Horoscope Today: ಈ ರಾಶಿಯವರಿಗೆ ಉತ್ತಮ ಅವಕಾಶಗಳು ಸಿಗಲಿದೆ

ಇಂದಿನ ರಾಶಿ ಭವಿಷ್ಯ: ಮೇಷ, ಕನ್ಯಾ, ವೃಶ್ಚಿಕ, ಧನು ಮತ್ತು ಕುಂಭ ರಾಶಿಯ ಜನರು ಕೆಲಸದ ಬಗ್ಗೆ ಜಾಗರೂಕರಾಗಿರಬೇಕು. ಹಲವರಿಗೆ ಭವಿಷ್ಯದಲ್ಲಿ ಉತ್ತಮ ಅವಕಾಶಗಳು ಸಿಗಲಿವೆ. ಶನಿವಾರದ ನಿಮ್ಮ ರಾಶಿಭವಿಷ್ಯ ಹೇಗಿದೆ ಎಂದು ತಿಳಿಯಿರಿ.

Written by - Zee Kannada News Desk | Last Updated : Jul 9, 2022, 05:59 AM IST
  • ಮೇಷ ರಾಶಿಯ ಜನರಿಗೆ ಭವಿಷ್ಯದಲ್ಲಿ ಉತ್ತಮ ಅವಕಾಶಗಳು ಸಿಗಲಿವೆ
  • ಸಿಂಹ ರಾಶಿಯ ವ್ಯಾಪಾರಿಗಳಿಗೆ ಭವಿಷ್ಯದಲ್ಲಿ ದೊಡ್ಡ ಲಾಭವಾಗಲಿದೆ
  • ತುಲಾ ರಾಶಿಯವರಿಗೆ ವಿದೇಶದಲ್ಲಿ ಉದ್ಯೋಗ ದೊರೆಯುವ ಸಾಧ್ಯತೆ ಇದೆ
Horoscope Today: ಈ ರಾಶಿಯವರಿಗೆ ಉತ್ತಮ ಅವಕಾಶಗಳು ಸಿಗಲಿದೆ title=
Horoscope Today (09-07-2022)

Horoscope Today (09-07-2022): ಶನಿವಾರ ವೃಷಭ ಮತ್ತು ಮಿಥುನ ರಾಶಿಯವರಿಗೆ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ಮತ್ತೊಂದೆಡೆ ಮೇಷ ರಾಶಿಯ ಉದ್ಯಮಿಗಳು ತಮ್ಮ ಕೆಲಸದಲ್ಲಿ ಸಣ್ಣ ಬದಲಾವಣೆ ಮಾಡಬೇಕು, ಇದು ಅವರಿಗೆ ಲಾಭ ಗಳಿಸಲು ಸುಲಭವಾಗುತ್ತದೆ. ತುಲಾ ರಾಶಿಯವರಿಗೆ ವಿದೇಶದಲ್ಲಿ ಉದ್ಯೋಗ ಸಿಗುವ ಸಾಧ್ಯತೆ ಇದೆ. ಶನಿವಾರದ ನಿಮ್ಮ ರಾಶಿಭವಿಷ್ಯ ಹೇಗಿದೆ ಎಂದು ತಿಳಿದುಕೊಳ್ಳಿರಿ.

ಮೇಷ ರಾಶಿ: ಈ ರಾಶಿಯ ಜನರು ತಮ್ಮ ಕೆಲಸ ಮಾಡುವಲ್ಲಿ ಯಾವುದೇ ಆಲಸ್ಯ ವಹಿಸಬಾರದು. ಭವಿಷ್ಯದಲ್ಲಿ ಅನೇಕ ಅವಕಾಶಗಳು ಸಿಗಲಿವೆ. ಉದ್ಯಮಿಗಳು ಸಣ್ಣ ಬದಲಾವಣೆಗಳನ್ನು ಮಾಡಬೇಕು. ವ್ಯವಹಾರದಲ್ಲಿ ಲಾಭವನ್ನು ಗಳಿಸುತ್ತಾರೆ. ಯುವಕರು ತಮ್ಮ ಕೋಪವನ್ನು ನಿಯಂತ್ರಿಸಬೇಕು. ಮನೆಯಲ್ಲಿ ಏನಾದರೂ ಸಿಹಿ ಮಾಡಿ ಭಗವಂತನಿಗೆ ಅರ್ಪಿಸಿ ಮತ್ತು ಇತರರಿಗೂ ಹಂಚಿರಿರಿ.

