Dark neck: ಕುತ್ತಿಗೆ ಸುತ್ತಲಿನ ಕಪ್ಪನ್ನು ಕ್ಷಣಾರ್ಧದಲ್ಲಿ ಹೋಗಲಾಡಿಸುತ್ತೆ ʼಈʼ ತರಕಾರಿ!!

How to get rid of dark neck: ಧೂಳು, ಬಿಸಿಲು, ಅಥವಾ ಹಾರ್ಮೋನುಗಳ ಬದಲಾವಣೆಯಿಂದ ಕುತ್ತಿಗೆ ಸುತ್ತ ಕಪ್ಪು ಕಲೆ ಉಂಟಾಗುತ್ತದೆ.. ಇದಕ್ಕೆ ಸೂಕ್ತ ಪರಿಹಾರವೊಂದನ್ನು ಇಂದು ನಾವು ಹೇಳಲು ಹೊರಟಿದ್ದೇವೆ.. 

Written by - Savita M B | Last Updated : May 8, 2024, 12:28 PM IST
  • ನಾವೆಲ್ಲರೂ ಮುಖದ ಬಗ್ಗೆ ಕಾಳಜಿ ವಹಿಸುತ್ತೇವೆ.
  • ಆದರೆ ಕತ್ತಿನ ಕಪ್ಪು ಕಲೆಯ ಬಗ್ಗೆ ಯೋಷಿಸುವುದಿಲ್ಲ..
Dark neck: ಕುತ್ತಿಗೆ ಸುತ್ತಲಿನ ಕಪ್ಪನ್ನು ಕ್ಷಣಾರ್ಧದಲ್ಲಿ ಹೋಗಲಾಡಿಸುತ್ತೆ ʼಈʼ ತರಕಾರಿ!!  title=

effective home remedies to get rid off dark neck: ನಾವೆಲ್ಲರೂ ಮುಖದ ಬಗ್ಗೆ ಕಾಳಜಿ ವಹಿಸುತ್ತೇವೆ. ಆದರೆ ಕತ್ತಿನ ಕಪ್ಪು ಕಲೆಯ ಬಗ್ಗೆ ಯೋಷಿಸುವುದಿಲ್ಲ.. ಎಷ್ಟೇ ಕ್ರೀಮ್-ಲೋಷನ್, ಫೇಶಿಯಲ್-ಸ್ಕ್ರಬ್ಬಿಂಗ್ ಮಾಡಿದರೂ ಕಪ್ಪು ಕತ್ತು ಕಾಣಿಸಿಕೊಳ್ಳುತ್ತದೆ. ಕುತ್ತಿಗೆಯನ್ನು ನಿರ್ಲಕ್ಷಿಸುವುದರಿಂದ ಅದು ಕಪ್ಪಾಗಬಹುದು.. ವಿಶೇಷವಾಗಿ ಬೇಸಿಗೆಯಲ್ಲಿ ಈ ಸಮಸ್ಯೆ ಹೆಚ್ಚಾಗುತ್ತದೆ. ಈ ಕಪ್ಪು ಕಲೆಗಳನ್ನು ಹೈಪರ್ಪಿಗ್ಮೆಂಟೇಶನ್ ಎಂದು ಕರೆಯಲಾಗುತ್ತದೆ.

ಹಾರ್ಮೋನ್ ಸಮಸ್ಯೆ, ಕುತ್ತಿಗೆಯ ಮೇಲೆ ಕಪ್ಪು ರೇಖೆಗಳನ್ನು ಉಂಟುಮಾಡುತ್ತದೆ. ಈ ಸಮಸ್ಯೆಯನ್ನು ನಿಭಾಯಿಸಲು ಅನೇಕ ಜನರು ವಿವಿಧ ಮಾರುಕಟ್ಟೆಯ ಸೌಂದರ್ಯವರ್ಧಕಗಳನ್ನು ಬಳಸುತ್ತಾರೆ. ಆದರೆ ಪ್ರತಿಯೊಂದು ರಾಸಾಯನಿಕ ಉತ್ಪನ್ನವು ಅಡ್ಡ ಪರಿಣಾಮಗಳನ್ನು ಹೊಂದಿದೆ ಎಂಬುದನ್ನು ನೆನಪಿಡಿ. ಆದ್ದರಿಂದ ಮನೆಮದ್ದುಗಳನ್ನು ಬಳಸಿ. ಇಂದು ನಾವು ಹೇಳಲಿರುವ ಈ ಮನೆಮದ್ದುಗಳು ಕೇವಲ 7 ದಿನಗಳಲ್ಲಿ ಕುತ್ತಿಗೆಯ ಮೇಲಿನ ಕಪ್ಪು ಕಲೆಗಳನ್ನು ಹೋಗಲಾಡಿಸುತ್ತದೆ.. 

