ವ್ರತ ಮಾಡುವ ಮೋದಿಗಿಂತ ಅಭಿವೃದ್ಧಿ ಮಾಡುವ ಸಿದ್ದು ಲೇಸು: ಪ್ರೊ.ಬಿ.ಪಿ.ಮಹೇಶ್ಚಂದ್ರ ಗುರು

ಹಿಂದೂ ಧರ್ಮದ ಪ್ರಧಾನ ವಕ್ತಾರರಂತೆ ಪ್ರಧಾನ ಮಂತ್ರಿ ಮೋದಿ ಕೆಲಸ ಮಾಡುತ್ತಿದ್ದಾರೆ ಎಂದು ಮೈಸೂರು ವಿವಿಯ ವಿಶ್ರಾಂತ ಪ್ರಾಧ್ಯಾಪಕ ಬಿ.ಪಿ. ಮಹೇಶ್ ಚಂದ್ರಗುರು ಟೀಕಿಸಿದರು.

Written by - Zee Kannada News Desk | Last Updated : Jan 26, 2024, 06:47 PM IST
  • ರಾಮಮಂದಿರ ಇದೀಗ ಲೋಕಾರ್ಪಣೆಗೊಂಡಿದೆ. ಇದು ನ್ಯಾಯಾಲಯದ ತೀರ್ಪು ಅದಕ್ಕೆ ನಾವು ಕೂಡ ಸಂತೋಷ ಪಟ್ಟಿದ್ದೇವೆ
  • ಆದರೆ ಮಂದಿರ ನಿರ್ಮಾಣದ ಬಗ್ಗೆ ರಾಜಕಾರಣಿಗಳು ಗುಲ್ಲೆಬ್ಬಿಸುತ್ತಿದ್ದಾರೆ
  • ನಾಳೆ ಸರ್ವೋಚ್ಛ ನ್ಯಾಯಾಲಯದ ತೀರ್ಪಿಗೆ ಅನುಗುಣವಾಗಿ ಅಯೋಧ್ಯೆ ಪಕ್ಕ ಒಂದು ಮಸೀದಿ ಬರುತ್ತಿದೆ
 ವ್ರತ ಮಾಡುವ ಮೋದಿಗಿಂತ ಅಭಿವೃದ್ಧಿ ಮಾಡುವ ಸಿದ್ದು ಲೇಸು: ಪ್ರೊ.ಬಿ.ಪಿ.ಮಹೇಶ್ಚಂದ್ರ ಗುರು title=

ಚಾಮರಾಜನಗರ: ಹಿಂದೂ ಧರ್ಮದ ಪ್ರಧಾನ ವಕ್ತಾರರಂತೆ ಪ್ರಧಾನ ಮಂತ್ರಿ ಮೋದಿ ಕೆಲಸ ಮಾಡುತ್ತಿದ್ದಾರೆ ಎಂದು ಮೈಸೂರು ವಿವಿಯ ವಿಶ್ರಾಂತ ಪ್ರಾಧ್ಯಾಪಕ ಬಿ.ಪಿ. ಮಹೇಶ್ ಚಂದ್ರಗುರು ಟೀಕಿಸಿದರು.

ಗುಂಡ್ಲುಪೇಟೆ ಪಟ್ಟಣದ ಡಿ.ದೇವರಾಜ ಅರಸ್ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತದ ವತಿಯಿಂದ ನಡೆದ 75ನೇ ಗಣರಾಜ್ಯೋತ್ಸವ ದಿನಚಾರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.

ಇದನ್ನೂ ಓದಿ: ಪರೇಡ್ ವೇಳೆ ಭದ್ರತಾ ಲೋಪ: ಸಿಎಂ ಸಿದ್ದರಾಮಯ್ಯ ಬಳಿ ಏಕಾಏಕಿ ನುಗ್ಗಿದ ವ್ಯಕ್ತಿ!

ನಮಗೆ ವ್ರತ ಮಾಡುವ ಪ್ರಧಾನಿಗಿಂತ ಅಭಿವೃದ್ಧಿ ಮಾಡುವ ಸಿದ್ದರಾಮಯ್ಯ ಲೇಸು ಎಂದು ತಿಳಿಸಿದರು.ದೇಶಕ್ಕೆ ವ್ರತ, ಪೂಜೆ, ಮೌಢ್ಯ ವೈಭವೀಕರಿಸುವ, ಒಂದು ಧರ್ಮದ ಪರ ವಕಾಲತ್ತು ವಹಿಸುವ ಪ್ರಧಾನಿ ಬೇಕಾಗಿಲ್ಲ. ಅಧಿವೃದ್ಧಿಶೀಲ, ಕರ್ಮಯೋಗಿ, ಎಲ್ಲರನ್ನು ಅಪ್ಪಿಕೊಲ್ಳುವ ಪ್ರಧಾನಿ ಬೇಕು. ರಾಮನ ಭಕ್ತರಾಗುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ ಸಂವಿಧಾನ ಬದಿಗಿಟ್ಟು ದೇಶ ಆಳುತ್ತಿರುವುದಕ್ಕೆ ವಿರೋಧವಿದೆ. ದೇವಸ್ಥಾನ ಕಟ್ಟಲು ಒಂದು ಟ್ರಸ್ಟ್ ಇದೆ. ಆದರೆ 2024ರ ಚುನಾವಣೆ ದೃಷಿಕೋನದಲ್ಲಿಟ್ಟುಕೊಂಡು ರಾಮಮಂದಿರ ಕಟ್ಟಿದ್ದಾರೆ. ಅದರ ಹೆಸರೇಳಿ ನಾಳೆ ಮತ ಕೇಳಲು ಬರುತ್ತಾರೆ. ಈ ಸಂದರ್ಭ ಪ್ರತಿಯೊಬ್ಬರು ಜ್ಯಾತ್ಯಾತೀತ, ಸಂವಿಧಾನ ಪ್ರಜಾಪ್ರಭುತ್ವದ ಪರವಾಗಿ ನಿಷ್ಠೆಯಿಂದ ನಿಲ್ಲಬೇಕು ಎಂದು ಮನವಿ ಮಾಡಿದರು.

