ಈ ಎರಡು ವಿಚಾರಗಳ ಬಗ್ಗೆ ಎಚ್ಚರ ವಹಿಸಿದರೆ ಸಾಕು ಸದಾ ಆರೋಗ್ಯವಾಗಿರುತ್ತದೆ ಹೃದಯ ..!

Healthy Heart Tips: ಹೃದಯವನ್ನು ಸದೃಢವಾಗಿಡಲು ಬಯಸಿದರೆ, ಕೆಟ್ಟ ಆಹಾರ ಪದ್ಧತಿಯನ್ನು ಬದಲಾಯಿಸುವುದು ಮುಖ್ಯ, ಇಲ್ಲದಿದ್ದರೆ ಸಮಸ್ಯೆಗಳು ಉಂಟಾಗಬಹುದು.

Written by - Ranjitha R K | Last Updated : Jun 14, 2022, 08:30 AM IST
  • ಹೃದಯ ನಮ್ಮ ದೇಹದ ಬಹು ಮುಖ್ಯ ಅಂಗ.
  • ಹೃದಯಾಘಾತಕ್ಕೆ ಇದೂ ಒಂದು ಕಾರಣ
  • ಆರೋಗ್ಯಕರ ಹೃದಯಕ್ಕೆ ಆರೋಗ್ಯಕರ ಆಹಾರ ಅಗತ್ಯ
ಈ ಎರಡು ವಿಚಾರಗಳ ಬಗ್ಗೆ ಎಚ್ಚರ ವಹಿಸಿದರೆ ಸಾಕು ಸದಾ ಆರೋಗ್ಯವಾಗಿರುತ್ತದೆ ಹೃದಯ ..! title=
Healthy Heart Tips (file photo)

ಬೆಂಗಳೂರು : Healthy Heart Tips: ಹೃದಯ ನಮ್ಮ ದೇಹದ ಬಹು ಮುಖ್ಯ ಅಂಗ. ಇತ್ತೀಚಿನ ದಿನಗಳಲ್ಲಿ ಹೃದಯದ ಸಮಸ್ಯೆ, ಹೃದಯಾಘಾತ ಎನ್ನುವುದನ್ನು ದಿನ ಬೆಳಗಾದರೆ ಕೇಳುತ್ತಿರುತ್ತೇವೆ. ಅದೆಷ್ಟೋ ಜನ ಈ ಹೃದಯದ ಸಮಸ್ಯೆಯಿಂದಲೇ ಅತಿ ಚಿಕ್ಕ ವಯಸ್ಸಿನಲ್ಲಿಯೇ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಹೃದಯದ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. 

ಇದಕ್ಕಾಗಿ ಬಹಳ ಪರಿಶ್ರಮ ಪಡಬೇಕಿಲ್ಲ. ಹೌದು, ನಿಮ್ಮ ಹೃದಯವನ್ನು ಸದೃಢವಾಗಿಡಲು ಬಯಸಿದರೆ ಬಗ್ಗೆ ನಿಮ್ಮ ಆಹಾರ ಪದ್ದತಿಯ ಬಗ್ಗೆ ಕಾಳಜಿ ವಹಿಸಬೇಕು. ಪ್ರತಿನಿತ್ಯ ವ್ಯಾಯಾಮ ಮಾಡಬೇಕು. ಈ ಎರಡು ವಿಷಯಗಳ ಬಗ್ಗೆ ಗಮನ ಹರಿಸಿದರೆ ಹೃದಯ ಸದಾ ಆರೋಗ್ಯವಾಗಿರುತ್ತದೆ. ನಮ್ಮ ಆಹಾರ ಪದ್ಧತಿ ಮತ್ತು ಬದಲಾಗುತ್ತಿರುವ ಜೀವನಶೈಲಿಯಿಂದ ಹೃದಯ ಸಂಬಂಧಿ ಸಮಸ್ಯೆಗಳು ಉಂಟಾಗುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ಉತ್ತಮ ಆಹಾರವನ್ನು ಸೇವಿಸಬೇಕು ಮತ್ತು ವ್ಯಾಯಾಮ ಮಾಡಬೇಕಾಗುತ್ತದೆ.

