ನೀವು ಇನ್ನ್ಮುಂದೆ ಹುಬ್ಬಳ್ಳಿಯಿಂದ ವಿದೇಶಕ್ಕೂ ಹಾರಬಹುದು!

ಉತ್ತರ ಕರ್ನಾಟಕದಿಂದ ವಿದೇಶಕ್ಕೆ ಪ್ರಯಾಣ ಮಾಡುವ ಬಹುದಿನದ ಕನಸು ನನಸಾಗುತ್ತಿದೆ. ಹೌದು ಕರ್ನಾಟಕದ ವಾಣಿಜ್ಯ ನಗರಿ ಎಂದೇ ಕರೆಯಲ್ಪಡುವ ಹುಬ್ಬಳ್ಳಿಯಿಂದ ನೀವು ಕೇವಲ ದೇಶದ ಒಳಗಡೆ ಅಷ್ಟೇ ಅಲ್ಲದೆ ವಿದೇಶಕ್ಕೂ ಹಾರಬಹುದು.

Last Updated : Nov 28, 2018, 02:31 PM IST
ನೀವು ಇನ್ನ್ಮುಂದೆ ಹುಬ್ಬಳ್ಳಿಯಿಂದ ವಿದೇಶಕ್ಕೂ ಹಾರಬಹುದು!  title=

ಬೆಂಗಳೂರು: ಉತ್ತರ ಕರ್ನಾಟಕದಿಂದ ವಿದೇಶಕ್ಕೆ ಪ್ರಯಾಣ ಮಾಡುವ ಬಹುದಿನದ ಕನಸು ನನಸಾಗುತ್ತಿದೆ. ಹೌದು ಕರ್ನಾಟಕದ ವಾಣಿಜ್ಯ ನಗರಿ ಎಂದೇ ಕರೆಯಲ್ಪಡುವ ಹುಬ್ಬಳ್ಳಿಯಿಂದ ನೀವು ಕೇವಲ ದೇಶದ ಒಳಗಡೆ ಅಷ್ಟೇ ಅಲ್ಲದೆ ವಿದೇಶಕ್ಕೂ ಹಾರಬಹುದು.

ಕೇಂದ್ರ ಸರ್ಕಾರದ ಉಡಾನ್ ಯೋಜನೆ ಅಡಿಯಲ್ಲಿ ಆಯ್ಕೆಯಾಗಿರುವ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಈಗ ಇಂಡಿಗೋ ಏರ್ ಲೈನ್ಸ್ ಅಬುದಾಬಿ, ದುಬೈ, ದೋಹಾ, ಕುವೈತ್, ಮುಸ್ಕಾಟ್,ಸಿಂಗಾಪುರ್ ,ಫುಕೆಟ್, ಹಾಂಗ್ ಕಾಂಗ್, ಬ್ಯಾಂಕಾಂಕ್, ಕೊಲಂಬೋ ,ಮಾಲೆ,ಅಂತಾರಾಷ್ಟ್ರೀಯ ನಗರಗಳಿಗೆ ವಿಮಾನ ಸೇವೆ ಒದಗಿಸುತ್ತಿದೆ. 

ಈಗ ಈ ಸಂಗತಿಯನ್ನು ತಮ್ಮ ಫೇಸ್ ಖಾತೆ ಮೂಲಕ ಹಂಚಿಕೊಂಡಿರುವ ಧಾರವಾಡ ಸಂಸದ ಪ್ರಹ್ಲಾದ ಜೋಶಿ, ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಉಡಾನ್ ಯೋಜನೆ ಮೂಲಕ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ವಿಮಾನ ಸಂಪರ್ಕ ಒದಗಿಸಿದ್ದಕ್ಕೆ ಪ್ರಧಾನಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ.

Trending News