ನಿಂಬೆ ರಸವನ್ನು ಈ ಸಮಯದಲ್ಲಿ ಹೀಗೆ ಕುಡಿದರೆ ತೂಕ ಇಳಿಕೆ ಬಲು ಸುಲಭ

ಕೆಲವರು ಮನೆಯಲ್ಲಿ ತೂಕ ಇಳಿಸಿಕೊಳ್ಳಲು ನೈಸರ್ಗಿಕ ವಿಧಾನಗಳನ್ನು ಪ್ರಯತ್ನಿಸುತ್ತಾರೆ. ಕೆಲವರು ಕಟ್ಟುನಿಟ್ಟಾದ ಆಹಾರ ನಿರ್ಬಂಧಗಳನ್ನು ಸಹ ಅನುಸರಿಸುತ್ತಾರೆ.   

Written by - Ranjitha R K | Last Updated : Nov 16, 2023, 03:01 PM IST
  • ಬೊಜ್ಜು ದೊಡ್ಡ ಸಮಸ್ಯೆಯಾಗಿ ಹೊರಹೊಮ್ಮುತ್ತಿದೆ.
  • ಸ್ಥೂಲಕಾಯತೆಯಿಂದ ಜನರು ಅನೇಕ ರೋಗಗಳಿಗೆ ತುತ್ತಾಗುತ್ತಿದ್ದಾರೆ.
  • ತೂಕವನ್ನು ಕಳೆದುಕೊಳ್ಳಲು ಕೆಲವು ಸರಳ ನೈಸರ್ಗಿಕ ಮಾರ್ಗಗಳಿವೆ.
ನಿಂಬೆ ರಸವನ್ನು ಈ ಸಮಯದಲ್ಲಿ ಹೀಗೆ ಕುಡಿದರೆ ತೂಕ ಇಳಿಕೆ ಬಲು ಸುಲಭ  title=

ಬೆಂಗಳೂರು : ಆಧುನಿಕ ಮತ್ತು ಕಳಪೆ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದಾಗಿ ಬೊಜ್ಜು ದೊಡ್ಡ ಸಮಸ್ಯೆಯಾಗಿ ಹೊರಹೊಮ್ಮುತ್ತಿದೆ. ಸ್ಥೂಲಕಾಯತೆಯಿಂದ ಜನರು ಅನೇಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅನೇಕ ಜನರು ತಮ್ಮ ದೇಹದ ತೂಕವನ್ನು ನಿಯಂತ್ರಿಸಲು ವ್ಯಾಯಾಮ, ಯೋಗ, ಜಿಮ್, ಡ್ಯಾನ್ಸ್ ಕ್ಲಾಸ್, ಜುಂಬಾ ಕ್ಲಾಸ್ ಹೀಗೆ ಹಲವು  ಪ್ರಯತ್ನಗಳನ್ನು ಮಾಡುತ್ತಿರುತ್ತಾರೆ. ಕೆಲವರು ಮನೆಯಲ್ಲಿ ತೂಕ ಇಳಿಸಿಕೊಳ್ಳಲು ನೈಸರ್ಗಿಕ ವಿಧಾನಗಳನ್ನು ಪ್ರಯತ್ನಿಸುತ್ತಾರೆ. ಕೆಲವರು ಕಟ್ಟುನಿಟ್ಟಾದ ಆಹಾರ ನಿರ್ಬಂಧಗಳನ್ನು ಅನುಸರಿಸುತ್ತಾರೆ. 

ತೂಕವನ್ನು ಕಳೆದುಕೊಳ್ಳಲು ಕೆಲವು ಸರಳ ನೈಸರ್ಗಿಕ ಮಾರ್ಗಗಳಿವೆ. ಅವುಗಳಲ್ಲಿ ಒಂದು ನಿಂಬೆ ರಸದೊಂದಿಗೆ ಬೆಚ್ಚಗಿನ ನೀರನ್ನು ಬೆರೆಸಿ ಖಾಲಿ ಹೊಟ್ಟೆಯಲ್ಲಿ ಕುಡಿಯುವುದು. ಹೀಗೆ ಮಾಡುತ್ತಾ ಬಂದರೆ ತೂಕವನ್ನು ಬೇಗನೆ ನಿಯಂತ್ರಿಸಬಹುದು ಎನ್ನಲಾಗಿದೆ. 

ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ನಿಂಬೆ ನೀರು ಕುಡಿದರೂ ತೂಕ ಕಡಿಮೆಯಾಗುವುದಿಲ್ಲ ಎಂದು ಹಲವರು ದೂರುತ್ತಾರೆ. ನಿಂಬೆ ನೀರನ್ನು ಸರಿಯಾಗಿ ಕುಡಿಯದ ಕಾರಣ ಹೀಗಾಗುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು. ಯಾವುದೇ ಪರಿಹಾರವನ್ನು ಸರಿಯಾದ ರೀತಿಯಲ್ಲಿ ಅನುಸರಿಸದಿದ್ದರೆ ಅದು ಫಲಕಾರಿಯಾಗುವುದಿಲ್ಲ. ಹಾಗೆಯೇ ನಿಂಬೆ ನೀರನ್ನು ಕುಡಿಯಲು ಸರಿಯಾದ ಮಾರ್ಗ ಮತ್ತು ಸಮಯವಿದೆ. 

