NRI Couple: ಮತದಾನಕ್ಕಾಗಿ ಹನಿಮೂನ್ ಟ್ರಿಪ್ ಕ್ಯಾನ್ಸಲ್ ಮಾಡಿದ ನವಜೋಡಿ: ಇದಪ್ಪಾ ಕರ್ತವ್ಯ ಅಂದ್ರೆ

NRI Couple: "ಭಾರತದ ಬಲವಾದ, ಕ್ರಿಯಾತ್ಮಕ ಭವಿಷ್ಯವನ್ನು ನಿರ್ಮಿಸುವಲ್ಲಿ ನಾವು ಸಣ್ಣ ಪಾತ್ರವನ್ನು ವಹಿಸಿದ್ದಕ್ಕಾಗಿ ನಾವು ಹೆಮ್ಮೆಪಡುತ್ತೇವೆ. ಭಾರತವು ವಿಶ್ವದ ಮುಂದಿನ ಸೂಪರ್ ಪವರ್ ಆಗಿ ಹೊರಹೊಮ್ಮುವ ಭರವಸೆಯಲ್ಲಿದ್ದೇವೆ" ಎಂದು ನವದಂಪತಿ ಗುಜರಾತ್ ರಾಜ್ಯದ ಎರಡನೇ ಹಂತದಲ್ಲಿ ಮತ ಚಲಾಯಿಸಿದ ನಂತರ ಹೇಳಿದರು.

Written by - Bhavishya Shetty | Last Updated : Dec 6, 2022, 03:43 PM IST
    • ಮತದಾನ ಮಾಡಲು ಗುಜರಾತ್ ಗೆ ಆಗಮಿಸಿದ ನ್ಯೂಜೆರ್ಸಿಯ ಎನ್‌ಆರ್‌ಐ ದಂಪತಿ
    • ಹನಿಮೂನ್ ಟ್ರಿಪ್ ಕ್ಯಾನ್ಸಲ್ ಮಾಡಿ ಮತದಾನ ಮಾಡಲೆಂದು ಬಂದ ಜೋಡಿ
    • ಎಲ್ಲಿಸ್‌ಬ್ರಿಡ್ಜ್ ಕ್ಷೇತ್ರಕ್ಕೆ ಡಿಸೆಂಬರ್ 3ರಂದು ಆಗಮಿಸಿದ್ದಾರೆ
NRI Couple: ಮತದಾನಕ್ಕಾಗಿ ಹನಿಮೂನ್ ಟ್ರಿಪ್ ಕ್ಯಾನ್ಸಲ್ ಮಾಡಿದ ನವಜೋಡಿ: ಇದಪ್ಪಾ ಕರ್ತವ್ಯ ಅಂದ್ರೆ title=
NRI,

NRI Couple: ಅಹಮದಾಬಾದ್: ಗುಜರಾತ್ ವಿಧಾನಸಭೆ ಚುನಾವಣೆಗಾಗಿ ಮತದಾನ ಮಾಡಲು ನ್ಯೂಜೆರ್ಸಿಯ ಎನ್‌ಆರ್‌ಐ ದಂಪತಿ ಆಗಮಿಸಿದ್ದಾರೆ. ಇದರಲ್ಲಿ ವಿಶೇಷ ಏನಿದೆ ಎಂದು ಭಾವಿಸಿದರೆ, ಈ ನವ ಜೋಡಿ ತಮ್ಮ ಹನಿಮೂನ್ ಟ್ರಿಪ್ ಕ್ಯಾನ್ಸಲ್ ಮಾಡಿ, ಮತದಾನ ಮಾಡಲೆಂದು ಎಲ್ಲಿಸ್‌ಬ್ರಿಡ್ಜ್ ಕ್ಷೇತ್ರಕ್ಕೆ ಡಿಸೆಂಬರ್ 3ರಂದು ಆಗಮಿಸಿದ್ದಾರೆ.

ಇದನ್ನೂ ಓದಿ: NRIಗಳಿಂದ FDIಗೆ ಭಾರೀ ಫಂಡ್: ವಿದೇಶದಿಂದ ಹಣ ಕಳುಹಿಸುವವರಲ್ಲಿ ಭಾರತೀಯರೇ ಮುಂದು

ಅನ್ಮೋಲ್ ಶಶಿನ್ ದೇಸಾಯಿ ಮತ್ತು ರಿಯಾ ಅನ್ಮೋಲ್ ದೇಸಾಯಿ ಎಂಬವರು ವೋಟ್ ಮಾಡಲು ಆಗಮಿಸಿ ಎನ್ ಆರ್ ಐ ನವದಂಪತಿ.

