ಕಾಂಗ್ರೆಸ್ ಸರ್ಕಾರ ಬಂದ ಬಳಿಕ ರಾಜ್ಯದಲ್ಲಿ ಪಾಕಿಸ್ತಾನದ ಧ್ವಜ ಹಾರಾಡುತ್ತಿದೆ: ಯತ್ನಾಳ್ ಆರೋಪ

Basangouda Patil Yatnal : ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಪಾಕಿಸ್ತಾನದ ಧ್ವಜ ಹಾರಾಡುತ್ತಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪವನ್ನು ವಿಧಾನಸಭೆಯ ಶೂನ್ಯ ವೇಳೆಯಲ್ಲಿ ಮಾಡಿದರು.   

Written by - Prashobh Devanahalli | Edited by - Savita M B | Last Updated : Jul 10, 2023, 02:35 PM IST
  • ಜೈನ ಮುನಿ ಹತ್ಯೆ ಪ್ರಕರಣದ ವಿಚಾರವಾಗಿ ಮಾತನಾಡಿದ ಬಿಜೆಪಿ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್
  • ಇದು ಕರ್ನಾಟಕಕ್ಕೆ ಕಳಂಕ ತರುವ ಸಂಗತಿ
  • ಹಣಕಾಸು ವ್ಯವಹಾರ ಎಂಬುವುದು ಒತ್ತಡದಿಂದ ಪೊಲೀಸರು ಸೃಷ್ಟಿ ಮಾಡಿದ್ದಾರೆ.
ಕಾಂಗ್ರೆಸ್ ಸರ್ಕಾರ ಬಂದ ಬಳಿಕ ರಾಜ್ಯದಲ್ಲಿ ಪಾಕಿಸ್ತಾನದ ಧ್ವಜ ಹಾರಾಡುತ್ತಿದೆ: ಯತ್ನಾಳ್ ಆರೋಪ title=

ಬೆಂಗಳೂರು: ಬೆಳಗಾವಿಯಲ್ಲಿ ಜೈನ ಮುನಿ ಹತ್ಯೆ ಪ್ರಕರಣದ ವಿಚಾರವಾಗಿ ಮಾತನಾಡಿದ ಬಿಜೆಪಿ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್, ಇದು ಕರ್ನಾಟಕಕ್ಕೆ ಕಳಂಕ ತರುವ ಸಂಗತಿ. ಮುನಿಗಳಿಗೆ ಸಂತರಿಗೆ ರಕ್ಷಣೆ ಇಲ್ಲದಿದ್ದರೆ ಹೇಗೆ? ಹಣಕಾಸು ವ್ಯವಹಾರ ಎಂಬುವುದು ಒತ್ತಡದಿಂದ ಪೊಲೀಸರು ಸೃಷ್ಟಿ ಮಾಡಿದ್ದಾರೆ.ಈಗ ಭಯದ ವಾತಾವರಣ ರಾಜ್ಯದಲ್ಲಿ ನಿರ್ಮಾಣ ಆಗಿದೆ. ಈ ಸರ್ಕಾರ ಬಂದ ಬಳಿಕ ಎಲ್ಲೆಲ್ಲಿ ಪಾಕಿಸ್ತಾನದ ಧ್ವಜ ಹಾರಾಡುತ್ತಿದೆ. ಹಿಂದೂ ಕಾರ್ಯಕರ್ತರ ಹತ್ಯೆಯಾಗಿದೆ. ಹಿಂದೂಗಳು‌ ಭಯದ ವಾತಾವರಣದಲ್ಲಿ ಬದುಕುತ್ತಿದ್ದಾರೆ ಎಂದು ಆರೋಪಿಸಿದರು. 

ಈ‌ ಸರ್ಕಾರದ ಮೇಲೆ ವಿಶ್ವಾಸ ಇಲ್ಲ,‌ಇದನ್ನು ಸಿಬಿಐಗೆ ನೀಡಬೇಕು. ಒಂದು ಕೋಮಿನ ರಕ್ಷಣೆ ಮಾಡುವುದನ್ನು ಬಿಡಬೇಕು ಎಂದರು.  ಇದಕ್ಕೆ ಕಾಂಗ್ರೆಸ್ ಸದಸ್ಯರ ಆಕ್ಷೇಪ. ಈ ವೇಳೆ ಮಧ್ಯ ಪ್ರವೇಶ  ಮಾಡಿದ ಸ್ಪೀಕರ್ ಯು.ಟಿ ಖಾದರ್ ಇದನ್ನು ರಾಜಕೀಯ ಮಾಡಲು ಹೋಗಬೇಡಿ. ವಿಷಯಕ್ಕೆ ಸೀಮಿತವಾಗಿ ಹೇಳಿ ಎಂದರು.

