Taming Blood Sugar: ಡೈಬಿಟೀಸ್ ರೋಗಿಗಳಿಗೆ ಟಾನಿಕ್ಗೆ ಸಮಾನ ಬ್ಲಾಕ್ ಕಾಫಿ, ನಿತ್ಯ 1 ಕಪ್ ಸೇವನೆಯಿಂದ 5 ಕಾಯಿಲೆಗಳ ನಿವಾರಣೆ!

Taming Blood Sugar: ಮಧುಮೇಹ ರೋಗಿಗಳಿಗೆ ಕಪ್ಪು ಕಾಫಿ ಸೇವನೆ ತುಂಬಾ ಪ್ರಯೋಜನಕಾರಿಯಾಗಿದೆ, ಇದನ್ನು ಪ್ರತಿದಿನ ಸೇವಿಸುವುದರಿಂದ ಹೃದಯವು ಆರೋಗ್ಯಕರವಾಗಿರುತ್ತದೆ ಮತ್ತು ಇತರೆ 5 ಸಮಸ್ಯೆಗಳು ಕೂಡ ದೂರಾಗುತ್ತವೆ (Lifestyle News in Kannada).  

Written by - Nitin Tabib | Last Updated : Sep 21, 2023, 07:50 PM IST
  • ಆರೋಗ್ಯ ತಜ್ಞರ ಪ್ರಕಾರ, ಇದರ ಸಹಾಯದಿಂದ ಮಧುಮೇಹವನ್ನು ನಿಯಂತ್ರಣದಲ್ಲಿ ಇಡಬಹುದು ಮತ್ತು ಕೊಬ್ಬನ್ನು ಸುಡಬಹುದು.
  • ಇದರೊಂದಿಗೆ ದೇಹವು ಯಾವಾಗಲೂ ಫಿಟ್ ಆಗಿರುತ್ತದೆ ಮತ್ತು ಅನೇಕ ರೀತಿಯ ಕಾಯಿಲೆಗಳು ದೂರ ಉಳಿಯುತ್ತವೆ.
  • ವಾಸ್ತವದಲ್ಲಿ, ಕೆಫೀನ್‌ನ ಹೊರತಾಗಿ, ಕಪ್ಪು ಕಾಫಿಯು ಆಂಟಿಆಕ್ಸಿಡೆಂಟ್‌ಗಳನ್ನು ಸಹ ಹೊಂದಿರುತ್ತದೆ, ಇದು ಅನೇಕ ರೀತಿಯ ಕಾಯಿಲೆಗಳನ್ನು ದೂರವಿಡಲು ಸಹಾಯ ಮಾಡುತ್ತದೆ,
Taming Blood Sugar: ಡೈಬಿಟೀಸ್ ರೋಗಿಗಳಿಗೆ ಟಾನಿಕ್ಗೆ ಸಮಾನ ಬ್ಲಾಕ್ ಕಾಫಿ, ನಿತ್ಯ 1 ಕಪ್ ಸೇವನೆಯಿಂದ 5 ಕಾಯಿಲೆಗಳ ನಿವಾರಣೆ! title=