"ಭಾರತದ ಬಲವಾದ, ಕ್ರಿಯಾತ್ಮಕ ಭವಿಷ್ಯವನ್ನು ನಿರ್ಮಿಸುವಲ್ಲಿ ನಾವು ಸಣ್ಣ ಪಾತ್ರವನ್ನು ವಹಿಸಿದ್ದಕ್ಕಾಗಿ ನಾವು ಹೆಮ್ಮೆಪಡುತ್ತೇವೆ. ಭಾರತವು ವಿಶ್ವದ ಮುಂದಿನ ಸೂಪರ್ ಪವರ್ ಆಗಿ ಹೊರಹೊಮ್ಮುವ ಭರವಸೆಯಲ್ಲಿದ್ದೇವೆ" ಎಂದು ನವದಂಪತಿ ಗುಜರಾತ್ ರಾಜ್ಯದ ಎರಡನೇ ಹಂತದಲ್ಲಿ ಮತ ಚಲಾಯಿಸಿದ ನಂತರ ಹೇಳಿದರು.

ರಾಜ್ಯದಲ್ಲಿ 2ನೇ ಹಂತದ ಮತದಾನದಲ್ಲಿ ಕಳೆದ ದಿನ ಸಂಜೆ 5 ಗಂಟೆಗೆ ಮುಕ್ತಾಯಗೊಂಡಿದೆ. ತಾತ್ಕಾಲಿಕ ಮತದಾನದ ಪ್ರಮಾಣ 58.80% ರಷ್ಟಿದ್ದರೆ, ಎಲ್ಲಿಸ್‌ಬ್ರಿಡ್ಜ್ ಕ್ಷೇತ್ರದಲ್ಲಿ 53.54% ಮತದಾನವಾಗಿದೆ.

ಇದನ್ನೂ ಓದಿ: NRI Death: ತಾಯಿಯ ಹುಟ್ಟುಹಬ್ಬ ಆಚರಿಸಲು ಬಂದಿದ್ದ ಮಗ 10 ನೇ ಮಹಡಿಯಿಂದ ಬಿದ್ದು ದಾರುಣ ಸಾವು!

ಈಗಾಗಲೇ ಗುಜರಾತ್ ವಿಧಾನಸಭಾ ಚುನಾವಣೆ ಎಕ್ಸಿಟ್ ಪೋಲ್ ನಲ್ಲಿ ಬಿಜೆಪಿ ಇದುವರೆಗಿನ ಎಲ್ಲಾ ದಾಖಲೆಗಳನ್ನು ಹಿಂದಿಕ್ಕಲಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ZEE NEWS ನಡೆಸಿದ ಸಮೀಕ್ಷೆಯಲ್ಲಿ ಗುಜರಾತ್‌ನಲ್ಲಿ ಭಾರತೀಯ ಜನತಾ ಪಕ್ಷವು 182 ರಲ್ಲಿ 110 ರಿಂದ 125 ಸ್ಥಾನಗಳನ್ನು ಗೆಲ್ಲಲಿದೆ. ಹಾಗೆಯೇ 45 ರಿಂದ 60 ಸ್ಥಾನಗಳನ್ನು ಕಾಂಗ್ರೆಸ್‌ ಪಡೆಯಲಿವೆ ಎಂದು ತಿಳಿದುಬಂದಿದೆ. ಒಂದು ವೇಳೆ ಗುಜರಾತ್ ನಲ್ಲಿ ಈ ಬಾರಿಯೂ ಬಿಜೆಪಿ ಗೆಲುವು ಸಾಧಿಸಿದರೆ, ಸತತ 7ನೇ ಬಾರಿಗೆ ಬಿಜೆಪಿ ಸರ್ಕಾರ ರಚಿಸುವತ್ತ ಮುಖ ಮಾಡುತ್ತದೆ ಎನ್ನಬಹುದು. ಗುಜರಾತ್‌ನಲ್ಲಿ ಬಿಜೆಪಿಯ ಏಕಪಕ್ಷೀಯ ಆಡಳಿತವಿದೆ. ಕಳೆದ 27 ವರ್ಷಗಳಿಂದ ಗುಜರಾತ್‌ನಲ್ಲಿ ಬಿಜೆಪಿ ಆಡಳಿತದಲ್ಲಿದೆ. 1995ರಿಂದ ಇಲ್ಲಿ ಬಿಜೆಪಿಯನ್ನು ಅಲುಗಾಡಿಸಲು ಯಾವ ಪಕ್ಷಕ್ಕೂ ಸಾಧ್ಯವಾಗಿಲ್ಲ.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News