Garlic Tea Benefits: ಬೆಳ್ಳುಳ್ಳಿ ಚಹಾ ಸೇವನೆಯ 7 ಅದ್ಭುತ ಲಾಭಗಳು ನಿಮಗೆ ತಿಳಿದಿವೆಯೇ?

Benefit From Garlic Tea - ಸಾಮಾನ್ಯವಾಗಿ ಭಾರತದಲ್ಲಿ ಜನರು ಬೆಳ್ಳುಳ್ಳಿ ಚಹಾ (Garlic Tea) ಸೇವಿಸುವುದು ವಿರಳ, ಆದರೆ ಅದರ ಪ್ರಯೋಜನಗಳ ಬಗ್ಗೆ ನಿಮಗೆ ತಿಳಿದಿದ್ದರೆ, ನೀವು ಖಂಡಿತವಾಗಿಯೂ ಪ್ರತಿದಿನ ಬೆಳಗ್ಗೆ ಅದನ್ನು ಸೇವಿಸುವಿರಿ. ಇದನ್ನು ಮನೆಯಲ್ಲಿಯೇ ತಯಾರಿಸಿ ನೀವು ಸೇವಿಸಬಹುದು. ಬೆಳ್ಳುಳ್ಳಿ ಚಹಾ ಸೇವನೆಯಿಂದ ಆಗುವ ಪ್ರಯೋಜನಗಳನ್ನು ತಿಳಿದುಕೊಳ್ಳೋಣ ಬನ್ನಿ.

Written by - Nitin Tabib | Last Updated : Mar 4, 2022, 12:34 PM IST
  • ಬೆಳ್ಳುಳ್ಳಿ ಟೀ ಕುಡಿಯುವುದರಿಂದ ಆಗುವ 7 ಪ್ರಯೋಜನಗಳು
  • ಮನೆಯಲ್ಲಿ ಬೆಳ್ಳುಳ್ಳಿ ಚಹಾವನ್ನು ತಯಾರಿಸಿ
  • ಮಧುಮೇಹ ವಿರುದ್ಧ ಪರಿಣಾಮಕಾರಿ ಮನೆ ಮದ್ದು
Garlic Tea Benefits: ಬೆಳ್ಳುಳ್ಳಿ ಚಹಾ ಸೇವನೆಯ 7 ಅದ್ಭುತ ಲಾಭಗಳು ನಿಮಗೆ ತಿಳಿದಿವೆಯೇ? title=

ನವದೆಹಲಿ: Garlic Tea Health Benefits - ಇಲ್ಲಿಯವರೆಗೆ ನೀವು ಶುಂಠಿ ಅಥವಾ ಇನ್ನಾವುದೇ ರೀತಿಯ ಚಹಾವನ್ನು ಸೇವಿಸಿರಬೇಕು, ಆದರೆ ಇಂದು ನಾವು ನಿಮಗೆ ಬೆಳ್ಳುಳ್ಳಿ ಚಹಾ ಸೇವನೆಯ ಅದ್ಭುತ ಲಾಭಗಳ ಕುರಿತು ಮಾಹಿತಿಯನ್ನು ನೀಡಲಿದ್ದೇವೆ. ಬೆಳ್ಳುಳ್ಳಿ ಟೀ ಕುಡಿಯುವುದರಿಂದ ಹಲವಾರು ಪ್ರಯೋಜನಗಳಿವೆ. ಈ ಚಹಾವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಕೆಲಸ ಮಾಡುತ್ತದೆ. ಇದರ ಹೊರತಾಗಿ, ನಿಮಗೆ ತಿಳಿದಿಲ್ಲದ ಹಲವಾರು ಪ್ರಯೋಜನಗಳು ಇದರಲ್ಲಿವೆ. ಹಾಗಾದರೆ ಬನ್ನಿ ಬೆಳ್ಳುಳ್ಳಿ ಚಹಾದ ಪ್ರಯೋಜನಗಳಾವುವು ತಿಳಿದುಕೊಳ್ಳೋಣ 

ಬೆಳ್ಳುಳ್ಳಿ ಟೀ ಸೇವನೆಯ 7 ಪ್ರಯೋಜನಗಳು (Health News)
ವಾಸ್ತವವಾಗಿ ಬೆಳ್ಳುಳ್ಳಿ ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿವೈರಲ್ ಗುಣಗಳನ್ನು ಹೊಂದಿದೆ. ನೀವು ಬಯಸಿದರೆ, ನೀವು ಬೆಳ್ಳುಳ್ಳಿ ಚಹಾಕ್ಕೆ ಸ್ವಲ್ಪ ಶುಂಠಿ ಮತ್ತು ದಾಲ್ಚಿನ್ನಿಯನ್ನು ಸಹ ಸೇರಿಸಬಹುದು. ಇದರಿಂದ ಆರೋಗ್ಯ ಪ್ರಯೋಜನಗಳ ಜೊತೆಗೆ ಚಹಾದ ರುಚಿಯನ್ನು ಸಹ ಹೆಚ್ಚಿಸಬಹುದು.

1. ಬೆಳ್ಳುಳ್ಳಿ ಟೀ ಮಧುಮೇಹ ರೋಗಿಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಇದು ದೇಹದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡುತ್ತದೆ. ಚಯಾಪಚಯ ಸ್ಥಿತಿಯಲ್ಲಿ ಸಹ ಸಹಾಯ ಮಾಡುತ್ತದೆ.

2. ಬೆಳ್ಳುಳ್ಳಿ ಟೀ ಸೇವನೆ ಮಾಡುವುದರಿಂದ ದೇಹದಲ್ಲಿನ ವಿಷಕಾರಿ ಪದಾರ್ಥಗಳನ್ನು ನೀವು ಹೊರಹಾಕಬಹುದು.

