ಇವರೇ ನೋಡಿ ವಿಶ್ವದ ಅತೀ ಬುದ್ಧಿವಂತ ವಿದ್ಯಾರ್ಥಿ! ಮೂರ್ತಿಗೂ-ಕೀರ್ತಿಗೂ ಇದೆ ಭಾರೀ ಅಂತರ

World's Smartest Student Sametha Saxena: ವಿಶ್ವವಿದ್ಯಾನಿಲಯದ ಪತ್ರಿಕಾ ಪ್ರಕಟಣೆಯ ಪ್ರಕಾರ, ಪ್ರತಿಭಾನ್ವೇಷಣೆಯ ಭಾಗವಾಗಿ ತೆಗೆದುಕೊಳ್ಳಲಾದ SAT, ACT, ಸ್ಕೂಲ್ ಮತ್ತು ಕಾಲೇಜ್ ಆಪ್ಟಿಟ್ಯೂಡ್ ಟೆಸ್ಟ್, ಅಥವಾ CTY ಮೌಲ್ಯಮಾಪನಗಳಲ್ಲಿ ಅಸಾಧಾರಣ ಪ್ರದರ್ಶನ ನೀಡಿದ ಸಮೇತಾ 'ವಿಶ್ವದ ಬುದ್ಧಿವಂತ ವಿದ್ಯಾರ್ಥಿ’ ಎಂದು ಗುರುತಿಸಲ್ಪಟ್ಟಿದ್ದಾಳೆ.

Written by - Bhavishya Shetty | Last Updated : Mar 6, 2023, 11:04 PM IST
    • ಸಮೇತಾ ಸಕ್ಸೇನಾ ಅವರನ್ನು 'ವಿಶ್ವದ ಬುದ್ಧಿವಂತ ವಿದ್ಯಾರ್ಥಿ’ ಎಂದು ಹೆಸರಿಸಿದೆ
    • ನ್ಯೂಯಾರ್ಕ್‌ನ ಬ್ಯಾಟರಿ ಪಾರ್ಕ್ ಸಿಟಿ ಸ್ಕೂಲ್‌ನಲ್ಲಿ ನಾಲ್ಕನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಸಮೇತಾ
    • ಟ್ಯಾಲೆಂಟ್ ಸರ್ಚ್ ಕಾರ್ಯಕ್ರಮಕ್ಕೆ ಅರ್ಹತೆ ಪಡೆದ ಅತ್ಯಂತ ಕಿರಿಯ ವಿದ್ಯಾರ್ಥಿಗಳಲ್ಲಿ ಒಬ್ಬರಾಗಿದ್ದಾರೆ
ಇವರೇ ನೋಡಿ ವಿಶ್ವದ ಅತೀ ಬುದ್ಧಿವಂತ ವಿದ್ಯಾರ್ಥಿ! ಮೂರ್ತಿಗೂ-ಕೀರ್ತಿಗೂ ಇದೆ ಭಾರೀ ಅಂತರ title=
Sametha Saxena

World's Smartest Student Sametha Saxena: ಜಾನ್ಸ್ ಹಾಪ್ಕಿನ್ಸ್ ಸೆಂಟರ್ ಫಾರ್ ಟ್ಯಾಲೆಂಟೆಡ್ ಯೂತ್ (CTY) ಒಂಬತ್ತು ವರ್ಷದ ಭಾರತೀಯ-ಅಮೆರಿಕನ್ ವಿದ್ಯಾರ್ಥಿನಿ ಸಮೇತಾ ಸಕ್ಸೇನಾ ಅವರನ್ನು 'ವಿಶ್ವದ ಬುದ್ಧಿವಂತ ವಿದ್ಯಾರ್ಥಿ’ ಎಂದು ಹೆಸರಿಸಿದೆ. ನ್ಯೂಯಾರ್ಕ್‌ನ ಬ್ಯಾಟರಿ ಪಾರ್ಕ್ ಸಿಟಿ ಸ್ಕೂಲ್‌ನಲ್ಲಿ ನಾಲ್ಕನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಸಮೇತಾ, ತನ್ನ 8ನೇ ವಯಸ್ಸಿನಲ್ಲಿ CTY ಗ್ಲೋಬಲ್ ಟ್ಯಾಲೆಂಟ್ ಸರ್ಚ್ ಕಾರ್ಯಕ್ರಮಕ್ಕೆ ಅರ್ಹತೆ ಪಡೆದ ಅತ್ಯಂತ ಕಿರಿಯ ವಿದ್ಯಾರ್ಥಿಗಳಲ್ಲಿ ಒಬ್ಬರಾಗಿದ್ದಾರೆ.

ಇದನ್ನೂ ಓದಿ: ಅದಾನಿ ಷೇರು ಮೂಲಕ ಕೇವಲ 2 ದಿನಗಳಲ್ಲಿ ರೂ. 3000 ಕೋಟಿ ಪಡೆದ NRI!

