ದಿನ ನಿತ್ಯ ಈ ಎಲೆಯನ್ನು ತಿಂದರೆ ಕೇವಲ 8 ದಿನಗಳಲ್ಲಿ ನಿಯಂತ್ರಣಕ್ಕೆ ಬರುತ್ತದೆ ಬ್ಲಡ್ ಶುಗರ್

ಮಾವಿನ ಎಲೆಗಳಲ್ಲಿ ಮಧುಮೇಹವನ್ನು ನಿಯಂತ್ರಿಸಲು ಸಹಾಯ ಮಾಡುವ ಅಂಶಗಳಿವೆ. ವಿವಿಧ ಅಧ್ಯಯನಗಳಲ್ಲಿ ಕೂಡಾ ಮಾವಿನ ಎಲೆಗಳ ಪ್ರಯೋಜನಗಳು ಸಾಬೀತಾಗಿದೆ. 

Written by - Ranjitha R K | Last Updated : Mar 26, 2022, 10:45 AM IST
  • ಮಧುಮೇಹ ಇಂದು ಲಕ್ಷಾಂತರ ಜನರನ್ನು ಬಾಧಿಸುತ್ತಿದೆ
  • ಮಧುಮೇಹ ಇದ್ದಾಗ ಆಹಾರದ ಬಗ್ಗೆ ಹೆಚ್ಚಿನ ಕ್ಲಾಳಜಿ ಅಗತ್ಯ.
  • ಮನೆ ಮದ್ದುಗಳ ಮೂಲಕವೇ ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಿಸಬಹುದು
ದಿನ ನಿತ್ಯ ಈ ಎಲೆಯನ್ನು ತಿಂದರೆ ಕೇವಲ 8 ದಿನಗಳಲ್ಲಿ ನಿಯಂತ್ರಣಕ್ಕೆ ಬರುತ್ತದೆ ಬ್ಲಡ್ ಶುಗರ್ title=
ಮಧುಮೇಹ ಇಂದು ಲಕ್ಷಾಂತರ ಜನರನ್ನು ಬಾಧಿಸುತ್ತಿದೆ (file photo)

ಬೆಂಗಳೂರು : ಮಧುಮೇಹ ಇಂದು ಲಕ್ಷಾಂತರ ಜನರನ್ನು ಬಾಧಿಸುತ್ತಿದೆ. ಮಧುಮೇಹ ಇದ್ದಾಗ ಆಹಾರದ ಬಗ್ಗೆ ಹೆಚ್ಚಿನ ಕಾಳಜಿ ಅಗತ್ಯ (Diabetec Diet).  ರಕ್ತದಲ್ಲಿನ ಸಕ್ಕರೆಯ ಪ್ರಮಾಣ  ಏರಿಳಿತವಾಗದ ರೀತಿಯಲ್ಲಿ ಆಹಾರವನ್ನು ಸೇವಿಸಬೇಕಾಗುತ್ತದೆ (Blood Sugar Level). ಕೆಲವೊಂದು ಮನೆ ಮದ್ದುಗಳ ಮೂಲಕವೇ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾಗದಂತೆ ನೋಡಿಕೊಳ್ಳಬಹುದು.  ಮಧುಮೇಹವನ್ನು ನಿಯಂತ್ರಿಸುವ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವ ಒಂದು ಪರಿಹಾರವೆಂದರೆ ಮಾವಿನ ಎಲೆಗಳು (Mango leaf benefits).

ಮಾವಿನ ಎಲೆಗಳಲ್ಲಿ ಮಧುಮೇಹವನ್ನು ನಿಯಂತ್ರಿಸಲು ಸಹಾಯ ಮಾಡುವ ಅಂಶಗಳಿವೆ. ವಿವಿಧ ಅಧ್ಯಯನಗಳಲ್ಲಿ ಕೂಡಾ ಮಾವಿನ ಎಲೆಗಳ ಪ್ರಯೋಜನಗಳು ಸಾಬೀತಾಗಿದೆ (Mango leaf benefits). 

