ಇದು ಪ್ರಪಂಚದ ಅತಿ ದೊಡ್ಡ ಲೈಂಗಿಕ ಹಗರಣ: ಸಚಿವ ಕೃಷ್ಣ ಬೈರೇಗೌಡ

ಅನೇಕ ಹೆಣ್ಣು ಮಕ್ಕಳ ಭವಿಷ್ಯ ಮಂಕಾಗಿ ಹೋಗಿದೆ. ಅನೇಕರು ಊರು ಬಿಟ್ಟು ಹೋಗಿದ್ದಾರೆ. ಇಂತಹ ಹೆಣ್ಣು ಮಕ್ಕಳ ಮಾನ ಕಾಪಾಡುವುದು ಬಿಟ್ಟು ಪ್ರಕರಣದ ಹಾದಿ ತಪ್ಪಿಸುವುದು ನಿಲ್ಲಿಸಬೇಕು ಎಂದರು.

Written by - Prashobh Devanahalli | Last Updated : May 8, 2024, 08:41 PM IST
    • ನೂರಾರು ಹಿಂದೂ ಮಹಿಳೆಯರ ಮಾಂಗಲ್ಯ ಹರಣ ಮಾಡಿರುವ ಪ್ರಕರಣ
    • ಮಾನಹರಣ, ಶೀಲ ಹರಣ, ಮನೆ ಹಾಳು ಮಾಡಿರುವ ಪ್ರಕರಣ
    • ಅನೇಕ ಹೆಣ್ಣು ಮಕ್ಕಳ ಭವಿಷ್ಯ ಮಂಕಾಗಿ ಹೋಗಿದೆ ಎಂದ ಸಚಿವ ಕೃಷ್ಣ ಬೈರೇಗೌಡ
ಇದು ಪ್ರಪಂಚದ ಅತಿ ದೊಡ್ಡ ಲೈಂಗಿಕ ಹಗರಣ: ಸಚಿವ ಕೃಷ್ಣ ಬೈರೇಗೌಡ title=
File Photo

ಬೆಂಗಳೂರು: ಪ್ರಪಂಚದ ಅತಿದೊಡ್ಡ ಲೈಂಗಿಕ ದೌರ್ಜನ್ಯ ಪ್ರಕರಣದ ಬಗ್ಗೆ ನಾವು ಮಾತನಾಡುತ್ತಿದ್ದೇವೆ. ನೂರಾರು ಹಿಂದೂ ಮಹಿಳೆಯರ ಮಾಂಗಲ್ಯ ಹರಣ ಮಾಡಿರುವ ಪ್ರಕರಣ. ಮಾನಹರಣ, ಶೀಲ ಹರಣ, ಮನೆ ಹಾಳು ಮಾಡಿರುವ ಪ್ರಕರಣ ಇದಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ಅನೇಕ ಹೆಣ್ಣು ಮಕ್ಕಳ ಭವಿಷ್ಯ ಮಂಕಾಗಿ ಹೋಗಿದೆ. ಅನೇಕರು ಊರು ಬಿಟ್ಟು ಹೋಗಿದ್ದಾರೆ. ಇಂತಹ ಹೆಣ್ಣು ಮಕ್ಕಳ ಮಾನ ಕಾಪಾಡುವುದು ಬಿಟ್ಟು ಪ್ರಕರಣದ ಹಾದಿ ತಪ್ಪಿಸುವುದು ನಿಲ್ಲಿಸಬೇಕು ಎಂದರು.

