White Hair: ಅಡುಗೆಮನೆಯಲ್ಲಿರುವ ಈ ಕಾಳು ಬಳಸಿ ಬಿಳಿ ಕೂದಲಿನ ಸಮಸ್ಯೆಗೆ ಸಿಗುತ್ತೆ ಪರಿಹಾರ

Mustard Seeds For Premature White Hair: ಇತ್ತೀಚಿನ ಜೀವನಶೈಲಿಯಿಂದಾಗಿ ಚಿಕ್ಕ ವಯಸ್ಸಿನಲ್ಲಿಯೇ ಬಿಳಿ ಕೂದಲಿನ ಸಮಸ್ಯೆ ಸಾಮಾನ್ಯವಾಗಿದೆ.   ಅಂತಹ ಪರಿಸ್ಥಿತಿಯಲ್ಲಿ ನೀವು ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಲು ನಿಮ್ಮ ಅಡುಗೆ ಮನೆಯಲ್ಲಿರುವ ಕೆಲವು ಪದಾರ್ಥಗಳು ಕೂಡ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು.

Written by - Yashaswini V | Last Updated : Jun 30, 2022, 11:55 AM IST
  • ಸಾಸಿವೆ ಕಾಳುಗಳಿಂದ ತೆಗೆದ ಎಣ್ಣೆ ಕೂದಲಿನ ಆರೋಗ್ಯಕ್ಕೆ ಯಾವುದೇ ಔಷಧಿಗಿಂತ ಕಡಿಮೆಯಿಲ್ಲ.
  • ಮೊದಲು ಎಣ್ಣೆಯನ್ನು ಬಿಸಿ ಮಾಡಿ ನಂತರ ಕೂದಲು ಮತ್ತು ನೆತ್ತಿಯ ಮೇಲೆ ಮಸಾಜ್ ಮಾಡಿ.
  • ಇದರಿಂದ ಬೇರುಗಳಲ್ಲಿ ರಕ್ತ ಸಂಚಾರ ಹೆಚ್ಚುತ್ತದೆ ಮತ್ತು ಕೂದಲು ಕ್ರಮೇಣ ಕಪ್ಪಾಗುತ್ತದೆ.
White Hair: ಅಡುಗೆಮನೆಯಲ್ಲಿರುವ ಈ ಕಾಳು ಬಳಸಿ ಬಿಳಿ ಕೂದಲಿನ ಸಮಸ್ಯೆಗೆ ಸಿಗುತ್ತೆ ಪರಿಹಾರ  title=
Natural Remedies For White Hair

ಅಕಾಲಿಕ ಬಿಳಿ ಕೂದಲಿಗೆ ಸಾಸಿವೆ:  ಮಾಲಿನ್ಯ, ವಿಷಕಾರಿ ಪರಿಸರ, ಅನಾರೋಗ್ಯಕರ ಆಹಾರ, ವೇಗವಾಗಿ ಬದಲಾಗುತ್ತಿರುವ ಜೀವನಶೈಲಿ ಮತ್ತು ರಾಸಾಯನಿಕ ಉತ್ಪನ್ನಗಳ ಅತಿಯಾದ ಬಳಕೆಯಿಂದಾಗಿ ಕೂದಲಿಗೆ ಸಾಕಷ್ಟು ಹಾನಿ ಆಗುತ್ತದೆ. ಇದರಿಂದಾಗಿ ಅತಿ ಚಿಕ್ಕ ವಯಸ್ಸಿನಲ್ಲಿ ಕೂದಲು ಅಕಾಲಿಕವಾಗಿ ಬಿಳಿ ಆಗುವ ಸಮಸ್ಯೆಯೂ ಒಂದು. ಕೆಲವರಲ್ಲಿ ಈ ಬಿಳಿ ಕೂದಲಿನ ಸಮಸ್ಯೆಯು ಅವರ ಆತ್ಮವಿಶ್ವಾಸವನ್ನೇ ಕುಗ್ಗಿಸುತ್ತದೆ. ಆದರೆ, ನಿಮ್ಮ ಅಡುಗೆ ಮನೆಯಲ್ಲಿಯೇ ಇರುವ ಕೆಲವು ಪದಾರ್ಥಗಳು ನಿಮ್ಮ ಈ ಸಮಸ್ಯೆಗೆ ಪರಿಹಾರ ನೀಡುತ್ತವೆ. ಅವುಗಳಲ್ಲಿ ಒಂದು ಸಾಸಿವೆ ಕಾಳು.

ಅಕಾಲಿಕ ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಲು ಸಹಕಾರಿ ಸಾಸಿವೆ:
ಅಕಾಲಿಕ ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಲು ಸಾಸಿವೆ ಕಾಳು ಬಹಳ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಏಕೆಂದರೆ ಇದರ ಮೂಲಕ ಕೂದಲು ಬೇರುಗಳಿಂದ ಪೋಷಣೆಯನ್ನು ಪಡೆಯುತ್ತದೆ. ಅಲ್ಲದೆ, ಇದು ಕೂದಲು ಉದುರುವಿಕೆ, ಕೂದಲು ಹಾನಿ ಮತ್ತು ತಲೆಹೊಟ್ಟು ಸಮಸ್ಯೆಗಳನ್ನು ಹೋಗಲಾಡಿಸುತ್ತದೆ. 

