Madal Virupaksha: ಪ್ರಶಾಂತ್ ಮೇಲೆ ಲೋಕಾಯುಕ್ತ ದಾಳಿ ನಡೆಸುತ್ತಿದ್ದಂತೆ  ಅಪ್ಪ  ಮಾಡಾಳ್ ವಿರೂಪಾಕ್ಷ ಪರಾರಿ!

Madal Virupaksha: ವಿಚಾರಣೆಯ ವೇಳೆ ಭ್ರಷ್ಟಾಚಾರ ಸಾಬೀತು ಆದರೆ ತಕ್ಷಣ ಬಂಧನ ಮಾಡಲಾಗುವುದು  ಎಂದು  ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.

Written by - Zee Kannada News Desk | Last Updated : Mar 4, 2023, 02:44 PM IST
  • ಎಂಎಲ್‌ಎ ಮಗನ ಕಚೇರಿ ಹಾಗೂ ನಿವಾಸದಲ್ಲಿ ಬರೋಬ್ಬರಿ 8 ಕೋಟಿಗೂ ಅಧಿಕ ಅಕ್ರಮ ಹಣ
  • ಸಾಕ್ಷ್ಯಗಳ ಆಧಾರದ ವಿಚಾರಣೆಯ ವೇಳೆ ಭ್ರಷ್ಟಾಚಾರ ಸಾಬೀತು ಆದರೆ ತಕ್ಷಣ ಬಂಧನ
  • ತಾಂತ್ರಿಕವಾಗಿ ಡಿಜಿಟಲ್‌ ಎವಿಡೆನ್ಸ್ ಪತ್ತೆ ಹಚ್ಚಿರುವ ಲೋಕಾಯುಕ್ತ ಅಧಿಕಾರಿಗಳು
Madal Virupaksha: ಪ್ರಶಾಂತ್ ಮೇಲೆ ಲೋಕಾಯುಕ್ತ ದಾಳಿ ನಡೆಸುತ್ತಿದ್ದಂತೆ  ಅಪ್ಪ  ಮಾಡಾಳ್ ವಿರೂಪಾಕ್ಷ ಪರಾರಿ! title=

Madal Virupaksha: ಟೆಂಡರ್‌ಗಾಗಿ ಲಂಚ ಪ್ರಕರಣದಲ್ಲಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪನ ಪುತ್ರನ ಕಚೇರಿ ಹಾಗೂ ಮನೆ ಮೇಲೆ ನಡೆದ ಲೋಕಾಯುಕ್ತ ದಾಳಿ ಅಂತ್ಯವಾಗಿದೆ. ಸತತ 18 ಗಂಟೆಗಳ‌ ಕಾಲ ನಡೆದ ಶೋಧ ಕಾರ್ಯಾಚರಣೆಯಲ್ಲಿ ಎಂಎಲ್‌ಎ ಮಗನ ಕಚೇರಿ ಹಾಗೂ ನಿವಾಸದಲ್ಲಿ ಬರೋಬ್ಬರಿ 8 ಕೋಟಿಗೂ ಅಧಿಕ ಅಕ್ರಮ ಹಣ ಪತ್ತೆಯಾಗಿದೆ‌. ಈ ಅಕ್ರಮ ಹಣ ಸಂಗ್ರಹಿಸುವಲ್ಲಿ ಪಾತ್ರವು ಇದೆ ಎಂಬುವುದು ಹೊರ ಬಿದ್ದಿದೆ. ಮಾಡಾಳು ವಿರೂಪಾಕ್ಷಪ್ಪ ಮೇಲೆ ಅನುಮಾನ ಪಡುತ್ತಿದ್ದಂತೆ ಯಾವುದೇ ಸುಳಿವು ನೀಡದೆ ಮನೆಯವರಿಗೂ  ಮಾಹಿತಿ ನೀಡಿದೆ ಹೊರ ಉಳಿದ್ದಾರೆ.ಎರಡು ದಿನದಿಂದ ಮೊಬೈಲ್ ಸ್ವಿಚ್ ಅಫ್ ಮಾಡಿಕೊಂಡು ಬಿಜೆಪಿ ಎಂ ಎಲ್ ಎ ಮಾಡಾಳು ತಲೆಮರೆಸಿಕೊಂಡಿದ್ದಾರೆ.

