Towel Using Mistakes: ಸ್ನಾನದ ಬಳಿಕ ದೇಹಕ್ಕೆ ಟವೆಲ್ ಸುತ್ತಿದರೆ ಅಪಾಯ ಖಂಡಿತ: ಇಂತಹ ರೋಗ ಹರಡಬಹುದು!

Wrapping Towel Around The Body:  ಇನ್ನು ಟವೆಲ್ ನ್ನು ಕೂದಲು ಮತ್ತು ದೇಹವನ್ನು ಒರೆಸಲು ಬಳಸಲಾಗುತ್ತದೆ. ಆದರೆ ಟವೆಲ್‌ಗಳನ್ನು ದೇಹಕ್ಕೆ ಸುತ್ತುವುದು ಅಪಾಯಕಾರಿ ಎಂದು ನಿಮಗೆ ತಿಳಿದಿದೆಯೇ? ಅದಕ್ಕಾಗಿಯೇ ಅವುಗಳನ್ನು ಎಚ್ಚರಿಕೆಯಿಂದ ಬಳಸಲು ಸಲಹೆ ನೀಡಲಾಗುತ್ತದೆ.

Written by - Bhavishya Shetty | Last Updated : Dec 7, 2022, 03:58 PM IST
    • ದೇಹದ ಶುಚಿತ್ವಕ್ಕಾಗಿ ದಿನ ನಿತ್ಯದ ಸ್ನಾನ ಮಾಡುವುದು ತುಂಬಾ ಮುಖ್ಯ
    • ಸ್ನಾನದ ಸಮಯದಲ್ಲಿ ನಮಗೆ ಪ್ರಮುಖವಾಗಿ ಬೇಕಾಗಿರುವುದು ಟವೆಲ್
    • ಟವೆಲ್ ನ್ನು ಕೂದಲು ಮತ್ತು ದೇಹವನ್ನು ಒರೆಸಲು ಬಳಸಲಾಗುತ್ತದೆ
Towel Using Mistakes: ಸ್ನಾನದ ಬಳಿಕ ದೇಹಕ್ಕೆ ಟವೆಲ್ ಸುತ್ತಿದರೆ ಅಪಾಯ ಖಂಡಿತ: ಇಂತಹ ರೋಗ ಹರಡಬಹುದು!  title=
Bathing tips

Wrapping Towel Around The Body: ದೇಹದ ಶುಚಿತ್ವಕ್ಕಾಗಿ ದಿನ ನಿತ್ಯದ ಸ್ನಾನ ಮಾಡುವುದು ತುಂಬಾ ಮುಖ್ಯವಾಗಿದೆ. ಇದರಿಂದಾಗಿ ಸಂಪೂರ್ಣ ಶುಚಿತ್ವವನ್ನು ಕಾಪಾಡಿಕೊಳ್ಳಬಹುದು. ಜೊತೆಗೆ ವ್ಯಕ್ತಿಯು ತಾಜಾತನವನ್ನು ಅನುಭವಿಸುತ್ತಾನೆ. ಅನೇಕ ರೋಗಗಳ ಅಪಾಯವನ್ನು ಸಹ ತಪ್ಪಿಸಬಹುದು. ಸ್ನಾನದ ಸಮಯದಲ್ಲಿ ನಮಗೆ ಪ್ರಮುಖವಾಗಿ ಬೇಕಾಗಿರುವುದು ಟವೆಲ್. ಅದನ್ನು ನಾವು ನಮ್ಮ ಸ್ನಾನಗೃಹದಲ್ಲಿ ಇಟ್ಟುಕೊಳ್ಳುತ್ತೇವೆ. ಸ್ನಾನದ ನಂತರ ಬಳಸುತ್ತೇವೆ.

ಇನ್ನು ಟವೆಲ್ ನ್ನು ಕೂದಲು ಮತ್ತು ದೇಹವನ್ನು ಒರೆಸಲು ಬಳಸಲಾಗುತ್ತದೆ. ಆದರೆ ಟವೆಲ್‌ಗಳನ್ನು ದೇಹಕ್ಕೆ ಸುತ್ತುವುದು ಅಪಾಯಕಾರಿ ಎಂದು ನಿಮಗೆ ತಿಳಿದಿದೆಯೇ? ಅದಕ್ಕಾಗಿಯೇ ಅವುಗಳನ್ನು ಎಚ್ಚರಿಕೆಯಿಂದ ಬಳಸಲು ಸಲಹೆ ನೀಡಲಾಗುತ್ತದೆ.

