ಇಡೀ ದೇಶವನ್ನೇ ಶ್ರೀಮಂತ ರಾಷ್ಟ್ರವನ್ನಾಗಿಸಲಿವೆ ಈ ಮೂರು ಜಿಲ್ಲೆಗಳು! ನೆಲದಡಿಯಲ್ಲಿ ಅಡಗಿದೆ ದೊಡ್ಡ ಚಿನ್ನದ ಗಣಿ!

Gold Mines In Odisha: ಒಡಿಶಾದಿಂದ ಭಾರಿ ಸಂತಸದ ಸುದ್ದಿಯೊಂದು ಪ್ರಕಟಗೊಂಡಿದೆ. ಒಂದು ವೇಳೆ ಈ ಸುದ್ದಿ ನಿಜ ಸಾಬೀತಾದಲ್ಲಿ ದೇಶ ಬಹುದೊಡ್ಡ ಶ್ರೀಮಂತ ರಾಷ್ಟ್ರವಾಗಿ ಹೊರಹೊಮ್ಮಲಿದೆ ಮತ್ತು ಈ ದೇಶದ ಖಜಾನೆ ಚಿನ್ನದಿಂದ ತುಂಬಲಿದೆ. ಹೌದು, ಒಡಿಶಾದ ಮೂರು ಜಿಲ್ಲೆಗಳಲ್ಲಿ ಭಾರಿ ಗಾತ್ರದ ಚಿನ್ನದ ಗಣಿಗಳು ಪತ್ತೆಯಾಗಿವೆ ಎನ್ನಲಾಗಿದೆ. ಉಕ್ಕು ಮತ್ತು ಗಣಿ ಸಚಿವ ಪ್ರಫುಲ್ಲ ಮಲಿಕ್ ಸೋಮವಾರ ಈ ಮಾಹಿತಿ ನೀಡಿದ್ದಾರೆ.  

Written by - Nitin Tabib | Last Updated : Feb 28, 2023, 11:59 PM IST
  • ಹೌದು, ಒಡಿಶಾದ ಮೂರು ಜಿಲ್ಲೆಗಳಲ್ಲಿ ಭಾರಿ ಗಾತ್ರದ ಚಿನ್ನದ ಗಣಿಗಳು ಪತ್ತೆಯಾಗಿವೆ ಎನ್ನಲಾಗಿದೆ.
  • ಉಕ್ಕು ಮತ್ತು ಗಣಿ ಸಚಿವ ಪ್ರಫುಲ್ಲ ಮಲಿಕ್ ಸೋಮವಾರ ಈ ಮಾಹಿತಿ ನೀಡಿದ್ದಾರೆ.
  • ಒಡಿಶಾದ ಮೂರು ಜಿಲ್ಲೆಗಳಲ್ಲಿ ವಿವಿಧ ಸ್ಥಳಗಳಲ್ಲಿ ಈ ಚಿನ್ನದ ಗಣಿಗಳು ಪತ್ತೆಯಾಗಿವೆ
ಇಡೀ ದೇಶವನ್ನೇ ಶ್ರೀಮಂತ ರಾಷ್ಟ್ರವನ್ನಾಗಿಸಲಿವೆ ಈ ಮೂರು ಜಿಲ್ಲೆಗಳು! ನೆಲದಡಿಯಲ್ಲಿ ಅಡಗಿದೆ ದೊಡ್ಡ ಚಿನ್ನದ ಗಣಿ! title=
ಓಡಿಷಾದಲ್ಲಿ ಭಾರಿ ಪ್ರಮಾಣದ ಚಿನ್ನದ ನಿಕ್ಷೇಪ ಪತ್ತೆ!

Gold Mines In Odisha: ಒಡಿಶಾದಿಂದ ಭಾರಿ ಸಂತಸದ ಸುದ್ದಿಯೊಂದು ಪ್ರಕಟಗೊಂಡಿದೆ. ಒಂದು ವೇಳೆ ಈ ಸುದ್ದಿ ನಿಜ ಸಾಬೀತಾದಲ್ಲಿ ದೇಶ ಬಹುದೊಡ್ಡ ಶ್ರೀಮಂತ ರಾಷ್ಟ್ರವಾಗಿ ಹೊರಹೊಮ್ಮಲಿದೆ ಮತ್ತು ಈ ದೇಶದ ಖಜಾನೆ ಚಿನ್ನದಿಂದ ತುಂಬಲಿದೆ. ಹೌದು, ಒಡಿಶಾದ ಮೂರು ಜಿಲ್ಲೆಗಳಲ್ಲಿ ಭಾರಿ ಗಾತ್ರದ ಚಿನ್ನದ ಗಣಿಗಳು ಪತ್ತೆಯಾಗಿವೆ ಎನ್ನಲಾಗಿದೆ. ಉಕ್ಕು ಮತ್ತು ಗಣಿ ಸಚಿವ ಪ್ರಫುಲ್ಲ ಮಲಿಕ್ ಸೋಮವಾರ ಈ ಮಾಹಿತಿ ನೀಡಿದ್ದಾರೆ. ಒಡಿಶಾದ ಮೂರು ಜಿಲ್ಲೆಗಳಲ್ಲಿ ವಿವಿಧ ಸ್ಥಳಗಳಲ್ಲಿ ಈ ಚಿನ್ನದ ಗಣಿಗಳು ಪತ್ತೆಯಾಗಿವೆ ಎಂದು ಅವರು ರಾಜ್ಯ ವಿಧಾನಸಭೆಯಲ್ಲಿ ಹೇಳಿದ್ದಾರೆ.

