ಬೇಸಿಗೆಯಲ್ಲಿ ಸ್ಕಿನ್ ಟ್ಯಾನಿಂಗ್ ಆಗಿದ್ಯಾ? ನಿಮ್ಮ ಮನೆಯಲ್ಲಿರುವ ಈ ವಸ್ತುಗಳಿಂದ ಹೊಳೆಯುವ ತ್ವಚೆ ನಿಮ್ಮದಾಗಿಸಿ!

Tanning Problem in summer: ಬೇಸಿಗೆಯಲ್ಲಿ ಬಿಸಿಲಿಗೆ ಒಡ್ಡಿಕೊಂಡಾಗ ಚರ್ಮವು ಸಾಮಾನ್ಯಕ್ಕಿಂತ ಹೆಚ್ಚು ಟ್ಯಾನ್ ಆಗುತ್ತದೆ. ಇದರಿಂದಾಗಿ, ಚರ್ಮ ಕಪ್ಪಾಗುತ್ತದೆ. ಅಷ್ಟೇ ಅಲ್ಲ, ಇದು ಅಕಾಲಿಕ ಸುಕ್ಕುಗಳಿಗೂ ಕಾರಣವಾಗಬಹುದು.   

Written by - Yashaswini V | Last Updated : May 3, 2024, 10:55 AM IST
  • ನಿಮ್ಮ ಅಡುಗೆ ಮನೆಯಲ್ಲಿ ಸುಲಭವಾಗಿ ಲಭ್ಯವಿರುವ ಕೆಲವು ಪದಾರ್ಥಗಳನ್ನು ಬಳಸಿ ಟ್ಯಾನಿಂಗ್ ಸಮಸ್ಯೆಯನ್ನು ಸುಲಭವಾಗಿ ನಿವಾರಿಸಬಹುದು.
  • ನಿಂಬೆ ರಸ ಚರ್ಮದ ಹಲವು ಸಮಸ್ಯೆಗಳಿಗೆ ಅತ್ಯುತ್ತಮ ಔಷಧಿ.
  • ಇದು ಚರ್ಮದ ಟ್ಯಾನ್ ಸಮಸ್ಯೆಯನ್ನು ನಿವಾರಿಸಲು ಕೂಡ ತುಂಬಾ ಪ್ರಯೋಜನಕಾರಿ ಆಗಿದೆ.
ಬೇಸಿಗೆಯಲ್ಲಿ ಸ್ಕಿನ್ ಟ್ಯಾನಿಂಗ್ ಆಗಿದ್ಯಾ? ನಿಮ್ಮ ಮನೆಯಲ್ಲಿರುವ ಈ ವಸ್ತುಗಳಿಂದ ಹೊಳೆಯುವ ತ್ವಚೆ ನಿಮ್ಮದಾಗಿಸಿ!  title=

Tanning Remove At Home: ಬೇಸಿಗೆಯಲ್ಲಿ ಚರ್ಮದ ಹಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಅತಿಯಾದ ಬೆವರುವಿಕೆಯಿಂದ ವಾಸನೆ, ಎಣ್ಣೆಯುಕ್ತ ಕೂದಲು ಸೇರಿದಂತೆ ಚರ್ಮದ ಟ್ಯಾನಿಂಗ್ ಸಮಸ್ಯೆ ಹೆಚ್ಚಿನ ಕಾಳಜಿಯ ವಿಷಯವಾಗಿದೆ. ಆದರೆ, ನೀವು ನಿಮ್ಮ ಅಡುಗೆ ಮನೆಯಲ್ಲಿ ಸುಲಭವಾಗಿ ಲಭ್ಯವಿರುವ ಕೆಲವು ಪದಾರ್ಥಗಳನ್ನು ಬಳಸಿ ಟ್ಯಾನಿಂಗ್ ಸಮಸ್ಯೆಯನ್ನು ಸುಲಭವಾಗಿ ನಿವಾರಿಸಬಹುದು. ಅಂತಹ ಮನೆಮದ್ದುಗಳ ಬಗ್ಗೆ ತಿಳಿಯೋಣ... 

