ಕಳೆದ 5 ವರ್ಷದಲ್ಲಿ 1.87ಲಕ್ಷ ಕೋಟಿ ರೂ. ರಾಜ್ಯಕ್ಕೆ ನಷ್ಟ : ಸಿಎಂ ಸಿದ್ದರಾಮಯ್ಯ

ತೆರಿಗೆ ಪಾಲು ಕಡಿಮೆಯಾಗಿರುವುದನ್ನು ಗಮನಿಸಿ 15ನೇ ಹಣಕಾಸು ಆಯೋಗ ಮಧ್ಯಂತರ ವರದಿಯಲ್ಲಿ ರಾಜ್ಯಕ್ಕೆ 5,495 ಕೋಟಿ ರೂ. ವಿಶೇಷ ಅನುದಾನ ನೀಡಲು ಶಿಫಾರಸು ಮಾಡಿತ್ತು. ನಮ್ಮ ರಾಜ್ಯದಿಂದ ದೆಹಲಿಯಲ್ಲಿ ಪ್ರತಿನಿಧಿಸುವ ಹಣಕಾಸು ಸಚಿವೆ ಇದನ್ನು ತಿರಸ್ಕಾರ ಮಾಡಿದರು. 15ನೇ ಹಣಕಾಸು ಆಯೋಗದ ಅಂತಿಮ‌ ವರದಿಯಲ್ಲಿ 3000 ಕೋಟಿ ರೂ. ಫೆರಿಪರೆಲ್ ರಿಂಗ್ ರಸ್ತೆ, ಜಲ‌ಮೂಲಗಳ ಅಭಿವೃದ್ಧಿ ಗೆ 3000 ಕೋಟಿ ರೂ. ಒಟ್ಟು ಆರು ಸಾವಿರ ಕೋಟಿಗಳನ್ನು ಕೊಡುವಂತೆ ಶಿಫಾರಸು ಮಾಡಿದ್ದರು.  

Written by - RACHAPPA SUTTUR | Last Updated : Feb 5, 2024, 02:25 PM IST
  • ಬಿಜೆಪಿಯಲ್ಲಿ ಯಡಿಯೂರಪ್ಪ, ಬೊಮ್ಮಾಯಿ ಅವರಿಗೆ ಈ ಬಗ್ಗೆ ಮಾತನಾಡಲು ಬಾಯಿನೇ ಇಲ್ಲ.
  • ಆರ್. ಅಶೋಕ್ ಗೆ ಪಾಪ ಗೊತ್ತೇ ಇಲ್ಲ.
  • ಪ್ರಹ್ಲಾದ್ ಜೋಷಿ, ಖೂಬಾ, ಶೋಭಾ ಕರಂದ್ಲಾಜೆ ಕೇಂದ್ರ ಮಂತ್ರಿಯಾಗಿದ್ದಾರೆ ಆದರೆ ಬಾಯಿ ಬಿಡುತ್ತಿಲ್ಲ.
ಕಳೆದ 5 ವರ್ಷದಲ್ಲಿ 1.87ಲಕ್ಷ ಕೋಟಿ ರೂ. ರಾಜ್ಯಕ್ಕೆ ನಷ್ಟ : ಸಿಎಂ ಸಿದ್ದರಾಮಯ್ಯ title=

