Skin Care: ಮೊಸರಿನ ಜೊತೆ ಈ ಪುಡಿಯನ್ನು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿದರೆ ಕೇವಲ 4 ದಿನದಲ್ಲಿ ಬೆಳ್ಳಗಾಗುವುದು ತ್ವಚೆ!

Green Tea and Curd Face Pack: ಗ್ರೀನ್ ಟೀ ಮತ್ತು ಮೊಸರು ಫೇಸ್ ಪ್ಯಾಕ್ ಅನ್ನು ಹಚ್ಚುವುದರಿಂದ ಮುಖದ ಮೇಲಿನ ಸಮಸ್ಯೆಗಳನ್ನು ಶೀಘ್ರವೇ ನಿವಾರಿಸಬಹುದು. ಈ ಪ್ಯಾಕ್ ಅನ್ನು ಹೇಗೆ ತಯಾರಿಸಬಹುದು ಮತ್ತು ಅದರ ಪ್ರಯೋಜನಗಳೇನು ಎಂಬುದನ್ನು ನಾವಿಂದು ತಿಳಿಸಲಿದ್ದೇವೆ.

Written by - Bhavishya Shetty | Last Updated : Apr 7, 2023, 12:38 AM IST
    • ಗ್ರೀನ್ ಟೀ ಮತ್ತು ಮೊಸರು ಸೇವನೆಯಿಂದ ಜೀರ್ಣಕ್ರಿಯೆ ಉತ್ತಮವಾಗಿರುತ್ತದೆ.
    • ಇವೆರಡರ ಫೇಸ್ ಪ್ಯಾಕ್ ಅನ್ನು ಹಚ್ಚುವುದರಿಂದ ಮುಖದ ಮೇಲಿನ ಸಮಸ್ಯೆಗಳನ್ನು ಶೀಘ್ರವೇ ನಿವಾರಿಸಬಹುದು
    • ಗ್ರೀನ್ ಟೀ ಮತ್ತು ಮೊಸರಿನ ಫೇಸ್ ಮಾಸ್ಕ್‌ ಚರ್ಮದಲ್ಲಿನ ಅಕಾಲಿಕ ಸುಕ್ಕುಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ
Skin Care: ಮೊಸರಿನ ಜೊತೆ ಈ ಪುಡಿಯನ್ನು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿದರೆ ಕೇವಲ 4 ದಿನದಲ್ಲಿ ಬೆಳ್ಳಗಾಗುವುದು ತ್ವಚೆ! title=
Face Mask

Green Tea and Curd Face Pack: ಗ್ರೀನ್ ಟೀಯ ಪ್ರಯೋಜನಗಳನ್ನು ನೀವು ಕೇಳಿರಬಹುದು. ಗ್ರೀನ್ ಟೀ ಮತ್ತು ಮೊಸರು ಸೇವನೆಯಿಂದ ಜೀರ್ಣಕ್ರಿಯೆ ಉತ್ತಮವಾಗಿರುತ್ತದೆ. ಇದರೊಂದಿಗೆ, ನಿಮ್ಮ ಮೆಟಾಬಾಲಿಸಮ್ ಕೂಡ ಹೆಚ್ಚಾಗುತ್ತದೆ. ಚಯಾಪಚಯ ಪ್ರಕ್ರಿಯೆಯನ್ನು ಸುಧಾರಿಸುವ ಮೂಲಕ, ಶಕ್ತಿ ವೃದ್ಧಿಸಲು ಸಹಾಯ ಮಾಡುತ್ತದೆ. ವಿಟಮಿನ್ ಬಿ, ಕೆ, ಸಿ, ಫೋಲಿಕ್ ಆಮ್ಲವು ಗ್ರೀನ್ ಟೀನಲ್ಲಿ ಕಂಡುಬರುತ್ತದೆ. ಇನ್ನು ಮೊಸರಿನಲ್ಲಿ ಲ್ಯಾಕ್ಟಿಕ್ ಆಮ್ಲದ ಪ್ರಮಾಣವು ಹೆಚ್ಚು. ಇವೆರಡೂ ನಿಮ್ಮ ಆರೋಗ್ಯದ ಜೊತೆಗೆ ನಿಮ್ಮ ತ್ವಚೆಯನ್ನು ಹೊಳೆಯುವಂತೆ ಮಾಡುತ್ತದೆ.