ಬಿಜೆಪಿ ಸದಸ್ಯ ಅಭಯ ಪಾಟೀಲ್, ಜೈನ ಮುನಿ ನಾಪತ್ತೆಯಾದ ವಿಚಾರವಾಗಿ ಟ್ರಸ್ಟೀಗಳು ದೂರು ನೀಡಿದ್ದರು. ಆದರೆ ಪೊಲೀಸ್ ಅಧಿಕಾರಿಗಳು ಸರಿಯಾಗಿ ಸ್ಪಂದಿಸಿಲ್ಲ ಎಂದು ಟ್ರಸ್ಟ್ ಸದಸ್ಯರು ಆರೋಪ ಮಾಡಿದ್ದರು.

ಇದನ್ನೂ  ಓದಿ-ನವಗ್ರಹ ತೀರ್ಥ ಕ್ಷೇತ್ರಕ್ಕೆ ಗೃಹ ಸಚಿವ ಭೇಟಿ: ಜೈನ್ ಮುನಿಗಳಿಗೆ ಧೈರ್ಯ ತುಂಬಿದ ಪರಮೇಶ್ವರ್..!

ಬಳಿಕ ಅವರ ಹತ್ಯೆ ಬಹಿರಂಗವಾಯಿತು. ಆದರೆ
ಹತ್ಯೆ ಆರೋಪಿ ಒರ್ವನ ಹೆಸರು ಮಾತ್ರ ಬಹಿರಂಗವಾಗಿ ಹೇಳಿದ್ದಾರೆ ಪೊಲೀಸರು.ಮತ್ತೋರ್ವನ ಹೆಸರನ್ನು ಬಹಿರಂಗವಾಗಿ ಹೇಳಿಲ್ಲ.
ಇದು ಸಂಶಯಕ್ಕೆ ಕಾರಣವಾಗಿದೆ ಎಂದು ಆರೋಪಿಸಿದರು.

ಎರಡನೇ ಆರೋಪಿ ಹಸನ್ ಹೆಸರು ಏಕೆ ಹೇಳುತ್ತಿಲ್ಲ? ಪೊಲೀಸರು ಟ್ರಸ್ಟೀಗಳ ಮೇಲೆ ಒತ್ತಡ ಹಾಕುತ್ತಿದ್ದಾರೆ ಎಂಬ ಆರೋಪ ಇದೆ. ದಿಗಂಬರ ಸಮಾಜದ ಮುನಿಗಳು ಆರ್ಥಿಕ ವ್ಯವಹಾರ ಮಾಡಲು ಸಾಧ್ಯವಿಲ್ಲ. ಆದರೆ ಸ್ವಾಮೀಜಿಗಳು ಎಲ್ಲಾ ತ್ಯಾಗ ಮಾಡಿ ಸನ್ಯಾಸಿ ಆಗಿದ್ದಾರೆ. ಯಾರ ಒತ್ತಡದಿಂದ ಪೊಲೀಸರು ಮುನಿಗಳು ಆರ್ಥಿಕ ವ್ಯವಹಾರದಲ್ಲಿ ತೊಡಗಿಕೊಂಡಿದ್ದಾರೆ ಎಂದು ಹೇಳಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್ ಸದಸ್ಯ ಲಕ್ಷ್ಮಣ ಸವದಿ ಮಾತನಾಡಿ, ವಿದ್ಯುತ್ ತಗುಲಿಸಿ ಹತ್ಯೆ ಮಾಡಲಾಗಿದೆ. ಮತ್ತೋರ್ವ ಸ್ನೇಹಿತನ ಸಹಾಯ ಪಡೆದುಕೊಂಡು ಸಾಗಾಟ ಮಾಡಲಾಗಿದೆ. ಬಳಿಕ ಹತ್ಯೆ ಮಾಡಿದ ಆರೋಪಿಯ ಜಮೀನಿನಲ್ಲಿ ಇರುವ ಬೋರ್ ವೆಲ್ ನಲ್ಲಿ ಮೃತ ದೇಹ ತುಂಡರಿಸಿ ಹಾಕಲಾಗಿದೆ ಎಂದು ವಿವರಿಸಿದರು.