ವೃಷಭ ರಾಶಿ: ವೃಷಭ ರಾಶಿಯ ಜನರು ಬಾಕಿ ಉಳಿದಿರುವ ಕೆಲಸಗಳನ್ನು ಪೂರ್ಣಗೊಳಿಸಬೇಕಾಗುತ್ತದೆ. ವ್ಯವಹಾರವನ್ನು ಸರಿಯಾಗಿ ನಿರ್ವಹಿಸಲು ಯೋಜನೆ ರೂಪಿಸಬೇಕು. ಯೋಜನಾಬದ್ಧವಾಗಿ ಕೆಲಸ ಮಾಡಿದರೆ ಸಮಸ್ಯೆಯೂ ಕಡಿಮೆಯಾಗುತ್ತದೆ. ಯುವಕರು ಸ್ಪರ್ಧೆಯಲ್ಲಿ ಯಶಸ್ಸನ್ನು ಪಡೆಯುವ ಸಾಧ್ಯತೆಯಿದೆ, ಆದ್ದರಿಂದ ಅವರು ಕಠಿಣ ಪರಿಶ್ರಮದಿಂದ ತೊಡಗಿಸಿಕೊಳ್ಳಬೇಕು. ಬಡವರಿಗೆ ಸಹಾಯ ಮಾಡಲು ನೀವು ಸಿದ್ಧರಾಗಿರಬೇಕು.

ಮಿಥುನ ರಾಶಿ: ಈ ರಾಶಿಯ ಜನರು ತಮ್ಮ ಉನ್ನತ ಅಧಿಕಾರಿಗಳನ್ನು ಸಂತೋಷದಿಂದ ಇರಿಸಿಕೊಳ್ಳಬೇಕಾಗುತ್ತದೆ. ಸರ್ಕಾರಿ ಉದ್ಯೋಗಗಳಿಗೆ ತಯಾರಿ ನಡೆಸುತ್ತಿರುವವರು ಪ್ರಯತ್ನ ಮುಂದುವರೆಸಬೇಕು. ಹಣದ ವಿಷಯದಲ್ಲಿ ಯಾರನ್ನಾದರೂ ಹೆಚ್ಚು ಅವಲಂಬಿಸುವುದು ಮಾರಕವಾಗಬಹುದು. ಸಾಲದ ವ್ಯವಹಾರವನ್ನು ತಪ್ಪಿಸಬೇಕು.

ಕರ್ಕ ರಾಶಿ: ಕರ್ಕಾಟಕ ರಾಶಿಯ ಜನರು ತಮ್ಮ ಕೆಲಸದ ಬಗ್ಗೆ ಸಕಾರಾತ್ಮಕ ಶಕ್ತಿಯಿಂದ ತುಂಬಿರುತ್ತಾರೆ, ಅವರು ಪೂರ್ಣ ಉತ್ಸಾಹದಿಂದ ಕೆಲಸ ಮಾಡುತ್ತಾರೆ. ವ್ಯಾಪಾರಸ್ಥರು ಅನಗತ್ಯ ವಿವಾದಗಳಿಂದ ದೂರವಿರಬೇಕು. ಯುವಕರ ಅತಿಯಾದ ಆತ್ಮವಿಶ್ವಾಸ ಅವರ ತಪ್ಪುಗಳಿಗೆ ಕಾರಣವಾಗಿರಬಹುದು ಮತ್ತು ಈ ಯಶಸ್ಸಿನಿಂದಲೂ ಹಿಂದೆ ಸರಿಯಬಹುದು. ಮನಸ್ಸಿಗೆ ಸಮಾಧಾನವಿಲ್ಲದಿದ್ದರೆ ಮೌನವಾಗಿರುವುದಕ್ಕಿಂತ ಹೃದಯದ ವಿಷಯಗಳನ್ನು ಆತ್ಮೀಯರೊಂದಿಗೆ ಹಂಚಿಕೊಳ್ಳಿ.

