ಗ್ಯಾಸ್‌ ಸಿಲಿಂಡರ್ ದರ ಇಳಿಕೆ : ಜಿಲ್ಲಾವಾರು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..!

Gas cylinder price today : ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಗ್ಯಾಸ್ ಸಿಲಿಂಡರ್‌ನಲ್ಲಿ 400 ರೂ ಸಬ್ಸಿಡಿ ಘೋಷಣೆ ಮಾಡಲಾಗಿದೆ. ಉಜ್ವಲ ಯೋಜನೆ ಫಲಾನುಭವಿಗಳಲ್ಲದವರಿಗೆ 200 ರೂ. ಕಡಿಮೆ ದರದ ಸಿಲಿಂಡರ್ ಸಬ್ಸಿಡಿ ದೊರೆಯಲಿದೆ.

Written by - Krishna N K | Last Updated : Aug 30, 2023, 12:44 PM IST
  • ರಕ್ಷಾ ಬಂಧನ ಹಬ್ಬಕ್ಕೆ ಗೃಹಿಣಿಯರಿಗೆ ಕೇಂದ್ರ ಸರ್ಕಾರದಿಂದ ಗಿಫ್ಟ್‌
  • ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ 200 ರೂಪಾಯಿ ಇಳಿಕೆ
  • 14.2 ಕೆಜಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆ 200 ರೂಪಾಯಿ ಇಳಿಕೆ
ಗ್ಯಾಸ್‌ ಸಿಲಿಂಡರ್ ದರ ಇಳಿಕೆ : ಜಿಲ್ಲಾವಾರು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..! title=

LPG Cylinder Prices : ಕೇಂದ್ರ ಸರ್ಕಾರ ಎಲ್ಲಾ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ 200 ರೂಪಾಯಿ ಇಳಿಕೆ ಮಾಡಿರುವುದಾಗಿ ಘೋಷಿಸಿದೆ. ದೇಶದಾದ್ಯಂತ 14.2 ಕೆಜಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆ 200 ರೂಪಾಯಿ ಇಳಿಕೆಯಾಗಲಿದೆ.   

ಹೌದು.. ಈ ಕುರಿತು ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು "ರಕ್ಷಾ ಬಂಧನ ಕುಟುಂಬದ ಸಂತೋಷ ಹೆಚ್ಚಿಸುವ ದಿನ. ಗ್ಯಾಸ್ ಬೆಲೆ ಇಳಿಕೆಯು ನನ್ನ ಕುಟುಂಬದ ಸಹೋದರಿಯರ ಸೌಕರ್ಯವನ್ನು ಹೆಚ್ಚಿಸುತ್ತದೆ, ಅವರ ಜೀವನವನ್ನು ಸುಲಭಗೊಳಿಸುತ್ತದೆ. ನನ್ನ ಪ್ರತಿಯೊಬ್ಬ ಸಹೋದರಿಯರೇ ಸಂತೋಷವಾಗಿರಿ, ಆರೋಗ್ಯವಾಗಿರಿ, ಇದು ದೇವರಿಂದ ನನ್ನ ಹಾರೈಕೆ ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಚಂದ್ರನ ಅಂಗಳದಲ್ಲಿ ಜಾಗ ಖರೀದಿಸಿದ ಬಾಲಿವುಡ್’ನ ಸ್ಟಾರ್ ನಟ-ನಟಿಯರು ಯಾರು ಗೊತ್ತಾ?

ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಗ್ಯಾಸ್ ಸಿಲಿಂಡರ್‌ನಲ್ಲಿ 400 ರೂ ಸಬ್ಸಿಡಿ ಘೋಷಣೆ ಮಾಡಲಾಗಿದೆ. ಉಜ್ವಲ ಯೋಜನೆ ಫಲಾನುಭವಿಗಳಲ್ಲದವರಿಗೆ 200 ರೂ. ಕಡಿಮೆ ದರದ ಸಿಲಿಂಡರ್ ಸಬ್ಸಿಡಿ ದೊರೆಯಲಿದೆ. ದೇಶದಲ್ಲಿ LPG ದರ ಇನ್ನುಂದೆ ಎಷ್ಟಿರಲಿದೆ ಅನ್ನೋದನ್ನ ನೋಡೋದಾದ್ರೆ..

  • ಬೆಂಗಳೂರು- ₹905.5
  • ನವದೆಹಲಿ- ₹903
  • ಮುಂಬೈ- ₹902.5
  • ಕೋಲ್ಕತ್ತಾ- ₹929
  • ಚೆನ್ನೈ- ₹908.5
  • ಅಹಮದಾಬಾದ್- ₹910
  • ಹೈದರಾಬಾದ್- ₹955
  • ಪಾಟ್ನಾ- ₹1,001
  • ಭೋಪಾಲ್- ₹908.5
  • ಜೈಪುರ- ₹906.5
  • ಲಕ್ನೋ- ₹940.5

ಯಾವ್ಯಾವ ಜಿಲ್ಲೆಯಲ್ಲಿ ಸಿಲಿಂಡರ್ ದರ ಎಷ್ಟಿದೆ..?

  • ಬಾಗಲಕೋಟೆ- ₹1,124 (924)
  • ಬೆಂಗಳೂರು- ₹1,105.50 (905.5)
  • ಬೆಂಗಳೂರು ಗ್ರಾ.- ₹1,105.50 (905.5)
  • ಬೆಳಗಾವಿ- ₹1,118 (918)
  • ಬಳ್ಳಾರಿ- ₹1,123 (923)
  • ಬೀದರ್- ₹1,174.50 (974.5)
  • ವಿಜಯಪುರ- ₹1,127.50 (927.5)
  • ಚಾಮರಾಜನಗರ- ₹1,114 (914)
  • ಚಿಕ್ಕಬಳ್ಳಾಪುರ- ₹1,117.50 (1,097.5)
  • ಚಿಕ್ಕಮಗಳೂರು- ₹1,116 (916)
  • ಚಿತ್ರದುರ್ಗ- ₹1,116 (916)
  • ದಕ್ಷಿಣ ಕನ್ನಡ- ₹1,116  (916)
  • ದಾವಣಗೆರೆ- ₹1,116 (916)
  • ಧಾರವಾಡ- ₹1,122 (922)
  • ಗದಗ- ₹1,139 (939)
  • ಕಲಬುರ್ಗಿ- ₹1,129.50 (929.5)
  • ಹಾಸನ- ₹1,116 (916)
  • ಹಾವೇರಿ- ₹1,140.50 (940.5)
  • ಕೊಡಗು- ₹1,121 (921)
  • ಕೋಲಾರ- ₹1,105.50 (905.5)
  • ಕೊಪ್ಪಳ- ₹1,139 (939)
  • ಮಂಡ್ಯ- ₹1,113 (913)
  • ಮೈಸೂರು- ₹1,107.50 (907.5)
  • ರಾಯಚೂರು- ₹1,129.50 (929.5)
  • ರಾಮನಗರ- ₹1,110.50 (910.5)
  • ಶಿವಮೊಗ್ಗ- ₹1,116 (916)
  • ತುಮಕೂರು- ₹1,107.50 (907.5)
  • ಉಡುಪಿ- ₹1,110.50 (910.5)
  • ಉತ್ತರ ಕನ್ನಡ- ₹1,122 (922)
  • ವಿಜಯನಗರ- ₹1,117 (917)
  • ಯಾದಗಿರಿ- ₹1,129 (929)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News