lok sabha election 2024: "ಪ್ರಧಾನಿ ಮೋದಿ ಅವರ ಅತಿಯಾದ ಪ್ರೀತಿಯ ಫಲವಾಗಿ ಅದಾನಿ ಆಸ್ತಿ ಏರಿಕೆ ಕಂಡಿದೆ"

ಬೆಂಗಳೂರು: ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ದೇಶದ ಜನರ ಪಿತ್ರಾರ್ಜಿತ ಆಸ್ತಿಯ ಮರುಹಂಚಿಕೆ ಮಾಡುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಜನರ ಬಳಿ ಅಲವತ್ತುಕೊಳ್ಳುತ್ತಿರುವ ಹಿಂದಿನ ನಿಜವಾದ ಉದ್ದೇಶ ಜನರ ಮೇಲಿನ ಕಾಳಜಿಯೂ ಅಲ್ಲ, ದೇಶದ ಮೇಲಿನ ಪ್ರೀತಿಯಿಂದಲೂ ಅಲ್ಲ.ಮೋದಿ ಅವರಿಗೆ ಆತಂಕ ಶುರುವಾಗಿರುವುದು ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ತನ್ನ ಉದ್ಯಮ ಮಿತ್ರರ ಆಸ್ತಿಯ ದಿಢೀರ್‌ ಏರಿಕೆಯ ಹಿಂದಿನ ಸತ್ಯ ಎಲ್ಲಿ ಹೊರಗೆ ಬರುವುದೋ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

Written by - Manjunath Naragund | Last Updated : Apr 25, 2024, 11:08 PM IST
  • 2014ರಲ್ಲಿ ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ 437ನೇ ಸ್ಥಾನದಲ್ಲಿದ್ದ ಅದಾನಿ ಆಸ್ತಿಯ ಒಟ್ಟು ಮೌಲ್ಯ 60 ಸಾವಿರ ಕೋಟಿ ರೂಪಾಯಿಯಾಗಿತ್ತು.
  • ನರೇಂದ್ರ ಮೋದಿ ಅವರ ಅತಿಯಾದ ಕಾಳಜಿ, ಪ್ರೀತಿಯ ಫಲವಾಗಿ ಅದಾನಿ ಆಸ್ತಿ ಕೇವಲ ಹತ್ತು ವರ್ಷದಲ್ಲಿ 70 ಲಕ್ಷ ಕೋಟಿ ರೂಪಾಯಿಗೆ ಏರಿಕೆ ಕಂಡಿತು ಅಂದರೆ 1225% ಹೆಚ್ಚಳವಾಯಿತು.
lok sabha election 2024: "ಪ್ರಧಾನಿ ಮೋದಿ ಅವರ ಅತಿಯಾದ ಪ್ರೀತಿಯ ಫಲವಾಗಿ ಅದಾನಿ ಆಸ್ತಿ ಏರಿಕೆ ಕಂಡಿದೆ" title=

lok sabha election 2024: ಬೆಂಗಳೂರು: ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ದೇಶದ ಜನರ ಪಿತ್ರಾರ್ಜಿತ ಆಸ್ತಿಯ ಮರುಹಂಚಿಕೆ ಮಾಡುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಜನರ ಬಳಿ ಅಲವತ್ತುಕೊಳ್ಳುತ್ತಿರುವ ಹಿಂದಿನ ನಿಜವಾದ ಉದ್ದೇಶ ಜನರ ಮೇಲಿನ ಕಾಳಜಿಯೂ ಅಲ್ಲ, ದೇಶದ ಮೇಲಿನ ಪ್ರೀತಿಯಿಂದಲೂ ಅಲ್ಲ.ಮೋದಿ ಅವರಿಗೆ ಆತಂಕ ಶುರುವಾಗಿರುವುದು ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ತನ್ನ ಉದ್ಯಮ ಮಿತ್ರರ ಆಸ್ತಿಯ ದಿಢೀರ್‌ ಏರಿಕೆಯ ಹಿಂದಿನ ಸತ್ಯ ಎಲ್ಲಿ ಹೊರಗೆ ಬರುವುದೋ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಇದಕ್ಕೆ ಸಾಕ್ಷಿ ಇಲ್ಲಿದೆ:

2014ರಲ್ಲಿ ದೇಶದ ನಂ.1 ಶ್ರೀಮಂತನಾಗಿದ್ದ, ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ 41ನೇ ಸ್ಥಾನದಲ್ಲಿದ್ದ ಅಂಬಾನಿಯ ಒಟ್ಟು ಆಸ್ತಿ ಮೌಲ್ಯ 1.75 ಲಕ್ಷ ಕೋಟಿ ರೂ.ಆಗಿತ್ತು. 2023ರಲ್ಲಿ ಅಂಬಾನಿ ಜಾಗತಿಕ ಪಟ್ಟಿಯಲ್ಲಿ ಭಾರಿ ನೆಗೆತ ಕಂಡು 9ನೇ ಸ್ಥಾನಕ್ಕೇರಿದ್ದರು. ನರೇಂದ್ರ ಮೋದಿ ಅವರ ಕೃಪಕಟಾಕ್ಷದಿಂದ ಹತ್ತು ವರ್ಷಗಳಲ್ಲಿ ಅಂಬಾನಿ ಆಸ್ತಿಯಲ್ಲಿಲ್ಲಾದ ಏರಿಕೆ 96 ಲಕ್ಷ ಕೋಟಿ ರೂ. ಅಂದರೆ 350% ಹೆಚ್ಚಳವಾಗಿದೆ.