76 ದೇಶಗಳ 15,000 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಕೂಡಿದ್ದ ಈ ಕಾರ್ಯಕ್ರಮವನ್ನು ಜಾನ್ಸ್ ಹಾಪ್ಕಿನ್ಸ್ CYT ಆಯೋಜನೆ ಮಾಡಿದೆ. ಇದರಲ್ಲಿ ಉನ್ನತ-ಹಕ್ಕು ಪರೀಕ್ಷೆಯ ಆಧಾರದ ಮೇಲೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ವಿಶ್ವವಿದ್ಯಾನಿಲಯದ ಪತ್ರಿಕಾ ಪ್ರಕಟಣೆಯ ಪ್ರಕಾರ, ಪ್ರತಿಭಾನ್ವೇಷಣೆಯ ಭಾಗವಾಗಿ ತೆಗೆದುಕೊಳ್ಳಲಾದ SAT, ACT, ಸ್ಕೂಲ್ ಮತ್ತು ಕಾಲೇಜ್ ಆಪ್ಟಿಟ್ಯೂಡ್ ಟೆಸ್ಟ್, ಅಥವಾ CTY ಮೌಲ್ಯಮಾಪನಗಳಲ್ಲಿ ಅಸಾಧಾರಣ ಪ್ರದರ್ಶನ ನೀಡಿದ ಸಮೇತಾ 'ವಿಶ್ವದ ಬುದ್ಧಿವಂತ ವಿದ್ಯಾರ್ಥಿ’ ಎಂದು ಗುರುತಿಸಲ್ಪಟ್ಟಿದ್ದಾಳೆ. ಇನ್ನುಳಿದಂತೆ ಭಾಗವಹಿಸಿದ 15,300 ವಿದ್ಯಾರ್ಥಿಗಳು ತಮ್ಮ ಅಂಕಗಳ ಆಧಾರದ ಮೇಲೆ ವಿಶಿಷ್ಟ ಗೌರವಗಳನ್ನು ಪಡೆದಿದ್ದಾರೆ.

"ಇದು ಕೇವಲ ಪರೀಕ್ಷೆಯಲ್ಲಿ ನಮ್ಮ ವಿದ್ಯಾರ್ಥಿಗಳ ಯಶಸ್ಸಿನ ಗುರುತಿಸುವಿಕೆ ಅಲ್ಲ. ಬದಲಾಗಿ ಅವರ ನಾವೀನ್ಯತೆ, ಕಲಿಕೆ ಮತ್ತು ಅವರು ತಮ್ಮ ಯುವ ಜೀವನದಲ್ಲಿ ಇದುವರೆಗೆ ಗಳಿಸಿದ ಎಲ್ಲಾ ಜ್ಞಾನಕ್ಕೆ ಒಂದು ಗೌರವ ಸಲ್ಲಿಸುವಂತಹ ಕೆಲಸ" ಎಂದು CTY ಕಾರ್ಯನಿರ್ವಾಹಕ ನಿರ್ದೇಶಕ ಡಾ. ಆಮಿ ಶೆಲ್ಟನ್ ಹೇಳಿದರು.

ಇದನ್ನೂ ಓದಿ: ಸೋಶಿಯಲ್ ಮೀಡಿಯಾದಲ್ಲೂ ಹಾರ್ದಿಕ್ ಅಬ್ಬರ: ಸ್ಟಾರ್ ಆಲ್’ರೌಂಡರ್ ಬರೆದ ಹೊಸ ದಾಖಲೆ ಏನು ಗೊತ್ತಾ!

ಕಳೆದ ವರ್ಷ, ಜಾನ್ ಹಾಪ್ಕಿನ್ಸ್ ಆಯೋಜನೆ ಮಾಡಿದ್ದ ಸ್ಪ್ರಿಂಗ್ 2021 ಪರೀಕ್ಷೆಯಲ್ಲಿ 5 ನೇ ತರಗತಿ ವಿದ್ಯಾರ್ಥಿಯಾಗಿದ್ದ ನತಾಶಾ ಪೆರಿಯನಾಯಗಂ ‘ವಿಶ್ವದ ಅತ್ಯಂತ ಬುದ್ಧಿವಂತ ವಿದ್ಯಾರ್ಥಿ’ ಎಂದು ಹೆಸರಿಸಲಾಗಿತ್ತು. ಅವರು ನ್ಯೂಜೆರ್ಸಿಯ ಫ್ಲಾರೆನ್ಸ್ ಎಂ ಗೌಟಿನರ್ ಮಿಡ್ಲ್ ಸ್ಕೂಲ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದ 13 ವರ್ಷದ ವಿದ್ಯಾರ್ಥಿನಿಯಾಗಿದ್ದರು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News