ಮೊಟ್ಟೆ ಬೇಯಿಸುವಾಗ ಒಡೆಯುತ್ತಾ? ಹಾಗಾದ್ರೆ ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ

Kitchen Hacks in Kannada: ಬೇಯಿಸಿದ ಮೊಟ್ಟೆಗಳನ್ನು ತಿನ್ನುವುದು ಮತ್ತು ಅವುಗಳಿಂದ ಆಮ್ಲೆಟ್ಗಳನ್ನು ತಯಾರಿಸುವುದು ಹಳೆಯ ವಿಧಾನಗಳು. ಬಹುತೇಕ ಮನೆಗಳಲ್ಲಿ ಬೆಳಗ್ಗಿನ ತಿಂಡಿಗೆ ಮೊಟ್ಟೆ ತಿನ್ನಲು ಇಷ್ಟಪಡುತ್ತಾರೆ. ಬೆಳಗಿನ ಉಪಾಹಾರಕ್ಕಾಗಿ ಬೇಯಿಸಿದ ಮೊಟ್ಟೆಗಳನ್ನು ತಿನ್ನುವುದು ಅತ್ಯುತ್ತಮ ಮಾರ್ಗವೆಂದು ಪರಿಗಣಿಸಲಾಗುತ್ತದೆ.

Written by - Bhavishya Shetty | Last Updated : Dec 3, 2023, 08:16 PM IST
    • ಮೊಟ್ಟೆಗಳು ನಮ್ಮ ದೇಹಕ್ಕೆ ಎಷ್ಟು ಪ್ರಯೋಜನಕಾರಿ
    • ಬೇಯಿಸಿದ ಮೊಟ್ಟೆಯಲ್ಲಿ ಅಗತ್ಯ ಪೋಷಕಾಂಶಗಳು ಹಾಗೆಯೇ ಉಳಿದುಕೊಳ್ಳುತ್ತವೆ
    • ಮೊಟ್ಟೆಗಳನ್ನು ಕುದಿಸುವ ನೀರಿನಲ್ಲಿ ಉಪ್ಪು ಬೆರೆಸಬೇಕು
ಮೊಟ್ಟೆ ಬೇಯಿಸುವಾಗ ಒಡೆಯುತ್ತಾ? ಹಾಗಾದ್ರೆ ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ   title=
Eggs breaking while cooking

Kitchen Hacks in Kannada: ಮೊಟ್ಟೆಗಳು ನಮ್ಮ ದೇಹಕ್ಕೆ ಎಷ್ಟು ಪ್ರಯೋಜನಕಾರಿ ಎಂದು ನಮಗೆಲ್ಲರಿಗೂ ತಿಳಿದಿದೆ. ಅನೇಕ ಪ್ರಮುಖ ಪೋಷಕಾಂಶಗಳನ್ನು ಹೊಂದಿರುವ ಮೊಟ್ಟೆಗಳನ್ನು ವೈದ್ಯರು ಸಹ ದಿನಕ್ಕೆ ಒಂದು ಅಥವಾ ಎರಡನ್ನು ತಿನ್ನಲು ಶಿಫಾರಸು ಮಾಡುತ್ತಾರೆ.

ಬೇಯಿಸಿದ ಮೊಟ್ಟೆಗಳನ್ನು ತಿನ್ನುವುದು ಮತ್ತು ಅವುಗಳಿಂದ ಆಮ್ಲೆಟ್ಗಳನ್ನು ತಯಾರಿಸುವುದು ಹಳೆಯ ವಿಧಾನಗಳು. ಬಹುತೇಕ ಮನೆಗಳಲ್ಲಿ ಬೆಳಗ್ಗಿನ ತಿಂಡಿಗೆ ಮೊಟ್ಟೆ ತಿನ್ನಲು ಇಷ್ಟಪಡುತ್ತಾರೆ. ಬೆಳಗಿನ ಉಪಾಹಾರಕ್ಕಾಗಿ ಬೇಯಿಸಿದ ಮೊಟ್ಟೆಗಳನ್ನು ತಿನ್ನುವುದು ಅತ್ಯುತ್ತಮ ಮಾರ್ಗವೆಂದು ಪರಿಗಣಿಸಲಾಗುತ್ತದೆ.

ಇದನ್ನೂ ಓದಿ: ಶನಿಯ ವಕ್ರದೃಷ್ಟಿಯಿಂದ 2024ರಲ್ಲಿ ಈ ರಾಶಿಯ ಜನರ ಬೆನ್ನೇರಲಿದೆ ದುರಾದೃಷ್ಟ

ಬೇಯಿಸಿದ ಮೊಟ್ಟೆಯಲ್ಲಿ ಅಗತ್ಯ ಪೋಷಕಾಂಶಗಳು ಹಾಗೆಯೇ ಉಳಿದುಕೊಳ್ಳುತ್ತವೆ ಮತ್ತು ಅದರ ರುಚಿ ಕೂಡ ಅತ್ಯುತ್ತಮವಾಗಿರುತ್ತದೆ ಎಂದು ಹೇಳಲಾಗುತ್ತದೆ.