ಅಡುಗೆಮನೆಯಲ್ಲಿರುವ ಈ ವಸ್ತುಗಳನ್ನು ಬಳಸಿ ಟ್ಯಾನಿಂಗ್ ಸಮಸ್ಯೆ ನಿವಾರಿಸಿ:- 
ನಿಂಬೆ ರಸ ಮತ್ತು ಜೇನುತುಪ್ಪ: 

ನಿಂಬೆ ರಸ (Lemon Juice) ಚರ್ಮದ ಹಲವು ಸಮಸ್ಯೆಗಳಿಗೆ ಅತ್ಯುತ್ತಮ ಔಷಧಿ. ಇದು ಚರ್ಮದ ಟ್ಯಾನ್ ಸಮಸ್ಯೆಯನ್ನು (Skin Tanning Problem) ನಿವಾರಿಸಲು ಕೂಡ ತುಂಬಾ ಪ್ರಯೋಜನಕಾರಿ ಆಗಿದೆ. ಬೇಸಿಗೆಯಲ್ಲಿ ಚರ್ಮದ ಟ್ಯಾನಿಂಗ್ ಸಮಸ್ಯೆ ನಿವಾರಿಸಲು ತಾಜಾ ನಿಂಬೆ ರಸವನ್ನು ಜೇನುತುಪ್ಪದೊಂದಿಗೆ ಬೆರೆಸಿ ಅನ್ವಯಿಸಿ. ಅರ್ಧಗಂಟೆ ಬಳಿಕ ವಾಶ್ ಮಾಡಿದರೆ, ಡೆಡ್ ಸ್ಕಿನ್ ಸಮಸ್ಯೆ ನಿವಾರಣೆಯಾಗುತ್ತದೆ. ಟ್ಯಾನಿಂಗ್ ಕೂಡ ಕಡಿಮೆಯಾಗುತ್ತದೆ. 

ಟೊಮಾಟೊದೊಂದಿಗೆ ಮೊಸರು: 
ವಾಸ್ತವವಾಗಿ, ಟೊಮೆಟೊಗಳು ಹೆಚ್ಚಿನ ಪ್ರಮಾಣದ ಉತ್ಕರ್ಷಣ ನಿರೋಧಕಗಳನ್ನು ಹೊಂದಿದ್ದು ಇದು ಚರ್ಮದ ಬಣ್ಣವನ್ನು ಸುಧಾರಿಸುತ್ತದೆ. ಮೊಸರು ಲ್ಯಾಕ್ಟಿಕ್ ಆಮ್ಲವನ್ನು ಹೊಂದಿರುತ್ತದೆ, ಇದು ಚರ್ಮವನ್ನು (Skin) ಮೃದುಗೊಳಿಸುತ್ತದೆ.  ಇವೆರಡನ್ನೂ ಒಟ್ಟಿಗೆ ಬೆರೆಸಿ ಚರ್ಮದ ಮೇಲೆ ಅನ್ವಯಿಸುವುದರಿಂದ ಚರ್ಮದ ಟ್ಯಾನಿಂಗ್ ನಿವಾರಿಸಬಹುದು. ಇದಕ್ಕಾಗಿ, ಟೊಮಾಟೊ ರಸವನ್ನು ತೆಗೆದು ಇದರೊಂದಿಗೆ ಮೊಸರು ಬೆರೆಸಿ ಚರ್ಮದ ಮೇಲೆ ಅನ್ವಯಿಸಿ. 15-20 ನಿಮಿಷಗಳ ಬಳಿಕ ವಾಶ್ ಮಾಡಿ.

ಇದನ್ನೂ ಓದಿ- Bathing Tips: ದಿನವಿಡೀ ಫ್ರೆಶ್ ಆಗಿರಲು ಸ್ನಾನ ಮಾಡುವ ನೀರಿನಲ್ಲಿ ಇದನ್ನು ಬೆರೆಸಿ!