ಧೆಂಕನಾಲ್ ಶಾಸಕ ಸುಧೀರ್ ಕುಮಾರ್ ಸಮಾಲ್ ಅವರು ಕೇಳಿದ ಲಿಖಿತ ಪ್ರಶ್ನೆಗೆ ಉತ್ತರಿಸಿದ ಸಚಿವರು, ಗಣಿ ನಿರ್ದೇಶನಾಲಯ ಮತ್ತು ಭಾರತೀಯ ಭೂವೈಜ್ಞಾನಿಕ ಸಮೀಕ್ಷೆ (ಜಿಎಸ್‌ಐ) ನಡೆಸಿದ ಸಮೀಕ್ಷೆಗಳು ದಿಯೋಗರ್, ಕಿಯೋಂಜಾರ್ ಮತ್ತು ಮಯೂರ್‌ಭಂಜ್ ಸೇರಿದಂತೆ ಮೂರು ಜಿಲ್ಲೆಗಳಲ್ಲಿ ಚಿನ್ನದ ನಿಕ್ಷೇಪಗಳ ಉಪಸ್ಥಿತಿಯನ್ನು ಬಹಿರಂಗಪಡಿಸಿವೆ. ಎಂದು ಹೇಳಿದ್ದಾರೆ.

ಇದನ್ನೂ ಓದಿ-Gold Rate: ಇಂದೂ ಕೂಡ ಚಿನ್ನ ಬೆಳ್ಳಿ ಬೆಲೆಯಲ್ಲಿ ಭಾರಿ ಕುಸಿತ, ಹೊಸ ದರಗಳು ಇಂತಿವೆ!

ಮಲಿಕ್ ಪ್ರಕಾರ, "ಕಿಯೋಂಜಾರ್ ಜಿಲ್ಲೆಯ ನಾಲ್ಕು ಸ್ಥಳಗಳಲ್ಲಿ, ಮಯೂರ್ಭಂಜ್ ಜಿಲ್ಲೆಯ ನಾಲ್ಕು ಸ್ಥಳಗಳಲ್ಲಿ ಮತ್ತು ದಿಯೋಗರ್ ಜಿಲ್ಲೆಯ ಒಂದು ಸ್ಥಳದಲ್ಲಿ ಈ ಚಿನ್ನದ ನಿಕ್ಷೇಪಗಳು ಕಂಡುಬಂದಿವೆ." ಜಮ್ಮು ಮತ್ತು ಕಾಶ್ಮೀರದಲ್ಲಿ ಲಿಥಿಯಂ ನಿಧಿ ಪತ್ತೆಯಾದ ಸುದ್ದಿ ಜನರಲ್ಲಿ ಆಶ್ಚರ್ಯವನ್ನುಂಟು ಮಾಡಿದೆ ಎಂಬುದರ ಬೆನ್ನಲ್ಲೇ, ಇದೀಗ ಒಡಿಶಾದಲ್ಲಿ ಚಿನ್ನದ ಸಂಗ್ರಹವಿರುವ ಸೂಚನೆಯು ಜನರನ್ನು ಮತ್ತಷ್ಟು ಆಶ್ಚರ್ಯಕ್ಕೀಡುಮಾಡಿದೆ. 

ಇದನ್ನೂ ಓದಿ-ಈ ರಾಶಿಯ ಹುಡುಗಿಯರು ನೋಡಲು ತುಂಬಾ ಆಕರ್ಷಕಗಾಗಿರುತ್ತಾರೆ.. ನಿಮ್ಮ ರಾಶಿ ಯಾವುದು?

1970 ಮತ್ತು 80ರ ದಶಕದಲ್ಲಿ ಒಡಿಶಾದ ಈ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಲಾಗಿತ್ತು. ಗಣಿ ಮತ್ತು ಭೂವಿಜ್ಞಾನ ನಿರ್ದೇಶನಾಲಯ ಮತ್ತು ಜಿಎಸ್‌ಐ ಈ ಸಮೀಕ್ಷೆ ಅಭಿಯಾನವನ್ನು ನಡೆಸಿತ್ತು. ಆಗ ಸಮೀಕ್ಷೆಯ ವರದಿ ಬಹಿರಂಗವಾಗಿರಲಿಲ್ಲ. ಕಳೆದ ಎರಡು ವರ್ಷಗಳಲ್ಲಿ ಈ ಮೂರು ಜಿಲ್ಲೆಗಳಲ್ಲಿ ಜಿಎಸ್‌ಐ ಮತ್ತೊಮ್ಮೆ ಸಮೀಕ್ಷೆ ನಡೆಸಿದೆ ಎಂದು ರಾಜ್ಯ ಗಣಿ ಸಚಿವ ಪ್ರಫುಲ್ಲಕುಮಾರ್ ಮಲಿಕ್ ಹೇಳಿದ್ದಾರೆ. ಮೂರು ಜಿಲ್ಲೆಗಳಲ್ಲಿರುವ ಮೀಸಲು ಚಿನ್ನದ ಪ್ರಮಾಣ ಎಷ್ಟು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಅವರು ಹೇಳಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News