ಮಧುಮೇಹಕ್ಕೆ ಮಾವಿನ ಎಲೆಗಳು :
ಮಾವಿನ ಎಲೆಯ ರಸದಲ್ಲಿ (ಮ್ಯಾಂಗಿಫೆರಿನ್) ಎನ್ಜಯಿಂ ಆಲ್ಫಾ ಗ್ಲುಕೋಸಿಡೇಸ್ ಅನ್ನು ಪ್ರತಿಬಂಧಿಸುವ ಸಾಮರ್ಥ್ಯವಿದೆ. ಇದು ಕಾರ್ಬೋಹೈಡ್ರೇಟ್ ಚಯಾಪಚಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಕಾರಣದಿಂದಾಗಿ  ರಕ್ತದಲ್ಲಿನ ಸಕ್ಕರೆ ಮಟ್ಟವನ್ನು (Blood sugar) ಕಡಿಮೆಯಾಗುತ್ತದೆ. ಮಾವಿನ ಎಲೆಯ ಸಾರದ ನಿಖರವಾದ ಪ್ರಮಾಣವನ್ನು ನಿರ್ಧರಿಸಲು ಹೆಚ್ಚಿನ ಸಂಶೋಧನೆ ಅಗತ್ಯವಿದೆ  ಎನ್ನಲಾಗಿದೆ.

ಇದನ್ನೂ ಓದಿ : Coconut Oil Benefits: ಹೊಳೆಯುವ ತ್ವಚೆಗಾಗಿ ರಾತ್ರಿ ಮಲಗುವ ಮುನ್ನ ಈ ಎಣ್ಣೆ ಹಚ್ಚಿ ನೋಡಿ...

ಮಾವಿನ ಎಲೆಗಳು ಇನ್ಸುಲಿನ್ ಉತ್ಪಾದನೆ ಮತ್ತು ಗ್ಲೂಕೋಸ್ ವಿತರಣೆಯನ್ನು ಸುಧಾರಿಸುವ ಸಾಮರ್ಥ್ಯವನ್ನು ಹೊಂದಿವೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸಲು ಸಹಾಯ ಮಾಡಬಹುದು (Benefits of mango leaf). ಮಾವಿನ ಎಲೆಗಳಲ್ಲಿ ಪೆಕ್ಟಿನ್, ವಿಟಮಿನ್ ಸಿ ಮತ್ತು ಫೈಬರ್ ಕೂಡ ಸಮೃದ್ಧವಾಗಿದೆ.  ಇದು ಮಧುಮೇಹ ಮತ್ತು ಕೊಲೆಸ್ಟ್ರಾಲ್ ಎರಡರ ನಿಯಂತ್ರಣಕ್ಕೂ ಪ್ರಯೋಜನಕಾರಿ.

ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಮಾವಿನ ಎಲೆಗಳನ್ನು ಹೇಗೆ ಬಳಸುವುದು?
ಮಧುಮೇಹಕ್ಕೆ (Diabetes) ಮಾವಿನ ಎಲೆಗಳನ್ನು ಬಳಸಲು ನೀವು ತುಂಬಾ ಸರಳವಾದ ವಿಧಾನವನ್ನು ಅನುಸರಿಸಬೇಕು. ನೀವು ಮಾಡಬೇಕಾಗಿರುವುದು 10-15 ಮಾವಿನ ಎಲೆಗಳನ್ನು ತೆಗೆದುಕೊಂಡು ನೀರಿನಲ್ಲಿ ಚೆನ್ನಾಗಿ ಕುದಿಸಿ. ಎಲೆಗಳನ್ನು ಚೆನ್ನಾಗಿ ಕುದಿಸಿದ ನಂತರ, ರಾತ್ರಿಯಿಡೀ ಹಾಗೆಯೇ ಬಿಡಿ. ಬೆಳಿಗ್ಗೆ  ಈ ಕುದಿಸಿದ ನೀರನ್ನು ಫಿಲ್ಟರ್ ಮಾಡಿ ಮತ್ತು ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಪ್ರತಿದಿನ ಬೆಳಿಗ್ಗೆ ನಿಯಮಿತವಾಗಿ ಕುಡಿಯುವುದರಿಂದ ನಿಮ್ಮ ರಕ್ತದಲ್ಲಿನ ಸಕ್ಕರೆಯ ಪ್ರಮಾಣ ಕಡಿಮೆಯಾಗುತ್ತದೆ. 

ಇದನ್ನೂ ಓದಿ : Health Tips: ಕಾಲಕ್ಕೆ ತಕ್ಕಂತೆ ನಿಮ್ಮ ಜೀವನಶೈಲಿಯೂ ಬದಲಾಗಲಿ

 

(ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು  ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು ಅಳವಡಿಸಿಕೊಳ್ಳುವ ಮೊದಲು ತಜ್ಞರ ಅಭಿಪ್ರಾಯವನ್ನು ಪಡೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.) 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News