Belly Fat Reduce Tips: ಕೆಲವೇ ದಿನಗಳಲ್ಲಿ ಹೊಟ್ಟೆ ಭಾಗದ ಕೊಬ್ಬು ಕರಗಿಸಲು ಈ ಮ್ಯಾಜಿಕ್ ಡ್ರಿಂಕ್ ಈ ರೀತಿ ಸೇವಿಸಿ!

Belly Fat Reduce Drink: ಈ ವಿಶೇಷ ಜ್ಯೂಸ್ ನಿಮ್ಮ ಆರೋಗ್ಯದ ಜೊತೆಗೆ ನಿಮ್ಮ ತ್ವಚೆಯನ್ನು ಉತ್ತಮವಾಗಿಡಬಹುದು. ಹೌದು, ಇಂದು ನಾವು ನಿಮಗೆ ಅಂತಹ ಒಂದು ಪಾನೀಯದ ಕುರಿತು ಮಾಹಿತಿಯನ್ನು ನೀಡುತ್ತಿದ್ದೇವೆ. ಅದು ನಿಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗುವುದರೆ ಜೊತೆಗೆ ನಿಮ್ಮ ಮುಖದ ಸೌಂದರ್ಯವನ್ನು ಹೆಚ್ಚಿಸುತ್ತದೆ (Lifestyle News In Kannada).  

Written by - Nitin Tabib | Last Updated : Feb 18, 2024, 08:25 PM IST
  • ಸಾಮಾನ್ಯವಾಗಿ ಜನರು ಚಹಾ ಮತ್ತು ಕಾಫಿಯೊಂದಿಗೆ ತಮ್ಮ ದಿನವನ್ನು ಪ್ರಾರಂಭಿಸುತ್ತಾರೆ.
  • ಆದರೆ ನಿಮಗೆ ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಕೇಸರಿ ನೀರನ್ನು ಕುಡಿಯುವುದರಿಂದ ಆಗುವ ಪ್ರಯೋಜನಗಳು ತಿಳಿದಿವೆಯೇ?
  • ಇಲ್ಲ ಎಂದಾದಲ್ಲಿ ಕೇಳಿ, ನಿಮ್ಮ ನಿಮ್ಮ ಬೆಳಗಿನ ಆರಂಭ ಈ ಪಾನೀಯದೊಂದಿಗೆ ಆರಂಭಿಸುವುದು ಹಲವು ಆರೋಗ್ಯಕರ ಲಾಭಗಳನ್ನು ನೀಡುತ್ತದೆ.
Belly Fat Reduce Tips: ಕೆಲವೇ ದಿನಗಳಲ್ಲಿ ಹೊಟ್ಟೆ ಭಾಗದ ಕೊಬ್ಬು ಕರಗಿಸಲು ಈ ಮ್ಯಾಜಿಕ್ ಡ್ರಿಂಕ್ ಈ ರೀತಿ ಸೇವಿಸಿ! title=

ಬೆಂಗಳೂರು: ನಾವು ಸೇವಿಸುವ ಆಹಾರ ಮತ್ತು ಪಾನೀಯದ ಪ್ರಭಾವ ನಮ್ಮ ಆರೋಗ್ಯ ಮತ್ತು ನಮ್ಮ ಚರ್ಮದ ಮೇಲೆ ಸ್ಪಷ್ಟವಾಗಿ ಕಾಣಿಸುತ್ತದೆ. ಹೀಗಾಗಿ  ನಾವು ನಮ್ಮ  ಆರೋಗ್ಯದ ಜೊತೆಗೆ ನಮ್ಮ ತ್ವಚೆಯನ್ನು ಉತ್ತಮವಾಗಿಡುವ ಅಂತಹ ವಸ್ತುಗಳನ್ನು ನಾವು ಸೇವಿಸುವುದು ತುಂಬಾ ಮುಖ್ಯವಾಗಿದೆ ಇಂದು ನಾವು ನಿಮಗೆ ಅಂತಹ ಒಂದು ಆರೋಗ್ಯಕರ ಪಾನೀಯದ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದು, ಅದು ಕೇವಲ ಆರೋಗ್ಯ ಅಷ್ಟೇ ಅಲ್ಲ ಮುಖದ ಸೌಂದರ್ಯವನ್ನು ಕೂಡ ಹೆಚ್ಚಿಸುತ್ತದೆ. (Lifestyle News In Kannada). 

ಸಾಮಾನ್ಯವಾಗಿ ಜನರು ಚಹಾ ಮತ್ತು ಕಾಫಿಯೊಂದಿಗೆ ತಮ್ಮ ದಿನವನ್ನು ಪ್ರಾರಂಭಿಸುತ್ತಾರೆ. ಆದರೆ ನಿಮಗೆ ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಕೇಸರಿ ನೀರನ್ನು ಕುಡಿಯುವುದರಿಂದ ಆಗುವ ಪ್ರಯೋಜನಗಳು ತಿಳಿದಿವೆಯೇ? ಇಲ್ಲ ಎಂದಾದಲ್ಲಿ ಕೇಳಿ, ನಿಮ್ಮ ನಿಮ್ಮ ಬೆಳಗಿನ ಆರಂಭ ಈ ಪಾನೀಯದೊಂದಿಗೆ ಆರಂಭಿಸುವುದು ಹಲವು ಆರೋಗ್ಯಕರ ಲಾಭಗಳನ್ನು ನೀಡುತ್ತದೆ. ಆಯುರ್ವೇದದಲ್ಲಿ ಕೇಸರಿಯನ್ನು ಹಿಂದಿನಿಂದಲೂ ಬಳಸಲಾಗುತ್ತಿದೆ. ಫೈಬರ್ ಮತ್ತು ಕ್ಯಾಲ್ಸಿಯಂ ಇದರಲ್ಲಿ ಸಾಕಷ್ಟು ಕಂಡುಬರುತ್ತದೆ. ಇದು ನಿಮ್ಮ ಚರ್ಮ ಮತ್ತು ಆರೋಗ್ಯ ಎರಡಕ್ಕೂ ಪ್ರಯೋಜನಕಾರಿ ಎಂದು ಸಾಬೀತಾಗುತ್ತದೆ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕೇಸರಿ ನೀರು ಸೇವಿಸುವುದು ಅನೇಕ ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ಹೋಗಲಾಡಿಸುತ್ತದೆ, ಆದ್ದರಿಂದ ಇದನ್ನು ಸೇವಿಸುವುದರಿಂದ ಆಗುವ ಪ್ರಯೋಜನಗಳನ್ನು ತಿಳಿದುಕೊಳ್ಳೋಣ ಬನ್ನಿ.

