ಇಲ್ಲಿ ಮಗುವಿಗೆ ಕೈತುತ್ತು ನೀಡಿದರೆ ಜೈಲು ಶಿಕ್ಷೆ: ನಿಯಮ ಮೀರಿದರೆ 18 ವರ್ಷ ಮಕ್ಕಳ ಮುಖ ನೋಡೋದು ಅಸಾಧ್ಯ!

Rules for children in Norway: ಭಾರತದಂತೆ, ನಾರ್ವೆಯಲ್ಲಿ ಪೋಷಕರು ತಮ್ಮ ಕೈಗಳಿಂದ ಮಗುವಿಗೆ ಆಹಾರವನ್ನು ನೀಡುವಂತಿಲ್ಲ. ಈ ದೇಶದ ಮಕ್ಕಳಿಗೆ ಚಮಚದ ಮೂಲಕ ಮಾತ್ರ ಆಹಾರವನ್ನು ನೀಡಲು ಸೂಚಿಸಲಾಗುತ್ತದೆ. ನಾರ್ವೆಯ ಮಕ್ಕಳಿಗೆ ಸಂಬಂಧಿಸಿದ ವಿಚಿತ್ರ ನಿಯಮದ ಬಗ್ಗೆ ನಾವಿಂದು ನಿಮಗೆ ಮಾಹಿತಿ ನೀಡಲಿದ್ದೇವೆ.

Written by - Bhavishya Shetty | Last Updated : Feb 26, 2023, 07:07 PM IST
    • ನಾರ್ವೆಯಲ್ಲಿ ಪೋಷಕರು ತಮ್ಮ ಕೈಗಳಿಂದ ಮಗುವಿಗೆ ಆಹಾರವನ್ನು ನೀಡುವಂತಿಲ್ಲ.
    • ಈ ದೇಶದ ಮಕ್ಕಳಿಗೆ ಚಮಚದ ಮೂಲಕ ಮಾತ್ರ ಆಹಾರವನ್ನು ನೀಡಲು ಸೂಚಿಸಲಾಗುತ್ತದೆ.
    • ನಾರ್ವೆಯ ಮಕ್ಕಳಿಗೆ ಸಂಬಂಧಿಸಿದ ವಿಚಿತ್ರ ನಿಯಮದ ಬಗ್ಗೆ ನಾವಿಂದು ನಿಮಗೆ ಮಾಹಿತಿ ನೀಡಲಿದ್ದೇವೆ
ಇಲ್ಲಿ ಮಗುವಿಗೆ ಕೈತುತ್ತು ನೀಡಿದರೆ ಜೈಲು ಶಿಕ್ಷೆ: ನಿಯಮ ಮೀರಿದರೆ 18 ವರ್ಷ ಮಕ್ಕಳ ಮುಖ ನೋಡೋದು ಅಸಾಧ್ಯ!   title=
Hand Feed to children

Rules for children in Norway: ನಮ್ಮ ದೇಶದಲ್ಲಿ ಮಗು ಜನಿಸಿತೆಂದರೆ ಅದನ್ನು ಎಲ್ಲಾ ಸಂಬಂಧಿಕರು ಪ್ರೀತಿಸಿ ಮುದ್ದಾಡುತ್ತಾರೆ. ಆದರೆ ಬೇರೆ ದೇಶಗಳಲ್ಲಿ ಹಾಗಲ್ಲ. ಮುಖ್ಯವಾಗಿ ನಾರ್ವೆಯಲ್ಲಿ. ಈ ದೇಶದಲ್ಲಿ ರಾತ್ರಿಯಾಗುವುದು ಕೇವಲ 40 ನಿಮಿಷಗಳ ಕಾಲ ಮಾತ್ರ ಎಂದು ಹೇಳಲಾಗುತ್ತದೆ. ಇಂತಹ ವಿಚಿತ್ರ ರಾಷ್ಟ್ರದಲ್ಲಿ ನಿಯಮವೂ ವಿಚಿತ್ರವಾಗಿದೆ. ಅದರಲ್ಲೂ ಮಕ್ಕಳ ಬಗ್ಗೆ ಕಟ್ಟುನಿಟ್ಟಾದ ನಿಯಮಗಳಿವೆ.

ಇದನ್ನೂ ಓದಿ: Mallika Sherawat: ತನ್ನ ಮೊದಲ ಸಿನಿಮಾದಲ್ಲಿಯೇ 21 ಕಿಸ್ ಕೊಟ್ಟಿದ್ದ ಆ ಬಾಲಿವುಡ್ ಸುಂದರಿ ಈಗ ಏನ್ಮಾಡ್ತಿದ್ದಾರೆ?