ಪೊಲೀಸರು ಆರು ಗಂಟೆಯಲ್ಲಿ ಆರೋಪಗಳನ್ನು ಬಂಧಿಸಿದ್ದಾರೆ. ಮೃತ ದೇಹವನ್ನು ಪೊಲೀಸರು ಹೊರ ತೆಗೆದಿದ್ದಾರೆ. ಭೀಕರವಾಗಿ ಹತ್ಯೆ ಮಾಡಿದ ಈ  ಆರೋಪಿಗಳಿಗೆ ಎಂತಹ ಶಿಕ್ಷೆ ಕೊಟ್ಟರೂ ಕಡಿಮೆ ಎಂದರು.

ಇದನ್ನೂ  ಓದಿ-ವಿಧಾನಸಭೆಗೆ ಅನಾಮಿಕನ ಪ್ರವೇಶ -ದ್ವಿಗುಣ ಭದ್ರತೆ: ಸ್ಪೀಕರ್ ಖಾದರ್ ಪರಿಶೀಲನೆ

ಆರೋಪಿಗಳನ್ನು ಎನ್ ಕೌಂಟರ್ ಮಾಡಬೇಕು: ಸಿದ್ದು ಸವದಿ 
ಜೈನ ಮುನಿ ಹತ್ಯೆ ಮಾಡಿದ ಆರೋಪಿಗಳನ್ನು ಎನ್ ಕೌಂಟರ್ ಮಾಡಬೇಕು. ಇದೊಂದು ಭೀಕರ ಹತ್ಯೆಯಾಗಿದೆ. ಈ ನಿಟ್ಟಿನಲ್ಲಿ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಬಿಜೆಪಿ ಸದಸ್ಯ ಸಿದ್ದು ಸವದಿ ಆಗ್ರಹಿಸಿದರು.

ಅರಗ ಜ್ಞಾನೇಂದ್ರ ಮಾತನಾಡಿ,‌ ಇದರ ಹಿಂದೆ ವ್ಯವಸ್ಥಿತ ಷಡ್ಯಂತ್ರ ಇದೆ. ಎರಡನೇ ಆರೋಪಿಯ ಹೆಸರು ಬಹಿರಂಗವಾಗಿ ಹೇಳುತ್ತಿಲ್ಲ. ಇದೊಂದು ಮೃಗೀಯ ಗುಣವಾಗಿದೆ. ಇದರ‌ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆಗ್ರಹಿಸಿದರು.

ಎರಡು ಹೆಸರುಗಳ ಪೈಕಿ ಒಬ್ಬರ ಹೆಸರು ಮಾಯವಾಗಿದೆ. ಮತ್ತೊಂದು ಹೆಸರು ಹೇಳುತ್ತಿಲ್ಲ. ಒಂದೇ ಹೆಸರು ಹೇಳುವಂತೆ ಟ್ರಸ್ಟೀಗಳಿಗೆ ಒತ್ತಡ ಹಾಕಲಾಗುತ್ತಿದೆ ಎಂದು ಶಶಿಕಲಾ ಜೊಲ್ಲೆ ಆರೋಪಿಸಿದರು. ಬೇಧಬಾವ ಇಲ್ಲದೆ ನ್ಯಾಯ ಕೊಡಬೇಕು ಮತ್ತು ಆರೋಪಿಗಳಿಗೆ ಮರಣ ದಂಡನೆ ಆಗಬೇಕು ಎಂದು ಜೊಲ್ಲೆ ಒತ್ತಾಯಿಸಿದರು. 

ಸುನೀಲ್ ಕುಮಾರ್ ಮಾತನಾಡಿ, ಪೊಲೀಸ್ ಇಲಾಖೆ ಯಾವುದೇ ಒತ್ತಡಕ್ಕೆ ಮಣಿಯದೆ ಸಂಪೂರ್ಣ ತನಿಖೆ ಮಾಡಬೇಕು. ಆರೋಪಿಗಳ‌ ಹೆಸರು ಮುಚ್ಚಿಡುವ ಕೆಲಸ ಆಗುತ್ತಿದೆ. ಈ ನಿಟ್ಟಿನಲ್ಲಿ ಸಿಬಿಐ ತನಿಖೆಗೆ ನೀಡಬೇಕು ಎಂದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 

 

Trending News