ಇದನ್ನೂ ಓದಿ: ಟಿ20 ವಿಶ್ವಕಪ್’ನಲ್ಲಿ ಧೋನಿ ಹೆಸರಲ್ಲಿದೆ ವಿಶೇಷ ದಾಖಲೆ

ಇಲ್ಲಿ ತಪ್ಪು ಮಾಡಿದವರಿಗೆ, ಮಾನ ಹಾನಿ ಮಾಡಿದವರಿಗೆ ಶಿಕ್ಷೆ ಆಗಬೇಕು. ಆದರೆ ಮಾನ, ಮನೆ, ಮಾಂಗಲ್ಯ ದೋಚಿದ್ದು ಅಪರಾಧ ಅಲ್ಲ, ಇದರ ವಿರುದ್ದ ಮಾತನಾಡಿದ್ದು ಅಪರಾಧವಾಗಿದೆ. ಮೂಲ ಪ್ರಕರಣವನ್ನು ಮುಚ್ಚಿ ಹಾಕುವ ವ್ಯವಸ್ಥಿತ ಹುನ್ನಾರ ನಡೆಯುತ್ತಿದೆ. ಸಂತ್ರಸ್ಥರ ಮಾನ ಹರಣವಾಗಿದೆ ಜೊತೆಗೆ ನ್ಯಾಯ ಹರಣ ಮಾಡಲಾಗುತ್ತಿದೆ ಎಂದು ಕಟುವಾಗಿ ನುಡಿದರು.

ಮಹಿಳೆಯರ ಮಾನದ ಬಗ್ಗೆ ಮಾತನಾಡಬೇಕಾಗಿತ್ತು, ಆದರೆ ಬೇರೆಯದೆ ವಿಚಾರ ಚರ್ಚೆ ಆಗುತ್ತಿದೆ. ಪ್ರಕರಣದ ಆರೋಪಿಯ ಬಳಿ ಕೆಲಸ ಮಾಡುತ್ತಿದ್ದವನು ಬಿಜೆಪಿ ನಾಯಕನಿಗೆ ಕೊಟ್ಟರು, ಆತನಿಗೆ ಸಾಕ್ಷಿ ಕೊಟ್ಟು ಒಂದು ವರ್ಷದ ಮೇಲಾಗಿದೆ. ಇದನ್ನು ತೆಗೆದುಕೊಂಡವನು ವಕೀಲ ನ್ಯಾಯದ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುವವನು ಏಕೆ ಇದನ್ನು ಮೊದಲೇ ಪೊಲೀಸರ ಗಮನಕ್ಕೆ ತರಲಿಲ್ಲ. ಆತ ಕೊಟ್ಟಿದಿದ್ದರೇ ಬೀದಿಯಲ್ಲಿ ಯಾರ ಮಾನವೂ ಹರಾಜಾಗುತ್ತಿರಲಿಲ್ಲ. ಪೊಲೀಸರ ಮೇಲೆ ನಂಬಿಕೆ ಇಲ್ಲದಿದ್ದರೆ ಮುಖ್ಯನ್ಯಾಯಮೂರ್ತಿಗಳಿಗೆ ನೀಡಬಹುದಿತ್ತು. ಅಪರಾಧವನ್ನು ಮುಚ್ಚಿಟ್ಟಿರುವುದು ಕೂಡ ಅಷ್ಟೇ ಅಪರಾಧ ಎಂದರು.

ಇಂತಹ ಬ್ಲಾಕ್ ಮೇಲ್ ಮಾಡುವ ವ್ಯಕ್ತಿ ಕುಮಾರಸ್ವಾಮಿ ಅವರನ್ನು ಭೇಟಿಯಾಗಿದ್ದಾನೆ ಎಂದು ಹೇಳಲಾಗುತ್ತಿದೆ. ಇದರ ಬಗ್ಗೆ ಚರ್ಚೆಮಾಡಿದವರು ಹಾಸನಾಂಭ ದೇವಸ್ಥಾನಕ್ಕೆ ಬಂದು ದೇವರ ಮೇಲೆ ಕೈಯಿಟ್ಟು ಚರ್ಚೆ ಮಾಡಲಿ. ಟಿಕೆಟ್ ತಪ್ಪಿಸಲು ಇದನ್ನು ಬಳಸಿಕೊಂಡರು. ನೂರಾರು ಮಹಿಳೆಯರ ಮಾನ ಹರಣ ಆಗಿರುವುದೇ ಇವರಿಂದ ಎಂದರು.