ಬೆಂಗಳೂರು : 14ನೇ ಹಣಕಾಸು ಆಯೋಗದಿಂದ 15ನೇ ಹಣಕಾಸು ಆಯೋಗದ ತೆರಿಗೆ ಹಂಚಿಕೆ ಅನ್ಯಾಯದಿಂದ ರಾಜ್ಯಕ್ಕೆ ಒಟ್ಟು 1,87,867 ಕೋಟಿ ರೂ. ನಷ್ಟವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ವಿಧಾನಸೌಧದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಜೊತೆ ಜಂಟಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ರಾಜ್ಯಕ್ಕೆ ಆಗಿರುವ ಅನುದಾನ ಅನ್ಯಾಯದ ವಿರುದ್ಧ ಫೆ.7ರಂದು ದೆಹಲಿ ಜಂತರ್ ಮಂಥರ್ ನಲ್ಲಿ ನಾವು ಪ್ರತಿಭಟನೆ ನಡೆಸುತ್ತಿದ್ದು, ಇದು ಬಿಜೆಪಿ ವಿರುದ್ಧದ ಪ್ರತಿಭಟನೆ ಅಲ್ಲ. ಕೇಂದ್ರ ಸರ್ಕಾರದ, ದೇಶದ ಜನರ ಗಮನ ಸೆಳೆಯಲು ಪ್ರತಿಭಟನೆ ಮಾಡುತ್ತಿದ್ದೇವೆ. ಅನಿವಾರ್ಯ ಕಾರಣದಿಂದ ಪ್ರತಿಭಟನೆ ಮಾಡುತ್ತಿದ್ದೇವೆ. ಈ ಪ್ರತಿಭಟನೆ ಬಿಜೆಪಿ ವಿರುದ್ಧ ಮಾಡುವ ಪ್ರತಿಭಟನೆ ಅಲ್ಲ.‌ ಇದು ರಾಜಕೀಯ ಪ್ರತಿಭಟನೆ ಅಲ್ಲ.‌ ದೇಶದ ಜನರ ಗಮನ ಸೆಳೆಯಲು, ಕೇಂದ್ರ ಮಲತಾಯಿ ಧೋರಣೆ, ತಾರತಮ್ಯದ ಬಗ್ಗೆ ಪ್ರತಿಭಟನೆ ನಡೆಸುತ್ತೇವೆ. ಪ್ರತಿಭಟನೆಯಲ್ಲಿ ಎಲ್ಲ ಮಂತ್ರಿಗಳು, ಕೈ ಶಾಸಕರು ಭಾಗವಹಿಸುತ್ತಿದ್ದಾರೆ ಎಂದರು.

ಇಲ್ಲಿವರೆಗೆ 15 ಹಣಕಾಸು ಆಯೋಗ ಆಗಿದೆ. 14ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ 42% ತೆರಿಗೆ ಹಂಚಿಕೆ  ಮಾಡಿದ್ದರು. 15ನೇ ಹಣಕಾಸು ಆಯೋಗದಲ್ಲಿ ಅದು 41% ಗೆ ಇಳಿಯಿತು. 14ನೇ ಹಣಕಾಸು ಆಯೋಗದಲ್ಲಿ ಇದ್ದ 4.71% ತೆರಿಗೆ ಪಾಲು 15ನೇ ಹಣಕಾಸು ಆಯೋಗದಲ್ಲಿ ಅದು 3.64% ಗೆ ಇಳಿಕೆ ಆಗಿದೆ. ಅಂದರೆ 1.7% ಕಡಿತವಾಗಿದೆ. ನಾಲ್ಕು ವರ್ಷದಲ್ಲಿ 45 ಸಾವಿರ ಕೋಟಿ ಕರ್ನಾಟಕಕ್ಕೆ ತೆರಿಗೆ ಪಾಲು ಕಡಿಮೆಯಾಗಿದೆ. ಐದು ವರ್ಷದಲ್ಲಿ ಒಟ್ಟು 62 ಸಾವಿರ ಕೋಟಿ ತೆರಿಗೆ ಪಾಲು ಕಡಿಮೆಯಾಗಿದೆ ಎಂದು ಕಿಡಿ ಕಾರಿದರು.

ಇದನ್ನೂ ಓದಿ- ರಾಜ್ಯಕ್ಕೆ ಆಗುತ್ತಿರುವ ನಿರಂತರ ಅನ್ಯಾಯ ಇನ್ನೆಷ್ಟು ದಿನ ನೋಡಿಕೊಂಡು ಸುಮ್ಮನೆ ಕೂರಬೇಕು: ಡಿಸಿಎಂ

