ಅಮೆರಿಕಾ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇನ್ನಿಲ್ಲ!! ಮಗನ ಖಾತೆಯಿಂದ ಟ್ವೀಟ್ ವೈರಲ್… ಸತ್ಯಾಂಶವೇನು?

Donald Trump Death Fake News: ಡೊನಾಲ್ಡ್ ಟ್ರಂಪ್ ಜೂನಿಯರ್ ಅವರ ಸಾಮಾಜಿಕ ಮಾಧ್ಯಮ ಖಾತೆ X ಅನ್ನು ಹ್ಯಾಕ್ ಮಾಡಲಾಗಿದೆ. ಖಾತೆ ಹ್ಯಾಕ್ ಆದ ಸುಮಾರು ಅರ್ಧ ಗಂಟೆಯ ಬಳಿಕ ಪುನಶ್ಚೇತನಗೊಂಡಿದೆ.

Written by - Bhavishya Shetty | Last Updated : Sep 21, 2023, 01:19 PM IST
    • ಡೊನಾಲ್ಡ್ ಟ್ರಂಪ್ ಜೂನಿಯರ್ ಎಕ್ಸ್ ಖಾತೆಯನ್ನು ಕಿಡಿಗೇಡಿಗಳು ಹ್ಯಾಕ್ ಮಾಡಿದ್ದಾರೆ
    • ಹ್ಯಾಕರ್’ಗಳು ಯುಎಸ್ ಅಧ್ಯಕ್ಷ ಜೋ ಬಿಡನ್ ಅವರನ್ನು ನಿಂದಿಸುತ್ತಿರುವ ಪೋಸ್ಟ್ ವೈರಲ್
    • ಟ್ರಂಪ್ ಸಾವಿನ ಸುದ್ದಿಯನ್ನೂ ಬರೆದು ಹಾಕಿದ್ದಾರೆ ಹ್ಯಾಕರ್’ಗಳು.
ಅಮೆರಿಕಾ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇನ್ನಿಲ್ಲ!! ಮಗನ ಖಾತೆಯಿಂದ ಟ್ವೀಟ್ ವೈರಲ್… ಸತ್ಯಾಂಶವೇನು? title=
Donald Trump

Donald Trump Death Fake News: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುತ್ರ ಡೊನಾಲ್ಡ್ ಟ್ರಂಪ್ ಜೂನಿಯರ್ ಅವರ ಎಕ್ಸ್ (ಹಿಂದಿನ ಟ್ವಿಟರ್) ಖಾತೆಯನ್ನು ಕಿಡಿಗೇಡಿಗಳು ಹ್ಯಾಕ್ ಮಾಡಿದ್ದಾರೆ. ಅಷ್ಟೇ ಅಲ್ಲದೆ, ನಿರಂತರವಾಗಿ ಪೋಸ್ಟ್ ಮಾಡುತ್ತಿರುವ ಹ್ಯಾಕರ್’ಗಳು ಯುಎಸ್ ಅಧ್ಯಕ್ಷ ಜೋ ಬಿಡನ್ ಅವರನ್ನು ನಿಂದಿಸುತ್ತಿರುವುದಲ್ಲದೆ, ಟ್ರಂಪ್ ಸಾವಿನ ಸುದ್ದಿಯನ್ನೂ ಬರೆದು ಹಾಕಿದ್ದಾರೆ.

ಇದನ್ನೂ ಓದಿ: ಕುಟುಂಬ ಪೋಷಣೆಗೆ ಕಸ ಹೆಕ್ಕುತ್ತಿದ್ದ ಆತ ಇಂದು ‘ವಿಶ್ವ ಕ್ರಿಕೆಟ್’ನ ಬಾಸ್!

ಡೊನಾಲ್ಡ್ ಟ್ರಂಪ್ ಜೂನಿಯರ್ ಅವರ ಸಾಮಾಜಿಕ ಮಾಧ್ಯಮ ಖಾತೆ X ಅನ್ನು ಹ್ಯಾಕ್ ಮಾಡಲಾಗಿದೆ. ಅಷ್ಟೇ ಅಲ್ಲದೆ, “ನನ್ನ ತಂದೆ ಡೊನಾಲ್ಡ್ ಟ್ರಂಪ್ ನಿಧನರಾಗಿದ್ದಾರೆ ಎಂಬ ಸುದ್ದಿಯನ್ನು ತಿಳಿಸಲು ವಿಷಾದಿಸುತ್ತೇನೆ” ಎಂದು ಪೋಸ್ಟ್ ಮಾಡಿದ್ದಾರೆ ಹ್ಯಾಕರ್ಸ್.

ಇದನ್ನೂ ಓದಿ:  ಈ ಬೀಜದ ಪೇಸ್ಟನ್ನು ಹಚ್ಚಿದರೆ ಸಾಕು ಬಿಳಿಕೂದಲು ಪರ್ಮನೆಂಟ್ ಆಗಿ ಕಪ್ಪಾಗುವುದಲ್ಲದೆ, ಮೊಣಕಾಲುದ್ದ ಬೆಳೆಯುತ್ತೆ!

ಖಾತೆ ಹ್ಯಾಕ್ ಆದ ಸುಮಾರು ಅರ್ಧ ಗಂಟೆಯ ಬಳಿಕ ಪುನಶ್ಚೇತನಗೊಂಡಿದೆ. ವಿವಾದಿತ ಪೋಸ್ಟ್ ಅನ್ನು ಸಹ ಅಳಿಸಲಾಗಿದೆ. ಆದರೆ, ಡೊನಾಲ್ಡ್ ಟ್ರಂಪ್ ಜೂನಿಯರ್ ಖಾತೆ ಹ್ಯಾಕ್ ಮಾಡಿದವರು ಯಾರು ಎಂಬುದರ ಬಗ್ಗೆ ಸದ್ಯ ಮಾಹಿತಿ ಲಭ್ಯವಾಗಿಲ್ಲ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News