Palmistry: ಅಂಗೈಯಲ್ಲಿ ಈ ರೇಖೆ ಹೊಂದಿದವರ ಸರ್ಕಾರಿ ನೌಕರಿಯ ಭಾಗ್ಯ ಬಲವಾಗಿರುತ್ತದೆ! ನಿಮ್ಮ ಕೈಯಲ್ಲಿದೆಯಾ?

Palmistry: ಹಸ್ತ ಸಾಮುದ್ರಿಕ ಶಾಸ್ತ್ರದ ಪ್ರಕಾರ ನಮ್ಮ ಅಂಗೈಯಲ್ಲಿರುವ ರೇಖೆಗಳು ನಮ್ಮ ಅದೃಷ್ಟದ ಜೊತೆಗೆ ನಮ್ಮ ವೃತ್ತಿ ಜೀವನದ ಕುರಿತಾದ ಗುಟ್ಟುಗಳನ್ನು ಕೂಡ ಬಹಿರಂಗಪಡಿಸುತ್ತವೆ ಎನ್ನಲಾಗಿದೆ. ಅಂಗೈಯಲ್ಲಿ ಹಾಗೆ ನೋಡಿದರೆ ತುಂಬಾ ರೇಖೆಗಳಿರುತ್ತವೆ. ಹಸ್ತ ರೇಖೆಗಳಿಗೆ ಅನುಗುಣವಾಗಿ ಯಾವ ಕ್ಷೇತ್ರದಲ್ಲಿ ನಮ್ಮ ವೃತ್ತಿ ಜೀವನ ಸಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,  

Written by - Nitin Tabib | Last Updated : Apr 12, 2023, 10:39 PM IST
  • ನಡುವಿನ ಬೆರಳಿನ ಕೆಳಗಿರುತ್ತದೆ ಶನಿ ಪರ್ವತ. ಹಸ್ತ ಸಾಮುದ್ರಿಕ ಶಾಸ್ತ್ರದ ಪ್ರಕಾರ ಯಾವ ವ್ಯಕ್ತಿಯ ಅಂಗೈಯಲ್ಲಿ ಶನಿ ಪರ್ವತ ಮೇಲಕ್ಕೆ ಎದ್ದಿರುವಂತೆ ಕಾಣುತ್ತಿರುತ್ತದೆಯೋ,
  • ಅಂತಹ ಜನರ ಜೀವನ ಅಪಾರ ಸಂಕಷ್ಟಗಳಿಂದ ಕೂಡಿರುತ್ತದೆ. ಈ ಜನರು ಗುತ್ತಿಗೆಯ ಕೆಲಸ ಮಾಡಬಹುದು.
Palmistry: ಅಂಗೈಯಲ್ಲಿ ಈ ರೇಖೆ ಹೊಂದಿದವರ ಸರ್ಕಾರಿ ನೌಕರಿಯ ಭಾಗ್ಯ ಬಲವಾಗಿರುತ್ತದೆ! ನಿಮ್ಮ ಕೈಯಲ್ಲಿದೆಯಾ? title=
ಹಸ್ತ ಸಾಮುದ್ರಿಕ ಶಾಸ್ತ್ರದ ಸಲಹೆಗಳು!

Palmistry: ಕೈಯಲ್ಲಿರುವ ರೇಖೆಗಳು ನಮ್ಮ ಜೀವನದ ಕುರಿತಾದ ಸಾಕಷ್ಟು ರಹಸ್ಯಗಳನ್ನು ಬಹಿರಂಗಪಡಿಸುತ್ತವೆ. ಅವು ನಮ್ಮ ಭಾಗ್ಯದಿಂದ ಹಿಡಿದು ವೃತ್ತಿಜೀವನದವರೆಗೆ ಎಲ್ಲಾ ಸಂಗತಿಗಳನ್ನು ಬಹಿರಂಗಪಡಿಸುತ್ತವೆ. ಯಾವ ವ್ಯಕ್ತಿಯ ಐಶ್ವರ್ಯದಿಂದ ಕೂಡಿರುತ್ತದೆ ಮತ್ತು ಯಾರ ಜೀವನ ಸಂಘರ್ಷಗಳಿಂದ ಕೂಡಿರುತ್ತದೆ ಎಂಬುದನ್ನು ಕೂಡ ಕೈಗಳಲ್ಲಿರುವ ರೇಖೆಗಳು ಹೇಳುತ್ತವೆ. ಇವು ನಮ್ಮ ಸ್ವಭಾವ, ವ್ಯಕ್ತಿತ್ವ ಹಾಗೂ ವ್ಯವಹಾರದ ಕುರಿತಾದ ರಹಸ್ಯಗಳನ್ನು ಕೂಡ ಹೇಳುತ್ತವೆ.