ತೆರಿಗೆ ಪಾಲು ಕಡಿಮೆಯಾಗಿರುವುದನ್ನು ಗಮನಿಸಿ 15ನೇ ಹಣಕಾಸು ಆಯೋಗ ಮಧ್ಯಂತರ ವರದಿಯಲ್ಲಿ ರಾಜ್ಯಕ್ಕೆ 5,495 ಕೋಟಿ ರೂ. ವಿಶೇಷ ಅನುದಾನ ನೀಡಲು ಶಿಫಾರಸು ಮಾಡಿತ್ತು. ನಮ್ಮ ರಾಜ್ಯದಿಂದ ದೆಹಲಿಯಲ್ಲಿ ಪ್ರತಿನಿಧಿಸುವ ಹಣಕಾಸು ಸಚಿವೆ ಇದನ್ನು ತಿರಸ್ಕಾರ ಮಾಡಿದರು. 15ನೇ ಹಣಕಾಸು ಆಯೋಗದ ಅಂತಿಮ‌ ವರದಿಯಲ್ಲಿ 3000 ಕೋಟಿ ರೂ. ಫೆರಿಪರೆಲ್ ರಿಂಗ್ ರಸ್ತೆ, ಜಲ‌ಮೂಲಗಳ ಅಭಿವೃದ್ಧಿ ಗೆ 3000 ಕೋಟಿ ರೂ. ಒಟ್ಟು ಆರು ಸಾವಿರ ಕೋಟಿಗಳನ್ನು ಕೊಡುವಂತೆ ಶಿಫಾರಸು ಮಾಡಿದ್ದರು.  ಎರಡೂ ಸೇರಿ 11,495 ಕೋಟಿ ರೂ. ರಾಜ್ಯಕ್ಕೆ ಶಿಫಾರಸು ಮಾಡಲಾಗಿತ್ತು. ತೆರಿಗೆ ಪಾಲು 62000 ಕೋಟಿ ರೂ. ಜೊತೆಗೆ 11,495 ಕೋಟಿ ರೂ‌ ರಾಜ್ಯಕ್ಕೆ ನಷ್ಟವಾಗಿದೆ.  ಆ ಮೂಲಕ 73,593 ಕೋಟಿ ರೂ.‌ ನಮಗೆ ಕಡಿಮೆಯಾಗಿದೆ ಎಂದು ಅಂಕಿಅಂಶ ನೀಡಿದರು. 

ಜಿಎಸ್ ಟಿ ಜಾರಿಗೆ ಬಂದಾಗ 15% ನಮ್ಮ ತೆರಿಗೆ ಸಂಗ್ರಹ ವೃದ್ಧಿ ಇತ್ತು. ಜಿಎಸ್ ಟಿ ಬಂದ ಬಳಿಕ ಒಂದು ವೇಳೆ ನಷ್ಟ ಆದರೆ ಅದನ್ನು ತುಂಬಿ ಕೊಡುತ್ತೇವೆ ಎಂದು ಕೇಂದ್ರ ಹೇಳಿತ್ತು. ಜೂನ್ 2022ಗೆ ಜಿಎಸ್ ಟಿ ಪರಿಹಾರ ಸ್ಥಗಿತವಾಯಿತು. ಈಗ ಪರಿಹಾರ ಕೊಡ್ತಾ ಇಲ್ಲ. ನಮಗೆ ಹಿಂದಿನ ತೆರಿಗೆ ವೃದ್ಧಿ 15% ತಲುಪಲು ಸಾಧ್ಯವಾಗಿಲ್ಲ. ಅದಕ್ಕಾಗಿ ಜಿಎಸ್ ಟಿ ನಷ್ಟ ಪರಿಹಾರ ಮುಂದುವರಿಸಿ ಎಂದು ಮನವಿ ಮಾಡಿದ್ದೆವು. ಆದರೆ ಅದು ಆಗಿಲ್ಲ ಎಂದು ವಾಗ್ದಾಳಿ ನಡೆಸಿದರು.

