ವಿದ್ಯುತ್‌ ಬಿಲ್ ವಸೂಲಿಗೆ ಬಂದ ಲೈನ್‌ಮ್ಯಾನ್‌ ಮೇಲೆ ಹಲ್ಲೆ..!

Koppala : ರಾಜ್ಯದಲ್ಲಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌ ವಿದ್ಯುತ್‌ ಬಿಲ್‌ ಕಟ್ಟುವ ಭರವಸೆ ನೀಡಿದೆ. ಇದೇ ಕಾರಣಕ್ಕೆ ವಿದ್ಯುತ್‌ ಬಿಲ್‌ ವಿಚಾರದಲ್ಲಿ ಲೈನ್‌ಮ್ಯಾನ್‌ ಮತ್ತು ಜನಸಾಮಾನ್ಯರ ನಡುವೆ ಗಲಭೆಗಲು ಉಂಟಾಗುತ್ತಿವೆ.   

Written by - Zee Kannada News Desk | Last Updated : May 24, 2023, 04:51 PM IST
  • ಆಡಳಿರಾರೂಢ ಕಾಂಗ್ರೆಸ್‌ ಪಕ್ಷವು ತಾವು ಅಧಿಕಾರಕ್ಕೆ ಬಂದರೆ 200 ಯೂನಿಟ್‌ ವಿದ್ಯುತ್‌ ಉಚಿತ ಎಂದು ಕಾಂಗ್ರೆಸ್‌ ಹೇಳಿತ್ತು
  • ವಿದ್ಯುತ್‌ ಬಿಲ್‌ ವಿಚಾರದಲ್ಲಿ ಲೈನ್‌ಮ್ಯಾನ್‌ ಮತ್ತು ಜನಸಾಮಾನ್ಯರ ನಡುವೆ ಗಲಭೆಗಲು ಉಂಟಾಗುತ್ತಿವೆ.
ವಿದ್ಯುತ್‌ ಬಿಲ್ ವಸೂಲಿಗೆ ಬಂದ ಲೈನ್‌ಮ್ಯಾನ್‌ ಮೇಲೆ ಹಲ್ಲೆ..!  title=

ಆಡಳಿರಾರೂಢ ಕಾಂಗ್ರೆಸ್‌ ಪಕ್ಷವು ತಾವು ಅಧಿಕಾರಕ್ಕೆ ಬಂದರೆ 200 ಯೂನಿಟ್‌ ವಿದ್ಯುತ್‌ ಉಚಿತ ಎಂದು ಕಾಂಗ್ರೆಸ್‌ ಹೇಳಿತ್ತು. ಇದೀಗ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಜನ ವಿದ್ಯುತ್‌ ಬಿಲ್‌ ನಾವು ಕಟ್ಟುವುದಿಲ್ಲ ಸರ್ಕಾರ ಕಟ್ಟುತ್ತೆ ಅವರಲ್ಲಿಯೇ ಕೇಳಿ ಎಂದು ಲೈನ್‌ಮ್ಯಾನ್‌ಗಲ ಜೊತೆ ಜಗಳಕ್ಕೆ ಇಳಿದಿದ್ದಾರೆ.

ಈ ವಿಷಯ ಸಂಬಂಧಿತ ಘಟನೆಯೊಂದು ಕೊಪ್ಪಳದ ಕುಕನಪಲ್ಲಿ ಗ್ರಾಮದಲ್ಲಿ ನಡೆದಿದ್ದು, ವಿದ್ಯುತ್‌ಬಿಲ್‌ ಕೇಳಲು ಬಂದ ಲೈನಾಮ್ಯಾನ್‌ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಚಪ್ಪಲಿಯಿಂದ ಹೊಡೆದು ಹಲ್ಲೆ ಮಾಡಿದ್ದಾನೆ. ಹಲ್ಲೆ ಮಾಡಿದ ವ್ಯಕ್ತಿಯನ್ನು ಜಿಲ್ಲಾ ಪೋಲಿಸರು ಬಂಧಿಸಿದ್ದಾರೆ. 

ಇದನ್ನೂ ಓದಿ-"ಪ್ರಜಾಪ್ರಭುತ್ವ ವ್ಯವಸ್ಥೆಗೆ ಪ್ರಧಾನಮಂತ್ರಿಗಳು ಅಪಚಾರ ಎಸಗಿದ್ದಾರೆ"

ಈ ವಿಚಾರವಾಗಿ ಕೊಪ್ಪಳದಲ್ಲಿ ಎಸ್‌ಪಿ ಯಶೋಧಾ ವಂಟಗೋಡಿ ಮಾತನಾಡಿದ್ದು, "ಲೈನ್‌ಮ್ಯಾನ್‌ ಮಂಜುನಾಥ್‌ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿದ ಚಂದ್ರಶೇಖರಯ್ಯ ಕಳೆದ ಆರು ತಿಂಗಳಿಂದ ವಿದ್ಯುತ್‌ಬಿಲ್‌ನ್ನು ಬಾಕಿ ಉಳಿಸಿಕೊಂಡಿದ್ದ, ಅಂದಾಜು 9990ರೂ. ಬಿಲ್‌ ಬಾಕಿ ಉಳಿಸಿಕೊಂಡಿದ್ದನು" ಎಂದಿದ್ದಾರೆ. 

"ವಿದ್ಯುತ್‌ ಬಿಲ್‌ ಕಟ್ಟದ ಹಿನ್ನೆಲೆಯಲ್ಲಿ ಜೆಸ್ಕಾಂ ಸಿಬ್ಬಂದಿ ಚಂದ್ರಶೇಖರಯ್ಯ ಮನೆಯ ಕರೆಂಟ್‌ ಲೈನ್‌ ಕಟ್‌ ಮಾಡಲಾಗಿತ್ತು. ಆದರೂ ಮತ್ತೆ ಅನಧಿಕೃತ ವಿದ್ಯುತ್‌ ಪಡೆಯುತ್ತಿದ್ದ ಚಂದ್ರಶೇಖರಯ್ಯ. ಇದನ್ನು ಪ್ರಶ್ನಿಸಲು ಬಂದ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿದ್ದಾನೆ. ಹಲ್ಲೆನಡೆಸಿದ ಚಂದ್ರಶೇಖರಯ್ಯ ವಿರುದ್ಧ ದೂರು ದಾಖಲಾಗಿದ್ದು, ಅವರನ್ನು ಮುನಿರಾಬಾದ್‌ ಪೋಲಿಸಲು ಬಂಧಿಸಿದ್ದಾರೆ ಮುಂದೆ ಕಾನೂನು ಕ್ರಮ ಕೈಗೊಳ್ಳುತ್ತೇವೆ" ಎಂದು ತಿಳಿಸಿದ್ದಾರೆ. 

ಇದನ್ನೂ ಓದಿ-ಗ್ಯಾರಂಟಿ ಕೊಟ್ಟು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ನಿಜಬಣ್ಣ ಬಯಲು: ಎಚ್‍ಡಿಕೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News