ಸೋಶಿಯಲ್‌ ಮೀಡಿಯಾ ಸೆನ್ಶೇಶನ್‌ ನಿಹಾರಿಕಾ ಕುರಿತು ಇಲ್ಲಿದೆ ಕಂಪ್ಲೀಟ್‌ ಡೀಟೇಲ್ಸ್‌

ʼಮಚ್ಚಾ, ಇಟ್ಸ್‌ ಆಲ್‌ ಒವರ್‌ ವೆಲ್ಮಿಂಗ್‌!" ಎನ್ನುತ್ತಾ ಈಕೆ ಮಾತು ಶುರು ಮಾಡಿದ್ರೆ ಅಭಿಮಾನಿಗಳು ಫುಲ್‌ ಖುಷ್‌ ಆಗ್ತಾರೆ. ಈಕೆಯ ಕಂಟೆಂಟ್‌ಗೆ ಒಂದಷ್ಟು ಫ್ಯಾನ್ಸ್‌ ಇದ್ರೆ, ಇನ್ನೂ ಅನೇಕರು ಆಕೆ ಮಾತನಾಡುವ ಭಾಷಾ ಶೈಲಿಗೆ ಫಿದಾ ಆಗಿದ್ದಾರೆ. 

Written by - Bhavishya Shetty | Last Updated : Apr 23, 2022, 05:33 PM IST
  • ಸೋಶಿಯಲ್‌ ಮೀಡಿಯಾ ಸೆನ್ಶೇಶನ್‌ ನಿಹಾರಿಕಾ
  • ಇನ್‌ಸ್ಟಾಗ್ರಾಂ ಮತ್ತು ಯೂಟ್ಯೂಬ್‌ನ ಕಂಟೆಂಟ್‌ ಕ್ರಿಯೇಟರ್‌
  • ನಿಹಾರಿಕಾ ಎನ್‌.ಎಮ್‌ ಬಗ್ಗೆ ಇಲ್ಲಿದೆ ಮಾಹಿತಿ
ಸೋಶಿಯಲ್‌ ಮೀಡಿಯಾ ಸೆನ್ಶೇಶನ್‌ ನಿಹಾರಿಕಾ ಕುರಿತು ಇಲ್ಲಿದೆ ಕಂಪ್ಲೀಟ್‌ ಡೀಟೇಲ್ಸ್‌ title=
Niharika Nm

ನಿಹಾರಿಕಾ ಎನ್‌.ಎಮ್‌. ಈ ಹೆಸರು ಇಂದಿನ ಪೀಳಿಗೆಗೆ ಚಿರಪರಿಚಿತ. ಇನ್‌ಸ್ಟಾಗ್ರಾಂ ಮತ್ತು ಯೂಟ್ಯೂಬ್‌ನಲ್ಲಿ ಕಂಟೆಂಟ್‌ಗಳನ್ನು ಕ್ರಿಯೇಟ್‌ ಮಾಡಿ, ಪ್ರಸ್ತುತ ದಿನಮಾನಕ್ಕೆ ಸೂಟ್‌ ಆಗೋ ಥರ ವಿಡಿಯೋಗಳನ್ನು ಅಪ್‌ಲೋಡ್‌ ಮಾಡೋದ್ರಲ್ಲಿ ಈಕೆ ಸಖತ್‌ ಫೇಮಸ್‌. ನಿಹಾರಿಕಾ ಅಂದಾಕ್ಷಣ ನೆನಪಾಗೋದು ಆಕೆಯ ಇಂಗ್ಲೀಷ್‌ ಭಾಷೆ. ಉತ್ತಮ ವಾಕ್‌ಚತುರತೆ ಹೊಂದಿರುವ ಈಕೆಯ ಮಾತಿನ ಶೈಲಿಗೇ ಅದೆಷ್ಟೋ ಅಭಿಮಾನಿಗಳಿದ್ದಾರೆ. 