ಕರ್ನಾಟಕದಿಂದ ಸುಮಾರು 4,30,000 ಕೋಟಿ ರೂ. ತೆರಿಗೆ ವಸೂಲಿಯಾಗುತ್ತೆ. ಕರ್ನಾಟಕ ಮಹಾರಾಷ್ಟ್ರ ಬಿಟ್ಟರೆ ತೆರಿಗೆ ಸಂಗ್ರಹ ದಲ್ಲಿ ಎರಡನೇ ಅತಿ ದೊಡ್ಡ ರಾಜ್ಯವಾಗಿದೆ. 2023-24 ಸಾಲಿನಲ್ಲಿ ಈ ವರ್ಷ ನಮಗೆ ತೆರಿಗೆ ಪಾಲಿನ ರೂಪದಲ್ಲಿ 37,252 ಕೋಟಿ ರೂ. ಬರಲಿದೆ. ಕೇಂದ್ರ ಪುರಸ್ಕೃತ ಯೋಜನೆಗೆ 13,005 ಕೋಟಿ ರೂ. ಬರಬೇಕಿದೆ. ಎರಡೂ ಸೇರಿ ಈ ವರ್ಷ ಒಟ್ಟು 50,257 ಕೋಟಿ ರೂ. ಬರುತ್ತಿದೆ. ಅಂದರೆ ರಾಜ್ಯದಿಂದ ಸಂಗ್ರಹವಾಗುವ 4,30,000 ಕೋಟಿ ರೂ. ತೆರಿಗೆಯಲ್ಲಿ ಕೇವಲ 50,257 ಕೋಟಿ ರೂ. ಮಾತ್ರ ಕೊಡಲಾಗಿದೆ. ಅಂದರೆ 100 ರೂ.ನಲ್ಲಿ ನಮಗೆ 12-13 ರೂ. ಮಾತ್ರ ಸಿಗುತ್ತಿದೆ ಎಂದರು.

2018-19ರಲ್ಲಿ ಕೇಂದ್ರ ಬಜೆಟ್ ಗಾತ್ರ 24,42,213 ಕೋಟಿ ಇತ್ತು. ಆಗ ತೆರಿಗೆ ಪಾಲು 35,895 ಕೋಟಿ ಮತ್ತು ಕೇಂದ್ರ ಪುರಸ್ಕೃತ ಯೋಜನೆಯಡಿ 16,082 ಕೋಟಿ ಅನುದಾನ ಸಿಗುತ್ತಿತ್ತು. 2023-24 ಸಾಲಿನಲ್ಲಿ ಕೇಂದ್ರ ದ ಬಜೆಟ್ ಗಾತ್ರ 45,03,097 ಕೋಟಿ ಇದೆ. ನಮಗೆ 50,257 ಕೋಟಿ ಮಾತ್ರ ಅನುದಾನ ಸಿಗಲಿದೆ.  2017-18 ನಲ್ಲಿ 2.2% ಇದ್ದ ತೆರಿಗೆ ಪಾಲು ಹಾಗೂ ಅನುದಾನ 2023-24 ಸಾಲಿನಲ್ಲಿ 1.23% ಗೆ ಇಳಿಕೆಯಾಗಿದೆ. ಸೆಸ್ ಮತ್ತು ಸರ್ಚಾರ್ಜ್ ಪ್ರತಿ ವರ್ಷ ಹೆಚ್ಚು ಮಾಡುತ್ತಿದ್ದಾರೆ. ಇದರಲ್ಲಿ ರಾಜ್ಯಗಳಿಗೆ ಪಾಲು ಕೊಡಲ್ಲ. ಅದನ್ನು ಕೇಂದ್ರ ಸರ್ಕಾರವೇ ಇಟ್ಟುಕೊಳ್ಳುತ್ತಾರೆ ಎಂದು ವಾಗ್ದಾಳಿ ನಡೆಸಿದರು. 

