NRIಗಳು ಆಧಾರ್ ಕಾರ್ಡ್ ಪಡೆಯಲು ಅರ್ಹರೇ? ಇಲ್ಲಿದೆ ಮಹತ್ವದ ಮಾಹಿತಿ

UIDAI ಆಧಾರ್ ಮಿಥ್ ಬಸ್ಟರ್ FAQ ಪ್ರಕಾರ, “NRIಗಳು ಸಹ ಆಧಾರ್‌ಗಾಗಿ ನೋಂದಾಯಿಸಲು ಅರ್ಹರಾಗಿದ್ದಾರೆ. ಎನ್‌ಆರ್‌ಐಗಳಿಗೆ ಆಧಾರ್ ನೋಂದಣಿಗಾಗಿ ಭಾರತೀಯ ಪಾಸ್‌ಪೋರ್ಟ್ ಕಡ್ಡಾಯವಾದ ಗುರುತಿನ ಪುರಾವೆಯಾಗಿದೆ”

Written by - Bhavishya Shetty | Last Updated : Sep 13, 2022, 09:43 PM IST
    • 'ಆಧಾರ್‌ಗೆ ನೋಂದಾಯಿಸಲು ಎನ್‌ಆರ್‌ಐಗಳು ಅರ್ಹರೇ'? ಎಂ ಪ್ರಶ್ನೆಗೆ ಉತ್ತರ ಇಲ್ಲಿದೆ
    • ಮಾನ್ಯ ಭಾರತೀಯ ಪಾಸ್‌ಪೋರ್ಟ್ ಹೊಂದಿರುವ NRI ಅರ್ಜಿ ಸಲ್ಲಿಸಬಹುದು
    • ಎನ್‌ಆರ್‌ಐಗಳಿಗೆ ಆಧಾರ್ ನೋಂದಣಿಗಾಗಿ ಭಾರತೀಯ ಪಾಸ್‌ಪೋರ್ಟ್ ಕಡ್ಡಾಯ
NRIಗಳು ಆಧಾರ್ ಕಾರ್ಡ್ ಪಡೆಯಲು ಅರ್ಹರೇ? ಇಲ್ಲಿದೆ ಮಹತ್ವದ ಮಾಹಿತಿ  title=
NRI

KYC ಪರಿಶೀಲನೆಗಾಗಿ ಆಧಾರ್ ಪ್ರಮುಖ ದಾಖಲೆಯಾಗಿ ಮಾರ್ಪಟ್ಟಿರುವುದರಿಂದ, ಹಲವು ಪ್ರಶ್ನೆಗಳು ಸದ್ಯ ಉದ್ಭವಿಸುತ್ತವೆ, ಅವುಗಳಲ್ಲಿ ಒಂದು 'ಆಧಾರ್‌ಗೆ ನೋಂದಾಯಿಸಲು ಎನ್‌ಆರ್‌ಐಗಳು ಅರ್ಹರೇ'? ಎಂಬುದು. ಅದಕ್ಕೆ ಉತ್ತರ ಹೌದು. ಮಾನ್ಯ ಭಾರತೀಯ ಪಾಸ್‌ಪೋರ್ಟ್ ಹೊಂದಿರುವ NRI (ಅಪ್ರಾಪ್ತ ಅಥವಾ ವಯಸ್ಕ) ಯಾವುದೇ ಆಧಾರ್ ಕೇಂದ್ರದಿಂದ ಆಧಾರ್‌ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಬಹುದು. 

ಇದನ್ನೂ ಓದಿ:ವಿದ್ಯಾಭ್ಯಾಸದ ಜೊತೆ ಉದ್ಯೋಗ ಮಾಡುತ್ತಿದ್ದೀರಾ? ಹಾಗಾದ್ರೆ ಈ ನಿಯಮಗಳನ್ನು ತಪ್ಪದೆ ಓದಿ

UIDAI ಆಧಾರ್ ಮಿಥ್ ಬಸ್ಟರ್ FAQ ಪ್ರಕಾರ, “NRIಗಳು ಸಹ ಆಧಾರ್‌ಗಾಗಿ ನೋಂದಾಯಿಸಲು ಅರ್ಹರಾಗಿದ್ದಾರೆ. ಎನ್‌ಆರ್‌ಐಗಳಿಗೆ ಆಧಾರ್ ನೋಂದಣಿಗಾಗಿ ಭಾರತೀಯ ಪಾಸ್‌ಪೋರ್ಟ್ ಕಡ್ಡಾಯವಾದ ಗುರುತಿನ ಪುರಾವೆಯಾಗಿದೆ”