ಸೌತೆಕಾಯಿ ರಸ: 
ಬೇಸಿಗೆಯಲ್ಲಿ ಸೌತೆಕಾಯಿ ಸೇವನೆ ನಮ್ಮನ್ನು ಹಲವು ಆರೋಗ್ಯ ಸಮಸ್ಯೆಗಳಿಂದ ದೂರ ಉಳಿಯುವಂತೆ ಮಾಡುತ್ತದೆ. ಅಷ್ಟೇ ಅಲ್ಲ ಸೌತೆಕಾಯಿ ರಸ ಚರ್ಮದ ಆರೋಗ್ಯಕ್ಕೆ (Skin Health) ತುಂಬಾ ಪ್ರಯೋಜನಕಾರಿ ಆಗಿದೆ. ಸೌತೆಕಾಯಿ ರಸ ತೆಗೆದು ಹತ್ತಿ ಉಂಡೆ ಸಹಾಯದಿಂದ ಚರ್ಮದ ಮೇಲೆ ಅನ್ವಯಿಸಿ. ಈ ಮಾಸ್ಕ್ ಒಣಗಿದ ಬಳಿಕ ತಣ್ಣೀರಿನಿಂದ ವಾಶ್ ಮಾಡಿ. ನಿಯಮಿತವಾಗಿ ಹೀಗೆ ಮಾಡುವುದರಿಂದ ಸ್ಕಿನ್ ಟ್ಯಾನಿಂಗ್ ಸುಲಭವಾಗಿ ಮಾಯವಾಗುತ್ತದೆ. 

ಕಡಲೆ ಹಿಟ್ಟು ಮತ್ತು ಅರಿಶಿನ: 
ಅರಿಶಿನವು ತ್ವಚೆಗೆ ಕಾಂತಿ ನೀಡುವ ಅತ್ಯುತ್ತಮ ಏಜೆಂಟ್ ಮತ್ತು ಕಡಲೆ ಹಿಟ್ಟು  ಚರ್ಮದ ಹಲವು ಸಮಸ್ಯೆಗಳಿಗೆ (Skin Problems) ಪರಿಹಾರ ನೀಡುತ್ತದೆ. ಅರಿಶಿನವನ್ನು ಕಡಲೆ ಹಿಟ್ಟಿನೊಂದಿಗೆ ಬೆರೆಸಿ ತೆಳುವಾದ ಪೇಸ್ಟ್ ತಯಾರಿಸಿ ಇದನ್ನು ಟ್ಯಾನ್ ಪೀಡಿತ ಪ್ರದೇಶದಲ್ಲಿ ಅನ್ವಯಿಸಿ. 15-20ನಿಮಿಷಗಳ ಬಳಿಕ ತಣ್ಣೀರಿನಿಂದ ವಾಶ್ ಮಾಡಿ. ನಿಯಮಿತವಾಗಿ ಈ ಪ್ಯಾಕ್ ಬಳಸುವುದರಿಂದ ಕೆಲವೇ ದಿನಗಳಲ್ಲಿ ಟ್ಯಾನಿಂಗ್ ರಿಮೂವ್ ಮಾಡಬಹುದು. 

ಇದನ್ನೂ ಓದಿ- ಡಾರ್ಕ್ ಅಂಡರ್ ಆರ್ಮ್ ಸಮಸ್ಯೆಯಿಂದ ಪರಿಹಾರಕ್ಕಾಗಿ ಸರಳ ಮನೆಮದ್ದುಗಳು

ಆಲೂಗೆಡ್ಡೆ ರಸ: 
ಆಲೂಗಡ್ಡೆ ರಸವು ಅತ್ಯುತ್ತಮ ಸ್ಕಿನ್ ಏಜೆಂಟ್. ಆಲೂಗಡ್ಡೆ ರಸವನ್ನು ಟ್ಯಾನಿಂಗ್ ಪೀಡಿತ ಪ್ರದೇಶದಲ್ಲಿ ಅನ್ವಯಿಸಿ 10 ನಿಮಿಷಗಳ ಬಳಿಕ ವಾಶ್ ಮಾಡಿ. ಇದರಿಂದ ಚರ್ಮದ ಮೇಲೆ ಮೂಡಿರುವ ಕಪ್ಪು ಬಣ್ಣ ಕೆಲವೇ ದಿನಗಳಲ್ಲಿ ನಿವಾರಣೆಯಾಗುತ್ತದೆ. 

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News