ಇದನ್ನು ಓದಿ: NRI : ಕಮಲಾ ಹ್ಯಾರಿಸ್ ರಕ್ಷಣಾ ಸಲಹೆಗಾರ್ತಿ ಶಾಂತಿ ಸೇಥಿ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಮಾಹಿತಿ

ಫನ್ನಿಯಾಗಿ ಇಂಗ್ಲೀಷ್‌ ಭಾಷೆಯಲ್ಲಿ ಮಾತನಾಡುತ್ತಾ, ಜನಮನ ಗೆದ್ದ ಪ್ರತಿಭಾವಂತ ನಿಹಾರಿಕಾ ಹುಟ್ಟಿದ್ದು, ತಮಿಳುನಾಡಿನ ಚೆನ್ನೈನಲ್ಲಿ. ಆದರೆ ಆಕೆಯ ಕುಟುಂಬದ ಮೂಲ ಮಾತ್ರ ಬೆಂಗಳೂರು. 1997ರ ಜುಲೈ 4ರಂದು ಹುಟ್ಟಿದ ಈಕೆ ಬೆಂಗಳೂರಿನ ಬಿಎಂಎಸ್‌ ಕಾಲೇಜಿನಲ್ಲಿ ಕಂಪ್ಯೂಟರ್‌ ಸೈನ್ಸ್‌ ವಿಭಾಗದಲ್ಲಿ ಇಂಜಿನಿಯರಿಂಗ್‌ ಪದವಿ ಮುಗಿಸಿ, ಆ ಬಳಿಕ ಕ್ಯಾಲಿಫೋರ್ನಿಯಾದ ಶ್ಯಾಪ್‌ಮನ್‌ ಯುನಿವರ್ಸಿಟಿಯಲ್ಲಿ ವ್ಯವಹಾರ ಆಡಳಿತ ವಿಭಾಗದಲ್ಲಿ ಮಾಸ್ಟರ್‌ ಡಿಗ್ರಿ ಪಡೆದಿದ್ದಾರೆ. 

ʼಮಚ್ಚಾ, ಇಟ್ಸ್‌ ಆಲ್‌ ಒವರ್‌ ವೆಲ್ಮಿಂಗ್‌!" ಎನ್ನುತ್ತಾ ಈಕೆ ಮಾತು ಶುರು ಮಾಡಿದ್ರೆ ಅಭಿಮಾನಿಗಳು ಫುಲ್‌ ಖುಷ್‌ ಆಗ್ತಾರೆ. ಈಕೆಯ ಕಂಟೆಂಟ್‌ಗೆ ಒಂದಷ್ಟು ಫ್ಯಾನ್ಸ್‌ ಇದ್ರೆ, ಇನ್ನೂ ಅನೇಕರು ಆಕೆ ಮಾತನಾಡುವ ಭಾಷಾ ಶೈಲಿಗೆ ಫಿದಾ ಆಗಿದ್ದಾರೆ. 

ಕ್ರಿಯೇಟರ್ಸ್ ಫಾರ್ ಚೇಂಜ್‌ನ ಜಾಗತಿಕ ರಾಯಭಾರಿಗಳಲ್ಲಿ ಇವರೂ ಒಬ್ಬರು. ಇನ್ನು ಈ ಗೌರವಕ್ಕೆ ಆಯ್ಕೆಯಾದ ಏಕೈಕ ʼಸಿಂಗಲ್‌ ಕಂಟೆಂಟ್‌ ಕ್ರಿಯೇಟರ್‌ʼ ಇವರು.  ತಮಾಷಾ ಕೌಶಲ್ಯದ ಮೂಲಕವೇ ಸಾಮಾಜಿಕ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಇವರು ನಿಸ್ಸೀಮರು. 

