NRI News: ಕಳ್ಳತನ ತಡೆದ ಭಾರತೀಯ ಮೂಲದ ವ್ಯಕ್ತಿಗೆ ದುಬೈನಲ್ಲಿ ಅದ್ಧೂರಿ ಸನ್ಮಾನ

NRI News: ದುಬೈನ ಡಾ. ಮೇಜರ್ ಜನರಲ್ ತಾರಿಕ್ ತಹ್ಲಾಕ್ ಪ್ರಕಾರ, ನೈಫ್ ಪ್ರದೇಶದಲ್ಲಿ ಇಬ್ಬರು ಏಷ್ಯನ್ನರು ವಿವಿಧ ಕರೆನ್ಸಿಗಳ ನಗದು 4,250,000 ದಿರ್ಹಮ್ ಹೊಂದಿರುವ ಎರಡು ಚೀಲಗಳನ್ನು ಹೊತ್ತೊಯ್ಯುತ್ತಿದ್ದರು. ಈ ಸಂದರ್ಭದಲ್ಲಿ ಪ್ರಮುಖ ಶಂಕಿತ ಮತ್ತು ಅವನ ಸಹಚರರು ಏಷ್ಯನ್ನರನ್ನು ಅಡ್ಡಗಟ್ಟಿ ಎರಡು ಚೀಲಗಳಲ್ಲಿ ಒಂದನ್ನು ಕಿತ್ತುಕೊಂಡರು.  

Written by - Bhavishya Shetty | Last Updated : Nov 23, 2022, 05:05 PM IST
    • ಭಾರತೀಯ ಮೂಲದ ಕೇಶುರ್ ಕಾರ ಎಂಬವರಿಗೆ ದುಬೈನಲ್ಲಿ ಸನ್ಮಾನ
    • ಸಂಭವಿಸಬಹುದಾಗಿದ್ದ 2,757,158 ದಿರ್ಹಮ್ ಮೌಲ್ಯದ ದರೋಡೆಯನ್ನು ತಡೆದ ಕೇಶುರ್
    • ದುಬೈನ ಡಾ. ಮೇಜರ್ ಜನರಲ್ ತಾರಿಕ್ ತಹ್ಲಾಕ್ ಮೆಚ್ಚುಗೆ
NRI News: ಕಳ್ಳತನ ತಡೆದ ಭಾರತೀಯ ಮೂಲದ ವ್ಯಕ್ತಿಗೆ ದುಬೈನಲ್ಲಿ ಅದ್ಧೂರಿ ಸನ್ಮಾನ title=
NRI

ದುಬೈ ಪೊಲೀಸ್‌ ಇಲಾಖೆ ಹಿರಿಯ ಅಧಿಕಾರಿಗಳು ಭಾರತೀಯ ಮೂಲದ ಕೇಶುರ್ ಕಾರ ಎಂಬವರನ್ನು ಶ್ಲಾಘಿಸಿದ್ದಾರೆ. ಇವರು ದುಬೈನಲ್ಲಿ ಸಂಭವಿಸಬಹುದಾಗಿದ್ದ 2,757,158 ದಿರ್ಹಮ್ ಮೌಲ್ಯದ ದರೋಡೆಯನ್ನು ತಡೆದಿದ್ದು, ಅವರ ಧೈರ್ಯಕ್ಕಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ದುಬೈನ ಡಾ. ಮೇಜರ್ ಜನರಲ್ ತಾರಿಕ್ ತಹ್ಲಾಕ್ ಪ್ರಕಾರ, ನೈಫ್ ಪ್ರದೇಶದಲ್ಲಿ ಇಬ್ಬರು ಏಷ್ಯನ್ನರು ವಿವಿಧ ಕರೆನ್ಸಿಗಳ ನಗದು 4,250,000 ದಿರ್ಹಮ್ ಹೊಂದಿರುವ ಎರಡು ಚೀಲಗಳನ್ನು ಹೊತ್ತೊಯ್ಯುತ್ತಿದ್ದರು. ಈ ಸಂದರ್ಭದಲ್ಲಿ ಪ್ರಮುಖ ಶಂಕಿತ ಮತ್ತು ಅವನ ಸಹಚರರು ಏಷ್ಯನ್ನರನ್ನು ಅಡ್ಡಗಟ್ಟಿ ಎರಡು ಚೀಲಗಳಲ್ಲಿ ಒಂದನ್ನು ಕಿತ್ತುಕೊಂಡರು.  

ಇದನ್ನೂ ಓದಿ: NRIಗಳಿಗಾಗಿ ICICI ಪರಿಚರಿಯಿಸಿದೆ ನೂತನ ಉತ್ಪನ್ನ: ಪ್ರಮುಖ ವೈಶಿಷ್ಟ್ಯಗಳನ್ನು ಪರಿಶೀಲಿಸಿ

ಈ ಸಂದರ್ಭದಲ್ಲಿ ಇಬ್ಬರು ಏಷ್ಯನ್ನರು ಸಹಾಯಕ್ಕಾಗಿ ಕೂಗಿದಾಗ, ಕೇಶುರ್ ಧೈರ್ಯದಿಂದ ದರೋಡೆಕೋರರನ್ನು ಅಡ್ಡಗಟ್ಟಿದ್ದಾನೆ. ಅಷ್ಟೇ ಅಲ್ಲದೆ, ಪೊಲೀಸರು ಬರುವವರೆಗೆ ಆ ಕಳ್ಳರ ಜೊತೆ ಹೋರಾಡಿದ್ದಾರೆಎಂದು ಮೇಜರ್ ಜನರಲ್ ತಹ್ಲಾಕ್ ಹೇಳಿದರು.

