇತ್ತೀಚಿನ ಬದಲಾವಣೆ ಪ್ರಕಾರ, ಜರ್ಮನಿಯು ಭಾರತೀಯ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ದಾಖಲೆಗಳನ್ನು ಶೈಕ್ಷಣಿಕ ಮೌಲ್ಯಮಾಪನ ಕೇಂದ್ರದಿಂದ (APS) ಮೌಲ್ಯಮಾಪನ ಮಾಡುವುದನ್ನು
  • ಮತ್ತು ವಿದ್ಯಾರ್ಥಿ ವೀಸಾಗಳಿಗೆ ಅರ್ಜಿ ಸಲ್ಲಿಸುವ ಮೊದಲು ದೃಢೀಕರಣ ಪ್ರಮಾಣಪತ್ರಗಳನ್ನು ಪಡೆಯುವುದನ್ನು ಕಡ್ಡಾಯಗೊಳಿಸಿದೆ ಎಂಬುದು ಇಲ್ಲಿ ಉಲ್ಲೇಖನೀಯ.
NRI News: ಭಾರತೀಯರಿಗೆ ಅಗ್ಗವಾದ ಜರ್ಮನ್ ರಾಷ್ಟ್ರೀಯ ಹಾಗೂ ಪ್ರವಾಸಿ ವಿಸಾಗಳು title=
Germeny Visa Gets Cheaper

NRI News: ದೀರ್ಘಾವಧಿಯ ರಾಷ್ಟ್ರೀಯ ವಿಸಾಗಳು ಹಾಗೂ ಅಲ್ಪಾವಧಿಯ ಪ್ರವಾಸಿ ವಿಸಾಗಳ ಶುಲ್ಕ ಕಡಿತಗೊಳಿಸುವುದಾಗಿ ಭಾರತದಲ್ಲಿರುವ ಜರ್ಮನ್ ರಾಯಭಾರ ಕಚೇರಿ ಘೋಷಿಸಿದೆ ಮತ್ತು ಇದು ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದಿದೆ.

ರಾಷ್ಟ್ರೀಯ ವಿಸಾ ಶುಲ್ಕವನ್ನು ವಯಸ್ಕರಿಗೆ ರೂ 6,000 ಮತ್ತು ಕಿರಿಯರಿಗೆ ರೂ 3,000 (17 ವರ್ಷಗಳವರೆಗೆ) ಕ್ಕೆ ಇಲಿಕೆಮಾದಲಾಗಿದ್ದು, ಷೆಂಗೆನ್ ವೀಸಾ ಶುಲ್ಕವನ್ನು ವಯಸ್ಕರಿಗೆ ರೂ 6,400 ಮತ್ತು ಅಪ್ರಾಪ್ತರಿಗೆ ರೂ 3,200 ಕ್ಕೆ ಇಳಿಸಲಾಗಿದೆ.

ಈ ಕುರಿತು ಟ್ವೀಟ್ ಮಾಡಿರುವ ಮುಂಬೈ ಜರ್ಮನ್ ಕಾನ್ಸುಲೇಟ್ ಕಚೇರಿ, "ನಮ್ಮ ವಿಸಾ ಸೆಕ್ಷನ್ ಮೂಲಕ ಒಂದು ಮಹತ್ವದ ಸಂದೇಶ: ಷೆಂಗೆನ್ ವೀಸಾ ಹಾಗೂ ರಾಷ್ಟ್ರೀಯ ವಿಸಾ ಶುಲ್ಕದಲ್ಲಿ ಬದಲಾವಣೆ. ಹೆಚ್ಚುವರಿ ಮಾಹಿತಿಗಾಗಿ ನಮ್ಮ ಅಧಿಕೃತ ವೆಬ್ ಸೈಟ್ ಆಗಿರುವ visa@mumb.diplo.de ಗೆ ಭೇಟಿ ನೀಡಿ" ಎಂದಿದೆ.

ರಾಷ್ಟ್ರೀಯ ವಿಸಾ ಎಂದರೇನು?
ರಾಷ್ಟ್ರೀಯ ವೀಸಾವು ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ಜರ್ಮನಿಗೆ ಪ್ರವೇಶಿಸಲು ಅನುಮತಿಯನ್ನು ನೀಡುತ್ತದೆ, ಹೆಚ್ಚಿನ ಸಂದರ್ಭಗಳಲ್ಲಿ ಜರ್ಮನಿಯಲ್ಲಿ ಕೆಲಸ ಮಾಡಲು ಅಥವಾ ಅಧ್ಯಯನ ಮಾಡಲು, ಮತ್ತು 90 ದಿನಗಳಿಗಿಂತ ಹೆಚ್ಚು ಕಾಲದ ಅವಧಿಗಾಗಿ ಇದನ್ನು ನೀಡಲಾಗುತ್ತದೆ.

