ದುಬೈನಲ್ಲಿ ಭಾರತೀಯರ ಕಾರುಬಾರು: ಗೃಹ ಖರೀದಿಯಲ್ಲಿ ಇವರೇ ಟಾಪ್‌!

ರಷ್ಯಾ-ಉಕ್ರೇನ್ ಯುದ್ಧದಿಂದಾಗಿ ಈ ವರ್ಷ ಅನೇಕ ಯುರೋಪಿಯನ್ನರು ದುಬೈಗೆ ವಲಸೆ ಹೋಗುತ್ತಿದ್ದಾರೆ ಎಂದು ಬೆಟರ್ ಹೋಮ್ಸ್ ಸಂಸ್ಥೆ ಹೇಳಿದೆ. ತಮ್ಮ ದೇಶಗಳಲ್ಲಿ ಹೊರೆಯಾಗಿ ಪರಿಣಮಿಸಿರುವ ತೆರಿಗೆ ನೀತಿಗಳಿಂದ ಅನೇಕರು ವಲಸೆ ಹೋಗುವ ನಿರ್ಧಾರ ಕೈಗೊಂಡಿದ್ದಾರೆ.   

Written by - Bhavishya Shetty | Last Updated : Jul 30, 2022, 04:04 PM IST
  • ದುಬೈನಲ್ಲಿ ಮನೆ ಖರೀದಿಸುವವರಲ್ಲಿ ಭಾರತೀಯರು ನಂಬರ್ 1
  • ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ಮನೆಗಳನ್ನು ಖರೀದಿಸುತ್ತಿದ್ದಾರೆ
  • ರಿಯಲ್ ಎಸ್ಟೇಟ್ ಕಂಪನಿ ಬೆಟರ್ ಹೋಮ್ಸ್ ನಡೆಸಿದ ಇತ್ತೀಚಿನ ಸಮೀಕ್ಷೆ
ದುಬೈನಲ್ಲಿ ಭಾರತೀಯರ ಕಾರುಬಾರು: ಗೃಹ ಖರೀದಿಯಲ್ಲಿ ಇವರೇ ಟಾಪ್‌! title=
NRI

ದುಬೈನಲ್ಲಿ ಮನೆ ಖರೀದಿಸುವವರಲ್ಲಿ ಭಾರತೀಯರು ಮತ್ತೊಮ್ಮೆ ನಂಬರ್ 1 ಆಗಿದ್ದಾರೆ. ರಿಯಲ್ ಎಸ್ಟೇಟ್ ಕಂಪನಿ ಬೆಟರ್ ಹೋಮ್ಸ್ ನಡೆಸಿದ ಇತ್ತೀಚಿನ ಸಮೀಕ್ಷೆಯ ಪ್ರಕಾರ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ಮನೆಗಳನ್ನು ಖರೀದಿಸುತ್ತಿದ್ದಾರೆ. ತನ್ನ ಸಮೀಕ್ಷೆಯಲ್ಲಿ, ಕಂಪನಿಯು ಈ ವರ್ಷದ ಮೊದಲಾರ್ಧದಲ್ಲಿ ದುಬೈನಲ್ಲಿ ಆಸ್ತಿಯನ್ನು ಖರೀದಿಸುವ ಜನರ ನಡವಳಿಕೆಯನ್ನು ವಿಶ್ಲೇಷಿಸಿದೆ. ಭಾರತೀಯರ ನಂತರ ಕ್ರಮವಾಗಿ ಬ್ರಿಟಿಷ್ ಮತ್ತು ಇಟಾಲಿಯನ್ ಮೂಲದವರೂ ಇದ್ದರು. ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನವು ರಷ್ಯನ್ನರು ಪಡೆದುಕೊಂಡರೆ, ಫ್ರೆಂಷರು ಐದನೇ ಸ್ಥಾನದಲ್ಲಿದ್ದಾರೆ. 

ಇದನ್ನೂ ಓದಿ: Vikrant Rona : ಧರೆಗುರುಳಿದ ‘ವಿಕ್ರಾಂತ್ ರೋಣ’ ಕಟೌಟ್..!

ಸಮೀಕ್ಷೆಯ ಮತ್ತೊಂದು ಕುತೂಹಲಕಾರಿ ಅಂಶವೆಂದರೆ ರಷ್ಯನ್ನರು ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಕಳೆದ ವರ್ಷ ಇದೇ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಮೊದಲ ಹತ್ತು ಸ್ಥಾನಗಳಲ್ಲಿ ಸ್ಥಾನ ಪಡೆಯಲು ಸಾಧ್ಯವಾಗದ ರಷ್ಯನ್ನರು ಈ ಬಾರಿ ದುಬೈನಲ್ಲಿ ಅಪಾರ ಪ್ರಮಾಣದ ಆಸ್ತಿ ಖರೀದಿ ಮಾಡಿ ನಾಲ್ಕನೇ ಸ್ಥಾನಕ್ಕೆ ಏರಿದ್ದಾರೆ. ಕಳೆದ ವರ್ಷದ ಸಮೀಕ್ಷೆಯಲ್ಲಿ ಬ್ರಿಟನ್, ಇಟಲಿ, ಚೀನಾ ಮತ್ತು ಫ್ರಾನ್ಸ್ ನಂತರದ ಸ್ಥಾನದಲ್ಲಿ ಭಾರತವಿತ್ತು. 

ರಷ್ಯಾ-ಉಕ್ರೇನ್ ಯುದ್ಧದಿಂದಾಗಿ ಈ ವರ್ಷ ಅನೇಕ ಯುರೋಪಿಯನ್ನರು ದುಬೈಗೆ ವಲಸೆ ಹೋಗುತ್ತಿದ್ದಾರೆ ಎಂದು ಬೆಟರ್ ಹೋಮ್ಸ್ ಸಂಸ್ಥೆ ಹೇಳಿದೆ. ತಮ್ಮ ದೇಶಗಳಲ್ಲಿ ಹೊರೆಯಾಗಿ ಪರಿಣಮಿಸಿರುವ ತೆರಿಗೆ ನೀತಿಗಳಿಂದ ಅನೇಕರು ವಲಸೆ ಹೋಗುವ ನಿರ್ಧಾರ ಕೈಗೊಂಡಿದ್ದಾರೆ. 

ಇದನ್ನೂ ಓದಿ: Paperless Banking: ಬ್ಯಾಂಕ್‌ಗಳಲ್ಲಿ ‘ಪೇಪರ್’ ಬಳಕೆ ಬಂದ್, ‘ಇ-ರಶೀದಿ ನೀಡುವಂತೆ RBI ಆದೇಶ

ಕೆಲ ನಿರ್ಬಂಧಗಳಿಂದಾಗಿ ಅನೇಕ ಚೀನಿಯರು ದುಬೈನಲ್ಲಿ ತಮ್ಮ ಹೂಡಿಕೆಯನ್ನು ಕಡಿಮೆ ಮಾಡಿದ್ದಾರೆ ಎಂದು ಕಂಪನಿ ಹೇಳಿದೆ. ಈ ಸಮೀಕ್ಷೆಯ ಪ್ರಕಾರ, ಮನೆಗಳನ್ನು ಖರೀದಿಸುವವರಲ್ಲಿ ಹೂಡಿಕೆದಾರರ ಪಾಲು ಶೇಕಡಾ 68 ರಷ್ಟಿದೆ. 32 ರಷ್ಟು ಜನರು ವಾಸಿಸಲು ಮನೆಗಳನ್ನು ಖರೀದಿಸಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News