NRI: ಸೂಪರ್‌ ಸಿಂಗರ್‌ ಗ್ಲೋಬಲ್‌ ಆನ್‌ಲೈನ್‌ ಕಾರ್ಯಕ್ರಮ ಈಗ Quarter final ಹಂತಕ್ಕೆ!

ಜಿ ಕೆ. Entertainments ಸಂಸ್ಥೆಯ‌ ಅಡಿಯಲ್ಲಿ ನೆರವೇರುತ್ತಿರುವ,  ಸೂಪರ್‌ ಸಿಂಗರ್‌ -Global online ಕಾರ್ಯಕ್ರಮ ಈಗ Quarter final  ಹಂತಕ್ಕೆ ತಲುಪಿದೆ.

Written by - Chetana Devarmani | Last Updated : Apr 21, 2022, 11:13 AM IST
  • ಜಿ ಕೆ. Entertainments ಸಂಸ್ಥೆಯ‌ ಅಡಿಯಲ್ಲಿ ಸೂಪರ್‌ ಸಿಂಗರ್‌ -Global online
  • ಸೂಪರ್‌ ಸಿಂಗರ್‌ ಗ್ಲೋಬಲ್‌ ಆನ್‌ಲೈನ್‌ ಕಾರ್ಯಕ್ರಮ ಈಗ Quarter final ಹಂತಕ್ಕೆ!
  • ಆಸ್ಟ್ರೇಲಿಯದಿಂದ‌ ಅಮೆರಿಕದವರೆಗೆ 500ಕ್ಕೂ ಹೆಚ್ಚು ಗಾಯಕರಿಗೆ ವೇದಿಕೆ
NRI: ಸೂಪರ್‌ ಸಿಂಗರ್‌ ಗ್ಲೋಬಲ್‌ ಆನ್‌ಲೈನ್‌ ಕಾರ್ಯಕ್ರಮ ಈಗ Quarter final ಹಂತಕ್ಕೆ! title=
ಸೂಪರ್‌ ಸಿಂಗರ್‌ ಗ್ಲೋಬಲ್‌ ಆನ್‌ಲೈನ್‌

ಜಿ ಕೆ. Entertainments ಸಂಸ್ಥೆಯ‌ ಅಡಿಯಲ್ಲಿ ನೆರವೇರುತ್ತಿರುವ,  ಸೂಪರ್‌ ಸಿಂಗರ್‌ -Global online ಕಾರ್ಯಕ್ರಮ ಈಗ Quarter final  ಹಂತಕ್ಕೆ ತಲುಪಿದೆ. ಈ ಸಂಸ್ಥೆಯ ಸಂಸ್ಥಾಪಕರು ಮತ್ತು ನೀರ್ದೆಶಕರು  ಆದ  ಶ್ರೀ ಗೋಪಾಲ ಕುಲಕರ್ಣಿಯವರು ಕನ್ನಡ ಚಲನಚಿತ್ರದ ಹೆಸರಾಂತ ನಿರ್ದೇಶಕರು, ಗಾಯಕರು, ಸಂಗೀತ ನಿ‌ರ್ದೇಶಕರನ್ನು ನಿರ್ಣಾಯಕ ತಂಡಕ್ಕೆ ಆಹ್ವಾನಿಸಿದ್ದಾರೆ. ಆಸ್ಟ್ರೇಲಿಯದಿಂದ‌ ಅಮೆರಿಕದವರೆಗೆ  500ಕ್ಕೂ ಹೆಚ್ಚು  ಗಾಯಕರು ತಮ್ಮ ಪ್ರತಿಭೆ ತೋರಿಸುವರು.

Quarter final ಹಂತದಲ್ಲಿ ಮೂರು ವರ್ಗಗಳನ್ನು ಸೀನಿಯರ್ ಹಿಂದಿ, ಸೀನಿಯರ್ ಕನ್ನಡ, ಜೂನಿಯರ್ ಕನ್ನಡ‌ ಅಥವಾ ಹಿಂದಿ ಒಟ್ಟು ಗೂಡಿಸಿ 45  ಗಾಯಕರು ಭಾಗವಹಿಸಿರುವರು. 