ಜನರು ಮೊಟ್ಟೆಗಳನ್ನು ಕುದಿಸುವಲ್ಲಿ ತಪ್ಪುಗಳನ್ನು ಮಾಡುತ್ತಾರೆ. ಇದೇ ಕಾರಣದಿಂದ ನೀರಿನಲ್ಲಿ ಹಾಕಿದ ತಕ್ಷಣ ಒಡೆಯುತ್ತವೆ. ಇಲ್ಲಿ ನಾವು ನಿಮಗೆ ಕೆಲವು ಟಿಪ್ಸ್’ಗಳನ್ನು ಹೇಳಲಿದ್ದೇವೆ. ಈ ಟಿಪ್ಸ್’ಗಳನ್ನು ಅಳವಡಿಸಿಕೊಳ್ಳುವ ಮೂಲಕ ಈ ಸಮಸ್ಯೆಗೆ ಪರಿಹಾರ ಪಡೆಯಬಹುದು.

ನೀವು ಎರಡು ಮೊಟ್ಟೆಗಳನ್ನು ಕುದಿಸಲು ಬಯಸಿದರೆ, ಇದಕ್ಕಾಗಿ ದೊಡ್ಡ ಗಾತ್ರದ ಪಾತ್ರೆಯನ್ನು ಆರಿಸಿ. ಹೀಗೆ ಮಾಡುವುದರಿಂದ ಮೊಟ್ಟೆಗಳು ಕುದಿಸುವಾಗ ಒಂದಕ್ಕೊಂದು ಡಿಕ್ಕಿಯಾಗುವುದಿಲ್ಲ ಮತ್ತು ಅವು ಒಡೆಯುವುದರಿಂದ ಅಥವಾ ಸಿಡಿಯುವುದರಿಂದ ರಕ್ಷಿಸಲ್ಪಡುತ್ತವೆ.

ಮೊಟ್ಟೆಗಳನ್ನು ಕುದಿಸುವ ನೀರಿನಲ್ಲಿ ಉಪ್ಪು ಬೆರೆಸಬೇಕು. ಉಪ್ಪು ನೀರಿನಲ್ಲಿ ಮೊಟ್ಟೆಗಳನ್ನು ಕುದಿಸುವುದರಿಂದ ಸಿಪ್ಪೆ ಸುಲಿಯಲು ಸುಲಭವಾಗುತ್ತದೆ. ಅನೇಕ ಬಾರಿ ಜನರು ಮೊಟ್ಟೆಗಳನ್ನು ಕುದಿಸಿದ ನಂತರ ಸರಿಯಾಗಿ ಸಿಪ್ಪೆ ತೆಗೆಯಲು ಸಾಧ್ಯವಾಗುವುದಿಲ್ಲ.

ಮೊಟ್ಟೆಗಳನ್ನು ರೆಫ್ರಿಜರೇಟರ್‌’ನಲ್ಲಿ ಇಡುವುದು ಸಾಮಾನ್ಯ ಸಂಗತಿಯಾಗಿದೆ. ಆದರೆ ನೀವು ಅವುಗಳನ್ನು ನೇರವಾಗಿ ನೀರಿನಲ್ಲಿ ಕುದಿಸಿದರೆ, ಅವು ಖಂಡಿತವಾಗಿಯೂ ಒಡೆಯುತ್ತವೆ.  ಮೊಟ್ಟೆಗಳನ್ನು ತೆಗೆದುಕೊಂಡು ಅವುಗಳನ್ನು 10 ಅಥವಾ 15 ನಿಮಿಷಗಳ ಕಾಲ ಬಿಡಬೇಕು. ಆಗ ಉಷ್ಣತೆಯು ಸಾಮಾನ್ಯವಾಗುತ್ತದೆ.

ಅಲ್ಲದೆ ಮೊಟ್ಟೆಗಳನ್ನು ಕುದಿಸುವಾಗ ಉರಿಯನ್ನು ಹೆಚ್ಚು ಇಡಬೇಡಿ. ಮೊಟ್ಟೆಗಳನ್ನು ಯಾವಾಗಲೂ ಮಧ್ಯಮ ಉರಿಯಲ್ಲಿ ಕುದಿಸಬೇಕು. ಹೀಗೆ ಮಾಡಿದರೆ ಸಿಡಿಯುವುದಿಲ್ಲ.

ಇದನ್ನೂ ಓದಿ:ಅಹಂಕಾರ ತೋರಿ ನಿಯಮ ಉಲ್ಲಂಘಿಸಿದ ಸ್ಪರ್ಧಿ! ಮನೆಯಿಂದ ಹೊರನಡೆಯುವಂತೆ ಹೇಳಿದ ‘ಬಿಗ್ ಬಾಸ್’

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee ಮಾಧ್ಯಮವು ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News