ಇದನ್ನೂ ಓದಿ-Char Dham Yatra : ಅಕ್ಷಯ ತೃತೀಯಕ್ಕೆ ಚಾರ್ ಧಾಮ್ ಗೆ ಭೇಟಿ ನೀಡಿ, ವಿವರಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ

 ಅಲೋವೆರಾ: ಕೆಲವು ಕಿಣ್ವಗಳು ಕುತ್ತಿಗೆಯ ಮೇಲೆ ಕಪ್ಪು ಕಲೆಗಳನ್ನು ಉಂಟುಮಾಡುತ್ತವೆ. ಅದಕ್ಕೆ ಪರಿಹಾರವಾಗಿ ಅಲೋವೆರಾ ಉತ್ತಮ.. ಕುತ್ತಿಗೆಯನ್ನು ಕಪ್ಪಾಗಿಸುವ ಕಿಣ್ವಗಳ ಚಟುವಟಿಕೆಯನ್ನು ಪ್ರತಿಬಂಧಿಸಿ, ಚರ್ಮವನ್ನು ತೇವವಾಗಿಡುತ್ತದೆ. ಅಲೋವೆರಾ ಜೆಲ್ ಅನ್ನು ಕುತ್ತಿಗೆಯ ಕಪ್ಪು ಕಲೆಗಳ ಮೇಲೆ ಹಚ್ಚಿ 20 ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆಯಿರಿ.

ಅಡಿಗೆ ಸೋಡಾ: ಎರಡು ಚಮಚ ಅಡಿಗೆ ಸೋಡಾವನ್ನು ನೀರಿನಲ್ಲಿ ಮಿಶ್ರಣ ಮಾಡಿ. ಕುತ್ತಿಗೆಗೆ ಹಚ್ಚಿಕೊಳ್ಳಿ, ಅದು ಒಣಗಿದಾಗ ಸ್ಕ್ರಬ್ ಮಾಡಿ, ಕುತ್ತಿಗೆಯನ್ನು ತೊಳೆದುಕೊಂಡು ಮಾಯಿಶ್ಚರೈಸರ್ ಬಳಸಿ.. 

ಆಲೂಗೆಡ್ಡೆ ರಸ: ಆಲೂಗಡ್ಡೆ ಬ್ಲೀಚಿಂಗ್ ಗುಣಗಳನ್ನು ಹೊಂದಿದ್ದು ಚರ್ಮದ ಟೋನ್ ಅನ್ನು ಹೆಚ್ಚಿಸುತ್ತದೆ... ಒಂದು ಆಲೂಗಡ್ಡೆಯನ್ನು ತೆಗೆದುಕೊಂಡು ಅದರ ರಸ ತೆಗೆದು ಅದನ್ನು ಹತ್ತಿ ಉಂಡೆಯ ಸಹಾಯದಿಂದ ಕುತ್ತಿಗೆಯ ಮೇಲೆ ಹಚ್ಚಿ, ಅದು ಒಣಗಿದಾಗ ನೀರಿನಿಂದ ತೊಳೆಯಿರಿ.. ಹೀಗೆ ಮಾಡುವುದರಿಂದ ಕಪ್ಪು ಕುತ್ತಿಗೆ ಸಮಸ್ಯೆಯಿಂದ ಸಂಪೂರ್ಣ ಮುಕ್ತಿ ಪಡೆಯಬಹುದು.. 

ಇದನ್ನೂ ಓದಿ-Weight Loss Routine: ಬೇಸಿಗೆಯಲ್ಲಿ ಸಂಜೆ ವೇಳೆ ಈ ಅಭ್ಯಾಸ ರೂಢಿಸಿಕೊಂಡರೆ ಖಂಡಿತ ಕರಗುತ್ತೆ ಬೆಲ್ಲಿ ಫ್ಯಾಟ್

ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಯಾವುದೇ ರೀತಿಯಲ್ಲಿ ಪರ್ಯಾಯವಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು Zee Kannada News ಖಚಿತಪಡಿಸಿಕೊಳ್ಳುವುದಿಲ್ಲ

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News