ಬೆಂಗಳೂರಿಗೆ ಗುಡ್ ನ್ಯೂಸ್ : ಮೆಟ್ರೋ ರೈಲು 2ಎ ಮತ್ತು 2ಬಿ ಹಂತಕ್ಕೆ ಕೇಂದ್ರ ಸರ್ಕಾರ ಅನುಮೋದನೆ

ಮೆಟ್ರೋ 2ಎ  ಹಂತದಲ್ಲಿ ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್ನಿಂದ ಕೆ.ಆರ್.ಪುರಂವರೆಗೂ ಮತ್ತು 2ಬಿ ಹಂತದಲ್ಲಿ ಕೆ.ಆರ್ಪುರಂನಿಂದ ಹೆಬ್ಬಾಳ ಜಂಕ್ಷನ್ ಮಾರ್ಗವಾಗಿ ವಿಮಾನ ನಿಲ್ದಾಣದವರೆಗೂ ಮೆಟ್ರೋ ರೈಲು ಯೋಜನೆಯನ್ನು ರೂಪಿಸಲಾಗುತ್ತಿದೆ. 

Written by - Ranjitha R K | Last Updated : Apr 21, 2021, 05:13 PM IST
  • ಬೆಂಗಳೂರಿನ ನಮ್ಮ ಮೆಟ್ರೋ ರೈಲು ಯೊಜನೆ 2ಎ ಮತ್ತು 2ಬಿ ಹಂತಕ್ಕೆ ಕೇಂದ್ರ ಸರ್ಕಾರ ಹಸಿರು ನಿಶಾನೆ ನೀಡಿದೆ
  • 58.19 ಕಿಲೋಮೀಟರ್ ಉದ್ದದ ಯೋಜನೆಗೆ ಒಟ್ಟು 14,788 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ
  • ಈ ಎರಡೂ ಕಾಮಗಾರಿಗಳಿಗೆ ರಾಜ್ಯ ಸರ್ಕಾರ ಅನುಮೋದನೆ ಈಗಾಗಲೇ ದೊರೆತಿದೆ
ಬೆಂಗಳೂರಿಗೆ ಗುಡ್ ನ್ಯೂಸ್ :  ಮೆಟ್ರೋ ರೈಲು 2ಎ ಮತ್ತು 2ಬಿ ಹಂತಕ್ಕೆ ಕೇಂದ್ರ ಸರ್ಕಾರ ಅನುಮೋದನೆ title=
ಬೆಂಗಳೂರಿನ ನಮ್ಮ ಮೆಟ್ರೋ ರೈಲು ಯೊಜನೆ 2ಎ ಮತ್ತು 2ಬಿ ಹಂತಕ್ಕೆ ಕೇಂದ್ರ ಸರ್ಕಾರ ಹಸಿರು ನಿಶಾನೆ (file photo)

ಬೆಂಗಳೂರು: ಕರೋನಾ (Coronavirus) ನಡುವೆಯೂ ಬೆಂಗಳೂರು ನಗರಕ್ಕೊಂದು ಸಿಹಿ ಸುದ್ದಿ ಬಂದಿದೆ. ಬೆಂಗಳೂರಿನ ನಮ್ಮ ಮೆಟ್ರೋ ರೈಲು (Metro train) ಯೊಜನೆ 2ಎ ಮತ್ತು 2ಬಿ ಹಂತಕ್ಕೆ ಕೇಂದ್ರ ಸರ್ಕಾರ ಹಸಿರು ನಿಶಾನೆ ನೀಡಿದೆ.  ರೈಲ್ವೇ ಸಚಿವ ಪಿಯೂಶ್  ಗೋಯಲ್ (Piyush Goyal) ಟ್ವೀಟ್ ಮಾಡಿದ್ದು,  ಬೆಂಗಳೂರು ಮೆಟ್ರೋ ರೈಲು 2ಎ ಮತ್ತು 2ಬಿ ಹಂತಕ್ಕೆ ಕೇಂದ್ರ ಸರ್ಕಾರ  ಅನುಮೋದನೆ ನೀಡಿದೆ. ಒಟ್ಟಾರೆಯಾಗಿ 58.19 ಕಿಲೋಮೀಟರ್ ಉದ್ದದ ಯೋಜನೆಗೆ ಒಟ್ಟು 14,788 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ ಎಂದಿದ್ದಾರೆ. 

ಅನುಮೋದನೆ ನೀಡಿದ ಮೋದಿ ಸಂಪುಟ :
ಮೆಟ್ರೋ 2ಎ  (Metro) ಹಂತದಲ್ಲಿ ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್ನಿಂದ ಕೆ.ಆರ್.ಪುರಂವರೆಗೂ ಮತ್ತು 2ಬಿ ಹಂತದಲ್ಲಿ ಕೆ.ಆರ್ಪುರಂನಿಂದ ಹೆಬ್ಬಾಳ ಜಂಕ್ಷನ್ ಮಾರ್ಗವಾಗಿ ವಿಮಾನ ನಿಲ್ದಾಣದವರೆಗೂ ಮೆಟ್ರೋ ರೈಲು ಯೋಜನೆಯನ್ನು ರೂಪಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದಲ್ಲಿ ನಡೆದ ಕೆಂದ್ರ ಸಚಿವ ಸಂಪುಟ ಸಭೆ ಇದಕ್ಕೆ ಒಪ್ಪಿಗೆ ನೀಡಿದೆ. 