ಕೇಸರಿ ನೀರಿನ ಪ್ರಯೋಜನಗಳು
ಇದು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ದಿನವಿಡೀ ನಿಮ್ಮ ದೇಹವನ್ನು ಶಕ್ತಿಯುತವಾಗಿರಿಸಲು ಸಹಾಯ ಮಾಡುತ್ತದೆ.
ಇದರ ಬಳಕೆಯು ಕೂದಲು ಉದುರುವಿಕೆಯ ಸಮಸ್ಯೆಗೆ ಸಹ ಸಹಾಯ ಮಾಡುತ್ತದೆ.
ನಿಮ್ಮ ಚರ್ಮಕ್ಕೆ ಹೊಳಪನ್ನು ತರುತ್ತದೆ.
ಇದು ಹೃದಯದ ಆರೋಗ್ಯಕ್ಕೂ ಪ್ರಯೋಜನಕಾರಿ.
ಮುಟ್ಟಿನ ನೋವಿನಿಂದ ಪರಿಹಾರವನ್ನು ನೀಡುತ್ತದೆ.
ಇದರ ಪ್ರಯೋಜನಗಳನ್ನು ತಿಳಿದುಕೊಂಡ ಬಳಿಕ, ಈ ಒಂದು ಸಂಗತಿ ನಿಮಗೆ ಹಲವಾರು ರೀತಿಯಲ್ಲಿ ಪ್ರಯೋಜನವನ್ನು ನೀಡುತ್ತದೆ ಎಂಬುದನ್ನೂ  ನೀವು ಅರ್ಥಮಾಡಿಕೊಂಡಿರಬೇಕು. ಹಾಗಾದರೆ ಕೇಸರಿ ನೀರನ್ನು ಹೇಗೆ ತಯಾರಿಸಬೇಕು ಮತ್ತು ಅದನ್ನು ಹೇಗೆ ಸೇವಿಸಬೇಕು ಎಂಬುದನ್ನು ಈಗ ತಿಳಿಯೋಣ.

ಇದನ್ನೂ ಓದಿ-Health Effects Of Eating Brinjal: ಈ 4 ಜನರ ಪಾಲಿಗೆ ಬದನೆ ಸೇವನೆ ವಿಷಕ್ಕೆ ಸಮಾನ!

ಕೇಸರಿ ನೀರನ್ನು ಹೇಗೆ ಮಾಡುವುದು?
ಕೇಸರಿ ನೀರನ್ನು ತಯಾರಿಸಲು, 1 ಕಪ್ ನೀರಿನಲ್ಲಿ ಕೇಸರಿ ಹಾಕಿ, ಅದಕ್ಕೆ ದಾಲ್ಚಿನ್ನಿ ಮತ್ತು ಏಲಕ್ಕಿ ಸೇರಿಸಿ ಮತ್ತು ಸುಮಾರು ಐದು ನಿಮಿಷಗಳ ಕಾಲ ನೀರನ್ನು ಕುದಿಸಿ. ಇದಾದ ಬಳಿಕ  ಸ್ವಲ್ಪ ಸಮಯದವರೆಗೆ ತಣ್ಣಗಾಗಲು ಇರಿಸಿ. ಆರಾಮವಾಗಿ ಕುಡಿಯಬಹುದಾದಷ್ಟು ತಣ್ಣಗಾದಾಗ, ಅದಕ್ಕೆ ಜೇನುತುಪ್ಪ ಬೆರೆಸಿ ಸೇವಿಸಿ. ಇದು ತುಂಬಾ ಬಿಸಿಯಾಗಿರುವಾಗ ಜೇನುತುಪ್ಪವನ್ನು ಸೇರಿಸಬೇಡಿ, ತುಂಬಾ ಬಿಸಿ ನೀರಿನಲ್ಲಿ ಜೇನುತುಪ್ಪವನ್ನು ಬೆರೆಸುವುದು ಅದರ ಪೋಷಕಾಂಶಗಳನ್ನು ನಾಶಪಡಿಸುತ್ತದೆ ಎಂಬುದನ್ನು ನೆನಪಿನಲ್ಲಿಡಿ.

ಇದನ್ನೂ ಓದಿ-Bajara For Hair: ಕೂದಲುದುರುವಿಕೆಗೆ ಬ್ರೇಕ್ ಹಾಕಿ, ದಟ್ಟ ಮತ್ತು ನೀಳವಾದ ಕೇಶರಾಶಿ ನಿಮ್ಮದಾಗಿಸಲು ಈ ರೀತಿ ಸಜ್ಜೆ ಬಳಸಿ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News