ಇದನ್ನೂ ಓದಿ : Men Health Tips: ವೀರ್ಯಾಣುಗಳ ಸಂಖ್ಯೆ ಹೆಚ್ಚಿಸಲು ಪುರುಷರು ಈ ಡ್ರೈ ಫ್ರೂಟ್ಸ್ ಸೇವಿಸಿ!

ಹೃದಯಾಘಾತಕ್ಕೆ ಇದೂ ಒಂದು ಕಾರಣ : 
ನಿಯಮಿತ ವ್ಯಾಯಾಮ, ಆಹಾರ ಮತ್ತು ಪಾನೀಯಗಳ ಬಗ್ಗೆ ಗಮನ ಹರಿಸದಿರುವುದು ಹೃದಯಾಘಾತಕ್ಕೆ ಮುಖ್ಯ ಕಾರಣ ಎನ್ನಲಾಗಿದೆ. ಹಾಗಿದ್ದರೆ ಹೃದಯದ ಆರೋಗ್ಯಕ್ಕೆ ಏನನ್ನು ತಿನ್ನಬೇಕು ? 

ಆರೋಗ್ಯಕರ ಹೃದಯಕ್ಕೆ ಆರೋಗ್ಯಕರ ಆಹಾರ ಅಗತ್ಯ :
ಮೊದಲನೆಯದಾಗಿ, ನಿಮ್ಮ ಆಹಾರಕ್ರಮವನ್ನು ಬದಲಾಯಿಸಿ ಮತ್ತು ಆರೋಗ್ಯಕರ ಹೃದಯಕ್ಕಾಗಿ ಆರೋಗ್ಯಕರ ಆಹಾರವನ್ನು ತಿನ್ನುವುದನ್ನು ಅಭ್ಯಾಸ ಮಾಡಿಕೊಳ್ಳಿ. ವಯಸ್ಸು ಯಾವುದೇ ಇರಲಿ, ಆರೋಗ್ಯಕರ ಆಹಾರವು ಆರೋಗ್ಯಕರ ಹೃದಯಕ್ಕೆ ಬಹಳ ಮುಖ್ಯ. ತರಕಾರಿಗಳು, ಹಣ್ಣುಗಳ ಹೆಚ್ಚಿನ ಸೇವನೆ ಅಗತ್ಯ. ಇದೇ ವೇಳೆ ಜಂಕ್-ಫುಡ್ ಮತ್ತು ಮಾಂಸದ ಸೇವನೆ ಸೀಮಿತವಾಗಿದ್ದರೆ ಒಳ್ಳೆಯದು.  ಇದಲ್ಲದೆ, ಸಾಕಷ್ಟು ನೀರನ್ನು ಸೇವಿಸುವುದು ಸಹ ಬಹಳ ಮುಖ್ಯ. 

ಇದನ್ನೂ ಓದಿ : Sugar Control ಗಾಗಿ ಈ ಎಲೆಯನ್ನು ಬಳಸಿ, ಇಂದೇ ನಿಮ್ಮ ಆಹಾರದಲ್ಲಿ ಇದನ್ನು ಶಾಮೀಲುಗೊಳಿಸಿ

ಒಂದೇ ರೀತಿಯ ದಿನಚರಿ ಇರಲಿ :  
ಒಂದೇ ರೀತಿಯ ದಿನಚರಿಯನ್ನು ಅನುಸರಿಸಲು ಪ್ರಯತ್ನಿಸಿ. ಪದೇ ಪದೇ   ದಿನಚರಿಯನ್ನು ಬದಲಾಯಿಸುವುದು ಕೂಡಾ ಹೃದಯದ ಮೇಲೆ ಪರಿಣಾಮ ಬೀರುತ್ತದೆ. 

 

( ಸೂಚನೆ : ಈ ಲೇಖನವು ಸಾಮಾನ್ಯ ಮಾಹಿತಿಗಾಗಿ ಮಾತ್ರ. ಇದು ಯಾವುದೇ ರೀತಿಯಲ್ಲಿ ಚಿಕಿತ್ಸೆಗೆ ಬದಲಿಯಾಗಿರಲು ಸಾಧ್ಯವಿಲ್ಲ. ಹೆಚ್ಚಿನ ವಿವರಗಳಿಗಾಗಿ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

Trending News