ಇದನ್ನೂ ಓದಿ- ಯುಪಿಎ ಅವಧಿಯಲ್ಲಿ ರಾಜ್ಯಕ್ಕೆ ಅನ್ಯಾಯವಾಗಿಲ್ಲ: ಗೃಹ ಸಚಿವ ಡಾ. ಜಿ.ಪರಮೇಶ್ವರ

14ನೇ ಹಣಕಾಸು ಆಯೋಗದಿಂದ 15ನೇ ಹಣಕಾಸು ಆಯೋಗದ ವರೆಗೆ ರಾಜ್ಯಕ್ಕೆ ಸುಮಾರು 1,87,000 ಕೋಟಿ ರೂ‌. ನಷ್ಟ ಆಗಿದೆ. ಭದ್ರಾ ಮೇಲ್ದಂಡೆಗೆ 5,300 ಕೋಟಿ ಕೊಡುತ್ತೇವೆ ಎಂದು ಕೇಂದ್ರ ಬಜೆಟ್ ನಲ್ಲಿ ಘೋಷಣೆ ಮಾಡಿದ್ದರು. ಆದರೆ ಈವರೆಗೆ ಒಂದು ರೂಪಾಯಿ ಕೊಟ್ಟಿಲ್ಲ. ಆದರೆ ಬಿಜೆಪಿಯವರು ಕೇಂದ್ರದಿಂದ ಏನು ಬಾಕಿ ಇಲ್ಲ ಎಂದು ಹೇಳುತ್ತಿದ್ದಾರೆ. ಅದನ್ನು ಬಿಡುಗಡೆ ಮಾಡಿ ಎಂದು ಆಗ್ರಹಿಸುತ್ತೇವೆ ಎಂದರು‌.

ಮಹದಾಯಿ ಯೋಜನೆ ಕೇಂದ್ರ ಸರ್ಕಾರದ ಪರಿಸರ ಇಲಾಖೆ ಅನುಮತಿ ಈವರೆಗೆ ಕೊಟ್ಟಿಲ್ಲ. ಅಧಿಸೂಚನೆ ಆದರೂ ಪರಿಸರ ಅನುಮತಿ ಈವರೆಗೆ ಕೊಟ್ಟಿಲ್ಲ. ಹಾಗಾಗಿ ಅದರ ಜಾರಿ ಸಾಧ್ಯವಾಗಿಲ್ಲ. ಮೇಕೆದಾಟು ಯೋಜನೆಗೆ ಇಂದಿನ ವರೆಗೆ ಅನುಮತಿ ಕೊಟ್ಟಿಲ್ಲ.  ರಾಜ್ಯದಲ್ಲಿ ಬರಗಾಲ ಬಂದಿದೆ. 223 ತಾಲೂಕುಗಳಲ್ಲಿ ಬರ ಇದೆ. ಸೆಪ್ಟೆಂಬರ್ ನಲ್ಲಿ ಕೇಂದ್ರ ತಂಡ ಬಂದು ಪರಿಶೀಲನೆ ನಡೆಸಿ, ಕೇಂದ್ರಕ್ಕೆ ವರದಿ ನೀಡಿದ್ದಾರೆ. ಆದರೆ ಬರ ಪರಿಹಾರ ಸಂಬಂಧ ಅಮಿತ್ ಶಾ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಯ ಸಭೆ ನಡೆಸಿಲ್ಲ. ಬೆಂಗಳೂರಿಗೆ ಪ್ರಧಾನಿ ಬಂದಿದ್ದಾಗಲೂ ಅವರಿಗೆ ಬರ ಪರಿಹಾರ ಬಗ್ಗೆ ಜ್ಞಾಪಕ ಮಾಡಿದ್ದೆ. ಬರದಿಂದ ನಮಗೆ ಸುಮಾರು 17,901 ಕೋಟಿ ರೂ. ನಷ್ಟ ಪರಿಹಾರ ಕೇಳಿದ್ದೇವೆ. ಎನ್ ಡಿಆರ್ ಎಫ್ ನಿಂದ ಒಂದೂ ರೂಪಾಯಿ ಹಣ ಬಿಡುಗಡೆ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ- ಓಲಾ-ಉಬರ್ ದರ ಹೆಚ್ಚಿಸಿದ ರಾಜ್ಯ ಸರ್ಕಾರ..! ಶಾಕ್‌ನಲ್ಲಿ ಸಾಮಾನ್ಯ ಜನ