ಯಶ್‌ ಜೊತೆ ರೀಲ್ಸ್‌: 
ಕನ್ನಡ ಚಿತ್ರರಂಗಕ್ಕೆ ಇತ್ತೀಚಿನ ದಿನಗಳಲ್ಲಿ ಹೆಸರು ತಂದುಕೊಟ್ಟ ಸಿನಿಮಾ ಅಂದ್ರೆ ಅದು ಕೆಜಿಎಫ್‌ 2. ಈ ಚಿತ್ರ ರಿಲೀಸ್‌ ಆಗುತ್ತಿದ್ದಂತೇ ಎಲ್ಲೆಡೆ ಯಶ್‌ ಅಭಿಮಾನಿಗಳು ಹೆಚ್ಚಾಗತೊಡಗಿದ್ದಾರೆ. ನಿಹಾರಿಕಾ ಕೂಡ ಅವರ ಅಭಿಮಾನಿಯಾಗಿದ್ದು, ಅವರ ಜೊತೆಗೆ ರೀಲ್ಸ್‌ ಮಾಡಿದ್ದಾರೆ. ಈ ವಿಡಿಯೋ ಇನ್ಸ್ಟಾಗ್ರಾಂನಲ್ಲಿ ಸಖತ್‌ ವೈರಲ್‌ ಆಗಿ ನಿಹಾರಿಕಾಗೆ ಮತ್ತಷ್ಟು ಅಭಿಮಾನಿಗಳು ಹುಟ್ಟುವಂತೆ ಮಾಡಿತ್ತು. 

 
 
 
 

 
 
 
 
 
 
 
 
 
 
 

A post shared by Niharika Nm (@niharika_nm)

ಇದನ್ನು ಓದಿ: NRI: ಅನಿವಾಸಿ ಭಾರತೀಯರಿಗೆ ಅಂಚೆ ಮತಪತ್ರ ಸೌಲಭ್ಯ ಕಲ್ಪಿಸಲು ಸರ್ಕಾರ ಚಿಂತನೆ

ಶಾಹಿದ್‌ ಕಪೂರ್‌ ಜೊತೆ ಕಿತ್ತಾಟ: 
ಬಾಲಿವುಡ್‌ ಖ್ಯಾತ ನಟ ಶಾಹಿದ್‌ ಕಪೂರ್‌ ಅವರ ಜರ್ಸಿ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಈ ಸಿನಿಮಾದ ಪ್ರಮೋಶನ್‌ನಲ್ಲಿ ಬ್ಯುಸಿಯಾಗಿರುವ ಶಾಹಿದ್‌, ನಿಹಾರಿಕಾ ಜೊತೆ ರೀಲ್ಸ್‌ವೊಂದನ್ನು ಮಾಡಿದ್ದಾರೆ. ಈ ರೀಲ್ಸ್‌ನಲ್ಲಿ ಕ್ರಿಕೆಟ್‌ ಕೋಚ್‌ ಆಗಿ ಪಾತ್ರ ಮಾಡಿರುವ ನಿಹಾರಿಕಾ ಸರಿಯಾಗಿ ಬ್ಯಾಟಿಂಗ್‌ ಮಾಡುವಂತೆ ತಕರಾರು ಎತ್ತುತ್ತಾರೆ. ಇದಕ್ಕೆ ಪ್ರತ್ತುತ್ತರವಾಗಿ ಶಾಹಿದ್‌ ನೀವೇ ಬ್ಯಾಟಿಂಗ್‌ ಮಾಡುವಂತೆ ಹೇಳುತ್ತಾರೆ. ಆದರೆ ಈ ಸಂದರ್ಭದಲ್ಲಿ ಬ್ಯಾಟಿಂಗ್‌ ಮಾಡುವಾಗ ನಿಹಾರಿಕಾ ಔಟ್‌ ಆಗುತ್ತಾರೆ. ಈ ಸನ್ನಿವೇಶವನ್ನು ಫನ್ನಿಯಾಗಿ ಚಿತ್ರೀಕರಿಸಲಾಗಿದೆ. 

 
 
 
 

 
 
 
 
 
 
 
 
 
 
 

A post shared by Niharika Nm (@niharika_nm)

 

ಕಂಟೆಟ್‌ ಕ್ರಿಯೇಟರ್‌ ಆಗಿ ಸದ್ಯ ಕೆಲಸ ಮಾಡುತ್ತಿರುವ ನಿಹಾರಿಕಾಗೆ ಇನ್ಸ್ಟಾಗ್ರಾಂನಲ್ಲಿ 2 ಮಿಲಿಯನ್‌ಗಿಂತ ಹೆಚ್ಚು ಫಾಲೋವರ್ಸ್‌ ಇದ್ದಾರೆ. 
 

Trending News