ಆಧಾರ್ ಬಳಕೆಗೆ ಸಂಬಂಧಿಸಿದಂತೆ ಬ್ಯಾಂಕ್‌ಗಳು, ಟೆಲಿಕಾಂ ಸೇವಾ ಪೂರೈಕೆದಾರರು ಅಥವಾ ಆದಾಯ ತೆರಿಗೆ ಇಲಾಖೆಯಂತಹ ಆಯಾ ಸೇವಾ ಪೂರೈಕೆದಾರರು ತಮ್ಮ ಬಳಕೆದಾರರಿಗೆ ಆಧಾರ್ ಆಧಾರಿತ ಪರಿಶೀಲನೆಯನ್ನು ಕಡ್ಡಾಯಗೊಳಿಸುವ ನಿಯಮಗಳನ್ನು ಹೊಂದಿದ್ದರೆ, NRI ಗಳು ಸಹ ನಿರ್ದಿಷ್ಟ ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಅಂತಹ ಪರಿಶೀಲನೆಗಾಗಿ ಅಗತ್ಯವಿರುವ ಪ್ರಕ್ರಿಯೆಗಾಗಿ NRI ತಮ್ಮ ಸೇವಾ ಪೂರೈಕೆದಾರರನ್ನು ಸಂಪರ್ಕಿಸಬಹುದು.

UIDAI ಡೇಟಾಬೇಸ್ ನೋಂದಣಿ ಅಥವಾ ನವೀಕರಣದ ಸಮಯದಲ್ಲಿ ನೀವು ನೀಡುವ ಕನಿಷ್ಠ ಮಾಹಿತಿಯನ್ನು ಮಾತ್ರ ಹೊಂದಿರುತ್ತದೆ. ಇದು ನಿಮ್ಮ ಹೆಸರು, ವಿಳಾಸ, ಲಿಂಗ, ಹುಟ್ಟಿದ ದಿನಾಂಕ, ಹತ್ತು ಫಿಂಗರ್‌ಪ್ರಿಂಟ್‌ಗಳು, ಎರಡು ಐರಿಸ್ ಸ್ಕ್ಯಾನ್‌ಗಳು, ಮುಖದ ಛಾಯಾಚಿತ್ರ, ಮೊಬೈಲ್ ಸಂಖ್ಯೆ (ಐಚ್ಛಿಕ) ಮತ್ತು ಇಮೇಲ್ ಐಡಿ (ಐಚ್ಛಿಕ) ಒಳಗೊಂಡಿರುತ್ತದೆ.

ಇನ್ನು UIDAI ಬ್ಯಾಂಕ್ ಖಾತೆಗಳು, ಷೇರುಗಳು, ಮ್ಯೂಚುವಲ್ ಫಂಡ್‌ಗಳು, ಹಣಕಾಸು ಮತ್ತು ಆಸ್ತಿ ವಿವರಗಳು, ಆರೋಗ್ಯ ದಾಖಲೆಗಳು, ಕುಟುಂಬ, ಜಾತಿ, ಧರ್ಮ, ಶಿಕ್ಷಣ ಇತ್ಯಾದಿಗಳ ಬಗ್ಗೆ ನಿಮ್ಮ ಮಾಹಿತಿಯನ್ನು ಹೊಂದಿಲ್ಲ. ಅದರ ಡೇಟಾಬೇಸ್‌ನಲ್ಲಿ ಈ ಮಾಹಿತಿಯನ್ನು ಎಂದಿಗೂ ಹೊಂದಿರುವುದಿಲ್ಲ.

ಇದನ್ನೂ ಓದಿ: NEET PG 2022 Counselling: MCC ಅಭ್ಯರ್ಥಿಗಳಿಗೆ ರಾಷ್ಟ್ರೀಯತೆ ಬದಲಾಯಿಸಲು ಗಡುವು ನೀಡಿದ ಸಮಿತಿ

ವಾಸ್ತವವಾಗಿ, ಆಧಾರ್ ಕಾಯಿದೆ 2016 ರ ಸೆಕ್ಷನ್ 32(3) ನಿರ್ದಿಷ್ಟವಾಗಿ ಯುಐಡಿಎಐ ದೃಢೀಕರಣದ ಉದ್ದೇಶದ ಬಗ್ಗೆ ಯಾವುದೇ ಮಾಹಿತಿಯನ್ನು ಸ್ವತಃ ಅಥವಾ ಯಾವುದೇ ಘಟಕದ ಮೂಲಕ ನಿಯಂತ್ರಿಸುವುದು, ಸಂಗ್ರಹಿಸುವುದು, ಇಟ್ಟುಕೊಳ್ಳುವುದು ಅಥವಾ ನಿರ್ವಹಿಸುವುದನ್ನು ನಿಷೇಧಿಸುತ್ತದೆ. ಆಧಾರ್ ಒಂದು ಗುರುತಿಸುವಿಕೆ ಮಾತ್ರ ಪ್ರೊಫೈಲಿಂಗ್ ಸಾಧನವಲ್ಲ ಎಂಬುದನ್ನು ನೆನಪಿನಲ್ಲಿಡಿ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News