Shilpa Shetty Beauty Secrets: ಸದಾ ಯಂಗ್ ಆಗಿ ಕಾಣಲು ಇಲ್ಲಿದೆ ಸಿಂಪಲ್ ಟಿಪ್ಸ್

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಆರೋಗ್ಯಕರ ಚರ್ಮಕ್ಕಾಗಿ ತರಕಾರಿಗಳು ಮತ್ತು ಹಣ್ಣಿನ ರಸವನ್ನು ಸೇವಿಸುತ್ತಾರೆ. ಟೊಮೆಟೊ ಜ್ಯೂಸ್ (Tomato Juice Benefits) ನ ಪ್ರಯೋಜನಗಳ ಜೊತೆಗೆ, ಟೊಮೆಟೊ ಜ್ಯೂಸ್ ರೆಸಿಪಿ ತಯಾರಿಸಲು ಸರಿಯಾದ ಮಾರ್ಗವನ್ನು ಸಹ ಅವರು ಹೇಳಿದ್ದಾರೆ.

Written by - Yashaswini V | Last Updated : Feb 26, 2021, 03:28 PM IST
  • ಟೊಮೆಟೊ ಜ್ಯೂಸ್ ತಯಾರಿಸುವುದು ಹೇಗೆ ಎಂದು ಶಿಲ್ಪಾ ಶೆಟ್ಟಿ ವಿವರಿಸಿದ್ದಾರೆ
  • ಟೊಮೆಟೊ ಜ್ಯೂಸ್ ಚರ್ಮಕ್ಕೆ ತುಂಬಾ ಪ್ರಯೋಜನಕಾರಿ
  • ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಇದು ಸಹಕಾರಿಯಾಗಿದೆ
Shilpa Shetty Beauty Secrets: ಸದಾ ಯಂಗ್ ಆಗಿ ಕಾಣಲು ಇಲ್ಲಿದೆ ಸಿಂಪಲ್ ಟಿಪ್ಸ್ title=
Shilpa Shetty Beauty Secrets

ಮುಂಬೈ : ನಟಿ ಶಿಲ್ಪಾ ಶೆಟ್ಟಿ ಅವರನ್ನು ಬಾಲಿವುಡ್‌ನ ಅತ್ಯಂತ ಸುಂದರ ನಟಿಯರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಆಕೆಯ ಆರೋಗ್ಯ ಮತ್ತು ಫಿಟ್ನೆಸ್ ಬಗ್ಗೆ ಅವರು ತುಂಬಾ ಜಾಗೃತರಾಗಿರುತ್ತಾರೆ. ಶಿಲ್ಪಾ ಶೆಟ್ಟಿ ಆಗಾಗ್ಗೆ ಆರೋಗ್ಯಕರ ಪಾಕವಿಧಾನಗಳು, ಸೌಂದರ್ಯ ರಹಸ್ಯಗಳ ಬಗ್ಗೆ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳುತ್ತಾರೆ. 

ಕೆಲವು ದಿನಗಳ ಹಿಂದೆ, ಅವರು ಟೊಮೆಟೊ ಜ್ಯೂಸ್ (Tomato Juice Benefits) ನ ಪ್ರಯೋಜನಗಳನ್ನು ಮತ್ತು ಅದನ್ನು ಹೇಗೆ ತಯಾರಿಸಬೇಕೆಂಬುದನ್ನು (Tomato Juice Recipe) ವಿವರಿಸಿದ್ದಾರೆ.

