NRIಗಳು ಫಾರ್ಮ್ 10Fನ್ನು ಸಲ್ಲಿಕೆ ಮಾಡಲು ಗಡುವು ವಿಸ್ತರಿಸಿದ CBDT

NRI News: PAN ಅಥವಾ ಆದಾಯ ತೆರಿಗೆ ಖಾತೆ ಇಲ್ಲದೆಯೇ ವಿದ್ಯುನ್ಮಾನವಾಗಿ ಫಾರ್ಮ್ 10F ಅನ್ನು ಸಲ್ಲಿಸಲು ಎನ್ ಆರ್ ಐಗಳಿಗೆ ಒಂದು ಮಾರ್ಗವನ್ನು CBDT ಕಂಡುಕೊಳ್ಳುವವರೆಗೆ, ಭೌತಿಕ ಫಾರ್ಮ್ ಅನ್ನು ಸಲ್ಲಿಸುವ ಹಳೆಯ ವಿಧಾನ ಮುಂದುವರಿಯುತ್ತದೆ ಎಂದು ತಜ್ಞರು ಹೇಳುತ್ತಾರೆ.

Written by - Bhavishya Shetty | Last Updated : Dec 16, 2022, 03:38 PM IST
    • ಅನಿವಾಸಿ ಭಾರತೀಯರು ಫಾರ್ಮ್ 10F ಡಿಜಿಟಲ್ ಆಗಿ ಸಲ್ಲಿಸಲು ಆದಾಯ ತೆರಿಗೆ ಖಾತೆಯ ಅಗತ್ಯವಿದೆ
    • ಫಾರ್ಮ್ 10F ಅನ್ನು ಸಲ್ಲಿಸಲು ಎನ್ ಆರ್ ಐ ಗಳಿಗೆ ಹೆಚ್ಚಿನ ಸಮಯವನ್ನು ನೀಡಿದೆ
    • ಆನ್‌ಲೈನ್‌ನಲ್ಲಿ ಇ-ಫೈಲಿಂಗ್ ಮಾಡಲು, ಫೈಲ್ ಮಾಡುವವರು ಶಾಶ್ವತ ಖಾತೆ ಸಂಖ್ಯೆಯನ್ನು ಹೊಂದಿರಬೇಕು
NRIಗಳು ಫಾರ್ಮ್ 10Fನ್ನು ಸಲ್ಲಿಕೆ ಮಾಡಲು ಗಡುವು ವಿಸ್ತರಿಸಿದ CBDT title=
NRI

NRI News: ಅನಿವಾಸಿಗಳು ಫಾರ್ಮ್ 10F ಅನ್ನು ಆನ್‌ಲೈನ್‌ ಮೂಲಕ ಸಲ್ಲಿಸಲು ಸರ್ಕಾರವು ಮಾರ್ಚ್ 2023 ರವರೆಗೆ ಗಡುವು ವಿಸ್ತರಿಸಿದೆ. ಇದು ಡಬಲ್ ತೆರಿಗೆ ತಪ್ಪಿಸುವ ಒಪ್ಪಂದದ (DTAA) ಅಡಿಯಲ್ಲಿ ಪ್ರಯೋಜನಗಳನ್ನು ನೀಡುತ್ತದೆ ಎಂದು ಹೇಳಲಾಗುತ್ತಿದೆ.

ಅನಿವಾಸಿ ಭಾರತೀಯರು ಫಾರ್ಮ್ 10F ಡಿಜಿಟಲ್ ಆಗಿ ಸಲ್ಲಿಸಲು ಆದಾಯ ತೆರಿಗೆ ಖಾತೆಯ ಅಗತ್ಯವಿದೆ. ಶಾಶ್ವತ ಖಾತೆ ಸಂಖ್ಯೆ ಇಲ್ಲದವರಿಗೆ ಅಥವಾ ಅದರ ಅಗತ್ಯವಿಲ್ಲದವರಿಗೆ ಆದಾಯ ತೆರಿಗೆ ಖಾತೆ ತೆರೆಯಲು ಕಷ್ಟವಾಗಬಹುದು. ಈ ಅಡೆತಡೆಗಳನ್ನು ಪರಿಗಣಿಸಿ, ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (CBDT) DTAA ಅಡಿಯಲ್ಲಿ ಪ್ರಯೋಜನಗಳನ್ನು ಪಡೆಯಲು ಕಡ್ಡಾಯವಾಗಿ ಫಾರ್ಮ್ 10F ಅನ್ನು ಸಲ್ಲಿಸಲು ಎನ್ ಆರ್ ಐ ಗಳಿಗೆ ಹೆಚ್ಚಿನ ಸಮಯವನ್ನು ನೀಡಿದೆ.