ಬೆಂಗಳೂರು: ಚಹಾ ಹೊರತುಪಡಿಸಿದರೆ,  ಜನರು ಅಷ್ಟೇ ಇಷ್ಟಪಟ್ಟು ಕುಡಿಯುವ ಮತ್ತೊಂದು ಪಾನೀಯ ಎಂದರೆ ಅದು ಕಾಫಿ, ಹೆಚ್ಚಿನ ಜನರು ಮನೆ ಅಥವಾ ಕಚೇರಿಯಲ್ಲಿ ಚೇತರಿಕೆಗಾಗಿ ಚಹಾ ಅಥವಾ ಕಾಫಿಯ ಸಹಾಯವನ್ನು ತೆಗೆದುಕೊಳ್ಳುತ್ತಾರೆ. ಇವೆರಡನ್ನು ಅತಿಯಾಗಿ ಸೇವಿಸಿದರೆ ಆರೋಗ್ಯಕ್ಕೆ ಹಾನಿ ಎನ್ನಲಾಗುತ್ತದೆ. ಆದರೆ, ಚಹಾ ಮತ್ತು ಕಾಫಿಯ ಬದಲಿಗೆ ಕಪ್ಪು ಕಾಫಿಯನ್ನು ಪ್ರತಿದಿನ ಸೇವಿಸಿದರೆ, ಅದು ಆರೋಗ್ಯಕ್ಕೆ ಹಲವು ವಿಧಗಳಲ್ಲಿ ಪ್ರಯೋಜನಕಾರಿಯಾಗಿದೆ. ಆರೋಗ್ಯ ತಜ್ಞರ ಪ್ರಕಾರ, ಇದರ ಸಹಾಯದಿಂದ ಮಧುಮೇಹವನ್ನು ನಿಯಂತ್ರಣದಲ್ಲಿ ಇಡಬಹುದು ಮತ್ತು ಕೊಬ್ಬನ್ನು ಸುಡಬಹುದು. ಇದರೊಂದಿಗೆ ದೇಹವು ಯಾವಾಗಲೂ ಫಿಟ್ ಆಗಿರುತ್ತದೆ ಮತ್ತು ಅನೇಕ ರೀತಿಯ ಕಾಯಿಲೆಗಳು ದೂರ ಉಳಿಯುತ್ತವೆ. ವಾಸ್ತವದಲ್ಲಿ, ಕೆಫೀನ್‌ನ ಹೊರತಾಗಿ, ಕಪ್ಪು ಕಾಫಿಯು ಆಂಟಿಆಕ್ಸಿಡೆಂಟ್‌ಗಳನ್ನು ಸಹ ಹೊಂದಿರುತ್ತದೆ, ಇದು ಅನೇಕ ರೀತಿಯ ಕಾಯಿಲೆಗಳನ್ನು ದೂರವಿಡಲು ಸಹಾಯ ಮಾಡುತ್ತದೆ, ಆದ್ದರಿಂದ ಅದರ ಪ್ರಯೋಜನಗಳ ಕುರಿತು ತಿಳಿದುಕೊಳ್ಳೋಣ ಬನ್ನಿ, 

ಹೃದಯವನ್ನು ಆರೋಗ್ಯಕರವಾಗಿರಿಸುತ್ತದೆ
ಹೃದಯ ಸಂಬಂಧಿ ಸಮಸ್ಯೆಗಳು ಮಾರಣಾಂತಿಕವಾಗಿರುತ್ತವೆ ಮತ್ತು ಮಧುಮೇಹ ರೋಗಿಗಳು ಹೃದಯ ಸಂಬಂಧಿ ಸಮಸ್ಯೆಗಳ ಅಪಾಯವನ್ನು ಹೆಚ್ಚು ಎದುರಿಸುತ್ತಾರೆ. ಆದ್ದರಿಂದ, ಹೃದಯವನ್ನು ಆರೋಗ್ಯಕರವಾಗಿಡಲು, ಮಧುಮೇಹ ರೋಗಿಗಳು ಅದರ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಕಪ್ಪು ಕಾಫಿ ನಿಮ್ಮ ಹೃದಯವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಆರೋಗ್ಯ ತಜ್ಞರ ಪ್ರಕಾರ, ಕಾಫಿಯಲ್ಲಿ ಅನೇಕ ಜೈವಿಕವಾಗಿ ಸಕ್ರಿಯವಾಗಿರುವ ಸಂಯುಕ್ತಗಳು ಕಂಡುಬರುತ್ತವೆ, ಇದು ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ.

ಚಯಾಪಚಯವನ್ನು ಹೆಚ್ಚಿಸಲು ಸಹಕಾರಿಯಾಗಿದೆ
ಕಡಿಮೆ ಇನ್ಸುಲಿನ್ ಮಟ್ಟದಿಂದಾಗಿ, ಮಧುಮೇಹ ರೋಗಿಗಳ ಚಯಾಪಚಯ ದರಾ ಕಡಿಮೆಯಾಗುತ್ತದೆ ಮತ್ತು ಇಂತಹ ಪರಿಸ್ಥಿತಿಯಲ್ಲಿ, ಕಾಫಿ ಸೇವನೆಯು ಇವರಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಕಪ್ಪು ಕಾಫಿಯಲ್ಲಿರುವ ಕೆಫೀನ್ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ ಮತ್ತು ಇದು ಚಯಾಪಚಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.