ಇದನ್ನೂ ಓದಿ : ಈ ತರಕಾರಿಗಳನ್ನು ಫ್ರಿಡ್ಜ್‌ನಲ್ಲಿ ಇಡಲೇಬಾರದು

ನಿಂಬೆ ನೀರನ್ನು ಕುಡಿಯಲು ಸರಿಯಾದ ಮಾರ್ಗ ಮತ್ತು ಸರಿಯಾದ ಸಮಯ :
ನಿಂಬೆಯಲ್ಲಿರುವ ವಿಟಮಿನ್ ಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದನ್ನು ಸೇವಿಸಿದಾಗ ದೇಹದ ತೂಕ ಕಡಿಮೆಯಾಗಿ ನಮ್ಮ ದೇಹದಲ್ಲಿರುವ  ಕಲ್ಮಶಗಳು ಹೊರಬರುತ್ತದೆ. ಈ ಕಾರಣದಿಂದಾಗಿ ದೇಹದ ಅಂಗಗಳು ಸರಿಯಾಗಿ ಕಾರ್ಯನಿರ್ವಹಿಸುತ್ತವೆ. ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ನಿಂಬೆ ನೀರನ್ನು ಕುಡಿಯುವುದರಿಂದ ದೇಹದ ತೂಕವನ್ನು ನಿಯಂತ್ರಣದಲ್ಲಿಡಬಹುದು. ಇದು ನಮ್ಮ ಚರ್ಮ ಮತ್ತು ಕೂದಲು ಸೇರಿದಂತೆ ದೇಹದ ಅನೇಕ ಭಾಗಗಳಿಗೆ ಪ್ರಯೋಜನಕಾರಿಯಾಗಿದೆ. ನಿಂಬೆಯೊಂದಿಗೆ ಬೆರೆಸಿದ ಬೆಚ್ಚಗಿನ ನೀರನ್ನು ಕುಡಿಯುವುದು ದೇಹದಿಂದ ಹೆಚ್ಚುವರಿ ಕೊಬ್ಬನ್ನು ಹೊರಹಾಕಲು ಸಹಾಯ ಮಾಡುತ್ತದೆ. 

ನಿಂಬೆ ಕುಡಿಯುವ ಪ್ರಯೋಜನಗಳು : 
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನಿಂಬೆ ಮತ್ತು ಬೆಚ್ಚಗಿನ ನೀರನ್ನು ಕುಡಿಯುವುದರಿಂದ ಚಯಾಪಚಯವನ್ನು ಹೆಚ್ಚಿಸುತ್ತದೆ. ಇದು ದೇಹದಲ್ಲಿ ಕೊಬ್ಬನ್ನು ಸುಡುವ ಪ್ರಕ್ರಿಯೆಯನ್ನು ಸುಧಾರಿಸುತ್ತದೆ. ಇದು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪ್ರತಿದಿನ ಬೆಳಗ್ಗೆ ನಿಂಬೆಹಣ್ಣಿನ ಜೊತೆ ಬಿಸಿ ನೀರು ಕುಡಿದರೆ ಇಡೀ ದೇಹದಲ್ಲಿರುವ ವಿಷಕಾರಿ ಅಂಶವನ್ನು ಹೊರಹಾಕುತ್ತದೆ. 

ಇದನ್ನೂ ಓದಿ : ಅನ್ನವನ್ನು ಮತ್ತೆ ಮತ್ತೆ ಬಿಸಿ ಮಾಡಿ ತಿಂದರೆ ಏನಾಗುತ್ತದೆ ? 90 ಶೇ. ದಷ್ಟು ಜನರಿಗೆ ತಿಳಿದಿಲ್ಲ ಈ ಸತ್ಯ

ಕಳಪೆ ಜೀವನಶೈಲಿ ಮತ್ತು ಆಹಾರ ಪದ್ಧತಿ : 
ತಪ್ಪು ಜೀವನಶೈಲಿ ಮತ್ತು ಆಹಾರ ಪದ್ಧತಿಗಳು ನಮ್ಮ ಬೊಜ್ಜನ್ನು ವೇಗವಾಗಿ ಹೆಚ್ಚಿಸುತ್ತವೆ. ಇದರಿಂದ ನಾವು ಗಂಭೀರ ಕಾಯಿಲೆಗಳಿಗೆ ತುತ್ತಾಗುತ್ತಿದ್ದೇವೆ. ಬೊಜ್ಜು ಅಂತಿಮವಾಗಿ ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಥೈರಾಯ್ಡ್‌ನಂತಹ ಗಂಭೀರ ಕಾಯಿಲೆಗಳಿಗೆ ಕಾರಣವಾಗುತ್ತದೆ. ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ, ನಿಮ್ಮ ಆಹಾರಕ್ರಮಕ್ಕೆ ನೀವು ವಿಶೇಷ ಗಮನ ನೀಡಬೇಕು. ಇದಲ್ಲದೆ, ಜೀವನಶೈಲಿಯನ್ನು ಬದಲಾಯಿಸಬೇಕು.

ಸೂಚನೆಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಕೆಲವು ಸಂಶೋಧನೆ ಹಾಗೂ ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News