ಬಿಜೆಪಿಯವರು ಇವರ ಬಳಿ ಇರುವ ಅಷ್ಟು ಮತಗಳನ್ನು ಹಾಕಿಸಿಕೊಂಡು ಮುಗಿಸುವ ಪ್ರಯತ್ನ ಮಾಡುತ್ತಿದ್ದಾರೆ. ಪ್ರಹ್ಲಾದ್ ಜೋಶಿ, ಮೋದಿ ಅವರ ಹೇಳಿಕೆಗಳು ಇದೇ ರೀತಿ ಇವೆ. ಜೆಡಿಎಸ್ ವಿರುದ್ದ ಮಾತನಾಡಲು ಆಗುವುದಿಲ್ಲ ಎಂದು ಕಾಂಗ್ರೆಸ್ ವಿರುದ್ದ ಮಾತನಾಡುತ್ತಿದ್ದಾರೆ. ಲೈಂಗಿಕ ದೌರ್ಜನ್ಯ ನಡೆಸು ಎಂದು ಕಾಂಗ್ರೆಸ್ ಹೇಳಿತ್ತೇ?. ಅರವತ್ತು ವರ್ಷದ ಮಹಿಳೆಯನ್ನು ಅಪಹರಣ ಮಾಡಲು ಕಾಂಗ್ರೆಸ್ ಹೇಳಿತ್ತೇ? ಅಪಹರಣ ಮಾಡಿದ್ದೂ ಸುಳ್ಳು ಎಂದು ಹೇಳುತ್ತಾರೆ ಇವರು. ಇವರುಗಳು ಏನೂ ಮಾಡಿದರೂ ನಡೆಯುತ್ತದೆ. ಕಾನೂನಿಗಿಂತ, ಸಂವಿಧಾನಕ್ಕಿಂತ ಮೇಲೆ ಎಂದುಕೊಂಡಿದ್ದಾರೆ. ಅವರ ಕುಟುಂಬದಲ್ಲಿಒಬ್ಬರಾದರೂ ಈ ಘಟನೆಯನ್ನು ಖಂಡಿಸಿಲ್ಲ. ಎಲ್ಲೂ ಇರುವ ಅವನನ್ನು ಕರೆಸಿ ಕಸ್ಟಡಿಗೆ ಒಳಗಾಗು ಎಂದು ಹೇಳಬಹುದಿತ್ತಲ್ಲವೇ? ಎಂದರು.

ಇದನ್ನೂ ಓದಿ: ಟೀಂ ಇಂಡಿಯಾದ ಈ ಆಟಗಾರನೇ ನನ್ನ ನೆಚ್ಚಿನ ಕ್ರಿಕೆಟಿಗ ಎಂದ SRH ಕ್ಯಾಪ್ಟನ್ ಪ್ಯಾಟ್ ಕಮಿನ್ಸ್

ದೇವರಾಜೇಗೌಡ ಅವರು ಕಳೆದ ಒಂದು ವರ್ಷದಿಂದ ಅನೇಕ ಹೇಳಿಕೆಗಳನ್ನು ಗಮನಿಸುತ್ತಾ ಹೋಗಬೇಕು. ಈತ ಎಸ್ ಐಟಿ ತನಿಖೆ ಪ್ರಾರಂಭ ಆದ ಕಾರಣಕ್ಕೆ ಹಾಗೂ ಇದರಿಂದ ಆತನಿಗೆ ತೊಂದರೆ ಎಂದು ಗೊತ್ತಾಗಿ ವಿರುದ್ದವಾಗಿ ಹೇಳಿಕೆ ನೀಡುತ್ತಿದ್ದಾರೆ. ಎಸ್ ಐಟಿ ಸತ್ಯವನ್ನು ಹೊರಗೆ ತರುತ್ತದೆ. ಅಲ್ಲದೇ ಸಿಬಿಐ ಗೆ ಈ ಪ್ರಕರಣ ಹೋದರೆ ಕೋಲ್ಡ್ ಸ್ಟೋರೇಜ್ಗೆ ಸೇರುತ್ತದೆ ಎಂದು ಹೀಗೆ ಮಾಡಲಾಗುತ್ತಿದೆ. ಇಂತಹ ಹೀನ ಕೆಲಸ ನಮ್ಮ ಜಾತಿಯವರಿಂದ ಆಗಿದೆ ಎಂದು ಹೇಳಲು ನಾಚಿಕೆಯಾಗುತ್ತಿದೆ ಎಂದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್

 

Trending News