3. ಬೆಳ್ಳುಳ್ಳಿ ಚಹಾದಿಂದ ನೀವು ತೂಕವನ್ನು ಕಳೆದುಕೊಳ್ಳಬಹುದು. ಈ ಟೀ ನಿಮ್ಮ ದೇಹದ ಬಹುತೇಕ ಭಾಗಗಳಲ್ಲಿನ ಕೊಬ್ಬನ್ನು ಕರಗಿಸಲು ಕೆಲಸ ಮಾಡುತ್ತದೆ. ಇದು ಚಯಾಪಚಯವನ್ನು ಹೆಚ್ಚಿಸುವ ಗುಣಗಳನ್ನು ಹೊಂದಿದೆ, ಇದು ತೂಕ ಇಳಿಕೆಗೆ ಸಹಾಯ ಮಾಡುತ್ತದೆ.

4. ಬೆಳ್ಳುಳ್ಳಿ ಟೀ ಹೃದಯದ ಆರೋಗ್ಯವನ್ನು ಕೂಡ ಸುಧಾರಿಸುತ್ತದೆ. ಇದನ್ನು ಸೇವಿಸುವುದರಿಂದ ರಕ್ತ ಪರಿಚಲನೆ ಸುಧಾರಿಸುತ್ತದೆ, ಇದು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದರಿಂದ ಹೃದಯ ಸಂಬಂಧಿ ಕಾಯಿಲೆಗಳನ್ನು ದೂರವಿಡಬಹುದು.

5. ಬೆಳ್ಳುಳ್ಳಿ ಚಹಾವು ಉಸಿರಾಟದ ಕಾಯಿಲೆಗಳಿಂದ ರಕ್ಷಿಸುತ್ತದೆ. ಜ್ವರ ಮತ್ತು ಕೆಮ್ಮನ್ನು ಗುಣಪಡಿಸಲು ಚಳಿಗಾಲದಲ್ಲಿ ಇದನ್ನು ಸೇವಿಸಬಹುದು.

6. ಈ ಚಹಾ ಶಕ್ತಿಯುತವಾದ ರೋಗ ನಿರೋಧಕ ಗುಣಗಳನ್ನು ಹೊಂದಿದೆ. ಇದು ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಸುಧಾರಿಸುತ್ತದೆ.

7. ಬೆಳ್ಳುಳ್ಳಿ ಟೀ ಉರಿಯೂತವನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ-Diabetes: ಬ್ಲಡ್ ಶುಗರ್ ಲೆವೆಲ್ ಕಂಟ್ರೋಲ್ ಮಾಡಲು ಅರಿಶಿನದೊಂದಿಗೆ ಈ 2 ಪದಾರ್ಥಗಳನ್ನು ಬೆರೆಸಿ ಸೇವಿಸಿ

ಬೆಳ್ಳುಳ್ಳಿ ಟೀ ತಯಾರಿಸುವುದು ಹೇಗೆ? (How To Make Garlic Tea)
ಇದಕ್ಕಾಗಿ ನೀವು ಮೊದಲು ಪಾತ್ರೆ ತೆಗೆದುಕೊಳ್ಳಬೇಕು. ಅದರಲ್ಲಿ ಒಂದು ಕಪ್ ನೀರನ್ನು ಕುದಿಸಿ. ಸ್ವಲ್ಪ ಸಮಯದ ನಂತರ, ಪುಡಿಮಾಡಿದ ಬೆಳ್ಳುಳ್ಳಿಯನ್ನು ಅದಕ್ಕೆ  ಸೇರಿಸಿ. ಇದರೊಂದಿಗೆ, ಒಂದು ಚಮಚ ಕರಿಮೆಣಸು ಸೇರಿಸಿ ಮತ್ತು ನಂತರ ಚಹಾವನ್ನು ಐದು ನಿಮಿಷಗಳ ಕಾಲ ಕುದಿಯಲು ಬಿಡಿ. ಐದು ನಿಮಿಷಗಳ ನಂತರ, ಗ್ಯಾಸ್ ಬಂದ್ ಮಾಡಿ ಹಾಗೂ ಪಾತ್ರೆ ಯೊಂದರಲ್ಲಿ ಚಹಾ ಸೋಸಿ, ಬೆಳ್ಳುಳ್ಳಿ ಚಹಾ (Recipe For Making Garlic Tea) ಸಿದ್ಧವಾಗುತ್ತದೆ.

ಇದನ್ನೂ ಓದಿ -ಕಲಬೆರಕೆ ತುಪ್ಪ ಹೃದಯಕ್ಕೆ ಅಪಾಯಕಾರಿ..! ತುಪ್ಪ ಅಸಲಿಯೋ ಕಲಬೆರಕೆಯೋ ಕಂಡು ಹಿಡಿಯುವುದು ಹೇಗೆ?

(Disclaimer - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಯಾವುದೇ ಕಾಯಿಲೆ ಅಥವಾ ರೋಗಕ್ಕೆ ಪರ್ಯಾಯವಲ್ಲ. ಅನುಸರಿಸುವುದಕ್ಕು ಮುನ್ನ ತಜ್ಞ ವೈದ್ಯರನ್ನು ಸಂಪರ್ಕಿಸಿ ಜೀ ನ್ಯೂಸ್ ಕನ್ನಡ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

ಇದನ್ನೂ ಓದಿ-Diabetes Control : ಮಧುಮೇಹಿಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೇಗೆ ನಿಯಂತ್ರಿಸಬೇಕು? ಇಲ್ಲಿದೆ ನೋಡಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News