ಈ ಎಲೆಯನ್ನು ಅರೆದು ಕೂದಲಿಗೆ ಹಚ್ಚಿದರೆ ಸಾಕು ಬಿಳಿ ಕೂದಲು ಶಾಶ್ವತವಾಗಿ ಕಪ್ಪಾಗುವುದು

ನಾವು ಹೇಳುವ ಮನೆಮದ್ದನ್ನು ಬಳಸಿದರೆ ಬಿಳಿ ಕೂದಲಿನ ಸಮಸ್ಯೆಗೆ ನೈಸರ್ಗಿಕ ಪರಿಹಾರ ಸಿಗುತ್ತದೆ.   

Written by - Ranjitha R K | Last Updated : Nov 21, 2023, 10:29 AM IST
  • ಕೂದಲಿನ ಆರೋಗ್ಯಕ್ಕೆ ಕರಿ ಬೇವು :
  • ಕರಿಬೇವಿನ ಎಲೆಗಳಿಂದ ಹೇರ್ ಮಾಸ್ಕ್
  • ಈ ರೀತಿ ಕೂದಲಿಗೆ ಹಚ್ಚಿ ಹೇರ್ ಮಾಸ್ಕ್
ಈ ಎಲೆಯನ್ನು ಅರೆದು ಕೂದಲಿಗೆ ಹಚ್ಚಿದರೆ ಸಾಕು ಬಿಳಿ ಕೂದಲು ಶಾಶ್ವತವಾಗಿ ಕಪ್ಪಾಗುವುದು   title=

ಬೆಂಗಳೂರು : ನಮ್ಮ ಆರೋಗ್ಯ ಹೇಗಿದೆ ಎನ್ನುವುದನ್ನು ನಾವು ಸೇವಿಸುವ ಆಹಾರ ನಿರ್ಧರಿಸುತ್ತದೆ. ಆರೋಗ್ಯಕರ ಆಹಾರ ಆರೋಗ್ಯವನ್ನು ಕಾಪಾಡಿದರೆ ಹಾಳು ಮೂಳು ಆಹಾರ ನಮ್ಮ ಆರೋಗ್ಯವನ್ನು ಕೆಡಿಸುತ್ತದೆ. ಈ ಸತ್ಯದ ಅರಿವಿದ್ದರೂ ಜನ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಜಂಕ್ ಫುಡ್ ಅನ್ನೇ ಅವಲಂಬಿಸುತ್ತಿದ್ದಾರೆ. ಇದು ನಮ್ಮ ಆರೋಗ್ಯದ ಮೇಲೆ ಕೂಡಾ ಪರಿಣಾಮ ಬೀರುತ್ತದೆ. ನಾವು ಏನು ತಿನ್ನುತ್ತೇವೆ ಎನ್ನುವುದು ನಮ್ಮ ಕೂದಲಿನ ಮೇಲೆ ಕೂಡಾ ಬಹಳವಾಗಿ ಪರಿಣಾಮ ಬೀರುತ್ತದೆ. ಕೆಟ್ಟ ಆಹಾರ ಪದ್ದತಿಯಿಂದಾಗಿ ಕೂದಲು ಉದುರುವುದು, ಕಿರಿ ವಯಸ್ಸಿನಲ್ಲಿ ಕೂದಲು ಬೆಳ್ಳಗಾಗುವುದು, ಶುಷ್ಕ ಕೂದಲು, ತಲೆ ಹೊಟ್ಟು ಮುಂತಾದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಸಮಸ್ಯೆಯ ಪರಿಹಾರಕ್ಕಾಗಿ ನಾವು ಮತ್ತೆ ಬಳಸುವುದು ಅಪಾಯಕಾರಿ ರಾಸಾಯನಿಕಗಳನ್ನೇ. ಮಾರುಕಟ್ಟೆಯಲ್ಲಿ ಲಭ್ಯವಿರುವ ಶಾಂಪೂ, ಕಂಡಿಷನರ್, ಎಣ್ಣೆ, ಬಣ್ಣ ಇತ್ಯಾದಿಗಳನ್ನು ಬಳಸಲು ಆರಂಭಿಸುತ್ತೇವೆ.  ಪರಿಣಾಮವಾಗಿ ಒಂದು ಸಮಸ್ಯೆಯ ಪರಿಹಾರದ ಬದಲಿಗೆ ಮತ್ತೊಂದು ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಆದರೆ ಈಗ ನಾವು ಹೇಳುವ ಮನೆಮದ್ದನ್ನು ಬಳಸಿದರೆ ಸಮಸ್ಯೆಗೆ ನೈಸರ್ಗಿಕ ಪರಿಹಾರ ಸಿಗುತ್ತದೆ. 

