‘NRI ಗ್ರಾಮ’ದ ಕೃಷ್ಣಾಷ್ಟಮಿಯಲ್ಲಿ ಹಿಂದೂ-ಮುಸ್ಲಿಂ ಸಾಮರಸ್ಯ: 200 ವರ್ಷ ಹಳೆಯ ಈ ದೇವಾಲಯಕ್ಕಿದೆ ‘ವಿದೇಶಿ’ ನಂಟು

ಈ ಗ್ರಾಮದಲ್ಲಿ 200 ವರ್ಷಗಳಷ್ಟು ಹಳೆಯದಾದ ರಾಧಾ ಕೃಷ್ಣ ದೇವಾಲಯವಿದೆ ಎಂದು ಹೇಳಲಾಗುತ್ತದೆ. ಅಲ್ಲಿ ಐದು ದೊಡ್ಡ ಆಲದ ಮರಗಳಿವೆ. ಆದ್ದರಿಂದ ಇದನ್ನು "ಪಂಚಪಿಪ್ಲಾ ಮಂದಿರ" ಎಂದೂ ಕರೆಯುತ್ತಾರೆ.

Written by - Bhavishya Shetty | Last Updated : Aug 20, 2022, 03:42 PM IST
    • 200 ವರ್ಷಗಳಷ್ಟು ಹಳೆಯದಾದ ರಾಧಾ ಕೃಷ್ಣ ದೇವಾಲಯ
    • ಜನ್ಮಾಷ್ಟಮಿಯ ಸಂದರ್ಭದಲ್ಲಿ ದೇವಾಲಯಕ್ಕೆ ಆಗಮಿಸುತ್ತಾರೆ ವಿದೇಶದಲ್ಲಿ ನೆಲೆಸಿರುವ ಈ ಗ್ರಾಮದ ಜನರು
    • ರಾಧಾ ಕೃಷ್ಣ ದೇವಾಲಯದಲ್ಲಿದೆ ಅಲ್ಲಿ ಐದು ದೊಡ್ಡ ಆಲದ ಮರಗಳು
‘NRI ಗ್ರಾಮ’ದ ಕೃಷ್ಣಾಷ್ಟಮಿಯಲ್ಲಿ ಹಿಂದೂ-ಮುಸ್ಲಿಂ ಸಾಮರಸ್ಯ: 200 ವರ್ಷ ಹಳೆಯ ಈ ದೇವಾಲಯಕ್ಕಿದೆ ‘ವಿದೇಶಿ’ ನಂಟು title=
NRI Village

ನಾಡಿನಾದ್ಯಂತ ಶುಕ್ರವಾರ ಜನ್ಮಾಷ್ಟಮಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗಿದೆ. ಈ ಸಂದರ್ಭದಲ್ಲಿ ಗುಜರಾತ್‌ನ ನವಸಾರಿ ಜಿಲ್ಲೆಯ ಧಾಮನ್ ಗ್ರಾಮದ ರಾಧಾಕೃಷ್ಣ ದೇವಸ್ಥಾನದಲ್ಲಿ ಜನ್ಮಾಷ್ಟಮಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಈ ಗ್ರಾಮದಲ್ಲಿರುವ ಪ್ರತಿಯೊಂದು ಮನೆಯ ಒಬ್ಬ ವ್ಯಕ್ತಿಯಾದರೂ ಸರಿ ಅವರು ವಿದೇಶದಲ್ಲಿ ನೆಲೆಸಿರುತ್ತಾರೆ. ಅದಕ್ಕಾಗಿಯೇ ಇದನ್ನು ಎನ್‌ಆರ್‌ಐ ಗ್ರಾಮ ಎಂದೂ ಕರೆಯಲಾಗುತ್ತದೆ. 

ಇದನ್ನೂ ಓದಿ: Top Selling Bikes: ಇವೆ ನೋಡಿ ದೇಶದಲ್ಲಿ ಅತ್ಯಧಿಕ ಮಾರಾಟಗೊಳ್ಳುವ ಬೈಕ್ ಗಳು

ಈ ಗ್ರಾಮದಲ್ಲಿ 200 ವರ್ಷಗಳಷ್ಟು ಹಳೆಯದಾದ ರಾಧಾ ಕೃಷ್ಣ ದೇವಾಲಯವಿದೆ ಎಂದು ಹೇಳಲಾಗುತ್ತದೆ. ಅಲ್ಲಿ ಐದು ದೊಡ್ಡ ಆಲದ ಮರಗಳಿವೆ. ಆದ್ದರಿಂದ ಇದನ್ನು "ಪಂಚಪಿಪ್ಲಾ ಮಂದಿರ" ಎಂದೂ ಕರೆಯುತ್ತಾರೆ.

ಯಾರಿಗೆ ಈ ದೇವಾಲಯದಲ್ಲಿ ನಂಬಿಕೆ ಇದೆಯೋ ಅವರ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ ಎಂದು ಜನರು ನಂಬುತ್ತಾರೆ. ಏಳು ಸಮುದ್ರಗಳನ್ನು ದಾಟಿ ವಿದೇಶಗಳಲ್ಲಿ ನೆಲೆಸಿರುವ ಹಳ್ಳಿಗಳ ಜನರು ವಿಶೇಷವಾಗಿ ಜನ್ಮಾಷ್ಟಮಿಯ ಸಂದರ್ಭದಲ್ಲಿ ತಮ್ಮ ಹಳ್ಳಿಗಳಿಗೆ ಬರುತ್ತಾರೆ. ದೇವಸ್ಥಾನದಲ್ಲಿ ಕೃಷ್ಣನ ಜನ್ಮದಿನವನ್ನು ಆಚರಿಸಿದ ನಂತರ ನವಮಿಯ ದಿನದಂದು ಇಡೀ ಊರಿನವರು ಒಟ್ಟಿಗೆ ಕುಳಿತು ಊಟ ಮಾಡುತ್ತಾರೆ.