ಸಾಮಾನ್ಯವಾಗಿ ಉತ್ತಮ ಆರೋಗ್ಯಕ್ಕೆ ಸಾಸಿವೆ ಎಣ್ಣೆಯನ್ನು ಬಳಸುವಂತೆ ಸಲಹೆ ನೀಡಲಾಗುತ್ತದೆ. ಅದರಂತೆ ಕೂದಲಿನ ಆರೋಗ್ಯಕ್ಕೂ ಇದು ಬಹಳ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಸಾಸಿವೆಯಲ್ಲಿ ವಿಟಮಿನ್ ಎ ಕಂಡುಬರುತ್ತದೆ. ಇದು ನೆತ್ತಿಯನ್ನು ಪೋಷಿಸಲು ಮತ್ತು ಕೂದಲಿನ ಪುನರುತ್ಪಾದನೆ ಮತ್ತು ಕಾಲಜನ್ ಅನ್ನು ಹೆಚ್ಚಿಸಲು ಸಹಾಯ ಮಾಡುವ ಪೋಷಕಾಂಶವಾಗಿದೆ.

ಇದನ್ನೂ ಓದಿ- Weight loss By Garlic: ಬೆಳ್ಳುಳ್ಳಿಯಿಂದಲೂ ತೂಕ ಇಳಿಕೆ ಸಾಧ್ಯ- ಇಲ್ಲಿದೆ ಸರಿಯಾದ ಮಾರ್ಗ

ಇದಲ್ಲದೆ, ಸಾಸಿವೆ ಕಾಳುಗಳಲ್ಲಿ ಪ್ರೋಟೀನ್, ಕ್ಯಾಲ್ಸಿಯಂ, ಒಮೆಗಾ -3 ಮತ್ತು ವಿಟಮಿನ್ ಇ ನಂತಹ ಪ್ರಮುಖ ಪೋಷಕಾಂಶಗಳು ಕಂಡುಬರುತ್ತವೆ. ಕೂದಲನ್ನು ಬಲಪಡಿಸಲು ಮತ್ತು ಅದರಲ್ಲಿ ಕಪ್ಪು ಬಣ್ಣವನ್ನು ಮರಳಿ ತರಲು ಇದು ಕೆಲಸ ಮಾಡುತ್ತದೆ. ವಿಟಮಿನ್ ಇ ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ, ಇದು ನೆತ್ತಿಯಲ್ಲಿ ಸ್ವತಂತ್ರ ರಾಡಿಕಲ್ ಚಟುವಟಿಕೆಯನ್ನು ತಡೆಯುತ್ತದೆ.

ಸಾಸಿವೆ ಕಾಳನ್ನು ಕೂದಲಿಗೆ ಹೇಗೆ ಬಳಸುವುದು?
* ಎಣ್ಣೆಯ ರೂಪದಲ್ಲಿ ಬಳಸಿ:

ಸಾಸಿವೆ ಕಾಳುಗಳಿಂದ ತೆಗೆದ ಎಣ್ಣೆ ಕೂದಲಿನ ಆರೋಗ್ಯಕ್ಕೆ ಯಾವುದೇ ಔಷಧಿಗಿಂತ ಕಡಿಮೆಯಿಲ್ಲ. ಮೊದಲು ಎಣ್ಣೆಯನ್ನು ಬಿಸಿ ಮಾಡಿ ನಂತರ ಕೂದಲು ಮತ್ತು ನೆತ್ತಿಯ ಮೇಲೆ ಮಸಾಜ್ ಮಾಡಿ. ಇದರಿಂದ ಬೇರುಗಳಲ್ಲಿ ರಕ್ತ ಸಂಚಾರ ಹೆಚ್ಚುತ್ತದೆ ಮತ್ತು ಕೂದಲು ಕ್ರಮೇಣ ಕಪ್ಪಾಗುತ್ತದೆ.

ಇದನ್ನೂ ಓದಿ- ಹಾಲಿಗೆ ಒಂದು ಚಿಟಕಿ ಇಂಗು ಹಾಕಿ ಕುಡಿದರೆ ತಕ್ಷಣವೇ ಸಿಗುತ್ತದೆ ಈ ಸಮಸ್ಯೆಗಳಿಂದ ಮುಕ್ತಿ

* ಹೇರ್ ಮಾಸ್ಕ್ ತಯಾರಿಸಿ:
ಮೊದಲಿಗೆ ಸಾಸಿವೆಯನ್ನು ರುಬ್ಬಿಕೊಂಡು ಒಣಗಿಸಿ ಪುಡಿಯನ್ನು ತಯಾರಿಸಿಕೊಳ್ಳಿ. ನಂತರ ಶುದ್ಧವಾದ ಪಾತ್ರೆಯನ್ನು ತೆಗೆದುಕೊಂಡು ಅದರಲ್ಲಿ ಒಂದು ಚಮಚ ಸಾಸಿವೆ ಪುಡಿ ಮತ್ತು ಒಂದು ಮೊಟ್ಟೆಯನ್ನು ಮಿಶ್ರಣ ಮಾಡಿ. ಬಳಿಕ ಇದರಲ್ಲಿ ತೆಂಗಿನ ಎಣ್ಣೆ ಮತ್ತು ಹರಳೆಣ್ಣೆ ಅನ್ನು ಬೆರೆಸಿ ಹೇರ್ ಮಾಸ್ಕ್ ತಯಾರಿಸಿ ಮತ್ತು ಕೂದಲಿನ ಬೇರುಗಳವರೆಗೆ ಹಚ್ಚಿ. ಅಂತಿಮವಾಗಿ ಶಾಂಪೂ ಮತ್ತು ಶುದ್ಧ ನೀರಿನಿಂದ ತಲೆಯನ್ನು ತೊಳೆಯಿರಿ. ಈ ರೀತಿಯಾಗಿ ಸಾಸಿವೆ ಕಾಳುಗಳನ್ನು ಬಳಸಿ ಬಿಳಿ ಕೂದಲನ್ನು ಸೈಸರ್ಗಿಕವಾಗಿ ಕಪ್ಪಾಗಿಸಬಹುದು.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ  ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News