ಟೊಮೆಟೊ ಜ್ಯೂಸ್ ಆರೋಗ್ಯಕ್ಕೆ ಪ್ರಯೋಜನಕಾರಿ :
ಶಿಲ್ಪಾ ಶೆಟ್ಟಿ (Shilpa Shetty) ತನ್ನ ಆಹಾರದ ಬಗ್ಗೆ ತುಂಬಾ ಕಟ್ಟುನಿಟ್ಟಾಗಿರುತ್ತಾರೆ. ಅವರು ತಮ್ಮ ಆಹಾರದಲ್ಲಿ ಹಣ್ಣುಗಳು ಮತ್ತು ತರಕಾರಿಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಪ್ರತಿಯೊಂದು ತರಕಾರಿಗಳನ್ನು ಅದರ ನೈಸರ್ಗಿಕ ಗುಣಗಳಿಗೆ ತಕ್ಕಂತೆ ಬೇಯಿಸದೆ ತಿನ್ನುವುದು ಸುಲಭವಲ್ಲ ಎಂದು ಅವರು ನಂಬುತ್ತಾರೆ. ಆದ್ದರಿಂದ, ಅವುಗಳನ್ನು ಮಿಶ್ರಣ ಮಾಡಿ ಮತ್ತು ಅವುಗಳಲ್ಲಿ ಕೆಲವನ್ನು ಜ್ಯೂಸ್ ಮಾಡಿ ಸೇವಿಸಬಹುದು ಎಂದು ಸಲಹೆ ನೀಡಿದ್ದಾರೆ.

ಇದನ್ನೂ ಓದಿ - Video: ಕಿಕ್ಕಿರಿದ ಜನಸಮೂಹದ ಮಧ್ಯೆ Deepika Padukone ಬ್ಯಾಗ್ ಕಸಿಯಲು ಪ್ರಯತ್ನಿಸಿದಾಗ...

ಟೊಮೆಟೊ ಸೆಲರಿ ಜ್ಯೂಸ್ ನನ್ನ ನೆಚ್ಚಿನ ರಸಗಳಲ್ಲಿ ಒಂದಾಗಿದೆ. ಇದು ವಿಟಮಿನ್ ಸಿ ಮತ್ತು ಲೈಕೋಪೀನ್ ನ ಉತ್ತಮ ಮೂಲವಾಗಿದೆ. ಆಂಟಿಆಕ್ಸಿಡೆಂಟ್‌ಗಳು ಸಹ ಇದರಲ್ಲಿ ಕಂಡುಬರುತ್ತವೆ. ಇದು ಉತ್ತಮ ರೋಗನಿರೋಧಕ ವರ್ಧಕವಾಗಿದೆ  (Immunity Booster)  ಮತ್ತು ಆರೋಗ್ಯಕರ ಚರ್ಮ ಮತ್ತು ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹ ಇದು ತುಂಬಾ ಸಹಕಾರಿ. ಇದನ್ನು ಮನೆಯಲ್ಲಿ ಸುಲಭವಾಗಿ ತಯಾರಿಸಬಹುದು ಎಂದು ಶಿಲ್ಪಾ ಶೆಟ್ಟಿ ಅವರು ಇನ್ಸ್ಟಾಗ್ರಾಮ್ನಲ್ಲಿ ಬರೆದಿದ್ದಾರೆ.

ಇದನ್ನೂ ಓದಿ - Exclusive: ನೀವೂ Deepika Padukone ರೀತಿ Foodie ಆಗಿದ್ದರೆ, ಈ Diet ಅನುಸರಿಸಿ

ಟೊಮೆಟೊ ಜ್ಯೂಸ್ ತಯಾರಿಸಲು ಬೇಕಾದ ಪದಾರ್ಥಗಳು (Tomato Celery Juice Ingredients)

  • 2 ಟೊಮ್ಯಾಟೊ
  • 1/4 ಟೀಸ್ಪೂನ್ ನಿಂಬೆ ರಸ
  • 1/2 ಇಂಚಿನ ಸೆಲರಿ/ಅಜ್ವೈನ್
  • ತುಳಸಿಯ ಕೆಲವು ಎಲೆಗಳು
  • 1/4 ಟೀಸ್ಪೂನ್ ರಾ ಉಪ್ಪು
  • ರುಚಿಗೆ ಕರಿಮೆಣಸು (ಐಚ್ಚಿಕ)

ಟೊಮೆಟೊ ಜ್ಯೂಸ್ ತಯಾರಿಸುವುದು ಹೇಗೆ (Tomato Celery Juice Recipe) :
1. ಮೇಲೆ ತಿಳಿಸಿದ ಎಲ್ಲಾ ಪದಾರ್ಥಗಳನ್ನು ಮಿಶ್ರಣ ಮಾಡಿ.
2. ತುಳಸಿ ಎಲೆಗಳಿಂದ ಅಲಂಕರಿಸಿ ತಾಜಾವಾಗಿ ಬಡಿಸಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News