"ಯಾರು ಭ್ರಷ್ಟಾಚಾರದ ತಾಯಿಯೋ ಅವರೇ ಕರ್ನಾಟಕ ಬಂದ್‌ಗೆ ಕರೆ ನೀಡುತ್ತಿದ್ದಾರೆ" : ಆರಗ ಜ್ಞಾನೇಂದ್ರ

Home Minister Araga Jnanendra : ಅವರ ಕೇಂದ್ರ ನಾಯಕರು, ರಾಜ್ಯದ ನಾಯಕರು ಬಹಳಷ್ಟು ದಿನ ಜೈಲಿನಲ್ಲಿದ್ದು ಈಗ ಜಾಮೀನಿನ ಮೇಲೆ ಹೊರಬಂದಿದ್ದಾರೆ ಅಂಥವರು ಈಗ ಭ್ರಷ್ಟಾಚಾರದ ವಿರುದ್ಧ ಬಂದ್ ಗೆ ಕರೆ ನೀಡುತ್ತಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಕಿಡಿ ಕಾರಿದರು.

Written by - Zee Kannada News Desk | Last Updated : Mar 6, 2023, 03:28 PM IST
  • "ಯಾರು ಭ್ರಷ್ಟಾಚಾರದ ತಾಯಿಯೋ ಅವರೇ ಕರ್ನಾಟಕ ಬಂದ್‌ಗೆ ಕರೆ ನೀಡುತ್ತಿದ್ದಾರೆ"
  • "ಜಾಮೀನಿನ ಮೇಲೆ ಹೊರಬಂದವರು ಭ್ರಷ್ಟಾಚಾರದ ವಿರುದ್ಧ ಬಂದ್‌ಗೆ ಕರೆ ನೀಡುತ್ತಿದ್ದಾರೆ"
  • ತೀರ್ಥಹಳ್ಳಿಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ
"ಯಾರು ಭ್ರಷ್ಟಾಚಾರದ ತಾಯಿಯೋ ಅವರೇ ಕರ್ನಾಟಕ ಬಂದ್‌ಗೆ ಕರೆ ನೀಡುತ್ತಿದ್ದಾರೆ" :  ಆರಗ ಜ್ಞಾನೇಂದ್ರ  title=
Araga Jnanendra

ತೀರ್ಥಹಳ್ಳಿ : ಯಾರು ಭ್ರಷ್ಟಾಚಾರದ ತಾಯಿಯೋ ಅವರೇ ಕರ್ನಾಟಕ ಬಂದ್ ಗೆ ಕರೆ ನೀಡುತ್ತಿದ್ದಾರೆ. ಅವರ ಕೇಂದ್ರ ನಾಯಕರು, ರಾಜ್ಯದ ನಾಯಕರು ಬಹಳಷ್ಟು ದಿನ ಜೈಲಿನಲ್ಲಿದ್ದು ಈಗ ಜಾಮೀನಿನ ಮೇಲೆ ಹೊರಬಂದಿದ್ದಾರೆ ಅಂಥವರು ಈಗ ಭ್ರಷ್ಟಾಚಾರದ ವಿರುದ್ಧ ಬಂದ್ ಗೆ ಕರೆ ನೀಡುತ್ತಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಕಿಡಿ ಕಾರಿದರು.

ಪಟ್ಟಣದ ಕೃಷಿ ಮಾರುಕಟ್ಟೆಯಲ್ಲಿ ಕಾರ್ಮಿಕರ ಮಕ್ಕಳಿಗೆ ಇಂದು ಕಿಟ್ ವಿತರಿಸಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು. ನಮ್ಮ ಸರ್ಕಾರ ಭ್ರಷ್ಟಾಚಾರಿಗಳ ಪರವಾಗಿಲ್ಲ. ಯಾರೇ ಇರಲಿ ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ. ಲೋಕಾಯುಕ್ತವನ್ನು ಸಿದ್ದರಾಮಯ್ಯನವರ ಕಾಲದಲ್ಲಿ ಕುತ್ತಿಗೆ ಹಿಚುಕಿ ಇಟ್ಟಿದ್ದರು. ಯಾಕೆಂದರೆ ಅವರ ಮೇಲೆ 69 ಕೇಸ್ ಇತ್ತು ಹಾಗಾಗಿ ಲೋಕಾಯುಕ್ತ ಮುಗಿಸಿ ಎಸಿಬಿ ಮಾಡಿದರು. ನಾವು ಕೋರ್ಟ್ ಆದೇಶದಿಂದಾಗಿ ದೇಶ ಭ್ರಷ್ಟಾಚಾರ ಮುಕ್ತ ಮಾಡಲು ಲೋಕಾಯುಕ್ತವನ್ನು ಗಟ್ಟಿ ಮಾಡಿದ್ದೇವೆ ಎಂದರು.