ಇದನ್ನೂ ಓದಿ- "ಕನಿಷ್ಠ ಜ್ಞಾನ ಒಬ್ಬ ಪ್ರಧಾನಮಂತ್ರಿಗೆ ಇಲ್ಲದಿರುವುದು ಈ ದೇಶದ ದುರಂತ"-ಸಿಎಂ ಸಿದ್ದರಾಮಯ್ಯ

ಇದು ಅಂಬಾನಿಯ ಕತೆಯಾದರೆ ಅದಾನಿಯ ಕತೆ ಇದಕ್ಕಿಂತಲೂ ರೋಚಕವಾಗಿದೆ.

2014ರಲ್ಲಿ ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ 437ನೇ ಸ್ಥಾನದಲ್ಲಿದ್ದ ಅದಾನಿ ಆಸ್ತಿಯ ಒಟ್ಟು ಮೌಲ್ಯ 60 ಸಾವಿರ ಕೋಟಿ ರೂಪಾಯಿಯಾಗಿತ್ತು.ನರೇಂದ್ರ ಮೋದಿ ಅವರ ಅತಿಯಾದ ಕಾಳಜಿ, ಪ್ರೀತಿಯ ಫಲವಾಗಿ ಅದಾನಿ ಆಸ್ತಿ ಕೇವಲ ಹತ್ತು ವರ್ಷದಲ್ಲಿ 70 ಲಕ್ಷ ಕೋಟಿ ರೂಪಾಯಿಗೆ ಏರಿಕೆ ಕಂಡಿತು ಅಂದರೆ 1225% ಹೆಚ್ಚಳವಾಯಿತು.

ಕಳೆದ ವರ್ಷ ಅದಾನಿ ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ 437ನೇ ಸ್ಥಾನದಿಂದ ನೇರವಾಗಿ 17ನೇ ಸ್ಥಾನಕ್ಕೆ ಜಿಗಿದದ್ದು ಮೋದಿ ಅವರ ಜೊತೆಗಿನ ಒಡನಾಟದ ಫಲ ಎಂಬುದಕ್ಕೆ ನಿದರ್ಶನವಾಗಿದೆ.

ಇದನ್ನೂ ಓದಿ- ಸನಾತನ ಹಿಂದೂ ಧರ್ಮದ ಉಳಿವಿಗೆ ಮತ್ತೆ ಮೋದಿ ಬೆಂಬಲಿಸಿ : ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕರೆ

ನರೇಂದ್ರ ಮೋದಿ ಅವರು ಮತ ನೀಡಿದ ಮತದಾರರನ್ನು ಕೈಬಿಟ್ಟರೂ ತಮ್ಮನ್ನು ನಂಬಿದ ಉದ್ಯಮಿಗಳನ್ನು ಕೈಬಿಡುವವರಲ್ಲ.ಈ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ನ್ಯಾಯ ಪತ್ರಕ್ಕೆ ದೇಶದ ಜನರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗುತ್ತಿದೆ, ಈ ಸ್ಪಂದನೆ ಮತಗಳಾಗಿ ಪರಿವರ್ತನೆಯಾಗಿ ಕಾಂಗ್ರೆಸ್‌ ಗೆ ಗೆಲುವಾದರೆ ತಮ್ಮ ಪದವಿಗೂ ಸಂಚಕಾರ, ತಮ್ಮ ಗೆಳೆತನದ ಹಿಂದಿರುವ ಗುಟ್ಟು ರಟ್ಟಾಗುತ್ತದೆ ಎಂದು ಕಾಂಗ್ರೆಸ್‌ನ ಪ್ರಣಾಳಿಕೆಯ ಬಗ್ಗೆ ಜನರಲ್ಲಿ ಭಯ ಹುಟ್ಟಿಸುವ, ಅಪಪ್ರಚಾರ ಮಾಡುವ ಕೀಳು ಮಟ್ಟಕ್ಕೆ ಇಳಿದಿದ್ದಾರೆ ಎಂದು ದೂರಿದರು.

ಕಳೆದ ನಾಲ್ಕಾರು ದಿನಗಳಿಂದ ಮೋದಿ ಅವರು ತಮ್ಮ ಪ್ರಚಾರ ಸಭೆಗಳಲ್ಲಿ ಬಿಜೆಪಿ ಪ್ರಣಾಳಿಕೆಯ ಬಗ್ಗೆ ಉಸಿರೆತ್ತದೆ ತಮ್ಮ ಭಾಷಣದುದ್ದಕ್ಕೂ ಕಾಂಗ್ರೆಸ್‌ ಪ್ರಣಾಳಿಕೆಯನ್ನೇ ಪ್ರಸ್ತಾಪ ಮಾಡುತ್ತಿರುವುದು ಅವರ ಭಯ, ಹತಾಶೆಯನ್ನು ತೋರಿಸುತ್ತದೆ ಎಂದು ಕಿಡಿ ಕಾರಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News