Abdul Haq: ಹಿಂದೂಗಳನ್ನು ಬಲವಂತವಾಗಿ ಮತಾಂತರ ಮಾಡಿದ ಆರೋಪ: ಪಾಕ್ ಮೌಲಾನಗಳಿಗೆ ಬ್ರಿಟನ್ ನಿರ್ಬಂಧ

Britain Action on Pakistan Moulana: ಶುಕ್ರವಾರ ಬ್ರಿಟಿಷ್ ವಿದೇಶಾಂಗ ಸಚಿವ ಜೇಮ್ಸ್ ಕ್ಲೆವರ್ಲಿ ಬಿಡುಗಡೆ ಮಾಡಿದ ನಿಷೇಧಿತ ವ್ಯಕ್ತಿಗಳು ಮತ್ತು ಸಂಘಟನೆಗಳ ಹೊಸ ಪಟ್ಟಿಯಲ್ಲಿ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಘೋಟ್ಕಿಯಲ್ಲಿರುವ ಭರ್ಚುಂಡಿ ಷರೀಫ್ ದರ್ಗಾದ ಮಿಯಾನ್ ಅಬ್ದುಲ್ ಹಕ್ ಅವರ ಹೆಸರೂ ಸೇರಿದೆ.

Written by - Bhavishya Shetty | Last Updated : Dec 11, 2022, 09:53 AM IST
    • ಮೌಲಾನಾ ಸೇರಿದಂತೆ ಮಾನವ ಹಕ್ಕುಗಳನ್ನು ಉಲ್ಲಂಘಿಸಿದ ಅನೇಕರ ಮೇಲೆ ನಿರ್ಬಂಧ
    • ಒಟ್ಟು 30 ವ್ಯಕ್ತಿಗಳು, ಅಧಿಕಾರಿಗಳು ಮತ್ತು ಸಂಸ್ಥೆಗಳನ್ನು ನಿಷೇಧಿಸಿದ ಬ್ರಿಟನ್ ಸರ್ಕಾರ
    • ಬ್ರಿಟಿಷ್ ವಿದೇಶಾಂಗ ಸಚಿವ ಜೇಮ್ಸ್ ಕ್ಲೆವರ್ಲಿ ಬಿಡುಗಡೆ ಮಾಡಿದ ಪಟ್ಟಿ
Abdul Haq: ಹಿಂದೂಗಳನ್ನು ಬಲವಂತವಾಗಿ ಮತಾಂತರ ಮಾಡಿದ ಆರೋಪ: ಪಾಕ್ ಮೌಲಾನಗಳಿಗೆ ಬ್ರಿಟನ್ ನಿರ್ಬಂಧ title=
Conversion

Britain Action on Pakistan Moulana: ಅಂತಾರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನ ಮತ್ತು ಮಾನವ ಹಕ್ಕುಗಳ ದಿನದ ಸಂದರ್ಭದಲ್ಲಿ ಬ್ರಿಟನ್ ಶುಕ್ರವಾರ ಹಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದೆ. ಪಾಕಿಸ್ತಾನದಲ್ಲಿ ಹಿಂದೂಗಳು ಸೇರಿದಂತೆ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಗಳ ಹುಡುಗಿಯರನ್ನು ಬಲವಂತವಾಗಿ ಮತಾಂತರಗೊಳಿಸಿ ಬಲವಂತವಾಗಿ ವಿವಾಹವಾಗುತ್ತಿರುವ ಆರೋಪದಲ್ಲಿ ಮೌಲಾನಾ ಸೇರಿದಂತೆ ಮಾನವ ಹಕ್ಕುಗಳನ್ನು ಉಲ್ಲಂಘಿಸಿದ ಅನೇಕ ಭ್ರಷ್ಟ ಅಧಿಕಾರಿಗಳು ಮತ್ತು ಸಂಘಟನೆಗಳನ್ನು ಬ್ರಿಟಿಷ್ ಸರ್ಕಾರ ನಿಷೇಧಿಸಿದೆ. ಒಟ್ಟು 30 ವ್ಯಕ್ತಿಗಳು, ಅಧಿಕಾರಿಗಳು ಮತ್ತು ಸಂಸ್ಥೆಗಳನ್ನು ನಿಷೇಧಿಸಲಾಗಿದೆ.