ಈ ವರ್ಷ, ಬ್ರಿಟನ್‌ನ ವಿಲಿಂಗ್‌ಬರೋದ ಉಷ್ಮಾ ಪಟೇಲ್ ತನ್ನ 21 ವರ್ಷದ ಮಗಳು ಪಾಯಲ್ ಪಟೇಲ್ ಜೊತೆಗೆ ಶ್ರೀಕೃಷ್ಣನ ಜನ್ಮದಿನವನ್ನು ಆಚರಿಸಲು ಗ್ರಾಮಕ್ಕೆ ಆಗಮಿಸಿದ್ದರು. ಈ ವರ್ಷ ಅದೇ ಪಟೇಲ್ ಕುಟುಂಬ ದೇವಸ್ಥಾನದಲ್ಲಿ ಜನ್ಮಾಷ್ಟಮಿ ಆಯೋಜನೆಯ ಸಂಪೂರ್ಣ ವೆಚ್ಚವನ್ನು ಭರಿಸಿದೆ. ನಮ್ಮ ಹಳ್ಳಿಯ ಬಹುತೇಕ ಮನೆಗಳಲ್ಲಿ ಕನಿಷ್ಠ ಒಬ್ಬ ಸದಸ್ಯರಾದರೂ ವಿದೇಶದಲ್ಲಿ ಇದ್ದಾರೆ ಎನ್ನುತ್ತಾರೆ ಉಷ್ಮಾ ಪಟೇಲ್.

“ವಿದೇಶದಲ್ಲಿ ನೆಲೆಸಿದ ನಂತರವೂ ನಾವು ನಮ್ಮ ಮಕ್ಕಳನ್ನು ಇಲ್ಲಿಗೆ ಕರೆತಂದು ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಮುಂದಕ್ಕೆ ಕೊಂಡೊಯ್ಯುವ ಬಗ್ಗೆ ಮಾಹಿತಿ ನೀಡುತ್ತೇವೆ. ಅದರಲ್ಲೂ ಅಮೆರಿಕಾ, ಯುಕೆ, ಕೆನಡಾದಲ್ಲಿ ನೆಲೆಸಿರುವ ಹಳ್ಳಿಯ ಹಿರಿಯರು ಹಬ್ಬದ ಸಂದರ್ಭದಲ್ಲಿ ತಮ್ಮ ಮಕ್ಕಳೊಂದಿಗೆ ಹಳ್ಳಿಯಲ್ಲಿ ಕಾಲ ಕಳೆಯಲು ಇಷ್ಟಪಡುತ್ತಾರೆ” ಎಂದರು. 

ಇದನ್ನೂ ಓದಿ: ವಿದೇಶಗಳಲ್ಲಿ ನಂ.1 ಸ್ಥಾನ ಪಡೆದ Royal Enfieldನ ಈ ಬೈಕ್! ಇದರ ಫೀಚರ್ ಗಳೇ ಡಿಫರೆಂಟ್

ಧಾಮನ್ ಗ್ರಾಮವು ಸಹೋದರತ್ವಕ್ಕೆ ಒಂದು ಉದಾಹರಣೆಯಾಗಿದೆ. ರಾಧಾ ಕೃಷ್ಣ ದೇವಾಲಯವು ಧಮನ್ ಮತ್ತು ದಭೇಲ್ ಗ್ರಾಮದ ನಡುವಿನ ಹೊಲದಲ್ಲಿ ನೆಲೆಗೊಂಡಿದೆ. ಸುಮಾರು 7000 ಮುಸ್ಲಿಂ ವಸಾಹತುಗಳನ್ನು ಹೊಂದಿರುವ ದಾಭೇಲ್ ಗ್ರಾಮವು ಪೊಲೀಸ್ ಡೈರಿಯಲ್ಲಿ ದಾಖಲಾಗಿರುವ ಸೂಕ್ಷ್ಮ ಪ್ರದೇಶ ಗ್ರಾಮವಾಗಿದೆ. ಮುಸ್ಲಿಂ ಜನರು ಈ ದೇವಾಲಯದ ಪಾವಿತ್ರ್ಯತೆಯನ್ನು ನೋಡಿಕೊಳ್ಳುತ್ತಿದ್ದರೆ, ಧಾಮನ್‌ನ ಎನ್‌ಆರ್‌ಐ ಜನರು ಮುಸ್ಲಿಂ ಸಮಾಜ ಟ್ರಸ್ಟ್ ನಡೆಸುತ್ತಿರುವ ಆಸ್ಪತ್ರೆ ಮತ್ತು ಶಾಲೆಗೆ ಕೊಡುಗೆ ನೀಡುತ್ತಾರೆ. ಇಲ್ಲಿನ ಹಿಂದೂ ಮತ್ತು ಮುಸ್ಲಿಂ ಸಮುದಾಯದ ಜನರ ನಡುವೆ ಭಾಂದವ್ಯವಿದೆ.  

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News