ಅಬ್ಬಬ್ಬಾ ಲಾಟರಿ…ಯುಎಇಯಲ್ಲಿ ಭಾರತೀಯರಿಗೆ ಸಿಕ್ತು ಮಿಲಿಯನ್ ಗಟ್ಟಲೆ ಹಣ!

ಇವರೆಲ್ಲರೂ ರೆಸ್ಟೋರೆಂಟ್ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ. ಅವರ ವೇತನವು Dh 2,500 ರಿಂದ Dh 3,000 ವರೆಗೆ ಇದೆ. ಲಾಟರಿಯಲ್ಲಿ ಹಣ ಗಳಿಸುವ ಆಸೆಯಿಂದ ಕಳೆದ ನಾಲ್ಕು ವರ್ಷಗಳಿಂದ ಹಣ ಉಳಿಸಿ ಟಿಕೆಟ್ ಖರೀದಿಸಿದ್ದಾರೆ. 

Written by - Bhavishya Shetty | Last Updated : Nov 6, 2022, 05:21 PM IST
    • ಅಬುಧಾಬಿಯಲ್ಲಿ ನಡೆದ ಬಿಗ್ ಟಿಕೆಟ್ ರಾಫೆಲ್ ಡ್ರಾ
    • ಲಾಟರಿ ಗೆದ್ದ ದುಬೈನಲ್ಲಿರುವ ಭಾರತೀಯ ಮೂಲದ 20 ಜನರ ಗುಂಪು
    • 25 ಮಿಲಿಯನ್ ದಿರ್ಹಂ ಬಹುಮಾನವನ್ನು ಗೆದ್ದ ಕೇರಳ ಮೂಲದ ಗುಂಪು
ಅಬ್ಬಬ್ಬಾ ಲಾಟರಿ…ಯುಎಇಯಲ್ಲಿ ಭಾರತೀಯರಿಗೆ ಸಿಕ್ತು ಮಿಲಿಯನ್ ಗಟ್ಟಲೆ ಹಣ! title=
NRI

ಗುರುವಾರ ಅಬುಧಾಬಿಯಲ್ಲಿ ನಡೆದ ಬಿಗ್ ಟಿಕೆಟ್ ರಾಫೆಲ್ ಡ್ರಾದಲ್ಲಿ ದುಬೈನಲ್ಲಿರುವ ಭಾರತೀಯ ಮೂಲದ 20 ಜನರ ಗುಂಪು 25 ಮಿಲಿಯನ್ ದಿರ್ಹಂ ಬಹುಮಾನವನ್ನು ಗೆದ್ದಿದೆ. ಕೇರಳ ಮೂಲದ 20 ಜನರು ಒಂದು ದಶಕದಿಂದ ಯುಎಇಯಲ್ಲಿ ವಾಸಿಸುತ್ತಿದ್ದಾರೆ.

ಇವರೆಲ್ಲರೂ ರೆಸ್ಟೋರೆಂಟ್ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ. ಅವರ ವೇತನವು Dh 2,500 ರಿಂದ Dh 3,000 ವರೆಗೆ ಇದೆ. ಲಾಟರಿಯಲ್ಲಿ ಹಣ ಗಳಿಸುವ ಆಸೆಯಿಂದ ಕಳೆದ ನಾಲ್ಕು ವರ್ಷಗಳಿಂದ ಹಣ ಉಳಿಸಿ ಟಿಕೆಟ್ ಖರೀದಿಸಿದ್ದಾರೆ. 