ಇದನ್ನೂ ಓದಿ: Global Investors Meet: NRI ಸಮಾವೇಶ ಹಿನ್ನೆಲೆ ಇಂದೋರ್ ಗೆ 6 ವಿಶೇಷ ವಿಮಾನಗಳ ವ್ಯವಸ್ಥೆ

PAN ಅಥವಾ ಆದಾಯ ತೆರಿಗೆ ಖಾತೆ ಇಲ್ಲದೆಯೇ ವಿದ್ಯುನ್ಮಾನವಾಗಿ ಫಾರ್ಮ್ 10F ಅನ್ನು ಸಲ್ಲಿಸಲು ಎನ್ ಆರ್ ಐಗಳಿಗೆ ಒಂದು ಮಾರ್ಗವನ್ನು CBDT ಕಂಡುಕೊಳ್ಳುವವರೆಗೆ, ಭೌತಿಕ ಫಾರ್ಮ್ ಅನ್ನು ಸಲ್ಲಿಸುವ ಹಳೆಯ ವಿಧಾನ ಮುಂದುವರಿಯುತ್ತದೆ ಎಂದು ತಜ್ಞರು ಹೇಳುತ್ತಾರೆ.

1961 ರ ಆದಾಯ ತೆರಿಗೆ ಕಾಯಿದೆಯು ಅನಿವಾಸಿ ಭಾರತೀಯ ತೆರಿಗೆದಾರರಿಗೆ ತೆರಿಗೆ ಪ್ರಯೋಜನಗಳಿಗಾಗಿ ಸಲ್ಲಿಸಲು ಅನುವು ಮಾಡಿಕೊಡುತ್ತದೆ. ಆದರೂ ಅವರು DTAA ಪ್ರಯೋಜನಗಳನ್ನು ಪಡೆಯಲು ತೆರಿಗೆ ರೆಸಿಡೆನ್ಸಿ ಪ್ರಮಾಣಪತ್ರ (TRC) ಮತ್ತು ಫಾರ್ಮ್ 10F ಅನ್ನು ಸಲ್ಲಿಸಬೇಕು.

ಫಾರ್ಮ್ 10F ಎಂದರೇನು?

ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 90 ರ ಉಪ-ವಿಭಾಗ 4 ಮತ್ತು ಉಪ-ವಿಭಾಗ 5 ರ ಪ್ರಕಾರ, ಅನಿವಾಸಿ ತೆರಿಗೆದಾರರು ಭಾರತ ಮತ್ತು ದೇಶದ DTAA ಪ್ರಯೋಜನಗಳನ್ನು ಪಡೆಯಲು ಬಯಸಿದರೆ ಫಾರ್ಮ್ 10F, TRC ಮತ್ತು ಇತರ ಮಾಹಿತಿಯನ್ನು ಸಲ್ಲಿಸಬೇಕು.

ಐಟಿ ಇಲಾಖೆಯು ಸಾಮಾನ್ಯವಾಗಿ ಫಾರ್ಮ್ 10ಎಫ್‌ನಲ್ಲಿ ಅನಿವಾಸಿಯಿಂದ ಆರು ತುಣುಕುಗಳ ಮಾಹಿತಿಯನ್ನು ಕೇಳುತ್ತದೆ. CBDT, ಜುಲೈ 16, 2022 ರಂದು ಸುತ್ತೋಲೆಯಲ್ಲಿ ಆದಾಯ ತೆರಿಗೆ ಪೋರ್ಟಲ್‌ನಲ್ಲಿ ವಿದ್ಯುನ್ಮಾನವಾಗಿ ಸಲ್ಲಿಸಲು 10F ಸೇರಿದಂತೆ ಕೆಲವು ಫಾರ್ಮ್‌ಗಳನ್ನು ಕಡ್ಡಾಯಗೊಳಿಸಿದೆ.

ಇದನ್ನೂ ಓದಿ:  Indians renouncing citizenship: ಪೌರತ್ವ ತ್ಯಜಿಸುತ್ತಿರುವ ಭಾರತೀಯರ ಸಂಖ್ಯೆಯಲ್ಲಿ ಭಾರೀ ಹೆಚ್ಚಳ: ಕೇಂದ್ರದಿಂದ ಅಧಿಕೃತ ಮಾಹಿತಿ

ಅಹಮದಾಬಾದ್ ಮೂಲದ ಚಾರ್ಟರ್ಡ್ ಅಕೌಂಟೆಂಟ್ ಅಭಿಷೇಕ್ ವೈ ಭಾವಸರ್, ಇದು ಅನಿವಾಸಿ ಭಾರತೀಯರಿಗೆ ಸಾಕಷ್ಟು ತೊಂದರೆಗಳನ್ನು ಸೃಷ್ಟಿಸಿದೆ ಎಂದಿದ್ದಾರೆ. “ಯಾವುದೇ ಫಾರ್ಮ್ ಅನ್ನು ಆನ್‌ಲೈನ್‌ನಲ್ಲಿ ಇ-ಫೈಲಿಂಗ್ ಮಾಡಲು, ಫೈಲ್ ಮಾಡುವವರು ಶಾಶ್ವತ ಖಾತೆ ಸಂಖ್ಯೆಯನ್ನು ಹೊಂದಿರಬೇಕು. ಆದ್ದರಿಂದ ಅನಿವಾಸಿಗಳು ಭಾರತದಲ್ಲಿ ಯಾವುದೇ ತೆರಿಗೆಯ ಆದಾಯವನ್ನು ಹೊಂದಿಲ್ಲದಿರುವುದರಿಂದ ಅವರಿಗೆ ಕಷ್ಟವಾಗಿತ್ತು”ಎಂದು ಭಾವಸರ್ ಹೇಳಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News