NRI News: ಅಮೆರಿಕಾದಲ್ಲಿ ಭಾರತೀಯರ ಹವಾ: ಕಿರಿವಯಸ್ಸಿನಲ್ಲಿ ಶಾಸಕಾಂಗಕ್ಕೆ ಆಯ್ಕೆಯಾದ ಇಂಡೋ-ಅಮೆರಿಕನ್ ಮಹಿಳೆ

NRI News: ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ನಬಿಲಾ ಸೈಯದ್ ಅವರು ತಮ್ಮ ಎದುರಾಳಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಕ್ರಿಸ್ ಬೋಸ್ ಅವರನ್ನು ಸೋಲಿಸಿದ್ದಾರೆ. ಇಲಿನಾಯ್ಸ್ ಸ್ಟೇಟ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ 51 ನೇ ಜಿಲ್ಲಾ ಚುನಾವಣೆಯಲ್ಲಿ ನಬೀಲಾ ಸೈಯದ್ ಶೇಕಡಾ 52.3 ಮತಗಳನ್ನು ಪಡೆದರು.

Written by - Bhavishya Shetty | Last Updated : Nov 13, 2022, 06:45 AM IST
    • ಜನರಲ್ ಅಸೆಂಬ್ಲಿಗೆ ಕಿರಿಯ ವಯಸ್ಸಿನಲ್ಲೇ ಆಯ್ಕೆಯಾದ ನಬೀಲಾ ಸಯ್ಯದ್
    • ಇಂಡೋ ಅಮೆರಿಕನ್ ಮಹಿಳೆ 23 ವರ್ಷದ ನಬೀಲಾ ಸೈಯದ್
    • ಅಸೆಂಬ್ಲಿಗೆ ಆಯ್ಕೆಯಾದ ಅತ್ಯಂತ ಕಿರಿಯ ವ್ಯಕ್ತಿ ಈಕೆ
NRI News: ಅಮೆರಿಕಾದಲ್ಲಿ ಭಾರತೀಯರ ಹವಾ: ಕಿರಿವಯಸ್ಸಿನಲ್ಲಿ ಶಾಸಕಾಂಗಕ್ಕೆ ಆಯ್ಕೆಯಾದ ಇಂಡೋ-ಅಮೆರಿಕನ್ ಮಹಿಳೆ title=
Nabeela Syed

Nabeela Syed: ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಭಾರತೀಯ ಅಮೆರಿಕನ್ನರು ತಮ್ಮ ಬಲವನ್ನು ತೋರಿಸುತ್ತಿದ್ದಾರೆ. ಕಳೆದ ಎರಡು ದಿನಗಳ ಹಿಂದೆಯಷ್ಟೇ ಮೇರಿಲ್ಯಾಂಡ್‌ನ ಲೆಫ್ಟಿನೆಂಟ್ ಗವರ್ನರ್ ಆಗಿ ಅರುಣಾ ಮಿಲ್ಲರ್ ಆಯ್ಕೆಯಾಗಿದ್ದರೆ, ಇದೀಗ ಮತ್ತೊಬ್ಬ ಭಾರತೀಯ ಅಮೆರಿಕನ್ 23 ವರ್ಷದ ನಬೀಲಾ ಸೈಯದ್ ಇಲಿನಾಯ್ಸ್ ಜನರಲ್ ಅಸೆಂಬ್ಲಿಗೆ ಕಿರಿಯ ವಯಸ್ಸಿನಲ್ಲೇ ಆಯ್ಕೆಯಾಗುವ ಮೂಲಕ ಇತಿಹಾಸ ಸೃಷ್ಟಿಸಿದರು.