ಇದನ್ನೂ ಓದಿ : 15 ವರ್ಷದ ಕೆಳಗಿನ ಮಕ್ಕಳಿಗೆ H3N2 ಅಪಾಯ ಹೆಚ್ಚು ! ಸರ್ಕಾರದಿಂದ ಮಾರ್ಗ ಸೂಚಿ ಜಾರಿ

ಪೊಲೀಸ್ ಇಲಾಖೆಗೆ ಅವರು ಕೇಳಿದ ಹಾಗೆ ಒಳ್ಳೊಳ್ಳೆ ಆಫೀಸರ್ ಗಳನ್ನು ಕೊಟ್ಟಿದ್ದೇವೆ. ಲೋಕಾಯುಕ್ತ ಚೆನ್ನಾಗಿದ್ದರೆ ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣವಾಗುತ್ತೆ ಎನ್ನುವ ನಂಬಿಕೆ ಇದೆ. ಯಾರೇ ತಪ್ಪು ಮಾಡಿದರೂ ಅವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುವ ರೀತಿಯಲ್ಲಿ ಪಾರದರ್ಶಕ ಕೆಲಸವನ್ನು ಲೋಕಾಯುಕ್ತ ಮಾಡುತ್ತಿದೆ. ಸರ್ಕಾರ ಇದರಲ್ಲಿ ಪ್ರವೇಶ ಮಾಡಿಲ್ಲ, ಸರ್ಕಾರದ ಹಸ್ತಕ್ಷೇಪ ಇಲ್ಲ ಎಂದರು.

ಮಾಡಾಳ್ ವಿರೂಪಾಕ್ಷಪ್ಪನವರ ಬಂಧನ ಇನ್ನು ಆಗಿಲ್ಲ ಎಂಬ ಪ್ರೆಶ್ನೆಗೆ ಅವರನ್ನು ಸುಮ್ಮನೆ ಬಿಡ್ತಾರಾ ? ಸರ್ಕಾರ ಅವರ ಬೆಂಬಲಕ್ಕೆ ನಿಂತಿಲ್ಲ ಹಾಗೇನಾದರೂ ಆಗಿದ್ದರೆ ಮಗ ಅರೆಸ್ಟ್ ಆಗ್ತಾ ಇರಲಿಲ್ಲ. ವಿಚಾರಣೆ ನೆಡೆಯುತ್ತಿದೆ. ಅಪ್ಪ ಮಗ ಅಥವಾ ಇನ್ಯಾರೆ ಇರಲಿ ಯಾರ್ಯಾರು ಇದರಲ್ಲಿ ಭಾಗಿಯಾಗಿದ್ದಾರೆ, ಅವರು ಮಾಡಿರುವ ಆಸ್ತಿ ಸರಿ ಇದೆಯೋ ಇಲ್ಲವೋ ಗೊತ್ತಾಗುತ್ತೆ. ಏನು ಬೇಕಾದರೂ ಶಿಕ್ಷೆ ಆಗಲಿ ನಾವು ಮುಕ್ತರಾಗಿದ್ದೇವೆ ಎಂದರು.

ಇದನ್ನೂ ಓದಿ : ಕೇವಲ 700 ಗ್ರಾಂ ಮಗುವಿಗೆ ಮರುಜನ್ಮ ನೀಡಿದ ಗದಗ ಜಿಮ್ಸ್ ವೈದ್ಯರು

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News