ಇದನ್ನೂ ಓದಿ: Ashubh Yog : ಈ ಯೋಗದಲ್ಲಿ ಹುಟ್ಟಿದವರ ಕೈಯಲ್ಲಿ ನಿಲ್ಲುವುದಿಲ್ಲ ಹಣ : ಅದಕ್ಕೆ ಇಲ್ಲಿದೆ ಪರಿಹಾರ

ಟವೆಲ್ ಅನ್ನು ಸರಿಯಾಗಿ ಬಳಸಿ:

ಟವೆಲ್ ಅನ್ನು ಸರಿಯಾಗಿ ಬಳಸದಿದ್ದರೆ ಅದು ಆರೋಗ್ಯಕ್ಕೆ ಅಪಾಯಕಾರಿ. ಸ್ನಾನದ ನಂತರ ದೇಹ ಅಥವಾ ಕೂದಲಿಗೆ ಟವೆಲ್ ಸುತ್ತಿಕೊಳ್ಳುವುದು ಸ್ವಲ್ಪ ಅಪಾಯಕಾರಿ ಎಂದು ಹಲವಾರು ಸಂಶೋಧನೆಗಳಲ್ಲಿ ಸಾಬೀತಾಗಿದೆ. ಏಕೆಂದರೆ ಅದರಲ್ಲಿ ತುಂಬಾ ಅಪಾಯಕಾರಿ ಬ್ಯಾಕ್ಟೀರಿಯಾಗಳು ಇರುತ್ತವೆ.

ಸಾಮಾನ್ಯವಾಗಿ, ನಾವು ಟವೆಲ್‌ಗಳನ್ನು ಬಳಸುವುದರಲ್ಲಿ ನಿರ್ಲಕ್ಷ್ಯ ವಹಿಸುತ್ತೇವೆ. ಏಕೆಂದರೆ ಅವುಗಳನ್ನು ಇತರ ಬಟ್ಟೆಗಳಂತೆ ಪದೇ ಪದೇ ತೊಳೆಯುವುದಿಲ್ಲ. ಇದರಿಂದಾಗಿ ಸೂಕ್ಷ್ಮಾಣುಗಳು ಅದರಲ್ಲಿ ಸಂಗ್ರಹಗೊಳ್ಳಲು ಪ್ರಾರಂಭಿಸುತ್ತವೆ. ಇದು ಅನೇಕ ರೋಗಗಳನ್ನು ಹರಡುತ್ತದೆ. ಆರೋಗ್ಯ ತಜ್ಞರ ಪ್ರಕಾರ, ಇದು ಅತಿಸಾರ ಮತ್ತು ಫುಡ್ ಪಾಯಿಸನ್ ನಂತಹ ಕಾಯಿಲೆಗಳಿಗೆ ಕಾರಣವಾಗಬಹುದು.

ನೀವು ಸ್ನಾನ ಮಾಡುವಾಗಲೆಲ್ಲಾ ದೇಹವನ್ನು ಒರೆಸಿದ ನಂತರ ಟವೆಲ್ ಒದ್ದೆಯಾಗುತ್ತದೆ ಮತ್ತು ತೇವಾಂಶವು ದೀರ್ಘಕಾಲ ಉಳಿಯುತ್ತದೆ. ಇದು ಬ್ಯಾಕ್ಟೀರಿಯಾ ಬೆಳೆಯಲು ತುಂಬಾ ಅನುಕೂಲಕರ ವಾತಾವರಣವಾಗಿದೆ. ಈಗ ನೀವು ಮುಂದಿನ ಬಾರಿ ಅದೇ ಟವೆಲ್ ಅನ್ನು ಬಳಸಿದಾಗ ಈ ಸೂಕ್ಷ್ಮಜೀವಿಗಳು ನಿಮ್ಮ ದೇಹವನ್ನು ಪ್ರವೇಶಿಸಿ ರೋಗಗಳನ್ನು ಹರಡುತ್ತವೆ.

ನೀವು ಟವೆಲ್ ಮೂಲಕ ಹರಡುವ ರೋಗಗಳನ್ನು ತಪ್ಪಿಸಲು ಬಯಸಿದರೆ, ಅದನ್ನು ವಾರಕ್ಕೊಮ್ಮೆ ತೊಳೆಯಬೇಕು. ಹೀಗೆ ಮಾಡಿದಲ್ಲಿ ಅದು ಅಪಾಯಕಾರಿ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ. ಇದಲ್ಲದೇ ಪ್ರತಿ ಬಾರಿ ಸ್ನಾನದ ನಂತರ ಟವೆಲ್ ನಿಂದ ಒರೆಸಿದಾಗ ತಕ್ಷಣ ಅದನ್ನು ತಂತಿಯ ಮೇಲೆ ಹರಡಿ ಬಿಸಿಲಿನಲ್ಲಿ ಒಣಗಿಸಿ, ಹೀಗೆ ಮಾಡುವುದರಿಂದ ಟವೆಲ್ ನಲ್ಲಿ ತೇವಾಂಶ ಉಳಿಯುವುದಿಲ್ಲ ಮತ್ತು ರೋಗಾಣುಗಳು ಉತ್ಪತ್ತಿಯಾಗುವುದಿಲ್ಲ.

ಇದನ್ನೂ ಓದಿ: Hair Care: ನಿಮಗೂ ಬಾಲಿವುಡ್ ನಟಿ ರೇಖಾರಂತಹ ಕೂದಲುಗಳು ಬೇಕೆ, ಈ ಮನೆಮದ್ದು ಬಳಸಿ

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News