ಇದನ್ನೂ ಓದಿ: ಬಾಗಲಕೋಟೆಯಲ್ಲಿ 75ನೇ ಗಣರಾಜ್ಯೋತ್ಸವದ ಸಂಭ್ರಮಾಚರಣೆ

ರಾಮಮಂದಿರ ಇದೀಗ ಲೋಕಾರ್ಪಣೆಗೊಂಡಿದೆ. ಇದು ನ್ಯಾಯಾಲಯದ ತೀರ್ಪು ಅದಕ್ಕೆ ನಾವು ಕೂಡ ಸಂತೋಷ ಪಟ್ಟಿದ್ದೇವೆ. ಆದರೆ ಮಂದಿರ ನಿರ್ಮಾಣದ ಬಗ್ಗೆ ರಾಜಕಾರಣಿಗಳು ಗುಲ್ಲೆಬ್ಬಿಸುತ್ತಿದ್ದಾರೆ. ನಾಳೆ ಸರ್ವೋಚ್ಛ ನ್ಯಾಯಾಲಯದ ತೀರ್ಪಿಗೆ ಅನುಗುಣವಾಗಿ ಅಯೋಧ್ಯೆ ಪಕ್ಕ ಒಂದು ಮಸೀದಿ ಬರುತ್ತಿದೆ. ಇದನ್ನು ಕೂಡ ಒಪ್ಪಿಕೊಳ್ಳಬೇಕು. 11 ದಿನಗಳ ಕಾಲ ಎಳ ನೀರು ಕುಡಿದು ವ್ರತ ಮಾಡಿ ಯಾವ ಮನುಷ್ಯನು ಕೂಡ ಬದುಕಲು ಸಾಧ್ಯವಿಲ್ಲ. ತಂತ್ರಜ್ಞಾನದ ಕಾಲದಲ್ಲಿ ವೈಚಾರಿಕತೆ ಬೇಕು, ಮೌಢ್ಯ ಬೇಡ. ಬಡತನಕ್ಕಿಂತ ಅವೈಚಾರಿಕ ವಿಚಾರಗಳು ನಮ್ಮನ್ನು ಕೊಲ್ಲುತ್ತದೆ ಎಂದು ತಿಳಿಸಿದರು.

ಪ್ರಜಾಪ್ರಭುತ್ವಕ್ಕೆ ಇಂದು ದೊಡ್ಡ ಗಂಡಾಂತರ ಬಂದಿದೆ. ಅಂಬೇಡ್ಕರ್ ಸಂವಿಧಾನ ಬದಲಾಯಿ ಮನುವಾದ ಜಾರಿಗೆ ತರುತ್ತೇವೆ ಎಂಬ ಅವಿವೇಕದ ಮಾತುಗಳು ಕೂಡ ಇಂದು ಕೇಳಿ ಬರುತ್ತಿದೆ. ಆದರೆ ಸಂವಿಧಾನದ ಮೂಲಕ ಸ್ವರೂಪ ಬದಲಾಯಿಸಲು ಪ್ರಧಾನಿಯಿಂದಲೂ ಸಾಧ್ಯವಿಲ್ಲ. ಬದಲಾವಣೆ ಮಾಡುವುದಾಗಿದ್ದರೆ 10 ವರ್ಷದ ಆಡಳಿತದಲ್ಲಿ ಬಿಜೆಪಿಯವರು ಬದಲಾಯಿಸುತ್ತಿದ್ದರು. ಸಂವಿಧಾನ ತುಂಬಾ ಬಲಿಷ್ಟವಾಗಿದೆ. ಜನರು ವ್ಯಕ್ತಿ ಮೇಲೆಲ್ಲ ಸಂವಿಧಾನದ ಮೇಲೆ ಭರವಸೆ ಇಡಬೇಕು. ಸಂವಿಧಾನ ಮುಟ್ಟಲು ಯಾರಿಂದಲೂ ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದರು.

ಶಾಸಕ ಎಚ್.ಎಂ.ಗಣೇಶಪ್ರಸಾದ್ ಇದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News