 

ಇದನ್ನೂ ಓದಿ : "ರಾಜ್ಯಗಳಿಗೆ ಬೇಕಾಗಿರುವುದು ನೆರವಿನ ಹಸ್ತವೇ ಹೊರತು ಉಪದೇಶದ ಬುರುಡೆ ಮಾತಲ್ಲ"

ಈಗಾಗಲೇ ಒಪ್ಪಿಗೆ ನೀಡಿರುವ ರಾಜ್ಯ ಸರ್ಕಾರ :
ಈ ಎರಡೂ ಕಾಮಗಾರಿಗಳಿಗೆ ರಾಜ್ಯ ಸರ್ಕಾರ  ಅನುಮೋದನೆ ಈಗಾಗಲೇ ದೊರೆತಿದೆ.  ರಾಜ್ಯ ಸರ್ಕಾರ ತನ್ನ ಪಾಲಿನ ಅನುದಾನದಲ್ಲಿ ಸ್ವಲ್ಪ ಮೊತ್ತವನ್ನೂ ಬಿಡುಗಡೆ ಮಾಡಿದೆ. ಈ ಅನುದಾನ ಬಳಸಿ ಬಿಎಂಆರ್‌ಸಿಎಲ್‌ (BMRCL) ಭೂಸ್ವಾಧೀನ ಹಾಗೂ ಅಗತ್ಯ ಮೂಲಸೌಕರ್ಯಗಳ ಸ್ಥಳಾಂತರ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದೆ. 2ಎ ಹಂತವನ್ನು ಎರಡು ಪ್ಯಾಕೇಜ್‌ಗಳಲ್ಲಿ ಅನುಷ್ಠಾನಗೊಳಿಸಲು ಬಿಎಂಆರ್‌ಸಿಎಲ್‌ ಸಿದ್ಧತೆ ನಡೆಸಿದೆ. ಪ್ಯಾಕೇಜ್‌–1ರಡಿ ಸಿಲ್ಕ್‌ ಬೋರ್ಡ್‌ ಜಂಕ್ಷನ್‌ (Silk board Junction) ನಿಲ್ದಾಣದಿಂದ ಕಾಡುಬೀಸನಹಳ್ಳಿವರೆಗಿನ ಕಾಮಗಾರಿ ಕೈಗೆತ್ತಿಕೊಳ್ಳಲಿದೆ. ಪ್ಯಾಕೇಜ್‌–2ರ ಅಡಿ ಕಾಡುಬೀಸನಹಳ್ಳಿಯಿಂದ ಕೆ.ಆರ್‌.ಪುರದವರೆಗಿನ (KR Puram) ಕಾಮಗಾರಿ ಕೈಗೆತ್ತಿಕೊಳ್ಳಲಿದೆ. 2ಎ ಹಂತದ ಈ ಎರಡು ಪ್ಯಾಕೇಜ್‌ಗಳ ಟೆಂಡರ್‌ ಪ್ರಕ್ರಿಯೆಯೂ ಮುಕ್ತಾಯದ ಹಂತದಲ್ಲಿದೆ. 

2ಬಿ ಹಂತವನ್ನು ನಾಲ್ಕು ಪ್ಯಾಕೇಜ್‌ಗಳ ಮೂಲಕ ಅನುಷ್ಠಾನಗೊಳಿಸಲು ಬಿಎಂಆರ್‌ಸಿಎಲ್‌ ಮುಂದಾಗಿದೆ. ಪ್ಯಾಕೇಜ್‌1ರಡಿ ಕೆ.ಆರ್‌.ಪುರದಿಂದ ಕೆಂಪಾಪುರದವರೆಗಗೆ  ಪ್ಯಾಕೇಜ್‌–2ರಲ್ಲಿ ಕೆಂಪಾಪುರದಿಂದ ಬಾಗಲೂರು ಕ್ರಾಸ್‌ವರೆಗೆ,  ಪ್ಯಾಕೇಜ್‌–3ರಲ್ಲಿ ಬೆಟ್ಟಹಲಸೂರು ಹಾಗೂ ದೊಡ್ಡಜಾಲ ವರೆಗೆ ಪ್ಯಾಕೇಜ್‌–4ರಲ್ಲಿ ವಿಮಾನನಿಲ್ದಾಣದಲ್ಲಿ (Airport) ನಿರ್ಮಾಣವಾಗುವ ಎರಡು ಮೆಟ್ರೊ ನಿಲ್ದಾಣಗಳು ಹಾಗೂ ಡಿಪೊ (ವಿಮಾನನಿಲ್ದಾಣ ಮತ್ತು ಬೈಯಪ್ಪನಹಳ್ಳ್ಳಿ) ಕಾಮಗಾರಿಗಳನ್ನು BMRCL  ಅನುಷ್ಠಾನಗೊಳಿಸಲಿದೆ. 2ಬಿ ಹಂತದ ಟೆಂಡರ್‌ ಪ್ರಕ್ರಿಯೆ ಆರಂಭಿಸುವುದಕ್ಕೂ ನಿಗಮ ಸಿದ್ಧತೆ ನಡೆಸಿದೆ.

ಇದನ್ನೂ ಓದಿ : ರಾಜ್ಯದಾದ್ಯಂತ ನೈಟ್ ಕರ್ಪ್ಯೂ ಜಾರಿಗೊಳಿಸಿದ ಸರ್ಕಾರ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News