ಇದನ್ನೂ ಓದಿ: ಗಲ್ಲಾಪೆಟ್ಟಿಗೆ ಕೊಳ್ಳೆಹೊಡೆದ KGF2.. 7 ದಿನಕ್ಕೆ 723.15 ಕೋಟಿ ವರ್ಲ್ಡ್ ವೈಡ್ ಕಲೆಕ್ಷನ್‌!

ಮೊದಲನಹಂತಗಳಲ್ಲಿ ಗಾಯಕರಾದ ಶ್ರೀಮತಿ ಅಂಜಲಿ ಹಲ್ಯಾಳ್, ಶ್ರೀಮತಿ ಮಂಜು ಅರೋರಾ, ಶ್ರೀಮತಿ ಸವಿತಕ್ಕಾ,  ಡಾ.ಸತ್ಯವತಿ, ಸಂಗೀತ ನಿರ್ದೇಶಕರಾದ ಶ್ರೀ John Kennedy, ಶ್ರೀ Karanama ಶ್ರೀ ರಾಘವೇಂದ್ರ ಅವರೆಲ್ಲ    ತೀರ್ಪುಗಾರರಾಗಿರುವರು. 

Quarter finalಯಿಂದ Final ವರೆಗೆ ಹೆಸರಾಂತ ನಿರ್ದೇಶಕರಾದ  ಶ್ರೀ ಸುನೀಲಕುಮಾರ ದೇಸಾಯಿ, ಶ್ರೀ ದಿನೇಶ ಬಾಬು,  ಗಾಯಕರಾದ ಶ್ರೀ ಬದರಿಪ್ರಸಾದ, ವಿ.ನಾಗೇಂದ್ರ ಪ್ರಸಾದ್‌, ಸಂಗೀತ ನಿರ್ದೇಶಕರಾದ ಶ್ರೀಮತಿ ಮಾನಸ ಹೊಳ್ಳ ತೀರ್ಪುಗಾರರಾಗಿರುತ್ತಾರೆ.

ಇದನ್ನೂ ಓದಿ: ಎರಡು ವರ್ಷ ಅಲೆದ್ರೂ ಸಿಗದ ಕೆಲಸ: ಟೀ ಮಾರಾಟಕ್ಕಿಳಿದ ಅರ್ಥಶಾಸ್ತ್ರ ಪದವೀಧರೆ!

ಮುಂದಿನ ಕಾರ್ಯಕ್ರಮಗಳು: ಝೂಮ್‌ ಕಾಲ್‌ ಮೂಲಕ ನೇರವಾಗಿ ನಡೆಯುತ್ತವೆ. ಈ ಕಾರ್ಯಕ್ರಮಕ್ಕೆ ನಿರೂಪಣೆಯ ಜವಾಬ್ದಾರಿಯನ್ನು ಬಿಗ್‌ ಬಾಸ್‌ 6ರ ಖ್ಯಾತಿಯ ಸೋನು ಪಾಟೀಲ್‌ ಅವರು ನಿರ್ವಹಿಸುತ್ತಿದ್ದಾರೆ.  ಶ್ರೀ ರಘು ದೇಸಾಯಿ ಈ  ಕಾರ್ಯಕ್ರಮದ ಕ್ರಿಯೇಟಿವ್‌ ಡೈರೆಕ್ಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಇನ್ನು ಹಲವಾರು ಕಾರ್ಯಕ್ರಮಗಳನ್ನು ಜಿಕೆ ಎಂಟರ್‌ಟೈನ್‌ಮೆಂಟ್‌ ಸಂಸ್ಥೆಯಲ್ಲಿ, ಉತ್ತಮ ಪ್ರತಿಭೆಗಳಿಗೆ ಅವಕಾಶ ಮಾಡಿ ಕೊಡುವ ಸಲುವಾಗಿ ಕಾರ್ಯಕ್ರಮ‌ ಹಮ್ಮಿಕೊಳ್ಳಲಾಗುತ್ತಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News