ಕೇಶುರ್ ಅವರು ತಮಗೆ ಕಚೇರಿಯ ಸಹೋದ್ಯೋಗಿಗಳಲ್ಲಿ ಮಾಡಿರುವ ಸನ್ಮಾನದಿಂದ ಸಂತಸವಾಗಿದೆ ಎಂದು ಹೇಳಿದ್ದಾರೆ. ಈ ಪದಕವನ್ನು ಸದಾ ಪಾಲಿಸಿಕೊಂಡು ಬರುತ್ತೇನೆ. ಇದನ್ನು ಸ್ವೀಕರಿಸಲು ತುಂಬಾ ಸಂತೋಷವಾಗುತ್ತಿದೆ ಎಂದರು. 

ಮೇಜರ್ ಜನರಲ್ ಖಲೀಲ್ ಇಬ್ರಾಹಿಂ ಅಲ್ ಮನ್ಸೂರಿ ನೇತೃತ್ವದಲ್ಲಿ, ಅಪರಾಧ ತನಿಖಾ ವ್ಯವಹಾರಗಳ ಸಹಾಯಕ ಮುಖ್ಯಸ್ಥ, ಮೇಜರ್ ಜನರಲ್ ಡಾ. ಅಡೆಲ್ ಅಲ್ ಸುವಾದಿ, ಜೆಬೆಲ್ ಅಲಿ ಪೊಲೀಸ್ ಠಾಣೆಯ ನಿರ್ದೇಶಕ, ದುಬೈ ಪೊಲೀಸ್ ಠಾಣೆಗಳ ನಿರ್ದೇಶಕರ ಮಂಡಳಿಯ ನಿರ್ದೇಶಕ, ಡಾ. ಮೇಜರ್ ಜನರಲ್ ತಾರಿಕ್ ತಹ್ಲಾಕ್, ನೈಫ್ ಪೊಲೀಸ್ ಠಾಣೆಯ ನಿರ್ದೇಶಕ, ಬರ್ ದುಬೈ ಪೊಲೀಸ್ ಠಾಣೆಯ ನಿರ್ದೇಶಕ, ಅಬ್ದುಲ್ಲಾ ಖಾದಿಮ್ ಸೂರೂರ್ ಮತ್ತು ಅನೇಕ ಹಿರಿಯ ಅಧಿಕಾರಿಗಳು ಅವರನ್ನು ಅಭಿನಂದಿಸಿದರು. 

ಮೇಜರ್ ಜನರಲ್ ಅಲ್ ಮನ್ಸೂರಿ ಕೇಶುರ್ ಅವರನ್ನು ಶ್ಲಾಘಿಸಿದರು. ಪೊಲೀಸರು ಬರುವವರೆಗೆ ಕಳ್ಳರು ನೆಲವನ್ನು ಬಿಟ್ಟು ಅಲುಗಾಡದಂತೆ ಅವರನ್ನು ಲಾಕ್ ಮಾಡಿದ್ದರು. ಇದರಿಂದ ದರೋಡೆಕೋರರನ್ನು ಬಂಧಿಸಲು ಪೊಲೀಸರಿಗೆ ಅವರು ಸಹಕಾರ ನೀಡಿದ್ದಾರೆ. ಅವರ ಪ್ರಯತ್ನ ಮತ್ತು ಧೈರ್ಯವನ್ನು ಶ್ಲಾಘಿಸಲೇ ಬೇಕು ಎಂದರು.

ಇದನ್ನೂ ಓದಿ: NRI: ವೇಗ ಪಡೆದುಕೊಂಡ ವೀಸಾ ಪ್ರಕ್ರಿಯೆ: ಮುಂದಿನ ವರ್ಷದವರೆಗೆ ಸಾಮಾನ್ಯ ಪರಿಸ್ಥಿತಿ ಮುಂದುವರಿಕೆ

ಮೇಜರ್ ಜನರಲ್ ಅಲ್ ಮನ್ಸೂರಿ ಅವರು ಮಾತನಾಡಿ, ಕೇಶುರ್ ಅವರ ಈ ಕಾರ್ಯ ಸ್ಪೂರ್ತಿದಾಯಕ. ಈ ಹಿನ್ನೆಲೆಯಲ್ಲಿ ಸಹೋದ್ಯೋಗಿಗಳು ಮತ್ತು ನೆರೆಹೊರೆಯವರ ಮುಂದೆ ಅವರನ್ನು ಗೌರವಿಸುವುದು ಸಮುದಾಯದ ಸಹಭಾಗಿತ್ವದ ಪರಿಕಲ್ಪನೆಯನ್ನು ಬಲಪಡಿಸುವಲ್ಲಿ ಮತ್ತು ವ್ಯಕ್ತಿಗಳಲ್ಲಿ ಜವಾಬ್ದಾರಿಯ ಪ್ರಜ್ಞೆಯನ್ನು ಬಲಪಡಿಸುವಲ್ಲಿ ಅವಶ್ಯಕವಾಗಿದೆ ಎಂದರು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News