ಇದನ್ನೂ ಓದಿ: ಅಮೆರಿಕದಲ್ಲಿ ಇತಿಹಾಸ ಸೃಷ್ಟಿಸಿದ ಭಾರತೀಯ ಮಹಿಳೆ: ಲೆಫ್ಟಿನೆಂಟ್ ಗವರ್ನರ್ ಆಗಿ Aruna Miller ನೇಮಕ

ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ನಬಿಲಾ ಸೈಯದ್ ಅವರು ತಮ್ಮ ಎದುರಾಳಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಕ್ರಿಸ್ ಬೋಸ್ ಅವರನ್ನು ಸೋಲಿಸಿದ್ದಾರೆ. ಇಲಿನಾಯ್ಸ್ ಸ್ಟೇಟ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ 51 ನೇ ಜಿಲ್ಲಾ ಚುನಾವಣೆಯಲ್ಲಿ ನಬೀಲಾ ಸೈಯದ್ ಶೇಕಡಾ 52.3 ಮತಗಳನ್ನು ಪಡೆದರು.

ಚುನಾವಣೆಯಲ್ಲಿ ಗೆದ್ದಿರುವ ಬಗ್ಗೆ ಸ್ವತಃ ನಬಿಲಾ ಸೈಯದ್ ಟ್ವೀಟ್ ಮಾಡಿದ್ದಾರೆ. ತನ್ನ ಟ್ವೀಟ್‌ನಲ್ಲಿ, “ನನ್ನ ಹೆಸರು ನಬೀಲಾ ಸೈಯದ್. ನಾನು 23 ವರ್ಷದ ಭಾರತೀಯ-ಅಮೇರಿಕನ್ ಮುಸ್ಲಿಂ ಮಹಿಳೆ. ಉಪಚುನಾವಣೆಯಲ್ಲಿ ನಾನು ರಿಪಬ್ಲಿಕ್ ಪಕ್ಷದ ಅಭ್ಯರ್ಥಿ ವಿರುದ್ಧ ಗೆದ್ದಿದ್ದೇನೆ. ಇಲಿನಾಯ್ಸ್ ಜನರಲ್ ಅಸೆಂಬ್ಲಿಗೆ ಆಯ್ಕೆಯಾದ ಅತ್ಯಂತ ಕಿರಿಯ ವ್ಯಕ್ತಿ ನಾನು” ಎಂದು ಹೇಳಿದ್ದಾರೆ. ಈ ಟ್ವೀಟ್ ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.

ಇದನ್ನೂ ಓದಿ: NRI News: ವಿದೇಶದಲ್ಲಿ ಲೈಫ್ ಸೆಟಲ್ ಮಾಡ್ಕೋಬೇಕು ಅನ್ನೋರಿಗೆ ಇಲ್ಲಿದೆ ಗುಡ್ ನ್ಯೂಸ್

ಇನ್ನು Instagram ನಲ್ಲಿಯೂ ಬರೆದುಕೊಂಡಿರುವ ಅವರು, ಚುನಾವಣಾ ಕಣಕ್ಕೆ ಇಳಿಯಲು ತನ್ನ ಯೋಜನೆ ಏನೆಂದು ಎಲ್ಲರಿಗೂ ವಿವರಿಸಿದ್ದಾರೆ. ಮೇಲಾಗಿ, ಜನರೊಂದಿಗೆ ನಿರಂತರ ಸಂವಹನದಿಂದಾಗಿ ಈ ಚುನಾವಣೆಯಲ್ಲಿ ಗೆದ್ದಿದ್ದೇನೆ ಎಂದು ಅವರು ಹೇಳಿದರು. “ಔಷಧಿಗಳ ಬೆಲೆ ಏರಿಕೆ, ಆಸ್ತಿ ತೆರಿಗೆ ಹೊರೆ ಮತ್ತು ಹಕ್ಕುಗಳ ರಕ್ಷಣೆಯಂತಹ ವಿಷಯಗಳ ಬಗ್ಗೆ ಜನರೊಂದಿಗೆ ಚರ್ಚಿಸಿದ್ದರಿಂದ ನನಗೆ ಯಶಸ್ಸು ಸಿಕ್ಕಿತು” ಎಂದು ನಬಿಲಾ ಹೇಳಿದರು. ನಬಿಲಾ ಸೈಯದ್ ಸಾಮಾಜಿಕ ಜಾಲತಾಣಗಳಲ್ಲಿ ತನಗೆ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News