ಇದನ್ನೂ ಓದಿ: Bribe Case: ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರನ ಲಂಚದ ಪ್ರಕರಣಕ್ಕೆ ಇಡಿ ಎಂಟ್ರಿ..!

ಇದರ ಬೆನ್ನಲ್ಲೆ  ಮಾಡಾಳು ವಿರೂಪಾಕ್ಷಪ್ಪಗಾಗಿ ಅಧಿಕಾರಿಗಳು   ತೀವ್ರ ಶೋಧ ನಡೆಸುತ್ತಿದ್ಧಾರೆ.ಎಂ ಎಲ್ ಎ ಮಾಡಾಳು  ತಲೆಮರೆಸಿಕೊಂಡಿರುವ ಹಿನ್ನೆಲೆ ಮಗ ಪ್ರಶಾಂತ್ ಮಾಡಾಳು ಡೀಲ್ ನಲ್ಲಿ ಅಪ್ಪನ ಪಾತ್ರ ಇರಬಹುದೆಂದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಅಪ್ಪ ಮಗ ಒಟ್ಟಿಗೆ ಸೇರಿ ಡೀಲ್ ನಡೆಸ್ತಿದ್ರಾ ಎಂಬ ಹಲವು ಅನುಮಾನಗಳಿಗೆ ಕಾರಣವಾಗಿವೆ. ಈಗಾಗಲೇ ಮಾಡಾಳು ವಿರೂಪಾಕ್ಷಪ್ಪನ‌ನ್ನ ಪ್ರಕರಣದಲ್ಲಿ   ಟೆಂಡರ್ ಹಾಕಿದ ಕಂಪನಿಗಳಿಂದ ಕಿಕ್ ಬ್ಯಾಕ್ ಪಡೆದ ಸಾಕ್ಷ್ಯಗಳನ್ನು ,ಹಣ ಹಾಕಿಸಿಕೊಂಡ ಬ್ಯಾಂಕ್ ಮಾಹಿತಿ,ಅಲ್ಲದೆ ತಾಂತ್ರಿಕವಾಗಿ ಡಿಜಿಟಲ್‌ ಎವಿಡೆನ್ಸ್ ಕಲೆ ಹಾಕಿದ್ದಾರೆ.

ಇದನ್ನೂ ಓದಿ: ಚನ್ನಗಿರಿ ಶಾಸಕರ ಪುತ್ರನ ಲಂಚ ಪ್ರಕರಣ: ನೈತಿಕ ಹೊಣೆ ಹೊತ್ತು ಸಿಎಂ ರಾಜೀನಾಮೆಗೆ ಕಾಂಗ್ರೆಸ್ ಆಗ್ರಹ

ವಿರೂಪಾಕ್ಷಪ್ಪನ ಮೊದಲ ಆರೋಪಿ ಮಾಡಿರುವ ಲೋಕಾಯುಕ್ತ ಅಧಿಕಾರಿಗಳಿಗೆ ಹಲವು ಲಭ್ಯವಾಗಿವೆ.ಈ ಎಲ್ಲಾ ಮಾಹಿತಿ ಮತ್ತು ಸಾಕ್ಷ್ಯಗಳ ಆಧಾರದ ಮೇಲೆ ವಶಕ್ಕೆ‌ ಪಡೆದು ವಿಚಾರಣೆಯ ವೇಳೆ ಭ್ರಷ್ಟಾಚಾರ ಸಾಬೀತು ಆದರೆ ತಕ್ಷಣ ಬಂಧನ ಮಾಡಲಾಗುವುದು  ಎಂದು  ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.ಬೆಂಗಳೂರು, ದಾವಣಗೆರೆ, ಚೆನ್ನಗಿರಿ ಸೇರಿದಂತೆ ಬೇರೆ ಬೇರೆ ಕಡೆಗಳಲ್ಲಿ ಲೋಕಾಯುಕ್ತ ಪೊಲೀಸರು ಹೈ ಆಲರ್ಟ ಆಗಿದ್ದಾರೆ. ಯಾವುದೇ ಕ್ಷಣದಲ್ಲಿ ಕೂಡ ಮಾಡಾಳು ವಿರೂಪಾಕ್ಷಪ್ಪನನ್ನ ವಶಕ್ಕೆ ಪಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ. 

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News