ಬೊಜ್ಜು ಕಡಿಮೆ ಮಾಡುತ್ತದೆ
ಮಧುಮೇಹಿಗಳಿಗೆ ತೂಕ ಹೆಚ್ಚಾಗುವುದು ತುಂಬಾ ಅಪಾಯಕಾರಿ, ಹೀಗಾಗಿ ಮಧುಮೇಹಿಗಳು ತಮ್ಮ ದೇಹದ ತೂಕವನ್ನು ನಿಯಂತ್ರಿಸುವುದು ತುಂಬಾ ಮುಖ್ಯ. ಇದರಿಂದ ಹೃದಯಾಘಾತದಂತಹ ಅಪಾಯಗಳನ್ನು ತಪ್ಪಿಸಬಹುದು. ಕಪ್ಪು ಕಾಫಿಯು ದೇಹದ ತೂಕವನ್ನು ಕಡಿಮೆ ಮಾಡುತ್ತದೆ ಮತ್ತು ಮಧುಮೇಹಕ್ಕೆ ಸಂಬಂಧಿಸಿದ ತೊಂದರೆಗಳನ್ನು ಉಂಟುಮಾಡುವುದಿಲ್ಲ. 

ಮಾನಸಿಕ ಆರೋಗ್ಯ ಸುಧಾರಿಸುತ್ತದೆ
ಕಪ್ಪು ಕಾಫಿ ಕುಡಿಯುವುದು ಮಾನಸಿಕ ಆರೋಗ್ಯವನ್ನು ಉತ್ತಮಗೊಳಿಸುತ್ತದೆ ಮತ್ತು ಮನಸ್ಥಿತಿಯನ್ನು ಸುಧಾರಿಸುತ್ತದೆ. ಮಾನಸಿಕ ಆರೋಗ್ಯ ಅಥವಾ ಮೂಡ್ ಸಂಬಂಧಿತ ಸಮಸ್ಯೆಗಳು ಸಾಮಾನ್ಯವಾಗಿ ಮಧುಮೇಹ ರೋಗಿಗಳಲ್ಲಿ ಕಂಡುಬರುತ್ತವೆ ಮತ್ತು ನೀವು ಸಹ ಅಂತಹ ಸಮಸ್ಯೆಗಳಿಂದ ತೊಂದರೆಗೊಳಗಾಗಿದ್ದರೆ ಖಂಡಿತವಾಗಿಯೂ ಪ್ರತಿದಿನ ಒಂದು ಕಪ್ ಕಪ್ಪು ಕಾಫಿಯನ್ನು ಸೇವಿಸಿ.

ಇದನ್ನೂ ಓದಿ-ಪುರುಷರು ಈ ರೀತಿಯಾಗಿ ಅಂಜೂರು ಸೇವಿಸಿದರೆ ಹೆಚ್ಚಾಗುತ್ತದೆ ಸ್ಟೇಮೀನಾ! ಟ್ರೈ ಮಾಡಿ ನೋಡಿ...

ದೇಹಕ್ಕೆ ಶಕ್ತಿ ಸಿಗುತ್ತದೆ
ಇದೆಲ್ಲದರ ಹೊರತಾಗಿ, ದೇಹಕ್ಕೆ ತ್ವರಿತ ಶಕ್ತಿಯನ್ನು ನೀಡಲು ಕಪ್ಪು ಕಾಫಿ ಉತ್ತಮ ಆಯ್ಕೆಯಾಗಿದೆ. ವಾಸ್ತವದಲ್ಲಿ, ಕಾಫಿ ಒಂದು ರೀತಿಯ ಉತ್ತೇಜಕವಾಗಿದೆ, ಇದು ಮೆದುಳು ಮತ್ತು ನರಮಂಡಲದ ಚಟುವಟಿಕೆಯನ್ನು ಹೆಚ್ಚಿಸುತ್ತದೆ ಮತ್ತು ಇದು ನಿಮ್ಮ ದೇಹಕ್ಕೆ ತ್ವರಿತ ಶಕ್ತಿಯನ್ನು ನೀಡುತ್ತದೆ. ಆರೋಗ್ಯ ತಜ್ಞರ ಪ್ರಕಾರ, ಮಧುಮೇಹ ರೋಗಿಗಳು ಸಾಮಾನ್ಯವಾಗಿ ಶಕ್ತಿಯ ಕೊರತೆಯನ್ನು ಅನುಭವಿಸುತ್ತಾರೆ. ಹೀಗಿರುವಾಗ, ಕಪ್ಪು ಕಾಫಿ ಅವರಿಗೆ ಉತ್ತಮ ಆಯ್ಕೆಯಾಗಿದೆ.

ಇದನ್ನೂ ಓದಿ-ಒಂದೇ ತಿಂಗಳಿನಲ್ಲಿ ತೂಕ ಇಳಿಸಿಕೊಳ್ಳಲು ಈ ಆರೋಗ್ಯಕರ ತಿಂಡಿಗಳು ನಿಮ್ಮ ಆಹಾರದಲ್ಲಿರಲಿ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News