Diabetes ರೋಗಿಗಳಿಗೆ ಭಾರೀ ಪ್ರಯೋಜನಕಾರಿ ಮನೆಯಲ್ಲಿಯೇ ಮಾಡಬಹುದಾದ ಈ ಖಾದ್ಯ !

ಉತ್ತಮ ಆಹಾರ ಸೇವನೆಯಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು. ಅವುಗಳಲ್ಲಿ ರಾಜ್ಮಾ ಕೂಡ ಒಂದು. 

Written by - Ranjitha R K | Last Updated : Mar 21, 2022, 12:51 PM IST
  • ಮಧುಮೇಹ ರೋಗಿಗಳು ಆಹಾರದ ಬಗ್ಗೆ ಗಮನ ಹರಿಸಬೇಕು
  • ಆಹಾರದಲ್ಲಿ ರಾಜ್ಮಾವನ್ನು ಸೇರಿಸಿಕೊಳ್ಳುವುದು ಉತ್ತಮ
  • ರಕ್ತದಲ್ಲಿನ ಸಕ್ಕರೆ ಮಟ್ಟವು ನಿಯಂತ್ರಣದಲ್ಲಿರುತ್ತದೆ
Diabetes ರೋಗಿಗಳಿಗೆ ಭಾರೀ ಪ್ರಯೋಜನಕಾರಿ ಮನೆಯಲ್ಲಿಯೇ  ಮಾಡಬಹುದಾದ ಈ ಖಾದ್ಯ !  title=
ಮಧುಮೇಹ ರೋಗಿಗಳು ಆಹಾರದ ಬಗ್ಗೆ ಗಮನ ಹರಿಸಬೇಕು ((file photo)

ಬೆಂಗಳೂರು : ಮಧುಮೇಹ ಹೊಂದಿದ್ದರೆ, ಉತ್ತಮ ಆಹಾರಕ್ರಮವನ್ನು ಅನುಸರಿಸುವುದು ಮತ್ತು ನಿಯಮಿತವಾಗಿ ವ್ಯಾಯಾಮ ಮಾಡುವುದು ಅತ್ಯಂತ ಮುಖ್ಯವಾಗಿದೆ (Exercise for diabetes). ಮಧುಮೇಹವನ್ನು ನಿಯಂತ್ರಿಸಲು, ಕ್ಯಾಲೋರಿ ಸೇವನೆಯ ಬಗ್ಗೆ ವಿಶೇಷ ಗಮನ ಹರಿಸಬೇಕಾಗುತ್ತದೆ. ಇದಲ್ಲದೇ ಮಧುಮೇಹ ರೋಗಿಗಳು ಸಮಯಕ್ಕೆ ಸರಿಯಾಗಿ ಔಷಧಗಳನ್ನು ತೆಗೆದುಕೊಳ್ಳಬೇಕು ಮತ್ತು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು (blood sugar level)ಕಾಲಕಾಲಕ್ಕೆ ಪರೀಕ್ಷಿಸಬೇಕು. ಉತ್ತಮ ಆಹಾರ ಸೇವನೆಯಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು. ಅವುಗಳಲ್ಲಿ ರಾಜ್ಮಾ ಕೂಡ ಒಂದು. 