ಚಿನ್ನ ಇಡುವ ಕೋಳಿಯನ್ನೇ ಕುಯ್ದರೆ ಹೇಗೆ?:
ಪ್ರವಾಹ ಬಂದಾಗಲೂ ಹಣ ಕೊಟ್ಟಿರಲಿಲ್ಲ. ಯಡಿಯೂರಪ್ಪ ಗೋಗರೆದರೂ ಪರಿಹಾರ ಕೊಟ್ಟಿರಲಿಲ್ಲ. ಅವರಿಗೆ ಜೋರಾಗಿ ಮಾತನಾಡಲು ಬಾಯಿಯೇ ಇಲ್ಲ. ಬೊಮ್ಮಾಯಿ ಆಗ ಮಾತನಾಡಿಲ್ಲ. ಜನಸಂಖ್ಯೆ, ವಿಸ್ತೀರ್ಣ, ತಲಾ ಆದಾಯ, ಅರಣ್ಯಪ್ರದೇಶ ಹಾಗೂ ತೆರಿಗೆ ಮತ್ತು ಹಣಕಾಸಿನ ಪರಿಸ್ಥಿತಿ ಹಾಗೂ ಸಮುದಾಯದ ಅಭಿವೃದ್ಧಿ ಆಧಾರದಲ್ಲಿ ಅನುದಾನ ಹಂಚಿಕೆ ಮಾಡುತ್ತಾರೆ. ಜನಸಂಖ್ಯೆಯಲ್ಲಿ ಜನ ನಿಯಂತ್ರಣ ಮಾಡಿಲ್ಲ. ದಕ್ಷಿಣ ಭಾರತದಲ್ಲಿ ಜನಸಂಖ್ಯೆ ನಿಯಂತ್ರಣ ಮಾಡಿದ್ದೇವೆ. 

ಕೋಳಿ ಚಿನ್ನದ ಮೊಟ್ಟೆ ಕೊಡುತ್ತೆ ಎಂದು ಕೋಳಿಯನ್ನೇ ಕುಯ್ದು ಬಿಡುವ ಪರಿಸ್ಥಿತಿ ಆಗಿದೆ. ಹಾಲು ಕೊಡುವ ಹಸುವಿನ ಕೆಚ್ಚಲೇ ಕುಯ್ಯವುದು. ಹಾಗೇ ಆಗಬಾರದು. ಪತ್ರ ಬರೆದರೂ ಉತ್ತರ ಕೊಡಲ್ಲ ಅಂದರೆ ಒಕ್ಕೂಟ ವ್ಯವಸ್ಥೆಯ ಲಕ್ಷಣನಾ?. ರಾಜ್ಯ ಸಚಿವರಿಗೆ ಕೇಂದ್ರ ಸಚಿವರ ಭೇಟಿಗೆ ಅವಕಾಶ ಕೊಡಲ್ಲಾ ಅಂದರೆ ಇದು ಒಕ್ಕೂಟ ವ್ಯವಸ್ಥೆಯ ಲಕ್ಷಣನಾ?. ಇದು ಬಿಜೆಪಿ vs ಕಾಂಗ್ರೆಸ್ ಅಲ್ಲ. ಒಕ್ಕೂಟ ವ್ಯವಸ್ಥೆಯಲ್ಲಿ ಆಗುತ್ತಿರುವ ಅನ್ಯಾಯ ಸರಿಪಡಿಸುವುದು, ದೇಶದ ಗಮನ ಹರಿಸಲು ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ಕಿಡಿ ಕಾರಿದರು. 