ಇತ್ತೀಚಿನ ಬದಲಾವಣೆ ಪ್ರಕಾರ, ಜರ್ಮನಿಯು ಭಾರತೀಯ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ದಾಖಲೆಗಳನ್ನು ಶೈಕ್ಷಣಿಕ ಮೌಲ್ಯಮಾಪನ ಕೇಂದ್ರದಿಂದ (APS) ಮೌಲ್ಯಮಾಪನ ಮಾಡುವುದನ್ನು ಮತ್ತು ವಿದ್ಯಾರ್ಥಿ ವೀಸಾಗಳಿಗೆ ಅರ್ಜಿ ಸಲ್ಲಿಸುವ ಮೊದಲು ದೃಢೀಕರಣ ಪ್ರಮಾಣಪತ್ರಗಳನ್ನು ಪಡೆಯುವುದನ್ನು ಕಡ್ಡಾಯಗೊಳಿಸಿದೆ ಎಂಬುದು ಇಲ್ಲಿ ಉಲ್ಲೇಖನೀಯ.

ಇದನ್ನೂ ಓದಿ-NRI News: 100,000 ವಿಸಾ ನೇಮಕಾತಿಗಳಿಗಾಗಿ ಸ್ಲಾಟ್ ಗಳನ್ನು ತೆರೆಯಲು ಮುಂದಾದ ಯುನೈಟೆಡ್ ಸ್ಟೇಟ್ಸ್, ನವೆಂಬರ್ ನಲ್ಲಿ ಸಂದರ್ಶನಗಳ ಪುನಾರಂಭ

ಷೆಂಗೆನ್ ವೀಸಾ ಎಂದರೇನು?
ಷೆಂಗೆನ್ ವೀಸಾ ಒಂದು ಅಲ್ಪಾವಧಿಗಾಗಿ ನೀಡುವ ವಿಸಾ ಆಗಿದ್ದು, ಇದನ್ನು ಹೊಂದಿರುವವರಿಗೆ ಯೂರೋಪಿನ ಷೆಂಗೆನ್ ಪ್ರಾಂತ್ಯದಲ್ಲಿ ಎಲ್ಲಿಯಾದರೂ ಪ್ರವಾಸ ಮಾಡಲು ಪ್ರವಾಸಿಗರಿಗೆ ಅನುವು ಮಾಡಿಕೊಡುತ್ತದೆ. ಯಾವುದೇ ಷೆಂಗೆನ್ ವೀಸಾ ಪ್ರಾಂತ್ಯದ ದೇಶಕ್ಕೆ ನೀವು 90 ದಿನಗಳವರೆಗೆ ಇದರಿಂದ ಪ್ರವಾಸ ಕೈಗೊಳ್ಳಬಹುದು. ಇದರ ಗರಿಷ್ಟ ಅವಧಿ 180 ದಿನಗಳದ್ದಾಗಿದೆ.

ಇದನ್ನೂ ಓದಿ-NRI News: ಅಮೇರಿಕಾದಲ್ಲಿ ಹೆಚ್-1ಬಿ ವಿಸಾಗಳ ಸ್ಟಾಂಪಿಂಗ್ ಗೆ ಶಿಫಾರಸು ಮಾಡಿದ ಅಧ್ಯಕ್ಷೀಯ ಆಯೋಗ

ಷೆಂಗೆನ್ ಪ್ರಾಂತ್ಯದ 26 ದೇಶಗಳು ಯಾವುವು?
ಯೂರೋಪಿನ ಷೆಂಗೆನ್ ಪ್ರಾಂತ್ಯ ಒಟ್ಟು 26 ದೇಶಗಳನ್ನು ಒಳಗೊಂಡಿದೆ. ಈ ದೇಶಗಳ ಪಟ್ಟಿಯಲ್ಲಿ ಆಸ್ಟ್ರಿಯಾ, ಬೆಲ್ಜಿಯಂ, ಜೆಕ್ ರಿಪಬ್ಲಿಕ್, ಡೆನ್ಮಾರ್ಕ್, ಎಸ್ಟೋನಿಯಾ, ಫಿನ್ಲ್ಯಾಂಡ್, ಫ್ರಾನ್ಸ್, ಜರ್ಮನಿ, ಗ್ರೀಸ್, ಹಂಗೇರಿ, ಐಸ್ಲ್ಯಾಂಡ್, ಇಟಲಿ, ಲಾಟ್ವಿಯಾ, ಲಿಚ್ಟೆನ್‌ಸ್ಟೈನ್, ಲಿಥುವೇನಿಯಾ, ಲಕ್ಸೆಂಬರ್ಗ್, ಮಾಲ್ಟಾ, ನೆದರ್ಲ್ಯಾಂಡ್ಸ್, ನಾರ್ವೆ, ಪೋಲೆಂಡ್, ಪೋರ್ಚುಗಲ್, ಸ್ಲೋವಾಕಿಯಾ, ಸ್ಲೋವಾಕಿಯಾ, , ಸ್ವೀಡನ್ ಮತ್ತು ಸ್ವಿಟ್ಜರ್ಲೆಂಡ್ ಶಾಮೀಲಾಗಿವೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News