ಇದನ್ನೂ ಓದಿ:ಅಯೋಧ್ಯೆಗೆ ಬಂದ NRI ಮಹಿಳೆಯ ಪಾಸ್ ಪೋರ್ಟ್-ಹಣ ಕಳವು

ಲಾಟರಿ ಬಂದಿದೆ ಎಂದು ಕಾರ್ಯಕ್ರಮದ ಆಯೋಜಕ ರಿಚರ್ಡ್ ಸಜೇಶ್ ಎಂಬವರಿಗೆ ಕರೆ ಮಾಡಿದಾಗ, ಇದು ತಮಾಷೆಯ ಕರೆ ಎಂದು ಭಾವಿಸಿ, ಫೋನ್ ಕಟ್ ಮಾಡಿದ್ದಾರೆ.“ನಮ್ಮ ಗುಂಪಿನಿಂದ ಯಾರೋ ನಮಗೆ ಕರೆ ಮಾಡಿ ಮೋಸ ಮಾಡುತ್ತಿದ್ದಾರೆ ಎಂದು ನಾವು ಭಾವಿಸಿದ್ದೆವು. ಆದರೆ ನಾವು ಒಂದೇ ಸಂಖ್ಯೆಯಿಂದ ಹಲವಾರು ಕರೆಗಳನ್ನು ಸ್ವೀಕರಿಸಿದಾಗ, ಆನ್‌ಲೈನ್‌ನಲ್ಲಿ ಪರಿಶೀಲಿಸಿದೆವು. ಆಗ ಅಲ್ಲಿ ನಮ್ಮ ಲಾಟರಿ ಸಂಖ್ಯೆ ಕಂಡುಬಂದಿತು” ಎಂದು ಸಜೇಶ್ ಹೇಳಿದರು.

“ನಾವು ನೇರ ಪ್ರಸಾರವನ್ನು ವೀಕ್ಷಿಸಲಿಲ್ಲ. ಪ್ರತೀ ವರ್ಷ ಲಾಟರಿ ಗೆಲ್ಲುವ ಭರವಸೆಯಿಂದ ಲೈವ್ ನೋಡುತ್ತಿದ್ದೆವು. ಆದರೆ ಸಂಖ್ಯೆಗಳು ಹೊಂದಾಣಿಕೆ ಆಗಿರಲಿಲ್ಲ. ಆದ್ದರಿಂದ ನಾವು ಡ್ರಾವನ್ನು ನೇರವಾಗಿ ವೀಕ್ಷಿಸುವುದನ್ನು ನಿಲ್ಲಿಸಿದೆವು” ಎಂದು ಹೇಳಿದರು. 

“ಯಾರೂ ಸರಿಯಾಗಿ ನಿದ್ದೆ ಮಾಡದ ಕಾರಣ ನಾವು ಇಂದು ಒಂದು ಗಂಟೆ ಮುಂಚಿತವಾಗಿ ಬಂದಿದ್ದೇವೆ. ನಮಗೆ ಭರವಸೆ ಇತ್ತು. ಆದರೆ ನಾನು ಇಷ್ಟು ದೊಡ್ಡ ಪ್ರಶಸ್ತಿ ಗೆಲ್ಲುತ್ತೇನೆ ಎಂದು ಕನಸು ಕಂಡಿರಲಿಲ್ಲ ”ಎಂದು ಆಂಟನಿ  ಎಂಬವರು ಹೇಳಿದರು.

ಇದನ್ನೂ ಓದಿ:  Gandhada Gudi : ಕರುನಾಡ ಕಂದನಿಗೆ ಮಿಡಿದ ಅನಿವಾಸಿ ಭಾರತೀಯರ ಮನ! ವಿಶ್ವಾದ್ಯಂತ ಗಂಧದ ಗುಡಿ ಘಮಲು

ಗುರುವಾರ ಸಂಜೆಯ ಈವೆಂಟ್ 2020 ರಿಂದ ಬಿಗ್ ಟಿಕೆಟ್‌ನ ಮೊದಲ ಹೊರಾಂಗಣ ಡ್ರಾ ಆಗಿರುತ್ತದೆ. ಡಿಸೆಂಬರ್ 3 ರಂದು ನಡೆಯುವ ಮುಂದಿನ ಡ್ರಾಗೆ 30 ಮಿಲಿಯನ್ ದಿರ್ಹಂ, ಎರಡನೇ ಬಹುಮಾನಕ್ಕೆ 1 ಮಿಲಿಯನ್ ದಿರ್ಹಂ, ಮೂರನೇ ಬಹುಮಾನಕ್ಕೆ 100,000 ದಿರ್ಹಂ ಮತ್ತು ನಾಲ್ಕನೇ ಬಹುಮಾನಕ್ಕೆ 50,000 ದಿರ್ಹಂ ನಿಗದಿಪಡಿಸಲಾಗಿದೆ.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News