ಭಾರತದಂತೆ, ನಾರ್ವೆಯಲ್ಲಿ ಪೋಷಕರು ತಮ್ಮ ಕೈಗಳಿಂದ ಮಗುವಿಗೆ ಆಹಾರವನ್ನು ನೀಡುವಂತಿಲ್ಲ. ಈ ದೇಶದ ಮಕ್ಕಳಿಗೆ ಚಮಚದ ಮೂಲಕ ಮಾತ್ರ ಆಹಾರವನ್ನು ನೀಡಲು ಸೂಚಿಸಲಾಗುತ್ತದೆ. ನಾರ್ವೆಯ ಮಕ್ಕಳಿಗೆ ಸಂಬಂಧಿಸಿದ ವಿಚಿತ್ರ ನಿಯಮದ ಬಗ್ಗೆ ನಾವಿಂದು ನಿಮಗೆ ಮಾಹಿತಿ ನೀಡಲಿದ್ದೇವೆ.

ನಾರ್ವೆಯಲ್ಲಿರುವ ಭಾರತೀಯ ದಂಪತಿಗಳು ಈ ನಿಯಮಗಳನ್ನು ಪಾಲಿಸದ ಕಾರಣ ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಯಿತು. ದಂಪತಿ ತಮ್ಮ ಮಗುವಿಗೆ ಕೈಯಿಂದ ಊಟ ಉಣಬಡಿಸಿದ್ದರು. ಅಷ್ಟೇ ಅಲ್ಲ, ನಾರ್ವೆಯಲ್ಲಿ ನಿಮ್ಮೊಂದಿಗೆ ಮಕ್ಕಳನ್ನು ಮಲಗಿಸುವುದು ಕೂಡ ಅಪರಾಧ. ಭಾರತೀಯ ದಂಪತಿ ಮಕ್ಕಳನ್ನೂ ತಮ್ಮೊಂದಿಗೆ ಮಲಗಿಸಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ನಾರ್ವೇಜಿಯನ್ ಆಡಳಿತವು ಕ್ರಮ ಕೈಗೊಂಡಿದ್ದು, ದಂಪತಿಗಳಿಂದ ಅವರ ಇಬ್ಬರು ಮಕ್ಕಳನ್ನು ಕಿತ್ತುಕೊಂಡಿದೆ.

ಈ ಘಟನೆ ನಡೆದು 10 ವರ್ಷಗಳು ಕಳೆದಿವೆ. ಆದರೆ ದಂಪತಿಗಳಿಗೆ ಆ ನೆನಪುಗಳು ಇನ್ನೂ ಕಾಡುತ್ತಿದೆ. ಈ ಘಟನೆ ಜಗತ್ತಿನಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು. ಸುದೀರ್ಘ ಕಾನೂನು ಹೋರಾಟದ ನಂತರ, ಭಾರತೀಯ ಪೋಷಕರು ತಮ್ಮ ಮಕ್ಕಳನ್ನು ಮರಳಿ ಪಡೆಯಲು ಸಾಧ್ಯವಾಯಿತು. ಈ ಘಟನೆಯ ಕುರಿತು ಸಿನಿಮಾ ಕೂಡ ಮಾಡಲಾಗಿದೆ. ಈ ಚಿತ್ರದಲ್ಲಿ ರಾಣಿ ಮುಖರ್ಜಿ ಮಕ್ಕಳ ತಾಯಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರದ ಟೀಸರ್ ಕೂಡ ಬಿಡುಗಡೆಯಾಗಿದೆ.

ಇದನ್ನೂ ಓದಿ: Virat Kohli:“ನನ್ನನ್ನು ಮದುವೆಯಾಗು ಕೊಹ್ಲಿ…!!”: ವಿರಾಟ್’ಗೆ ಪ್ರಪೋಸ್ ಮಾಡಿದ ಈ ಸ್ಟಾರ್ ಕ್ರಿಕೆಟ್ ಆಟಗಾರ್ತಿ

2011 ರಲ್ಲಿ ಅನೂತ್ ಭಟ್ಟಾಚಾರ್ಯ ಮತ್ತು ಅವರ ಪತ್ನಿ ಸಾಗರಿಕಾ ಈ ನೋವನ್ನು ಅನುಭವಿಸಿದ್ದಾರೆ. ಅವರ ಮೂರು ವರ್ಷದ ಮಗ ಮತ್ತು ಒಂದು ವರ್ಷದ ಮಗಳನ್ನು ನಾರ್ವೆ ಸರ್ಕಾರವು ನಿಯಮಗಳನ್ನು ಉಲ್ಲಂಘಿಸಿದ ಕಾರಣ ಕಸ್ಟಡಿಗೆ ತೆಗೆದುಕೊಂಡಿತ್ತು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News