ರಾಜ್ಮಾ ತಿನ್ನುವ ಪ್ರಯೋಜನಗಳು :
ರಾಜ್ಮಾ (Rajma) ಫೈಬರ್‌ನ ಸಮೃದ್ಧ ಮೂಲವಾಗಿದೆ. ಇದು ಕಡಿಮೆ ಗ್ಲೈಸೆಮಿಕ್ (Glycemic) ಪ್ರಮಾಣವನ್ನು ಹೊಂದಿರುತ್ತದೆ. ಇದು ರಕ್ತದ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸುತ್ತದೆ. ರಾಜ್ಮಾ ಬರ್ನಿಂಗ್ ಕಾರ್ಬೋಹೈಡ್ರೇಟ್ ಆಗಿದೆ. ಇದು ರಕ್ತದಲ್ಲಿನ ಸಕ್ಕರೆಯ ಮಟ್ಟ ಹೆಚ್ಚಾಗದಂತೆ ತಡೆಯುತ್ತದೆ (Benefits of rajma). ಮಾತ್ರವಲ್ಲ ಇದು ಕೊಲೆಸ್ಟ್ರಾಲ್ ಮಟ್ಟವನ್ನು ಕೂಡಾ ಕಡಿಮೆ ಮಾಡುತ್ತದೆ ಮತ್ತು ಇನ್ಸುಲಿನ್ ಅನ್ನು ಸುಧಾರಿಸುತ್ತದೆ. ಹಾಗಾಗಿ ರಾಜ್ಮಾ ಮಧುಮೇಹ ನಿಯಂತ್ರಣಕ್ಕೆ ಪ್ರಯೋಜನಕಾರಿಯಾಗಿದೆ.  
 
ಇದನ್ನೂ ಓದಿ : ಉತ್ತಮ ನಿದ್ದೆಗೆ ಈ ಸರಳ ವಿಧಾನಗಳನ್ನು ಅನುಸರಿಸಿದರೆ ಸಾಕು ..!

ಆಹಾರದಲ್ಲಿ ರಾಜ್ಮಾವನ್ನು ಹೀಗೆ ಸೇವಿಸಿ : 
ಅನೇಕ ತರಕಾರಿಗಳ ಸೇವನೆಯಿಂದ ದೇಹ ಆ್ಯಂಟಿ -ಆಕ್ಸಿಡೆಂಟ್‌ಗಳನ್ನು ಪಡೆಯುತ್ತದೆ. ರಾಜ್ಮಾ ಸೇವನೆಯಿಂದ ಕ್ಯಾನ್ಸರ್ (Cancer) ಅನ್ನು ತಡೆಯಬಹುದು. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ (Blood Sugar level). ಮೂಳೆಗಳನ್ನು ಬಲಪಡಿಸುತ್ತದೆ ಮತ್ತು ಚರ್ಮಕ್ಕೆ ಒಳ್ಳೆಯದು.

ಇನ್ನ ಊಟದಲ್ಲಿ ರಾಜ್ಮಾ ಮತ್ತು ಅನ್ನದ ಪ್ರಮಾಣ ಸಮಾನವಾಗಿರಲಿ. ಇದರಿಂದ ನಿಮ್ಮ ಆಹಾರವು ಕಡಿಮೆ GI ಅನ್ನು ಹೊಂದಿರುತ್ತದೆ. ಹೀಗಾದಾಗ   ಹೊಟ್ಟೆ ಉಬ್ಬರದ ಅನುಭವವಾಗುವುದಿಲ್ಲ (Rajma benefits). 

 ರಾತ್ರಿಯ ಊಟದಲ್ಲಿ ತಾಜಾ ಸಲಾಡ್ (Salad) ಅನ್ನು ಸೇರಿಸಬೇಕು, ಅದು ನಿಮ್ಮ ಆರೋಗ್ಯವನ್ನು ಸುಧಾರಿಸುತ್ತದೆ.

ರಾಜ್ಮಾವನ್ನು ತಿನ್ನುವ ಮೊದಲು ಚೆನ್ನಾಗಿ ಬೇಯಿಸಬೇಕು ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಿ. ಅವುಗಳನ್ನು ಕಚ್ಚಾ ಅಥವಾ ಅರ್ಧ ಬೇಯಿಸಿದರೆ,  ಅದು ಹಾನಿಕಾರಕವಾಗಿ ಪರಿಣಮಿಸಬಹುದು. 

ಇದನ್ನೂ ಓದಿ :  How To Reduce Belly Fat: ಖಾಲಿ ಹೊಟ್ಟೆಯಲ್ಲಿ ಈ ಟೀ ಕುಡಿಯುವುದರಿಂದ ಕರಗುತ್ತೆ ಬೆಲ್ಲಿ ಫ್ಯಾಟ್!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News