ಸಾಮಾನ್ಯವಾಗಿ ನಮ್ಮ ತೋರ್ಬೆರಳಿನ ಕೆಳಗೆ ಗುರು ಪರ್ವತ ಇರುತ್ತದೆ. ಯಾರ ಕೈಯಲ್ಲಿ ಗುರುಪರ್ವದ ಮೇಲಕ್ಕೆ ಎದ್ದಿರುವಂತೆ ಕಾಣಿಸುತ್ತದೆಯೋ, ಅಂತಹ ಜನರು ಶಿಕ್ಷಣ, ಚಿಕಿತ್ಸೆ, ಮ್ಯಾನೆಜ್ಮೆಂಟ್ ಹಾಗೂ ಸರ್ಕಾರಿ ನೌಕರಿಯನ್ನು ಸೇರುತ್ತಾರೆ ಎನ್ನಲಾಗುತ್ತದೆ.

ನಡುವಿನ ಬೆರಳಿನ ಕೆಳಗಿರುತ್ತದೆ ಶನಿ ಪರ್ವತ. ಹಸ್ತ ಸಾಮುದ್ರಿಕ ಶಾಸ್ತ್ರದ ಪ್ರಕಾರ ಯಾವ ವ್ಯಕ್ತಿಯ ಅಂಗೈಯಲ್ಲಿ ಶನಿ ಪರ್ವತ ಮೇಲಕ್ಕೆ ಎದ್ದಿರುವಂತೆ ಕಾಣುತ್ತಿರುತ್ತದೆಯೋ, ಅಂತಹ ಜನರ ಜೀವನ ಅಪಾರ ಸಂಕಷ್ಟಗಳಿಂದ ಕೂಡಿರುತ್ತದೆ. ಈ ಜನರು ಗುತ್ತಿಗೆಯ ಕೆಲಸ ಮಾಡಬಹುದು.

ಉಂಗುರು ಬೆರಳಿನ ಕೆಳಗೆ ಸೂರ್ಯ ಪರ್ವತವಿರುತ್ತದೆ. ಯಾವ ವ್ಯಕ್ತಿಯ ಅಂಗೈಯಲ್ಲಿ ಸೂರ್ಯ ಹಾಗೂ ಬುಧ ಪರ್ವತ ಮೇಲಕ್ಕೆ ಎದ್ದಂತೆ ಕಾಣುತ್ತದೆಯೋ, ಅಂತಹ ಜನರು ಚಿಕಿತ್ಸಾ ಕ್ಷೇತ್ರದಲ್ಲಿ ತಮ್ಮ ವೃತ್ತಿ ಜೀವನ ಸಾಗಿಸುತ್ತಾರೆ ಮತ್ತು ಇವರು ಅಪಾರ ಗೌರವವನ್ನು ಸಂಪಾದಿಸುತ್ತಾರೆ. 

ಇದನ್ನೂ ಓದಿ-Relationship Tips: ಸಂಗಾತಿ ಜೊತೆಗಿನ ನಿಮ್ಮ ಸಂಬಂಧವನ್ನು ಸುಮಧುರಗೊಳಿಸಬೇಕೇ? ಈ ಸಲಹೆಗಳನ್ನು ಟ್ರೈ ಮಾಡಿ ನೋಡಿ!

ಯಾವ ವ್ಯಕ್ತಿಯ ಕೈಯಲ್ಲಿ ಚಂದ್ರ ಮೇಲಕ್ಕೆ ಎದ್ದಿರುವಂತೆ ಕಾಣುತ್ತದೆಯೋ, ಅಂತಹ ಜನರು ಸಾಹಿತ್ಯ, ಪತ್ರಿಕೋದ್ಯಮ ಹಾಗೂ ಕಲೆಯ ಕ್ಷೇತ್ರದಲ್ಲಿ ಅಪಾರ ಯಶಸ್ಸು ಸಂಪಾದಿಸುತ್ತಾರೆ.

ಇದನ್ನೂ ಓದಿ-Shukra Vargottama 2023: ಒಂದು ವರ್ಷದ ಬಳಿಕ ತನ್ನ ಸ್ವರಾಶಿಯಲ್ಲಿ ವರ್ಗೊತ್ತಮನಾದ ಶುಕ್ರ, ಈ ಜನರಿಗೆ ಆಕಸ್ಮಿಕ ಧನಲಾಭ ಯೋಗ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News