ಇದನ್ನೂ ಓದಿ: NRI News: ಕರ್ನಾಟಕದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ನೋಂದಣಿ ಮಾಡಲು NRIಗಳಿಗೆ ಅವಕಾಶ

ಶುಕ್ರವಾರ ಬ್ರಿಟಿಷ್ ವಿದೇಶಾಂಗ ಸಚಿವ ಜೇಮ್ಸ್ ಕ್ಲೆವರ್ಲಿ ಬಿಡುಗಡೆ ಮಾಡಿದ ನಿಷೇಧಿತ ವ್ಯಕ್ತಿಗಳು ಮತ್ತು ಸಂಘಟನೆಗಳ ಹೊಸ ಪಟ್ಟಿಯಲ್ಲಿ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಘೋಟ್ಕಿಯಲ್ಲಿರುವ ಭರ್ಚುಂಡಿ ಷರೀಫ್ ದರ್ಗಾದ ಮಿಯಾನ್ ಅಬ್ದುಲ್ ಹಕ್ ಅವರ ಹೆಸರೂ ಸೇರಿದೆ. ಈ ಪಟ್ಟಿಯಲ್ಲಿ ಕೈದಿಗಳನ್ನು ಹಿಂಸಿಸುವುದರಲ್ಲಿ ತೊಡಗಿರುವ ವ್ಯಕ್ತಿಗಳು ಮತ್ತು ಸಂಘಟನೆಗಳ ಹೆಸರುಗಳು, ಮಹಿಳೆಯರ ಮೇಲೆ ಅತ್ಯಾಚಾರ ಮತ್ತು ವ್ಯವಸ್ಥಿತ ಚಿತ್ರಹಿಂಸೆಗಳಲ್ಲಿ ತೊಡಗಿಸಿಕೊಂಡು ಸೇನೆಯ ಕೆಲ ನಾಯಕರ ಹೆಸರೂ ಸೇರಿವೆ.

ಪಟ್ಟಿ ಬಿಡುಗಡೆ ಮಾಡುವಾಗ ಬ್ರಿಟನ್ ಹೇಳಿದ್ದು ಹೀಗೆ:

'ವಿಶ್ವದಾದ್ಯಂತ ಮುಕ್ತ ಸಮಾಜವನ್ನು ಉತ್ತೇಜಿಸುವುದು ನಮ್ಮ ಕರ್ತವ್ಯ. ಇಂದು ನಾವು ವಿಧಿಸಿರುವ ನಿರ್ಬಂಧಗಳು ನಮ್ಮ ಮೂಲಭೂತ ಹಕ್ಕುಗಳ ಈ ಘೋರ ಉಲ್ಲಂಘನೆಗಳ ಹಿಂದೆ ಇರುವವರನ್ನು ಬಯಲಿಗೆಳೆಯುತ್ತದೆ. ಭಯದ ಮೇಲೆ ಸ್ವಾತಂತ್ರ್ಯದ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ನಮ್ಮ ಇತ್ಯರ್ಥದಲ್ಲಿರುವ ಎಲ್ಲ ವಿಧಾನಗಳನ್ನು ಬಳಸಲು ನಾವು ನಿರ್ಧರಿಸಿದ್ದೇವೆ” ಎಂದು ಹೇಳಿದೆ.

ಮೌಲಾನಾ ಹಕ್ ಒಬ್ಬ ರಾಜಕೀಯ ನಾಯಕ. ಸಿಂಧ್‌ನಲ್ಲಿ ಸ್ಥಳೀಯವಾಗಿ ಪ್ರಭಾವಶಾಲಿಯಾಗಿದ್ದಾರೆ. ಈ ಪ್ರಾಂತ್ಯದ ಬಹುತೇಕ ಹಿಂದೂಗಳನ್ನು ಬಲವಂತವಾಗಿ ಮತಾಂತರ ಮಾಡಿದ್ದಕ್ಕಾಗಿ ಅವರು ಹಲವು ವರ್ಷಗಳಿಂದ ಟೀಕೆಗೊಳಗಾಗಿದ್ದಾರೆ. "ಸಿಂಧ್‌ನ ಘೋಟ್ಕಿಯಲ್ಲಿರುವ ಭರ್ಚುಂಡಿ ದರ್ಗಾದ ಮೌಲಾನಾ ಮಿಯಾನ್ ಅಬ್ದುಲ್ ಹಕ್ ಅವರು ಮುಸ್ಲಿಮೇತರರು ಮತ್ತು ಅಪ್ರಾಪ್ತರ ಬಲವಂತದ ಮದುವೆಗಳು ಹಾಗೂ ಬಲವಂತದ ಮತಾಂತರಗಳಿಗೆ ಕಾರಣರಾಗಿದ್ದಾರೆ" ಎಂದು ಬ್ರಿಟನ್ ಉಲ್ಲೇಖಿಸಿದೆ.