ಬಿಜೆಪಿಯಲ್ಲಿ ಯಡಿಯೂರಪ್ಪ, ಬೊಮ್ಮಾಯಿ ಅವರಿಗೆ ಈ ಬಗ್ಗೆ ಮಾತನಾಡಲು ಬಾಯಿನೇ ಇಲ್ಲ. ಆರ್.ಅಶೋಕ್ ಗೆ ಪಾಪ ಗೊತ್ತೇ ಇಲ್ಲ. ಪ್ರಹ್ಲಾದ್ ಜೋಷಿ, ಖೂಬಾ, ಶೋಭಾ ಕರಂದ್ಲಾಜೆ ಕೇಂದ್ರ ಮಂತ್ರಿಯಾಗಿದ್ದಾರೆ ಆದರೆ ಬಾಯಿ ಬಿಡುತ್ತಿಲ್ಲ. 25 ಬಿಜೆಪಿ ಸಂಸದರು ಒಂದು ದಿನವಾದರೂ ಇದರ ಬಗ್ಗೆ ಮಾತನಾಡಿಲ್ಲ. ಹಣಕಾಸು ಸಚಿವೆ ನಮ್ಮ ರಾಜ್ಯದವರೇ ಆಗಿದ್ದಾರೆ. ಆದರೆ ಅವರೇ ಅನ್ಯಾಯ ಮಾಡಿದರೆ ಏನು ಮಾಡುವುದು?. ಬಿಜೆಪಿ ಮಂತ್ರಿಗಳಿಗೂ, ಸಂಸದರು ಈ ಪ್ರತಿಭಟನೆಗೆ ಬರಲಿ ಎಂದು ಕರೆ ಕೊಡುತ್ತಿದ್ದೇವೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ಬಿಜೆಪಿಯವರು ಅಲ್ಲಿ ಮಾತನಾಡಲಿ, ಮೋದಿ, ಅಮಿತ್ ಶಾ, ಸಂಸತ್ತಿನಲ್ಲಿ ಮಾತನಾಡಬೇಕು. ಆದರೆ ಇಲ್ಲಿ ಸುಳ್ಳು ಹೇಳುತ್ತಿದ್ದಾರೆ‌ ಎಂದು ವಾಗ್ದಾಳಿ ನಡೆಸಿದರು. 

ಗ್ಯಾರಂಟಿ ಯೋಜನೆಯಿಂದಾಗಿ ಬೊಕ್ಕಸ ಖಾಲಿಯಾಗಿದೆ. ಅದಕ್ಕಾಗಿ ಪ್ರತಿಭಟನೆ ಮಾಡುತ್ತಿದ್ದಾರೆ ಎಂಬ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿ, ಗ್ಯಾರಂಟಿ ಯೋಜನೆಗೂ ಇದಕ್ಕೂ ಸಂಬಂಧ ಇಲ್ಲ.‌

ಇದನ್ನೂ ಓದಿ- ಲೋಕಸಭಾ ಚುನಾವಣೆಯಲ್ಲಿ ತೇಜಸ್ವಿನಿ ಅನಂತ್ ಕುಮಾರ್‌ ಸ್ಪರ್ಧೆ?

ಶ್ವೇತಪತ್ರ ಬಿಡುಗಡೆಗೆ ಚಿಂತನೆ:
ಸದನದಲ್ಲಿ ಹಣಕಾಸು ಸ್ಥಿತಿಗತಿ ಬಗ್ಗೆ ಶ್ವೇತಪತ್ರ ಹೊರಡಿಸಲು ನಾವು ಗಂಭೀರವಾಗಿ ಚಿಂತನೆ ಮಾಡುತ್ತಿದ್ದೇವೆ ಎಂದು ಇದೇ ವೇಳೆ ತಿಳಿಸಿದರು. 

ರಾಜ್ಯದ ಹಣಕಾಸು ಸ್ಥಿತಿಗತಿ ಬಗ್ಗೆ ಶ್ವೇತಪತ್ರ ಬಿಡುಗಡೆ ಮಾಡುವಂತೆ ಪ್ರತಿಪಕ್ಷಗಳು ಆಗ್ರಹಿಸುತ್ತಿದ್ದಾರೆ. ಈ ಸಂಬಂಧ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ ಸದನದಲ್ಲಿ ರಾಜ್ಯದ ಹಣಕಾಸು ಸ್ಥತಿಗತಿ ಸಂಬಂಧ ಶ್ವೇತಪತ್ರ ಹೊರಡಿಸಲು ಗಂಭೀರವಾಗಿ ಯೋಚಿಸುತ್ತಿದ್ದೇವೆ ಎಂದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News