ಕೂದಲಿನ ಆರೋಗ್ಯಕ್ಕೆ ಕರಿ ಬೇವು : 
ಕೂದಲು ಬಿಳಿಯಾಗುತ್ತವೆ ಎಂದು ಮದ್ದು ಮಾಡಲು ಹೊರಡುವ ಮುನ್ನ ಅದಕ್ಕೆ ಕಾರಣ ಏನು ಎನ್ನುವುದನ್ನು ತಿಳಿದುಕೊಳ್ಳಬೇಕು. ಮೆಲನಿನ್ ಕೊರತೆಯಿಂದಾಗಿ, ಕೂದಲು ಬಿಳಿಯಾಗುತ್ತವೆ. ಆದರೆ ಕರಿಬೇವಿನ ಎಲೆಗಳು ಕೂದಲಿನಲ್ಲಿರುವ ಮೆಲನಿನ್ ಕೊರತೆಯನ್ನು ಹೋಗಲಾಡಿಸುತ್ತದೆ. ಹೀಗಾಗಿ ಕರಿಬೇವಿನ ಎಲೆಗಳನ್ನು ಬಳಸುವುದರಿಂದ ಕೂದಲು ಕಪ್ಪಾಗುತ್ತದೆ, ಹೊಳೆಯುತ್ತದೆ ಮತ್ತು ಮೃದುವಾಗುತ್ತದೆ. 

ಇದನ್ನೂ ಓದಿ : ಎಣ್ಣೆಯುಕ್ತ ಚರ್ಮದ ಮೇಲೆ ಈ ವಸ್ತುಗಳನ್ನು ಹಚ್ಚಬೇಡಿ..!

ಕರಿಬೇವಿನ ಎಲೆಗಳಿಂದ ಹೇರ್ ಮಾಸ್ಕ್ : 
ಕರಿಬೇವಿನ ಎಲೆಗಳ ಮಾಸ್ಕ್ ತಯಾರಿಸಲು ಕರಿಬೇವಿನ ಎಲೆಗಳು, ತೆಂಗಿನ ಎಣ್ಣೆ, ಬೇವಿನ ಎಲೆಗಳು, ವಿಟಮಿನ್ ಇ ಕ್ಯಾಪ್ಸುಲ್ ಗಳು ಮತ್ತು ಮೊಸರು ಬೇಕಾಗುತ್ತದೆ. ಮಾಸ್ಕ್ ಮಾಡಲು ಕರಿಬೇವಿನ ಸೊಪ್ಪು ಮತ್ತು ಬೇವಿನ ಸೊಪ್ಪನ್ನು ಮಿಕ್ಸಿಯಲ್ಲಿ ರುಬ್ಬಿ ಇಟ್ಟುಕೊಳ್ಳಿ. ನಂತರ ಇನ್ನೊಂದು ಪಾತ್ರೆಯಲ್ಲಿ ತೆಂಗಿನೆಣ್ಣೆ, ವಿಟಮಿನ್ ಇ ಕ್ಯಾಪ್ಸುಲ್ ಮತ್ತು ಮೊಸರು ಹಾಕಿ ಸರಿಯಾಗಿ ಬೀಟ್ ಮಾಡಿ. ಅದರ ನಂತರ ಈ ಮಿಶ್ರಣವನ್ನು ಸ್ವಲ್ಪ ಬಿಸಿ ಮಾಡಿ. ಅದು ತಣ್ಣಗಾದ ನಂತರ ಕರಿಬೇವಿನ ಸೊಪ್ಪು ಮತ್ತು ಬೇವಿನ ಸೊಪ್ಪಿನ ಮಿಶ್ರಣವನ್ನು ಹಾಕಿ ಚೆನ್ನಾಗಿ ಕಲಸಿ. ನಿಮ್ಮ ಹೇರ್ ಮಾಸ್ಕ್ ರೆಡಿಯಾಗುತ್ತದೆ. 

ಈ ರೀತಿ ಕೂದಲಿಗೆ ಹಚ್ಚಿ : 
ಕೂದಲಿಗೆ ಹೇರ್ ಮಾಸ್ಕ್ ಅನ್ನು ಹಚ್ಚುವ ಮೊದಲು, ಕೂದಲನ್ನು ಸರಿಯಾಗಿ ತೊಳೆದು ಒಣಗಿಸಿ. ನಂತರ ಕೂದಲು ಮತ್ತು ನೆತ್ತಿಯ ಮೇಲೆ ಹೇರ್ ಮಾಸ್ಕ್ ಅನ್ನು ಹಚ್ಚಿ. ಒಂದು ಗಂಟೆಯ ನಂತರ ಮತ್ತೆ ಕೂದಲನ್ನು ತೊಳೆಯಿರಿ. ವಾರದಲ್ಲಿ ಎರಡು ಬಾರಿ ಈ ಮನೆಮದ್ದನ್ನು ಅನುಸರಿಸುತ್ತಾ ಬಂದರೆ ಬಿಳಿ ಕೂದಲಿನ ಸಮಸ್ಯೆ ಪರಿಹಾರವಾಗುತ್ತದೆ. 

ಇದನ್ನೂ ಓದಿ : ಸಿಂಪಲ್ ವಿಧಾನ ಅನುಸರಿಸಿ ತೂಕ ಇಳಿಕೆ ಮಾಡಿಕೊಳ್ಳಬೇಕೆ? ಈ ವಿಧಾನ ಟ್ರೈ ಮಾಡಿ ನೋಡಿ!

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ವೈದ್ಯಕೀಯ ಸಲಹೆಯನ್ನು ಪಡೆಯಿರಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News