ನಿಷೇಧದ ಬಳಿಕ ಅವರ ಪರಿಸ್ಥಿತಿ:

ಈಗ ಈ ನಿಷೇಧಿತ ವ್ಯಕ್ತಿಗಳ ಪಟ್ಟಿಯಲ್ಲಿ ಸೇರ್ಪಡೆಗೊಂಡವರ ಆಸ್ತಿಯನ್ನು ಬ್ರಿಟನ್‌ನಲ್ಲಿ ಮುಟ್ಟುಗೋಲು ಹಾಕಿಕೊಳ್ಳಲಾಗುವುದು. ಅವರ ಪ್ರಯಾಣವನ್ನೂ ನಿಷೇಧಿಸಲಾಗುವುದು. ಇದರೊಂದಿಗೆ, ಯಾವುದೇ ಯುಕೆ ಪ್ರಜೆ, ಕಂಪನಿ ಅಥವಾ ಸಂಸ್ಥೆಯು ಅವರೊಂದಿಗೆ ಯಾವುದೇ ರೀತಿಯ ವ್ಯಾಪಾರ ಸಂಬಂಧವನ್ನು ಹೊಂದಲು ಸಾಧ್ಯವಾಗುವುದಿಲ್ಲ ಅಥವಾ ಅವರಿಗೆ ಹಣವನ್ನು ನೀಡಲು ಸಾಧ್ಯವಾಗುವುದಿಲ್ಲ. ರಷ್ಯಾ, ಉಗಾಂಡಾ, ಮ್ಯಾನ್ಮಾರ್ ಮತ್ತು ಇರಾನ್‌ನ ಜನರು ಸಹ ಈ ನಿರ್ಬಂಧಗಳಲ್ಲಿ ಸೇರಿದ್ದಾರೆ.

ಇದನ್ನೂ ಓದಿ: ಅನಿವಾಸಿ ಕನ್ನಡಿಗರ ರಕ್ಷಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲ-ಡಿಕೆಶಿ

ಇವುಗಳ ಮೇಲೂ ಕ್ರಮ:

2015 ರಲ್ಲಿ ಉಕ್ರೇನ್‌ನ ಅಲೆಕ್ಸಾಂಡರ್ ಕೊಸ್ಟೆಂಕೊ ಅವರನ್ನು ಹಿಂಸಿಸಿದಕ್ಕಾಗಿ ಕ್ರೈಮಿಯಾದಲ್ಲಿನ ರಷ್ಯಾದ ಫೆಡರಲ್ ಭದ್ರತಾ ಸೇವೆಯ ಸದಸ್ಯ ಆಂಡ್ರೆ ಟಿಶೆನಿನ್ ಮತ್ತು ಕ್ರೈಮಿಯ ಸ್ವಾಯತ್ತ ಗಣರಾಜ್ಯದ ಹಿರಿಯ ಅಧಿಕಾರಿ ಅರ್ತರ್ ಶಂಬಾಜೋವ್ ಮೇಲೆ ನಿರ್ಬಂಧಗಳನ್ನು ವಿಧಿಸಲಾಗಿದೆ. ಇದಲ್ಲದೆ, ರಷ್ಯಾದ ನ್ಯಾಯಾಧೀಶರು ಮತ್ತು ಪ್ರಾಸಿಕ್ಯೂಟರ್ ಮೇಲೆ ನಿರ್ಬಂಧಗಳನ್ನು ವಿಧಿಸಲಾಗಿದೆ. ಇರಾನ್‌ನ ನ್ಯಾಯಾಂಗ ಮತ್ತು ಜೈಲು ವ್ಯವಸ್ಥೆಗೆ ಸಂಬಂಧಿಸಿದ 10 ಅಧಿಕಾರಿಗಳ ಮೇಲೂ ನಿರ್ಬಂಧಗಳನ್ನು ವಿಧಿಸಲಾಗಿದೆ. ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯದ ಆರೋಪದ ಮೇಲೆ ಮ್ಯಾನ್ಮಾರ್‌ನ ಜುಂಟಾ (ಮಿಲಿಟರಿ ಆಡಳಿತಗಾರ) ಮೇಲೆ ನಿರ್ಬಂಧಗಳನ್ನು ವಿಧಿಸಲಾಗಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News