ಇದನ್ನೂ ಓದಿ: ಜುಲೈ 16 ರಿಂದ ಈ ರಾಶಿಯವರನ್ನು ಕಷ್ಟದ ಸುಲಿಗೆ ನೂಕಲಿದ್ದಾನೆ ಸೂರ್ಯ

ಸಿಂಹ  ರಾಶಿ: ಈ ರಾಶಿಯ ಜನರ ಎಲ್ಲಾ ಅಧಿಕೃತ ಕೆಲಸಗಳು ನೆರವೇರುತ್ತವೆ. ಇದಕ್ಕಾಗಿ ತಯಾರಿ ನಡೆಸಬೇಕಾದ ಅವಶ್ಯಕತೆಯಿದೆ. ವ್ಯಾಪಾರಿಗಳಿಗೆ ಭವಿಷ್ಯದಲ್ಲಿ ದೊಡ್ಡ ಲಾಭವಾಗಲಿದೆ. ಉದ್ಯೋಗದ ನಿರೀಕ್ಷೆಯಲ್ಲಿರುವ ಯುವಕರಿಗೆ ಪರಿಹಾರ ಸಿಗುತ್ತದೆ. ಸಂಗಾತಿಯೊಂದಿಗೆ ಉತ್ತಮ ಬಾಂಧವ್ಯವಿರುತ್ತದೆ, ಇದರಿಂದಾಗಿ ಕುಟುಂಬದ ವಾತಾವರಣವೂ ಆಹ್ಲಾದಕರವಾಗಿರುತ್ತದೆ.

ಕನ್ಯಾ ರಾಶಿ: ಪಾತ್ರೆಗಳ ವ್ಯಾಪಾರಿಗಳು ಉತ್ತಮ ಲಾಭವನ್ನು ಪಡೆಯುತ್ತಾರೆ ಮತ್ತು ಇತರ ವ್ಯವಹಾರಗಳಲ್ಲಿಯೂ ಯಶಸ್ಸು ಸಾಧಿಸುತ್ತಾರೆ. ಯುವಕರು ಸಮಯದ ಮಹತ್ವವನ್ನು ಅರಿತು ಪ್ರತಿ ನಿಮಿಷವನ್ನು ಸದುಪಯೋಗಪಡಿಸಿಕೊಳ್ಳಬೇಕು. ನೀವು ಸಾಮಾಜಿಕ ಕಾರ್ಯಗಳಿಗೆ ಹೆಚ್ಚು ಸಮಯ ವಿನಿಯೋಗಿಸಬೇಕು. ಇಂದು ನೀವು ನಿಮ್ಮ ಕೆಲಸದ ಮೇಲೆ ಹೆಚ್ಚು ಗಮನಹರಿಸಬೇಕು.

ತುಲಾ ರಾಶಿ: ಈ ರಾಶಿಯವರಿಗೆ ವಿದೇಶದಲ್ಲಿ ಉದ್ಯೋಗ ದೊರೆಯುವ ಸಾಧ್ಯತೆ ಇದೆ. ನಿಮ್ಮ ಪ್ರತಿಷ್ಠೆ ಮತ್ತಷ್ಟು ಹೆಚ್ಚಾಗಲಿದೆ. ಬೇರೆಡೆ ಸಿಲುಕಿರುವ ನಿಮ್ಮ ಹಣ ವಾಪಸ್ ಬರುತ್ತದೆ. ವ್ಯಾಪಾರಿಗಳು ಬುದ್ಧಿವಂತಿಕೆಯಿಂದ ವ್ಯವಹಾರ ಮಾಡಬೇಕು. ನೀವು ಭವಿಷ್ಯಕ್ಕಾಗಿ ಹಿರಿಯರ ಮಾರ್ಗದರ್ಶನವನ್ನೂ ಪಡೆಯುತ್ತೀರಿ.

ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯ ಜನರು ಉದ್ಯೋಗ ಸಂಬಂಧಿತ ವಿಷಯಗಳಲ್ಲಿ ಆತುರದ ನಿರ್ಧಾರ ತೆಗೆದುಕೊಳ್ಳಬಾರದು. ಪ್ರಸ್ತುತ ಆರ್ಥಿಕ ಪರಿಸ್ಥಿತಿಯ ಬಗ್ಗೆ ಉದ್ಯಮಿಗಳು ನಿರಾಶೆಗೊಳ್ಳಬಾರದು, ಮುಂಬರುವ ದಿನಗಳಲ್ಲಿ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತವೆ. ಕಾಲುಗಳಲ್ಲಿ ನೋವು ಮತ್ತು ಊತ ಇರಬಹುದು, ವೈದ್ಯರಿಗೆ ತೋರಿಸಿ ಚಿಕಿತ್ಸೆ ಪಡೆಯಿರಿ. ಬಾಕಿ ಉಳಿದಿರುವ ಕೆಲಸಗಳು ಮಾನಸಿಕ ಒತ್ತಡವನ್ನುಂಟು ಮಾಡುವುದರಿಂದ ಆದಷ್ಟು ಬೇಗ ಪೂರ್ಣಗೊಳಿಸಲು ಯೋಜನೆ ರೂಪಿಸಿ.