ಇದನ್ನೂ ಓದಿ: Good Signs: ಈ ಶುಭ ಸಂಕೇತಗಳು ಶನಿದೇವನ ಕೃಪೆಯಿದೆ ಎಂಬುದರ ಸೂಚಕ: ದಿಢೀರ್ ಧನಪ್ರಾಪ್ತಿಗೈಯುವನು ಛಾಯಾಪುತ್ರ!

ಇವೆರಡರ ಫೇಸ್ ಪ್ಯಾಕ್ ಅನ್ನು ಹಚ್ಚುವುದರಿಂದ ಮುಖದ ಮೇಲಿನ ಸಮಸ್ಯೆಗಳನ್ನು ಶೀಘ್ರವೇ ನಿವಾರಿಸಬಹುದು. ಇನ್ನೊಂದೆಡೆ ಮೈಬಣ್ಣವೂ ಸುಧಾರಿಸುತ್ತದೆ. ಈ ಪ್ಯಾಕ್ ಅನ್ನು ಹೇಗೆ ತಯಾರಿಸಬಹುದು ಮತ್ತು ಅದರ ಪ್ರಯೋಜನಗಳೇನು ಎಂಬುದನ್ನು ನಾವಿಂದು ತಿಳಿಸಲಿದ್ದೇವೆ.

ಗ್ರೀನ್ ಟೀ ಮತ್ತು ಮೊಸರಿನ ಫೇಸ್ ಮಾಸ್ಕ್ ಪ್ರಯೋಜನಗಳು-

ಸುಕ್ಕುಗಳ ಸಮಸ್ಯೆ ದೂರವಾಗುತ್ತದೆ:

ಗ್ರೀನ್ ಟೀ ಮತ್ತು ಮೊಸರಿನ ಫೇಸ್ ಮಾಸ್ಕ್‌’ನಲ್ಲಿರುವ ಕೆಲ ಗುಣಲಕ್ಷಣಗಳು ಚರ್ಮದಲ್ಲಿನ ಅಕಾಲಿಕ ಸುಕ್ಕುಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಸೂರ್ಯನ ಬೆಳಕು ಮತ್ತು ಮಾಲಿನ್ಯದಿಂದಾಗಿ ಚರ್ಮದ ಮೇಲೆ ರೂಪುಗೊಂಡ ಸೂಕ್ಷ್ಮ ರೇಖೆಗಳನ್ನು ಸಹ ತೊಡೆದುಹಾಕಲು ಗ್ರೀನ್ ಟೀ ಮತ್ತು ಮೊಸರಿನ ಮಾಸ್ಕ್ ಅನ್ನು ಬಳಸಬಹುದು.

ಟ್ಯಾನಿಂಗ್ ಸಮಸ್ಯೆ ದೂರವಾಗುತ್ತದೆ:

ಗ್ರೀನ್ ಟೀ ಮತ್ತು ಮೊಸರಿನ ಫೇಸ್ ಮಾಸ್ಕ್‌ ಮೂಲಕ ನೀವು ಟ್ಯಾನಿಂಗ್ ಸಮಸ್ಯೆಯನ್ನು ನಿವಾರಿಸಬಹುದು. ಇದರಲ್ಲಿರುವ ಗುಣಲಕ್ಷಣಗಳು ಯುವಿ ಕಿರಣಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ಅಲ್ಲದೆ, ಯುವಿ ಕಿರಣಗಳಿಂದ ಉಂಟಾಗುವ ಟ್ಯಾನ್ ಅನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ.

ಇದನ್ನೂ ಓದಿ: IPL ಮಧ್ಯೆಯೇ ಟೀಂ ಇಂಡಿಯಾದ ಈ ಸ್ಫೋಟಕ ಆರಂಭಿಕ ಆಟಗಾರ ಮೇಲೆ ಕೇಸು ದಾಖಲು!

ಮೊಡವೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ:

ಗ್ರೀನ್ ಟೀ ಮತ್ತು ಮೊಸರಿನ ಫೇಸ್ ಮಾಸ್ಕ್ ಮೂಲಕ ನೀವು ಮೊಡವೆ ಸಮಸ್ಯೆಯನ್ನು ಸುಲಭವಾಗಿ ನಿವಾರಿಸಬಹುದು. ಈ ಪ್ಯಾಕ್ ಬಳಸುವುದರಿಂದ ಮುಖದ ಮೇಲಿನ ಮೊಡವೆ ಸಮಸ್ಯೆ ದೂರವಾಗುತ್ತದೆ.

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News