ಇದನ್ನೂ ಓದಿ: 24 ಗಂಟೆಗಳ ಅಂತರದಲ್ಲಿ 2 ಪ್ರಮುಖ ಗ್ರಹಗಳ ರಾಶಿ ಬದಲಾವಣೆ, ಈ 5 ರಾಶಿಯವರಿಗೆ ಮಹಾ ಯೋಗ ..!

ಧನು ರಾಶಿ: ಈ ರಾಶಿಯ ಜನರ ಮೇಲಧಿಕಾರಿಯೊಂದಿಗಿನ ತಪ್ಪು ತಿಳುವಳಿಕೆಯು ಉದ್ಯೋಗಕ್ಕೆ ಅಪಾಯ ತರಬಹುದು. ಚಿಲ್ಲರೆ ವ್ಯಾಪಾರಿಗಳು ಇಂದು ಉತ್ತಮ ಲಾಭ ಗಳಿಸುವ ಸಾಧ್ಯತೆ ಇದೆ.  ಪ್ರಾಣಿ ಮತ್ತು ಪಕ್ಷಿಗಳಿಗೆ ಸೇವೆ ಮಾಡಿ, ಇದರಿಂದ ನಿಮ್ಮ ಭವಷ್ಯ ಉಜ್ವಲವಾಗಿರಲಿದೆ.

ಮಕರ ರಾಶಿ: ಮಕರ ರಾಶಿಯವರಿಗೆ ಬಡ್ತಿ ಸಿಗುವ ಸಾಧ್ಯತೆ ಇದೆ. ಶ್ರದ್ಧೆಯಿಂದ ಕೆಲಸ ಮಾಡಿ ಮೇಲಧಿಕಾರಿಯೊಂದಿಗೆ ಉತ್ತಮ ಸಂಬಂಧ ಕಾಪಾಡಿಕೊಳ್ಳಿ. ನೀವು ವೈದ್ಯಕೀಯ ಸಂಬಂಧಿತ ವ್ಯವಹಾರದಲ್ಲಿ ಹೂಡಿಕೆ ಮಾಡಲು ಇದು ಸರಿಯಾದ ಸಮಯ. ಯುವಕರು ಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಅಪ್‍ಡೇಟ್ ಆಗಬೇಕು. ಪ್ರೀತಿಪಾತ್ರರ ಮೇಲೆ ಅನಗತ್ಯ ಕೋಪಿಸಿಕೊಳ್ಳಬಾರದು. ಆರೋಗ್ಯದ ವಿಷಯದಲ್ಲಿ ಇಂದು ಸಾಮಾನ್ಯ ದಿನವಾಗಿರುತ್ತದೆ. ಸಮಾಜಕಾರ್ಯದಲ್ಲಿ ನಿಮ್ಮ ಭಾಗವಹಿಸುವಿಕೆ ಗೌರವವನ್ನು ಹೆಚ್ಚಿಸುತ್ತದೆ.

ಕುಂಭ ರಾಶಿ: ಈ ರಾಶಿಯ ಜನರಿಗೆ ಉತ್ತಮ ಅವಕಾಶಗಳು ಸಿಗಲಿದೆ. ಮಹಿಳಾ ಸಹೋದ್ಯೋಗಿಗಳನ್ನು ಗೌರವಿಸಿ. ಸರಕುಗಳ ವಿಷಯದಲ್ಲಿ ಚಿಲ್ಲರೆ ವ್ಯಾಪಾರಿಗಳು ತೊಂದರೆಗೊಳಗಾಗುತ್ತಾರೆ. ಯುವಕರು ತಮ್ಮ ತಂದೆ-ತಾಯಿಯನ್ನು ಗೌರವಿಸಬೇಕು. ಸ್ನೇಹಿತರ ಜೊತೆ ಚೆನ್ನಾಗಿ ನಡೆದುಕೊಳ್ಳಬೇಕು.

ಮೀನ ರಾಶಿ: ಮೀನ ರಾಶಿಯವರಿಗೆ ಆರ್ಥಿಕವಾಗಿ ಉತ್ತಮ ಸಮಯ ಇರುವುದಿಲ್ಲ. ಯುವಕರು ಹೊಸ ವಿಷಯಗಳನ್ನು ಕಲಿಯುವುದರತ್ತ ಗಮನಹರಿಸಬೇಕು. ಹಾರ್ಡ್‌ವೇರ್ ವ್ಯಾಪಾರಿಗಳಿಗೆ ನಿರಿಕ್ಷೀತ ಲಾಭ ಸಿಗಲಿದೆ. ಯುವಕರು ಹೊಸ ಅವಕಾಶಗಳನ್ನು ಪಡೆಯುತ್ತಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News